ದೇಶದಲ್ಲೇ ಸಿದ್ಧಗೊಳ್ಳಲಿವೆ ಲ್ಯಾಪ್‌ಟಾಪ್, ಕಂಪ್ಯೂಟರ್
ಒಟ್ಟು 44 ಕಂಪೆನಿಗಳಿಂದ ನೋಂದಣಿ
Team Udayavani, Aug 6, 2023, 11:09 PM IST
ಹೊಸದಿಲ್ಲಿ: ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ಪ್ರಮುಖ ಕಂಪೆನಿಗಳ ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ದೇಶದಲ್ಲೇ ಉತ್ಪಾದನೆಯಾಗಲಿದೆ. ಲೆನೊವೋ, ಎಚ್‌ಪಿ, ಡೆಲ್, ಆ್ಯಪಲ್ ಸೇರಿದಂತೆ 44 ಸಂಸ್ಥೆಗಳು ದೇಶದಲ್ಲಿ ಉತ್ಪನ್ನಗಳನ್ನು ತಯಾರಿಸಲು ನೋಂದಾಯಿಸಿಕೊಂಡಿವೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ಸರಕಾರದ 17 ಸಾವಿರ ಕೋಟಿ ರೂ. ಮೌಲ್ಯದ ಉತ್ಪನ್ನ ಆಧರಿತ ಪ್ರೋತ್ಸಾಹ ಯೋಜನೆ (ಪಿಎಲ್‌ಐ) ಅನ್ವಯ ಈ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ದೇಶದಲ್ಲಿ ಹಲವಾರು ಮೊಬೈಲ್ ತಯಾರಿಕ ಸಂಸ್ಥೆಗಳು ಕ್ಷೇತ್ರದಲ್ಲಿ ಯಶಸ್ಸನ್ನು ದಾಖಲಿಸಿವೆ. ಇದೇ ಮಾದರಿಯಲ್ಲಿ ಐಟಿ ಹಾರ್ಡ್‌ವೇರ್‌ಗಳ ತಯಾರಿಕೆಯಲ್ಲೂ ಯಶಸ್ಸು ಗಳಿಸುವ ಉದ್ದೇಶದಿಂದ ಹಲವಾರು ಸಂಸ್ಥೆಗಳು ತಮ್ಮ ಹಾರ್ಡ್‌ವೇರ್ ಉತ್ಪನ್ನಗಳ ತಯಾರಿಕ ಘಟಕಗಳನ್ನು ಸ್ಥಾಪಿಸಲು ಕೋರಿ ನೋಂದಣಿ ಮಾಡಿಕೊಂಡಿವೆ. ಅದಕ್ಕೆ ಆ.30 ಕೊನೆಯ ದಿನವಾಗಿದೆ.
ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳ ಪೈಕಿ, ಕೆಲವು ಸಂಸ್ಥೆಗಳು ಕೇವಲ ಅನುಮತಿಗಾಗಿ ಕಾಯುತ್ತಿದ್ದು, ಯಾವುದೇ ಸಮಯದಲ್ಲೂ ಉತ್ಪಾದನ ಘಟಕ ತೆರೆಯಲು ತಯಾರಾಗಿವೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಷ್ಟೇ ಅಲ್ಲದೆ ವಿದೇಶಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವೂ ತಪ್ಪಲಿದೆ ಎಂದು ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.