![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 11, 2020, 5:41 AM IST
ಮಲ್ಪೆ: ಲಾಕ್‌ಡೌನ್ ನಡುವೆ ಯಾಂತ್ರಿಕ ಮೀನುಗಾರಿಕೆಗೆ ಅವಕಾಶ ಸಿಕ್ಕಿದರೂ ಒಂದಡೆ ಕಾರ್ಮಿಕರ ಕೊರತೆ, ಇನ್ನೊಂದಡೆ ಬಂದರಿನಲ್ಲಿ ನಿಲ್ಲಿಸಿಲಾಗಿದ್ದ ಬೋಟುಗಳ ತೆರೆವುಗೊಳಿಸುವ ಸಮಸ್ಯೆಯಿಂದಾಗಿ ಕಡಲಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯರಿಂದ ನಡೆಸಲ್ಪಡುವ ಕೆಲವೇ ಕೆಲವು ಬೋಟುಗಳು ಮೀನುಗಾರಿಕೆಗೆ ತೆರಳುತ್ತಿದೆ. ರವಿವಾರ ಮಲ್ಪೆ ಬಂದರಿನಿಂದ 7 ಬೋಟುಗಳು ಮೀನುಗಾರಿಕೆಗೆ ತೆರಳಿವೆ.
ಆಳಸಮುದ್ರ, ಪರ್ಸೀನ್, ತ್ರಿಸೆವೆಂಟಿ, ಸಣ್ಣ ಟ್ರಾಲ್‌ಬೋಟ್ ಸೇರಿದಂತೆ ಸುಮಾರು 2 ಸಾವಿರದಷ್ಟು ಬೋಟುಗಳು ಬಂದರಿನಲ್ಲಿ ಇದ್ದು, ಇವುಗಳಲ್ಲಿ ದುಡಿಯಲು ಶೇ. 70ರಷ್ಟು ಉತ್ತರ ಕನ್ನಡ ಮತ್ತು ಉಳಿದಂತೆ ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ್ ಛತೀ¤ಸ್‌ಗಡ, ಬಿಹಾರ, ಪಶ್ಚಿಮ ಬಂಗಾಲ, ಒಡಿಶಾ ಮೊದಲಾದ ರಾಜ್ಯಗಳ ಸಾವಿರಾರು ಕಾರ್ಮಿಕರು ಇದ್ದಾರೆ. ಕೋವಿಡ್-19 ಆತಂಕ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಾರ್ಮಿಕರು ಮಾರ್ಚ್ 24ರ ಬಳಿಕ ತವರಿಗೆ ಮರಳಿದ್ದಾರೆ. ಲಾಕ್‌ಡೌನ್‌ನಿಂದ ಕೊನೆ ಕ್ಷಣದಲ್ಲಿ ಉಳಿದುಕೊಂಡಿರುವ ಸುಮಾರು ಒಂದು ಸಾವಿರ ಆನ್ಯರಾಜ್ಯದ ಕಾರ್ಮಿಕರಲ್ಲಿ 270 ಕಾರ್ಮಿಕರು ಎರಡು ದಿನದ ಹಿಂದೆಯಷ್ಟೆ ಊರಿಗೆ ಮರಳಿದ್ದಾರೆ. ಆದರೆ ಈ ಗ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದರೂ ಹೆಚ್ಚು ಕಾರ್ಮಿಕರು ಇರುವ ಉ.ಕನ್ನಡ ಜಿಲ್ಲೆಯಿಂದ ಬರಲು ಸಾಧ್ಯವಿಲ್ಲ. ಸ್ಥಳೀಯ ಮೀನುಗಾರರಿಂದಲೇ ನಡೆಸ್ಪಡುವ ಬೆರಳೆಣಿಕೆಯ ಟ್ರಾಲ್‌ಬೋಟುಗಳು ಮತ್ತು ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳುತ್ತಿವೆ.
ಬೋಟುಗಳ
ತೆರವು ಅಸಾಧ್ಯ
ಲಾಕ್‌ಡೌನ್ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ಬೋಟುಗಳಲ್ಲದೆ ಗಂಗೊಳ್ಳಿ, ಹಂಗಾರಕಟ್ಟೆ ಕೋಡಿ, ಭಟ್ಕಳ, ಹೊರರಾಜ್ಯದ ಕೆಲವೊಂದು ಬೋಟುಗಳು ಮಲ್ಪೆ ಬಂದರಿನಲ್ಲಿ ತಂಗಿವೆ. ಬಂದರಿನಲ್ಲಿ ಜಾಗವಿಲ್ಲದೆ ಹೊಳೆಯಲ್ಲಿಯೂ ನಿಲ್ಲಿಸಲಾಗಿದ್ದು ಮೀನುಗಾರಿಕೆಗೆ ತೆರಳಲು ಸಿದ್ದವಿರುವ ಬೋಟುಗಳಿಗೆ ಈ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ಬೋಟನ್ನು ತೆರವುಗೊಳಿಸಲಾಗದ ಮಾಲಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
You seem to have an Ad Blocker on.
To continue reading, please turn it off or whitelist Udayavani.