ಲಾಸ್‌ ವೆಗಾಸ್‌ನ ವಿಲಾಸಿ ಬದುಕಿನ ಕಥೆ


Team Udayavani, Apr 28, 2020, 5:08 PM IST

ಲಾಸ್‌ ವೆಗಾಸ್‌ನ ವಿಲಾಸಿ ಬದುಕಿನ ಕಥೆ

ಲಾಸ್‌ವೆಗಾಸ್‌: ಅಮೆರಿಕದ ಉದ್ಯೋಗ ಮಾರುಕಟ್ಟೆ ಜಡವಾಗಿದೆ. ಕೋವಿಡ್‌-19ನಿಂದಾಗಿ ನಿರುದ್ಯೋಗ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಲಿದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಕಣ್ಣ ಮುಂದಿವೆ. ಆರ್ಥಿಕ ತಜ್ಞರು ಹೇಳುವಂತೆ, ನಿರುದ್ಯೋಗಸ್ಥರ ಪ್ರಮಾಣ 6.6 ಮಿಲಿಯನ್‌ ಗಡಿ ದಾಟಿದ್ದು, ದಿನ ಕಳೆದಂತೆ ಸಂಖ್ಯೆ ಏರುತ್ತಲೇ ಇದೆ.
ಇಲ್ಲಿನ ಪ್ರಮುಖ ನಗರ ಲಾಸ್‌ ವೆಗಾಸ್‌ನ ಕಥೆ ಕೇಳಿ. ಆರ್ಥಿಕವಾಗಿ ಎಷ್ಟು ಕುಗ್ಗಿದೆಯೆಂದರೆ ಇಲ್ಲಿನ ನಿವಾಸಿಗಳ ಬದುಕೇ ಅತಂತ್ರವಾಗಿದೆ. ಈ ಕುರಿತಾಗಿ ವಾಷಿಂಗ್‌ಟನ್‌ ಪೋಸ್ಟ್‌ ವರದಿ ಮಾಡಿದೆ.

ಪ್ರವಾಸೋದ್ಯಮವೇ ಗತಿ
ಲಾಸ್‌ ವೇಗಾಸ್‌ನಂತ‌ ಕೆಲವು ಪ್ರಮುಖ ನಗರಗಳಿಗೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಪ್ರವಾಸೋದ್ಯಮವನ್ನು ನಂಬಿಕೊಂಡ ನಗರಗಳಿಗಂತೂ ಬಹಳ ಸಮಸ್ಯೆ. ಲಾಸ್‌ ವೆಗಾಸ್‌ ಸಹ ಪ್ರವಾಸೋದ್ಯಮವನ್ನು ಆಶ್ರಯಿಸಿದ್ದ ನಗರ. ಇಲ್ಲಿನ ಸ್ಥಳೀಯ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಜನರು ಹೊಟೇಲ್‌, ರೆಸ್ಟೋರೆಂಟ್‌ ಮತ್ತಿತ್ತರ ಆತಿಥ್ಯ ಉದ್ಯಮಗಳಿಂದ ಆದಾಯ ಗಳಿಸುತ್ತಿದ್ದರು. ಆದರೆ ಪ್ರಸ್ತುತ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಐದು 5 ವಾರಗಳಿಂದ ಆದಾಯವಿಲ್ಲ
ಇಲ್ಲಿನ ಪ್ರತಿಯೊರ್ವ ರೆಸ್ಟೋರೆಂಟ್‌/ಹೊಟೇಲ್‌ಗ‌ಳ ಮಾಲಕರಿಂದ ಹಿಡಿದು ಅಲ್ಲಿ ಕೆಲಸ ಮಾಡುವ ಸಿಬಂದಿವರೆಗೂ ಐದು ವಾರಗಳಿಂದ ಚಿಕ್ಕಾಸೂ ಆದಾಯವಿಲ್ಲ. ಮನೆಯಲ್ಲಿರುವ ಹಿರಿಯರಿಗೆ ಅಗತ್ಯ ಔಷಧಿಗಳನ್ನು ಒದಗಿಸಲಾಗದೇ ಪರದಾಡುತ್ತಿದ್ದಾರೆ. ರೆಸ್ಟೋರೆಂಟ್‌/ಹೊಟೇಲ್‌ಗ‌ಳ ಮಾಲಕರದ್ದು ತ್ರಿಕುಂಶು ಪರಿಸ್ಥಿತಿ. ಕೈಯಲ್ಲಿ ಬಿಡಿಗಾಸಿಲ್ಲದೇ ಕುಟುಂಬ ನಿರ್ವಹಣೆ ಹೇಗೆ ಎಂಬ ಯಕ್ಷಪ್ರಶ್ನೆ ಮೂಡಿದ್ದು, ಕೆಲಸಗಾರರ ಪರಿಸ್ಥಿತಿ ನೋಡಿಯೂ ಸಂಬಳ ಒದಗಿಸಲಾಗದೇ ಒದ್ದಾಡುವಂತಾಗಿದೆ.

