ಕುಷ್ಟಗಿ: ನಿರ್ಜನ ಪ್ರದೇಶದಲ್ಲಿ ಬಸ್ ತಂಗುದಾಣ; ಗ್ರಾಮಸ್ಥರ ವಿರೋಧ
Team Udayavani, Mar 2, 2023, 9:48 AM IST
ಕುಷ್ಟಗಿ: ಸಾಸ್ವಿಹಾಳ ಹಾಗೂ ಜುಮ್ಲಾಪೂರ ತಲಾ 2 ಕಿ.ಮೀ. ಅಂತರದ ನಿರ್ಜನ ಪ್ರದೇಶದಲ್ಲಿ ಬಸ್ ತಂಗುದಾಣವನ್ನು ಗ್ರಾಮಸ್ಥರ ವಿರೋಧ ಲೆಕ್ಕಿಸದೇ ತರಾತುರಿಯಲ್ಲಿ ನಿರ್ಮಿಸುತ್ತಿರುವುದು ಗ್ರಾಮಸ್ಥರಿಗೆ ಅಚ್ಚರಿಯಾಗಿದೆ.
ತಾವರಗೇರಾ-ಮುದೇನೂರು-ದೋಟಿಹಾಳ-ಇಲಕಲ್ ರಾಜ್ಯ ಹೆದ್ದಾರಿಯಲ್ಲಿ ಸಾಶ್ವಿಹಾಳ ಹಾಗೂ ಜುಮ್ಲಾಪೂರ ಮದ್ಯೆ ನಿರ್ಜನ ಪ್ರದೇಶದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಕಳೆದ ವಾರದಿಂದ ಆರಂಭಿಸಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಈ ಅನುದಾನದಲ್ಲಿ10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸುತ್ತಿದೆ. ಇದಕ್ಕೆ ಜುಮ್ಲಾಪೂರ ಗ್ರಾಮ ಪಂಚಾಯತಿ ಕಟ್ಟಡ ಪರವಾನಿಗೆ ನೀಡಿದೆ. ಇದೆಲ್ಲವೂ ಸರಿ ಈ ಬಸ್ ತಂಗುದಾಣ ನಿರ್ಜನ ಪ್ರದೇಶದಲ್ಲಿ ಯಾಕೆ? ಎನ್ನುವುದು ಗ್ರಾಮಸ್ಥರ ವಾದ.
ಈ ಉದ್ದೇಶಿತ ಬಸ್ ತಂಗುದಾಣಕ್ಕೆ ಸಾಸ್ವಿಹಾಳ ಹಾಗೂ ಜುಮ್ಲಾಪೂರ ಪ್ರಯಾಣಿಕರು ಬಂದು ಬಸ್ ಹತ್ತಬೇಕಾದರೆ 2 ಕಿ.ಮೀ. ಕ್ರಮಿಸಬೇಕು. ಊರಿನ ಮುಖ್ಯ ರಸ್ತೆಯಲ್ಲಿ ನಿರ್ಮಿಸಬೇಕಾದ ಬಸ್ ತಂಗುದಾಣ ಮಾರ್ಚ್ ಎಂಡ್ ನೆಪದಲ್ಲಿ ತಮಗೆ ತೋಚಿದ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ ಎನ್ನುವುದು ವಕೀಲ ಸಂಗನಗೌಡ ಪಾಟೀಲ ಆರೋಪಿಸಿದ್ದಾರೆ.
ಈ ಬಸ್ ತಂಗುದಾಣ ಎಲ್ಲಿ ಅಗತ್ಯವೋ ಅಲ್ಲಿ ನಿರ್ಮಿಸದೇ ತಮಗೆ ತೋಚಿದ ಸ್ಥಳದಲ್ಲಿ ತಂಗುದಾಣ ನಿರ್ಮಿಸಿ ಅನುದಾನ ಎತ್ತುವಳಿಗೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದರೂ ನಿರ್ಮಿಸಲು ಮುಂದಾಗಿದ್ದಾರೆ. ಒಂದು ವೇಳೆ ಬಸ್ ತಂಗುದಾಣ ನಿರ್ಮಿಸಿದರೆ ಅನೈತಿಕ ಚಟುವಟಿಕೆಗಳ ತಾಣ ಆಗಲಿದೆ. ಆದಾಗ್ಯೂ ಕ್ಷೇತ್ರದ ಶಾಸಕ ಈ ವಿಷಯದಲ್ಲಿ ಮೌನವಾಗಿರುವುದು ಜನಸಾಮಾನ್ಯರನ್ನು ಪ್ರಶ್ನಿಸುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.