ಶಿಕ್ಷಣವೇ ಆದ್ಯತೆಯಾಗಲಿ; ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರ ಸಲಹೆ
Team Udayavani, Feb 10, 2022, 7:00 AM IST
ಮೊದಲೇ ಕೊರೊನಾ ನಿರ್ಬಂಧ ನಡುವೆ ತತ್ತರಿಸುತ್ತಿರುವ ರಾಜ್ಯದ ಶಿಕ್ಷಣ ವ್ಯವಸ್ಥೆ ಇನ್ನೊಂದು ಆಘಾತವನ್ನು ಎದುರಿಸುತ್ತಿದೆ. ಶೈಕ್ಷಣಿಕ ವರ್ಷ ಕೊನೇ ಹಂತದಲ್ಲಿದ್ದು, ಎಲ್ಲರೂ ಅಂತಿಮ ಪರೀಕ್ಷೆಗೆ ಸಜ್ಜಾಗುತ್ತಿರುವಾಗಲೇ ಹಿಜಾಬ್-ಕೇಸರಿ ಶಾಲು ವಿವಾದ ಎದ್ದು ನಿಂತಿದೆ. ಈ ಹೊತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಬೇಕು ಎಂದು ನಾಡಿನ ಸರ್ವಧರ್ಮಗಳ ಮುಖಂಡರು ಕರೆ ನೀಡಿದ್ದಾರೆ.
ಶಾಲೆಗಳಿಗೇಕೆ ಧರ್ಮ?
ಶಾಲೆಗಳಲ್ಲಿ ಧರ್ಮ ಇರಬಾರದು. ಎಲ್ಲರೂ ಸಮಾ ನತೆಯಿಂದ ಇರಬೇಕು. ಶಿಕ್ಷಣ ಅತೀ ಮುಖ್ಯ. ಎಲ್ಲದ್ದ ಕ್ಕಿಂತಲೂ ಈ ಬಗ್ಗೆ ಹೆಚ್ಚು ಗಮನ ಕೊಡಿ. ಕ್ಷುಲ್ಲಕ ವಿಷಯವನ್ನು ಇಷ್ಟು ದೊಡ್ಡದು ಮಾಡಬಾರದು. ಈಗ ಈ ವಿಷಯ ನ್ಯಾಯಾಲಯದಲ್ಲಿ ಇದೆ. ನ್ಯಾಯಾ ಲಯದ ತೀರ್ಪಿಗೆ ಎಲ್ಲರೂ ಬದ್ಧರಾಗಿ ಇರಬೇಕು.
– ಶ್ರೀ ಸಿದ್ಧಲಿಂಗ ಸ್ವಾಮೀಜಿ, ತುಮ ಕೂರು ಸಿದ್ಧಗಂಗಾ ಮಠ
ಸಂಯಮ ಇರಲಿ
ವಿದ್ಯಾರ್ಥಿಗಳು ಸಂಯಮ ಕಳೆದುಕೊಳ್ಳಬಾರದು. ನಾಡಿನಲ್ಲಿ ಇಂಥ ಬೆಳವಣಿಗೆ ಒಳ್ಳೆಯದಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಆ ರೀತಿ ತೀರ್ಮಾನ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಗಲಾಟೆ, ಗದ್ದಲಕ್ಕೆ ಅವಕಾಶ ಮಾಡಿ ಕೊಡಬಾರದು. ಶಿಕ್ಷಣಕ್ಕೆ ಆದ್ಯತೆ ಕೊಡಿ.
-ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ, ಉಡುಪಿ ಪೇಜಾವರ ಮಠ
ಎಲ್ಲರ ಭಾವನೆಗಳಿಗೂ ಗೌರವ ನೀಡಬೇಕು
ವಿದ್ಯಾರ್ಥಿಗಳಿಗೆ ಶಿಕ್ಷಣ ಬಹುಮುಖ್ಯ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಪ್ರಸ್ತುತ ಸನ್ನಿವೇಶದಲ್ಲಿ ಶಾಂತಿ-ಸೌಹಾರ್ದಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಶಾಲೆಗಳಲ್ಲಿ ಸಮವಸ್ತ್ರಕ್ಕೆ ಆದ್ಯತೆ ನೀಡಬೇಕು. ಜತೆಗೆ ಎಲ್ಲರ ಭಾವನೆಗಳನ್ನೂ ಗೌರವಿಸಬೇಕು. ಕಾಗಿನೆಲೆ ಯಲ್ಲಿ ನಾವೂ ಶಾಲೆ ನಡೆಸುತ್ತಿದ್ದೇವೆ. ಶೇ. 90ರಷ್ಟು ಮುಸ್ಲಿಂ ಸಮುದಾಯದವರಿದ್ದಾರೆ. ಅಲ್ಲಿ ಬುರ್ಖಾ, ಹಿಜಾಬ್ ಧರಿಸಿ ಶಾಲೆ ಕಾಂಪೌಂಡ್‌ವರೆಗೂ ಬಂದು ಬಳಿಕ ಅವರಿಗಾಗಿಯೇ ನೀಡಲಾದ ಪ್ರತ್ಯೇಕ ಕೊಠಡಿಯಲ್ಲಿ ಬದಲಾಯಿಸಿ ಪ್ರಾರ್ಥನೆ ಹಾಗೂ ತರಗತಿಯಲ್ಲಿ ಸಮವಸ್ತ್ರದಲ್ಲೇ ಇರುತ್ತಾರೆ. ಇಂಥ ಅವಕಾಶ ಕಲ್ಪಿಸುವುದು ಸೂಕ್ತ.
-ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠ
ತೀವ್ರ ವೇದನೆ ಇದೆ
ಹಿಜಾಬ್ ಕುರಿತು ಎದ್ದಿರುವ ಅಪಸ್ವರ ಹಾಗೂ ಅವು ಗಳಿಂದ ಉಂಟಾದ ಪ್ರಕ್ಷುಬ್ಧತೆಯ ಬಗ್ಗೆ ತೀವ್ರ ವೇದನೆ ಯಿದೆ. ಶೈಕ್ಷಣಿಕ ಸಂಸ್ಥೆಗಳ ಶಾಂತಿ ಯುತ ವಾತಾವರಣಕ್ಕೆ ಧಕ್ಕೆ ಉಂಟಾ ಗುತ್ತಿರುವುದು ಅತ್ಯಂತ ಕಳವಳಕಾರಿ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಯೋಚಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ, ಕೋಮು ಸೌಹಾರ್ದ, ಶಾಂತಿ – ಸಾಮರಸ್ಯವನ್ನು ಕಾಪಾಡುವುದು ನಾಗರಿಕ ಸಮಾಜದ ಜವಾಬ್ದಾರಿ. ವಿಶೇಷವಾಗಿ ವಿದ್ಯಾರ್ಥಿ ಸಮುದಾಯ ಸಂಯಮವನ್ನು ಕಾಯ್ದುಕೊಳ್ಳಬೇಕು.
-ಡಾ| ಮೊಹಮ್ಮದ್ ಸಾದ್ ಬೆಲಗಾಮಿ,
ರಾಜ್ಯಾಧ್ಯಕ್ಷರು, ಜಮಾತೆ ಇಸ್ಲಾಮಿ ಹಿಂದ್-ಕರ್ನಾಟಕ
ಓದಿ ನತ್ತ ಗಮನ ನೀಡಿ
ಪರೀಕ್ಷೆಗಳು ಹತ್ತಿರವಾಗುತ್ತಿರುವಾಗ ಚೆನ್ನಾಗಿ ಓದಿಕೊಳ್ಳ ಬೇಕಾಗಿದ್ದ ವಿದ್ಯಾರ್ಥಿಗಳು ವಿವಾದದ ಸುಳಿಯಲ್ಲಿ ಸಿಲುಕಿರುವುದು ಬೇಸರದ ವಿಷಯ. ಒಂದು ಸಾಧಾರಣ ವಿಷಯವನ್ನು ವಿವಾದವನ್ನಾಗಿಸಿ, ಅದರಲ್ಲಿ ವಿದ್ಯಾರ್ಥಿ ಗಳನ್ನು ಸಿಲುಕಿಸಿರುವುದು ಅವರ ಭವಿಷ್ಯದ ಕುರಿತು ಯೋಚಿಸುವಂತೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಮತ್ತೆ ಎಲ್ಲರೂ ಸಹ ಅದೇ ತರಗತಿಗಳಿಗೆ ಹೋಗಿ, ಒಬ್ಬರನ್ನೊಬ್ಬರು ನೋಡಬೇಕಿರುವುದರಿಂದ ಈ ಮನಃಸ್ಥಿತಿಯನ್ನು ಬದಲಿಸಿಕೊಳ್ಳಿ. ಕೋರ್ಟ್ ತೀರ್ಪು ಏನೇ ಬಂದರೂ ಶಾಂತಿ, ಸಮಾಧಾನದಿಂದ ವರ್ತಿಸಿ, ಚೆನ್ನಾಗಿ ಓದಿ,
-ಡಾ| ಪೀಟರ್ ಮಚಾದೋ, ಮಹಾಧರ್ಮಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.