Kumbla ಪಂಚಾಯತ್ ಫಂಡ್ನಿಂದ ಲಕ್ಷಾಂತರ ರೂ. ಲಪಟಾವಣೆ ಆರೋಪ: ತನಿಖೆ
Team Udayavani, Jul 24, 2024, 11:54 PM IST
ಕುಂಬಳೆ: ಕುಂಬಳೆ ಪಂಚಾಯತ್ ಫಂಡ್ನಿಂದ ಲಕ್ಷಾಂತರ ರೂ. ಲಪಟಾಯಿಸಿರುವುದಾಗಿ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್ ಜೋಯಿಂಟ್ ಡೈರೆಕ್ಟರ್ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಪಂಚಾಯತ್ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ. 15 ಲಕ್ಷ ರೂ.ಲಪಟಾಯಿಸಿದ್ದಾಗಿ ಆರೋಪಿಸಲಾಗಿದೆ.
ಕುಂಬಳೆ ಗ್ರಾಮ ಪಂಚಾಯತ್ ಫಂಡ್ನಿಂದ ಭಾರೀ ಮೊತ್ತವನ್ನು ಲಪಟಾಯಿಸಲಾಗಿದೆ ಎಂದು ಜೋಯಿಂಟ್ ಡೈರೆಕ್ಟರ್ಗೆ ದೂರು ಲಭಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಆಡಳಿತ ಸಮಿತಿ ಸಭೆಯನ್ನು ತುರ್ತಾಗಿ ಕರೆಯಬೇಕೆಂದು ಪಂಚಾಯತ್ ಸದಸ್ಯರು ಪಂಚಾಯತ್ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಈಗ ಕೇಳಿ ಬಂದಿರುವ ಆರೋಪದ ಕುರಿತು ಆಡಳಿತ ಸಮಿತಿ ಶೀಘ್ರ ಚರ್ಚೆ ನಡೆಸಬೇಕೆಂದು ಪಂಚಾಯತ್ನ ಬಿಜೆಪಿ ಸದಸ್ಯರಾದ ವಿದ್ಯಾ ಎನ್.ಪೈ, ಪ್ರೇಮಾವತಿ, ವಿವೇಕಾನಂದ ಶೆಟ್ಟಿ, ಪಿ.ಪುಷ್ಪಲತಾ, ಎಸ್.ಪ್ರೇಮಲತಾ, ಕೆ.ಮೋಹನ ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.