ಕೈಗಾರಿಕೆಗೆ ಆದ್ಯತೆಯ ಕೊರತೆ! ಗೌರವ ಹೆಗ್ಡೆ
Team Udayavani, Mar 9, 2021, 1:02 AM IST
ಮಂಗಳೂರು: ಬಜೆಟ್‌ನ ಅಂಶಗಳನ್ನು ಅವಲೋಕಿಸಿದರೆ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯ ಕೊರತೆ ಕಂಡುಬಂದಿದೆ.
ಬಜೆಟ್‌ನಲ್ಲಿ ಒಂದಷ್ಟು ಹೊಸ ಉದ್ಯಮ ಗಳನ್ನು ಘೋಷಿಸಲಾಗಿದೆ. ಇದು ಆರ್ಥಿಕ ಚಟುವಟಿಕೆಗಳ ಉದ್ದೀಪನ ಹಾಗೂ ಪ್ರಾದೇಶಿಕವಾಗಿ ಉದ್ಯೋಗಾವಕಾಶ ಸೃಷ್ಟಿಗೆ ಪೂರಕವಾಗಬಲ್ಲವು. ಉದ್ದಿಮೆಗಳನ್ನು ಸ್ಥಾಪಿಸಲು ಮಹಿಳೆಯರಿಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ಘೋಷಿಸಿರುವುದು ಮಹಿಳೆಯರನ್ನು ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಹಕಾರಿ.
ಈಗಾಗಲೇ ಹೊಸ ಕೈಗಾರಿಕಾ ನೀತಿ ಜಾರಿಯಲ್ಲಿದೆ. ಇದರಲ್ಲಿ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಕ್ಷೇತ್ರದ ಬಹಳಷ್ಟು ಬೇಡಿಕೆಗಳಿಗೆ ಸ್ಪಂದನೆ ನೀಡಲಾಗಿದೆ. ಬಹುಶಃ ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಕೈಗಾರಿಕೆಗಳಿಗೆ ಪೂರಕ ಅಂಶಗಳು ಉಲ್ಲೇಖವಾಗಿಲ್ಲವೇನೋ.
ಹೊರೆ ಇಳಿಸುವ ಯತ್ನ
ಕೈಗಾರಿಕೆಗಳಿಗೆ ನಗರ ವಲಯದಲ್ಲಿ ಆಸ್ತಿ ತೆರಿಗೆಯಲ್ಲಿ ಪ್ರತ್ಯೇಕ ಸ್ಲಾ Âಬ್ ನಿಗದಿ ಘೋಷಿಸಲಾಗಿದೆ. ಇದು ಕೈಗಾರಿಕೆಗಳ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಸಹಕಾರಿಯಾದೀತು. ಕೈಗಾರಿಕೆಗಳು ಕೌಶಲಭರಿತ ಮಾನವ ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣಕ್ಕೆ ಆದ್ಯತೆ ನೀಡಿರುವುದು ಉತ್ತಮ ಹೆಜ್ಜೆ.
ಪ್ರವಾಸೋದ್ಯಮ ಆರ್ಥಿಕತೆಯಲ್ಲಿ ಒಂದು ಪ್ರಮುಖ ಉದ್ಯಮ. ಈ ಬಾರಿಯ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ನೀಡಿರುವ ಅನುದಾನ ಸಾಕಾಗದು. ಘೋಷಣೆ ಮಾಡಿರುವ ಯೋಜನೆಗಳಲ್ಲಿ ಕೆಲವು ಯೋಜನೆಗಳ ಅನುಷ್ಠಾನದ ಬಗ್ಗೆ ಸ್ಪಷ್ಟವಾದ ಉಲ್ಲೇಖಗಳು ಗೋಚರಿಸುತ್ತಿಲ್ಲ.
ಎರಡನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್‌ಗಳು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಪೂರಕವಾಗುತ್ತವೆ. ಮಂಗಳೂರಿನಲ್ಲಿ ಕಿಯೋನಿಕ್ಸ್ ಜಾಗದಲ್ಲಿ ಐಟಿ ಪಾರ್ಕ್‌ಗೆ ಬಜೆಟ್ ಪೂರ್ವದಲ್ಲಿ 60 ಕೋ.ರೂ.ಗೆ ಬೇಡಿಕೆ ಮಂಡಿಸಲಾಗಿತ್ತು. ಬಜೆಟ್‌ನಲ್ಲಿ ಇವುಗಳನ್ನು ಪರಿಗಣಿಸಿಲ್ಲ. ಇದಲ್ಲದೆ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರಗಳ ಬೇಡಿಕೆಯನ್ನು ಪರಿಗಣಿಸಿಲ್ಲ. ಪೀಣ್ಯ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರಕ್ಕೆ 100 ಕೋ.ರೂ. ಕೊಟ್ಟಿರುವುದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಪ್ರಸ್ತಾವನೆ
ಗಳು ಪರಿಗಣನೆಗೆ ಬಂದಿಲ್ಲ. ಹೊಸದಾಗಿ ಯಾವುದೇ ತೆರಿಗೆ ಏರಿಕೆ ಮಾಡದಿರುವುದು ಸ್ವಾಗತಾರ್ಹ.
– ಗೌರವ ಹೆಗ್ಡೆ , ಉದ್ಯಮಿ, ಕೆನರಾ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.