ಚಿರತೆ ದಾಳಿಗೆ ಕರು ಜಿಂಕೆ ಬಲಿ : ಮನೆಯಿಂದ ಹೊರಬರಲು ಹೆದರುತ್ತಿರುವ ನಿವಾಸಿಗಳು
Team Udayavani, Dec 8, 2020, 3:25 PM IST
ಬ್ಯಾಡಗಿ: ಚಿರತೆ ದಾಳಿಗೆ ಕರು ಹಾಗೂ ಜಿಂಕೆಯೊಂದು ಬಲಿಯಾಗಿರುವ ಘಟನೆ ಬ್ಯಾಡಗಿ ತಾಲೂಕಿನ ಹೊಸ ಗುಂಗರಕೊಪ್ಪ
ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೊಸ ಗುಂಗರಕೊಪ್ಪ ಗ್ರಾಮದ ನಿವಾಸಿ ರೈತ ಬಸವರಾಜ ಮೇಗಳಮನಿ ತಮ್ಮ ಹೊಲದಲ್ಲಿ ಕರುವನ್ನು ಮೇಯಲು ಬಿಟ್ಟಿದ್ದು ಎಲ್ಲಿಂದಲೋ ಏಕಾಏಕಿ ಪ್ರತ್ಯಕ್ಷವಾದ ಚಿರತೆ ಕರುವಿನ ಮೇಲೆ ದಾಳಿ ಮಾಡಿ ಹೊತ್ತೂಯ್ದು ಅರ್ಧಂಬರ್ಧ ತಿಂದು ಕೊಂದು ಹಾಕಿದೆ. ಅಲ್ಲದೇ ಕೆಲ ದಿನಗಳ ನಂತರದ ಅವಧಿಯಲ್ಲಿ ಮತ್ತೆ ಜಿಂಕೆಯೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದು ಜಿಂಕೆಯ ದೇಹ ಹೊಲದ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಭಯದಲ್ಲಿ ರೈತರು: ಚಿರತೆ ದಾಳಿಯಿಂದ ಕಂಗಾಲಾಗಿರುವ ಹೊಸ ಗುಂಗರಕೊಪ್ಪ ಗ್ರಾಮದ ಜನ ಹಾಗೂ ರೈತರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ರಾತ್ರಿ ಸಮಯದಲ್ಲಿ ಹೊಲಗಳಿಗೆ ನೀರು ಹಾಯಿಸಲು ಹೋಗಲು ರೈತರು ಭಯ ಪಡುತ್ತಿದ್ದು
ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ: ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿದ DYSP
ಹೊಸ ಗುಂಗರಕೊಪ್ಪ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕರು ಹಾಗೂ ಜಿಂಕೆ ಕೊಂದಿರುವ ಘಟನೆ ಕುರಿತಂತೆ ಅರಣ್ಯ ಇಲಾಖೆ ಗಾರ್ಡ್‌ಗೆ ತಿಳಿಸಲಾಗಿದೆ. ಇಷ್ಟಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಯಾವಾಗ ಯಾವ ಮೂಲೆಯಿಂದ ಯಾರ ಮೈಮೇಲೆ ಚಿರತೆ ಬಂದೆರಗುವುದೋ ಎಂಬ ಭಯದಲ್ಲಿಯೇ ಗ್ರಾಮಸ್ಥರು ಜೀವಿಸುವಂತಾಗಿದೆ.
– ಬಸವರಾಜ ಮೇಗಳಮನಿ, ಸಂತ್ರಸ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.