Law: ಸಬಲ ನ್ಯಾಯದಾನದಿಂದ ವಿಕಸಿತ ಭಾರತ: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ನ ಬೆಳ್ಳಿಹಬ್ಬ ಉದ್ಘಾಟನೆ- ಸಂಕೀರ್ಣ ವಿಸ್ತೀರ್ಣಕ್ಕೆ 800 ಕೋಟಿ ರೂ.ಗೆ ಅನುಮೋದನೆ: ಮೋದಿ
Team Udayavani, Jan 28, 2024, 11:29 PM IST
ಹೊಸದಿಲ್ಲಿ: ಸಬಲ ನ್ಯಾಯದಾನ ವ್ಯವಸ್ಥೆಯಿಂದ ವಿಕಸಿತ ಭಾರತ ನಿರ್ಮಾಣ ಆಗಲು ಸಾಧ್ಯವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಹೊಸದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್ನ 75ನೇ ವರ್ಷಾ ಚರಣೆ ಸಂಭ್ರಮದಲ್ಲಿ ಮಾತನಾಡಿ , ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆಗೊಂಡ 3 ಹೊಸ ಅಪರಾಧ ಕಾಯ್ದೆಗಳು ದೇಶದ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗೆ ಹೊಸ ರೂಪ ನೀಡಲಿವೆ. ಸಬಲವಾಗಿರುವ ನ್ಯಾಯದಾನ ವ್ಯವಸ್ಥೆ ಕೂಡ ವಿಕಸಿತ ಭಾರತ ನಿರ್ಮಾಣದ ಒಂದು ಅಂಗವೇ ಆಗಿದೆ ಎಂದರು. ಇದೇ ವೇಳೆ ಸುಪ್ರೀಂಕೋರ್ಟ್ ಸಂಕೀರ್ಣ ವನ್ನು ವಿಸ್ತರಿಸುವ ಅಗತ್ಯೆಯನ್ನು ಸರಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಕಳೆದ ವಾರವೇ ಸರಕಾರ ಸುಪ್ರೀಂಕೋರ್ಟ್ ಸಂಕೀರ್ಣ ವಿಸ್ತೀರ್ಣಕ್ಕಾಗಿ 800 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದೂ ಹೇಳಿದರು .
ಡಿಜಿಟಲ್ನಿಂದ ಕ್ಲೌಡ್ ವ್ಯಾಪ್ತಿಗೆ: ಸುಪ್ರೀಂನಲ್ಲಿ ಸದ್ಯ ಡಿಜಿಟಲ್ ವ್ಯವ ಸ್ಥೆಯಲ್ಲಿ ಮಾಹಿತಿ ದೊರೆಯುತ್ತಿದ್ದು, 1950ರಿಂದ ಮೊದಲ್ಗೊಂಡು 519 ಭಾಗಗಳಲ್ಲಿ 36308 ಕೇಸುಗಳ ತೀರ್ಪು ಗಳು ಅದರಲ್ಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ಕ್ಲೌಡ್ ಆಧಾರಿತ ವ್ಯವಸ್ಥೆ ಅಳವಡಿ ಸಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.