ತಿಂಗಳಾದರೂ ಪ್ರಗತಿ ಕಾಣದ ‘ಕಲಿಕಾ ಚೇತರಿಕೆ’
ಇನ್ನೂ ಅನುಷ್ಠಾನವಾಗದ ಮಹತ್ವಾಕಾಂಕ್ಷಿ ಕಾರ್ಯಕ್ರಮ ; ಕಲಿಕಾ ಹಾಳೆ, ಕೈಪಿಡಿ ನಿರೀಕ್ಷೆಯಲ್ಲಿ ಶಿಕ್ಷಕ-ವಿದ್ಯಾರ್ಥಿಗಳು
Team Udayavani, Jun 17, 2022, 11:06 AM IST
ಸಾಂದರ್ಭಿಕ ಚಿತ್ರ
ದಾವಣಗೆರೆ: ಕೊರೊನಾ ಸಾಂಕ್ರಾಮಿಕದಿಂದ ಕಳೆದ 3 ವರ್ಷ ಮಕ್ಕಳ ಕಲಿಕೆಯಲ್ಲಾದ ಕೊರತೆ ಸರಿದೂಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ “ಕಲಿಕಾ ಚೇತರಿಕೆ’ ಕಾರ್ಯಕ್ರಮ ರಾಜ್ಯಾದ್ಯಂತ ತಿಂಗಳಾದರೂ ಚೇತರಿಕೆಯನ್ನೇ ಕಂಡಿಲ್ಲ!
ಪ್ರಸಕ್ತ ಸಾಲಿನ ನೂತನ “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಅನುಷ್ಠಾನಕ್ಕೆ ಬೇಕಾದ ಅಗತ್ಯ ಕಲಿಕಾ ಹಾಳೆಗಳು, ಶಿಕ್ಷಕರ ಕೈಪಿಡಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೈ ಸೇರದೇ ಇರುವುದರಿಂದ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಕ ವಿಘ್ನ ಎದುರಿಸುವಂತಾಗಿದ್ದು, ಕಲಿಕಾ ಚೇತರಿಕೆಗೆ ಭಾರೀ ಹಿನ್ನಡೆಯಾಗಿದೆ.
“ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ವಿದ್ಯಾರ್ಥಿಗಳಿಗೆ ನೀಡುವ ವಿಶೇಷ ಕಲಿಕಾ ಹಾಳೆಗಳು ಹಾಗೂ ಕಲಿಸಲು ಶಿಕ್ಷಕರಿಗೆ ನೀಡುವ ಕೈಪಿಡಿ ಅತ್ಯವಶ್ಯ. ಶಾಲೆ ಆರಂಭವಾಗಿ ಒಂದು ತಿಂಗಳಾದರೂ ಕಲಿಕಾ ಹಾಳೆಯೂ ಇಲ್ಲ. ಇತ್ತ ಶಿಕ್ಷಕರ ಕೈಪಿಡಿಯೂ ಇಲ್ಲದೆ ಶಾಲೆಗಳಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗೆ ಇನ್ನೂ ಅಧಿಕೃತ ಚಾಲನೆಯೇ ಸಿಕ್ಕಿಲ್ಲ.
ರಾಜ್ಯದ ಕೆಲವು ಕಡೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ನಿರ್ವಹಣಾ ಅನುದಾನ ಬಳಸಿಕೊಂಡು ಕಲಿಕಾ ಹಾಳೆ ಝೆರಾಕ್ಸ್ ಮಾಡಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ. ಆದರೆ ವಾಸ್ತವದಲ್ಲಿ ಶಾಲಾ ನಿರ್ವಹಣೆ ಅನುದಾನ ಈವರೆಗೆ ಖಾತೆಗೆ ಜಮೆಯೇ ಆಗಿಲ್ಲ. ಶಿಕ್ಷಕರು ಸ್ವಂತ ಖರ್ಚಿನಲ್ಲಿ ಈಗ ಝೆರಾಕ್ಸ್ ಮಾಡಿಸಿ ಶಾಲಾ ಅನುದಾನ ಬಂದ ಬಳಿಕ ಪಡೆದುಕೊಳ್ಳುವಂತೆ ಕೆಲವು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದರೂ ಬಹುತೇಕ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಕಲಿಕಾ ಹಾಳೆ ಝೆರಾಕ್ಸ್ ಮಾಡಿಸಲು ಮುಂದಾಗಿಲ್ಲ. ಹೀಗಾಗಿ “ಕಲಿಕಾ ಚೇತರಿಕೆ’ ಮೊದಲ ಹೆಜ್ಜೆಯನ್ನೇ ಇಟ್ಟಿಲ್ಲ.
