ಲ್ಯಾಪ್‌ಟಾಪ್: ದೀರ್ಘ ಬಾಳಿಕೆಗೆ ಮೇಂಟೆನೆನ್ಸ್ ಟಿಪ್ಸ್
Team Udayavani, Jun 22, 2020, 4:59 AM IST
1 ಟ್ರಾವೆಲ್ ಮಾಡುವಾಗ ಲ್ಯಾಪ್‌ಟಾಪ್ ಒಳಗೆ ಸಿ.ಡಿ. ಡ್ರೈವ್, ಡಿವಿಡಿ, ಪೆನ್ ಡ್ರೈವ್ ಯಾವುದೂ ಅಟ್ಯಾಚ್ ಆಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಲ್ಯಾಪ್ ಟಾಪನ್ನು ಸ್ಲಿಪ್ ಮೋಡ್‌ನಲ್ಲಿ ಇಟ್ಟು ಟ್ರಾವೆಲ್ ಮಾಡಬಾರದು. ಪೂರ್ತಿಯಾಗಿ ಶಟ್‌ಡೌನ್ ಮಾಡಿದ ನಂತರವೇ ಲ್ಯಾಪ್‌ಟಾಪನ್ನು ಕ್ಯಾರಿ ಮಾಡಬೇಕು.
2 ಲ್ಯಾಪ್‌ಟಾಪ್‌ನ ಸ್ಕ್ರೀನ್ ಬಹಳ ಸೂಕ್ಷ್ಮಾವಾದ ಭಾಗ. ಹಾಗಾಗಿ, ಅದಕ್ಕೆ ಸ್ಕ್ರಾಚ್ ಮತ್ತು ಪೆಟ್ಟುಗಳು ಬೀಳದಂತೆ ಎಚ್ಚರ ವಹಿಸಬೇಕು. ಅದಕ್ಕೆ ಹಾನಿಯುಂಟಾದಲ್ಲಿ ರಿಪೇರಿ ಮಾಡಲು ಬರುವುದಿಲ್ಲ, ಅದನ್ನು ಬದಲಾಯಿಸುವುದೊಂದೇ ಮಾರ್ಗ.
3 ಲ್ಯಾಪ್‌ಟಾಪನ್ನು ಬಲವಾದ ಆಯಸ್ಕಾಂತೀಯ ಪ್ರಭಾವ ಹೊಂದಿರುವ ವಸ್ತುಗಳ ಸನಿಹ ಇಡಬಾರದು. ಅಂದರೆ ಟಿ.ವಿ, ದೊಡ್ಡ ದೊಡ್ಡ ಸ್ಪೀಕರ್ ಮತ್ತು ಹೈಟೆಕ್ ರೆಫ್ರೀಜರೇಟರ್‌ನಂಥ ವಸ್ತುಗಳಿಂದ ದೂರವಿದ್ದರೆ ಒಳ್ಳೆಯದು.
4 ಬಳಸದೇ ಇದ್ದಾಗ ಲ್ಯಾಪ್‌ಟಾಪನ್ನು ಮುಚ್ಚಿಯೇ ಇಡಬೇಕು. ಇದರಿಂದ ಕೀ ಬೋರ್ಡ್ ಮೇಲೆ ಧೂಳು ಶೇಖರಣೆಯಾಗುವುದು ತಪ್ಪುತ್ತದೆ. ಜೊತೆಗೆ ಕಾಫಿ, ನೀರು ಮತ್ತಿತರೆ ಪದಾರ್ಥಗಳು ಅವುಗಳ ಮೇಲೆ ಬೀಳುವುದೂ ತಪ್ಪುತ್ತದೆ.
