ಜಡೇಜ ವೈಫಲ್ಯಕ್ಕೆ ನಾಯಕತ್ವದ ಒತ್ತಡ ಕಾರಣ: ಎಂ. ಎಸ್. ಧೋನಿ
Team Udayavani, May 3, 2022, 8:20 AM IST
ಮುಂಬಯಿ: ನಾಯಕತ್ವದ ಒತ್ತಡ ಮತ್ತು ಬೇಡಿಕೆಗಳಿಂದಾಗಿ ರವೀಂದ್ರ ಜಡೇಜ ಅವರ ಸಿದ್ಧತೆ ಹಾಗೂ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬಿತ್ತು ಎಂಬುದಾಗಿ ಚೆನ್ನೈ ತಂಡದ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಬೇರೊಬ್ಬರು ಹೇಳಿದ ಮಾತಿನಂತೆ ನಡೆಯುವುದಕ್ಕಿಂತ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವಂತೆ ಧೋನಿ ಅವರು ಜಡೇಜ ಅವರನ್ನು ಪ್ರೋತ್ಸಾಹಿಸಿದ್ದರು. ಇದರಂತೆ ಐಪಿಎಲ್ ಆರಂಭವಾಗಲು ಕೆಲವು ದಿನ ಬಾಕಿ ಇರುವಾಗಲೇ ಧೋನಿ ನಾಯಕತ್ವದಿಂದ ಹಿಂದೆ ಸರಿದಿದ್ದರು. ಕ್ಯಾಪ್ಟನ್ಸಿಗೆ ಅವರು ರವೀಂದ್ರ ಜಡೇಜ ಹೆಸರನ್ನು ಸೂಚಿಸಿದ್ದರು.
ಆದರೆ ಆಲ್‌ರೌಂಡರ್ ಜಡೇಜ ಒತ್ತಡದಲ್ಲಿ ಮುಳುಗಿದರು. ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಅವರಿಂದ ಸಾಧ್ಯವಾಗಲಿಲ್ಲ. ಆಡಿದ 8 ಪಂದ್ಯಗಳಲ್ಲಿ ಚೆನ್ನೈ ಆರರಲ್ಲಿ ಸೋತು ಆಘಾತ ಅನುಭವಿಸಿತಲ್ಲದೇ ಅಭಿಮಾನಿಗಳು ನಿರಾಶೆಗೊಂಡರು.
ಮಾತ್ರವಲ್ಲದೇ ವೈಯಕ್ತಿಕವಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಂಗ್‌ನಲ್ಲಿಯೂ ಜಡೇಜ ವೈಫಲ್ಯ ಅನುಭವಿಸಿದರು. ಇದರಿಂದ ಕಂಗೆಟ್ಟ ಜಡೇಜ ಕೂಟದ ನಡುವೆ ನಾಯಕತ್ವದ ಜವಾಬ್ದಾರಿಗೆ ರಾಜೀನಾಮೆ ಕೊಟ್ಟರು. ಫ್ರಾಂಚೈಸಿ ಮತ್ತೆ ಧೋನಿ ಅವರಲ್ಲಿ ನಂಬಿಕೆ ಇಟ್ಟು ನಾಯಕತ್ವದ ಹೊಣೆಯನ್ನು ಅವರಿಗೆ ವಹಿಸಿತು.
ನಂಬಿಗಸ್ಥ ಆಟಗಾರ
ನಿಜವಾಗಿ ಹೇಳುವುದಾದರೆ ಜಡೇಜ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಭಾರತದ ಅತ್ಯಂತ ನಂಬಿಗಸ್ಥ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ ಈ ಐಪಿಎಲ್‌ನಲ್ಲಿ ಅವರು ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿರುವುದು ಎದ್ದು ಕಾಣುತ್ತಿದೆ.
ಧೋನಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುತ್ತಲೇ ಚೆನ್ನೈ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ರವಿವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಸನ್‌ರೈಸರ್ ಹೈದರಾಬಾದ್ ತಂಡವನ್ನು 13 ರನ್ನುಗಳಿಂದ ಸೋಲಿಸಲು ಯಶಸ್ವಿಯಾಗಿದೆ.
ಈ ವರ್ಷ ಚೆನ್ನೈ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ಜಡೇಜ ಅವರಿಗೆ ಕಳೆದ ವರ್ಷವೇ ತಿಳಿದಿತ್ತು. ಈ ಐಪಿಎಲ್‌ನ ಮೊದಲ ಎರಡು ಪಂದ್ಯಗಳ ವೇಳೆ ಅವರ ನಾಯಕತ್ವದ ಕರ್ತವ್ಯದ ಮೇಲ್ವಿಚಾರಣೆ ನಡೆಸಿದ್ದೇನೆ ಮತ್ತು ಕೆಲವೊಂದು ಸೂಚನೆ ನೀಡಿದ್ದೇನೆ. ಆಬಳಿಕ ನಿಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸೂಚಿಸಿದ್ದೆ ಎಂದು ಧೋನಿ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಿಳಿಸಿದರು.
“ಒಮ್ಮೆ ನೀವು ನಾಯಕರಾಗಿ ಆಯ್ಕೆಯಾದ ಬಳಿಕ ಬಹಳಷ್ಟು ಬೇಡಿಕೆಗಳು ಬರುತ್ತವೆ. ನಾಯಕತ್ವದ ಜವಾಬ್ದಾರಿ ಕಠಿನವಾಗುತ್ತ ಹೋದಾಗ ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಜಡೇಜ ಅವರಿಗೂ ಇದೇ ಸಮಸ್ಯೆ ಎದುರಾಗಿದೆ’ ಎಂದು ಧೊನಿ ಹೇಳಿದರು.
“ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಬಳಿಕ ನೀವು ಹಲವಾರು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ನಿಮ್ಮದೇ ಆಟವೂ ಒಳಗೊಂಡಿದೆ. ಇದೀಗ ಒತ್ತಡದಿಂದ ಮುಕ್ತರಾದ್ದರಿಂದ ಜಡೇಜ ಅವರು ಎಂದಿನಂತೆ ನೈಜ ಆಟ ಪ್ರದರ್ಶಿಸಲು ಪ್ರಯತ್ನಸಬೇಕಾಗಿದೆ’ ಎಂದು ಧೋನಿ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.