ಕಲಿಕಾ ಹಾಳೆ, ಕೈಪಿಡಿ ಇಲ್ಲದೇ ಇರುವುದರಿಂದ ಶಿಕ್ಷಕರು ಕಳೆದ ಒಂದು ತಿಂಗಳಿಂದ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಯ ಕೆಲವು ಪಾಠಗಳನ್ನೇ ಪುನರಾವಲೋಕನ ಮಾಡುತ್ತಿದ್ದಾರೆ. ಇನ್ನು ಕೆಲವು ಶಿಕ್ಷಕರು ಸಾಮಾನ್ಯ ಜ್ಞಾನದ ಸಂಗತಿಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೆ ಕೆಲ ಶಿಕ್ಷಕರು ಮಕ್ಕಳನ್ನು ಬೇರೆ ಬೇರೆ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದು ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳ ನಿರೀಕ್ಷೆಯಲ್ಲಿದ್ದಾರೆ.
ಕಲಿಕಾ ಚೇತರಿಕೆ ಕಾರ್ಯಕ್ರಮ ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿದ್ದ “ಸೇತುಬಂಧ’ ಮಾದರಿ ಯಲ್ಲೇ ಇದ್ದರೂ ಮೂರು ವರ್ಷಗಳ ಕಲಿಕಾ ಕೊರತೆ ನೀಗಿಸಲು ವಿಶೇಷ ಚಟುವಟಿಕೆ ಅಳವಡಿಸಿ ರೂಪಿಸಿದ ಕಾರ್ಯಕ್ರಮ ಇದಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ “ಸೇತುಬಂಧ’ ಕಾರ್ಯಕ್ರಮವನ್ನು ಒಂದು ತಿಂಗಳು ನಡೆಸಲಾಗುತ್ತದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಹಿಂದಿನ ಮೂರು ವರ್ಷಗಳ ಕಲಿಕಾ ಕೊರತೆ ಸರಿದೂಗಿಸ ಬೇಕಾಗಿರುವುದರಿಂದ “ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಒಂದೂವರೆ ತಿಂಗಳು ನಡೆಸಲು ಇಲಾಖೆ ಯೋಜನೆ ಹಾಕಿ ಕೊಂಡಿತ್ತು. ಆದರೆ ಒಂದು ತಿಂಗಳು ಕಳೆದರೂ ಶುರುವಾಗಿಲ್ಲ.
ಸಿದ್ಧವಾಗಿದೆ, ಪೂರೈಕೆಯಾಗಿಲ್ಲ: “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಕಲಿಕಾ ಕೊರತೆ ಯಾವ ರೀತಿ ಸರಿದೂಗಿಸಬೇಕು ಎಂಬ ಕುರಿತು ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶನದಂತೆ ಡಿಎಸ್‌ಇಆರ್‌ಟಿ ವತಿಯಿಂದ ಹೊಸ ಮಾರ್ಗಸೂಚಿ ಸಿದ್ಧಪಡಿಸುವ ಕಾರ್ಯ ಆಗಿದೆ. ಇದಕ್ಕೆ ಬೇಕಾದ ಕಲಿಕಾ ಹಾಳೆ, ಶಿಕ್ಷಕರ ಕೈಪಿಡಿಯೂ ಸಿದ್ಧವಾಗಿದೆ. ಇವುಗಳನ್ನು ಆನ್‌ಲೈನ್ ನಲ್ಲಿಯೂ ಪ್ರಕಟಿಸಲಾಗಿದೆ. ಆದರೆ ಅವುಗಳನ್ನು ಮುದ್ರಿಸಿ ಪೂರೈಸುವ ಕಾರ್ಯ ಆಗಿಲ್ಲ. ಹೀಗಾಗಿ ಕಲಿಕಾ ಚೇತರಿಕೆ’ ಕಾರ್ಯಕ್ರಮ ಆರಂಭಕ್ಕೂ ಮೊದಲೇ ಕಮರಿದಂತಾಗಿದೆ.
