ಪ್ರೇಕ್ಷಕರ ಆಸನದಲ್ಲಿದ್ದ “ಬಿನ್ ಲಾಡೆನ್’ಗೆ ಗೇಟ್‌ಪಾಸ್!
Team Udayavani, Jun 26, 2020, 6:35 AM IST
ಲೀಡ್ಸ್: ನಿಧನ ಹೊಂದಿ 9 ವರ್ಷಗಳ ಬಳಿಕ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಇಂಗ್ಲೆಂಡಿನ ಕ್ರೀಡಾಂಗಣವೊಂದರಲ್ಲಿ ಪ್ರತ್ಯಕ್ಷನಾದ ಸ್ವಾರಸ್ಯಕರ ಘಟನೆ ಇದು. ಕ್ರೀಡಾಂಗಣದ ಮುಖ್ಯಸ್ಥರಿಗೆ ಇದು ತಿಳಿಯುತ್ತಿದ್ದಂತೆಯೆ ಈ ಜಾಗತಿಕ ಉಗ್ರನಿಗೆ ಅಲ್ಲಿಂದ ಗೇಟ್‌ಪಾಸ್ ನೀಡಲಾಗಿದೆ.
ವಿಷಯ ಇಷ್ಟು…
ಕೋವಿಡ್ ದಿಂದ ಇಂಗ್ಲೆಂಡಿನ ಕ್ರೀಡಾಂಗಣಗಳಿಗೆ ವೀಕ್ಷಕರ ನಿಷೇಧ ವಿದೆ. ಈ ಕೊರತೆ ನೀಗಿಸುವ ಸಲುವಾಗಿ ಅನೇಕ ಇಂಗ್ಲಿಷ್ ಫುಟ್‌ಬಾಲ್ ಕ್ಲಬ್‌ಗಳು ತನ್ನ ಅಭಿಮಾನಿಗಳಿಂದ ಕಟೌಟ್, ಫೋಟೋ ಗಳನ್ನು ಆಹ್ವಾನಿ ಸಿತ್ತು. ಇದನ್ನು ಕ್ರೀಡಾಂಗಣದ ಕುರ್ಚಿಯಲ್ಲಿ ರಿಸಿ ಸ್ಟೇಡಿಯಂ “ಹೌಸ್ ಫುಲ್’ ಆಗಿ ರುವಂತೆ ತೋರಿಸುವುದು ಈ ಕ್ಲಬ್‌ಗಳ ಉದ್ದೇಶ.
“ಲೀಡ್ಸ್ ಯುನೈಟೆಡ್’ ಕೂಡ ಇಂಥದೇ ಯೋಜನೆಗೆ ಮುಂದಾ ದಾಗ ಎಡವಟ್ಟೊಂದು ಸಂಭವಿಸಿತು. ಇಲ್ಲಿನ ಆಸನವೊಂದರ ಮೇಲೆ ಒಸಾಮ ಬಿನ್ ಲಾಡೆನ್‌ನ ಕಟೌಟ್ ಕೂಡ ಕಂಡುಬಂತು. ಇದರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದಾಗ ಲೀಡ್ಸ್ ಯುನೈಟೆಡ್ ಎಚ್ಚೆತ್ತಿತು. ಕೂಡಲೇ ಲಾಡೆನ್ ಕಟೌಟನ್ನು ಕಿತ್ತೆಸೆಯಿತು. ಇನ್ನು ಇಲ್ಲಿ ಇಂಥ ಅಪರಾಧಿಗಳ ಚಿತ್ರ ಗಳಿಲ್ಲ ಎಂಬುದಾಗಿ ಅದು ಹೇಳಿದೆ.
ಆಸ್ಟ್ರೇಲಿಯದಲ್ಲೂ…
ಇತ್ತೀಚೆಗೆ ಆಸ್ಟ್ರೇಲಿಯದಲ್ಲೂ ಹೀಗೆಯೇ ಆಗಿತ್ತು. ನ್ಯಾಶನಲ್ ಲೀಗ್ ಪಂದ್ಯವೊಂದರ ವೇಳೆ ಬ್ರಿಟನ್ನಿನ ಸರಣಿ ಹಂತಕ ಹ್ಯಾರೋಲ್ಡ್ ಶಿಪ್‌ಮನ್ ಕಟೌಟ್ ಒಂದು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಇದನ್ನು ಕಿತ್ತೆಸೆಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.