ನಿರುದ್ಯೋಗ ದರ
ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಈ ನಗರದ ಸುಮಾರು 3.50 ಲಕ್ಷದಷ್ಟು ಜನರು ನಿರುದ್ಯೋಗ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯ ಆರ್ಥಿಕ ಸಂಶೋಧನಾ ಸಂಸ್ಥೆ ನಡೆಸಿರುವ ಅಧ್ಯಯನ ಪ್ರಕಾರ ನಗರದ ಪ್ರಸ್ತುತ ನಿರುದ್ಯೋಗ ದರ ಶೇ.25ರಷ್ಟಿದೆ. ಮಹಾ ಆರ್ಥಿಕ ಹಿಂಜರಿತದ ಅವಧಿಯಲ್ಲಿದ್ದ ಪ್ರಮಾಣಕ್ಕಿಂತ ಎರಡರಷ್ಟು. ಆ ಮೂಲಕ ಇತಿಹಾಸದಲ್ಲೇ ಆರ್ಥಿಕವಾಗಿ ಮಹಾ ಬಿಕ್ಕಟ್ಟಿಗೆ ಗುರಿಯಾಗಿದ್ದು, ಮುಂಬರುವ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದೆ.

ಜೀವನದ ಅತ್ಯಂತ ಕಷ್ಟಕರದ ಘಟ್ಟ
ನಮ್ಮದು ಚಿಕ್ಕ ಸಂಸಾರ. ಜೀವನದುದ್ದಕ್ಕೂ ಸಂತೋಷವನ್ನೇ ನೋಡಿಕೊಂಡು ಬಂದಿದ್ದ ನಮಗೆ ಸದ್ಯದ ಪರಿಸ್ಥಿತಿ ಅತ್ಯಂತ ಕಷ್ಟಕರದ ಘಟ್ಟ ಎಂದೆನಿಸಿದೆ. ಏನು ಮಾಡಬೇಕೆಂದೇ ತೋಚುತ್ತಿಲ್ಲ ಎನ್ನುತ್ತಾರೆ ನಗರದಲ್ಲಿ ರೆಸ್ಟೋರೇಂಟ್‌ ನಡೆಸುತ್ತಿದ್ದ ಮಾಲಕರೊಬ್ಬರು.

ನನ್ನ ಜೀವಮಾನದಲ್ಲಿಯೂ ಒಮ್ಮೆಯೂ ನನ್ನ ಕರ್ತವ್ಯದಿಂದ ಯಾವತ್ತು ಹಿಂದೆ ಸರಿದಿರಲಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯ ಕೈಗೊಂಬೆಯಾಗಿದ್ದೇನೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ನನ್ನ ಮಗಳಿಗೆ ಅಗತ್ಯ ಔಷಧಿಗಳನ್ನೂ ಒದಗಿಸಲಾರಷ್ಟು ಅಸಹಾಯಕನಾಗಿದ್ದಾನೆ. ನನ್ನ ಮಾಲಕತ್ವದಲ್ಲಿ ದುಡಿಯುತ್ತಿದ್ದ ಕಾರ್ಮಿಕರ ದುಸ್ಥಿತಿಯನ್ನು ನೋಡಿಯೂ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಮೊದಲ ಬಾರಿಗೆ ಮನೆ ಬಾಡಿಗೆ ಕಟ್ಟಲು ಇತರರ ಎದುರು ಕೈ ಚಾಚುವ ಪರಿಸ್ಥಿತಿ ಎದುರಾಗಿದೆ ಎಂದು ಕೋವಿಡ್‌ -19ನಿಂದ ತಮಗೆ ಎದುರಾದ ಸಂಕಷ್ಟಗಳನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ ಮತ್ತೂಂದು ದಂಪತಿ.

ಲಾಸ್‌ ವೆಗಾಸ್‌ ಅಮೆರಿಕದ 28 ನೇ ಅತಿ ಹೆಚ್ಚು ಜನಸಂಖ್ಯೆ ಇರುವ ನಗರ. ನೆವಡಾ ರಾಜ್ಯದಲ್ಲಿ ಬರುವ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರಸಿದ್ಧ ನಗರ. ಇದು ವಿಲಾಸಿ ಜೀವನಕ್ಕೂ ಹೇಳಿ ಮಾಡಿಸಿದ ನಗರವೆಂದೇ ಖ್ಯಾತಿ ಗಳಿಸಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

taliban

Taliban; ಮಹಿಳೆಯರ ಪ್ರಾರ್ಥನೆ ವಿಚಾರದಲ್ಲಿ ಮತ್ತೊಂದು ವಿಲಕ್ಷಣ ನಿಯಮ!!

1-a-tru

Hindus; ಜಗತ್ತಿನ ಹಿಂದೂಗಳ ರಕ್ಷಿಸುವೆ: ಡೊನಾಲ್ಡ್‌ ಟ್ರಂಪ್‌ ಅಭಯ

1-adsadsa

Pakistan;ಬಾಂಬ್‌ ದಾಳಿಗೆ 5 ಮಕ್ಕಳು ಸೇರಿ 9 ಜನ ಸಾ*ವು

Taliban’s New Rule: ಮಹಿಳೆ ಜೋರಾಗಿ ಕುರಾನ್‌ ಪಠಿಸುವಂತಿಲ್ಲ: ತಾಲಿಬಾನ್‌

Taliban’s New Rule: ಮಹಿಳೆ ಜೋರಾಗಿ ಕುರಾನ್‌ ಪಠಿಸುವಂತಿಲ್ಲ: ತಾಲಿಬಾನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.