5 ಲ್ಯಾಪ್‌ಟಾಪ್‌ಗ್ಳು, ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗಿಂತ ಬೇಗನೆ ಓವರ್ ಹೀಟ್ ಆಗುತ್ತವೆ. ಆದ್ದರಿಂದ ಲ್ಯಾಪ್‌ಟಾಪನ್ನು ಯಾವಾಗಲೂ ಸಮತಟ್ಟಾದ ಜಾಗದ ಮೇಲೆಯೇ ಇಡಬೇಕು. ದಿಂಬು, ಹಾಸಿಗೆ, ಬಟ್ಟೆ ಮೇಲ್ಗಡೆ ಇಡಬಾರದು. ಏಕೆಂದರೆ ಲ್ಯಾಪ್‌ಟಾಪ್ ಅಡಿಭಾಗದಲ್ಲಿ ಶಾಖ ಹೊರಹೋಗಲು ವೆಂಟಿಲೇಟರ್ ವ್ಯವಸ್ಥೆ ರೂಪಿಸಿರುತ್ತಾರೆ. ಅದು ಮುಚ್ಚಿ ಹೋಗದಂತೆ ನೋಡಿಕೊಳ್ಳಬೇಕು.
6 ಲ್ಯಾಪ್‌ಟಾಪ್, ಪೋರ್ಟೆಬಲ್ ಕಂಪ್ಯೂಟರ್ ನಿಜ. ಎಲ್ಲಿ ಬೇಕಾದಲ್ಲಿ ಅದನ್ನು ಕೊಂಡೊಯ್ದು ಕೆಲಸ ಮಾಡಿಕೊಳ್ಳಬಹುದು. ಆದರೆ ಅಲ್ಲಿನ ಪರಿಸರದ ಬಗ್ಗೆ ಗಮನ ವಹಿಸಿ. ಉದಾಹರಣೆಗೆ, ಬೀಚ್‌ಗೆ ಲ್ಯಾಪ್‌ಟಾಪ್ ಕೊಂಡೊಯ್ದರೆ, ಅದರೊಳಕ್ಕೆ ಮರಳು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ, ಅಡುಗೆ ಮನೆಗೆ ಕೊಂಡೊಯ್ದರೆ, ನೀರು ಮತ್ತಿತರ ದ್ರವ ಪದಾರ್ಥಗಳು ಸೇರುವ ಸಾಧ್ಯತೆ ಇರುತ್ತದೆ.
7 ಲ್ಯಾಪ್‌ಟಾಪ್‌ಗೆ ಪಾಸ್‌ವರ್ಡ್ ಸೆಟ್ ಮಾಡಲು ಮರೆಯದಿರಿ. ಎಲ್ಲೆಂದರಲ್ಲಿ ಕೊಂಡೊಯ್ಯುವುದರಿಂದ, ನಮಗೆ ಗುರುತು ಪರಿಚಯವಿರದ ವ್ಯಕ್ತಿಗಳು ಅದನ್ನು ಬಳಸುವ ಸಾಧ್ಯತೆ ಇರುತ್ತದೆ. ಪಾಸ್‌ವರ್ಡ್ ಹಾಕುವುದರಿಂದ ಅಪರಿಚಿ ತರು ಲ್ಯಾಪ್‌ಟಾಪ್ ಬಳಸುವ ಮುನ್ನ ಪಾಸ್‌ವರ್ಡ್ ಕೇಳಿಕೊಂಡೇ ಬಳಸುವಂತಾಗುತ್ತದೆ. ಇದರಿಂದ ಯಾರು ಬಳಸುತ್ತಿದ್ದಾರೆ ಎಂಬುದು ತಿಳಿದೇ ತಿಳಿಯುತ್ತದೆ.
8 ಲ್ಯಾಪ್‌ಟಾಪ್ ಕ್ಯಾರಿ ಮಾಡುವಾಗ ಕುಶನ್ ಇರುವ ಬ್ಯಾಗಿನಲ್ಲಿಯೇ ಕೊಂಡೊಯ್ಯಿರಿ. ಇದರಿಂದ ಲ್ಯಾಪ್‌ಟಾಪ್‌ಗೆ ಧಕ್ಕೆ ತಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.