ಮಕ್ಕಳಲ್ಲಿನ ಕಲಿಕಾ ಕೊರತೆ ತುಂಬುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ವರ್ಷ 15 ದಿನ ಮುಂಚಿತವಾಗಿಯೇ ಅಂದರೆ ಮೇ 15ರಿಂದಲೇ ಶಾಲೆಗಳನ್ನು ಪುನಾರಂಭಗೊಳಿ ಸಿತ್ತು. ಶಿಕ್ಷಕರು ಬೇಸಿಗೆ ರಜೆಯಲ್ಲಿರುವಾಗಲೇ ಅವರನ್ನು ಕರೆಸಿ “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಕುರಿತು ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಿತ್ತು.
ಆದರೆ ಸಕಾಲಕ್ಕೆ ಕಲಿಕಾ ಹಾಳೆ ಹಾಗೂ ಶಿಕ್ಷಕರ ಕೈಪಿಡಿ ಪೂರೈಕೆ ಮಾಡಲು ಆಸಕ್ತಿ ವಹಿಸದೇ ಇರುವುದರಿಂದ ಬಹು ನಿರೀಕ್ಷಿತ ಕಾರ್ಯಕ್ರಮಕ್ಕೆ ಭಾರೀ ಹಿನ್ನಡೆಯಾಗಿದೆ. ಇದು ಪರೋಕ್ಷವಾಗಿ ಮತ್ತೆ ಮಕ್ಕಳ ಕಲಿಕೆಯ ಮೇಲೆಯೇ ದುಷ್ಪರಿ ಣಾಮಕ್ಕೆ ದಾರಿಯಾಗಿರುವುದು ದುರಂತ.
ಮುದ್ರಣವೇ ಆಗಿಲ್ಲ?
ಕಲಿಕಾ ಕೊರತೆ ಸರಿದೂಗಿಸುವ “ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಕಲಿಕಾ ಹಾಳೆಗಳು, ಶಿಕ್ಷಕರ ಕೈಪಿಡಿ ಇನ್ನೂ ಮುದ್ರಣವೇ ಆಗಿಲ್ಲ. ಮುದ್ರಣಕ್ಕೆ ಕಾಗದದ ಸಮಸ್ಯೆ ಎದುರಾಗಿದೆ ಎಂದು ಕೆಲವು ಮೂಲಗಳು ಹೇಳಿದರೆ, ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದಿಂದಾಗಿ ಇಲಾಖೆ ಈ ಕಾರ್ಯಕ್ರಮ ಅನುಷ್ಠಾನದತ್ತ ಉದಾಸೀನ ಮಾಡಿದೆ ಎಂದು ಮತ್ತೆ ಕೆಲವರು ಆರೋಪಿಸುತ್ತಿದ್ದಾರೆ. ಇದಕ್ಕೆ ಇಲಾಖೆ ಮುಖ್ಯಸ್ಥರು ಹಾಗೂ ಇಲಾಖೆಯ ಸಚಿವರೇ ಸ್ಪಷ್ಟನೆ ನೀಡಬೇಕಿದೆ.
“ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಕಲಿಕಾ ಹಾಳೆ, ಶಿಕ್ಷಕರ ಕೈಪಿಡಿ ಇನ್ನೂ ಪೂರೈಕೆಯಾಗಿಲ್ಲ. ಸದ್ಯಕ್ಕೆ ಶಾಲಾನುದಾನ ಬಳಸಿಕೊಂಡು ಝೆರಾಕ್ಸ್ ಮಾಡಿಸಿಕೊಳ್ಳಬೇಕು. ಅನುದಾನ ಬಾರದೇ ಇದ್ದರೆ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಮಾಡಿಸಿಕೊಂಡು ಅನುದಾನ ಬಂದ ಬಳಿಕ ಹಣ ಪಡೆಯಲು ಶಾಲಾ ಮುಖ್ಯಾಧ್ಯಾಪಕರಿಗೆ ಸೂಚಿಸಿದ್ದೇವೆ. ●ನಿರಂಜನಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ದಾವಣಗೆರೆ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.