ಋಣ ಸಂದಾಯದ ಜಾಡಿಗೆ ಹೊರಳಲಿ ನರಜನ್ಮ


Team Udayavani, Jan 16, 2022, 8:05 AM IST

ಋಣ ಸಂದಾಯದ ಜಾಡಿಗೆ ಹೊರಳಲಿ ನರಜನ್ಮ

ಹೌದು, ನಾವೆಲ್ಲ ಋಣದ ಮೂಟೆಯನ್ನು ಹೊತ್ತು ಬಂದವರು. ನಿಂತ ನೆಲ, ತಿನ್ನುವ ಅನ್ನದ ಪ್ರತೀ ಅಗುಳಲ್ಲೂ ತೊಡುವ ಬಟ್ಟೆಯ ಪ್ರತೀ ಎಳೆಯಲ್ಲೂ ಸಾವಿರಾರು ಜನರ ಶ್ರಮವಿದೆ, ಋಣವಿದೆ. ಇಲ್ಲಿ ಎಲ್ಲರೂ ಪರಾವಲಂಬಿಗಳೇ.. ಒಬ್ಬರ ನಿತ್ಯಬಳಕೆಯ ವಸ್ತು, ಸೇವೆ, ಸೌಕರ್ಯಗಳೆಲ್ಲ ಮತ್ಯಾರದೋ ಅವಿರತ ದುಡಿತ, ತ್ಯಾಗದ ಫ‌ಲವಾಗಿರುತ್ತದೆ.

ಬದುಕು ಋಣಭಾರದಿಂದ ಬಿಡುಗಡೆಯನ್ನು ಸದಾ ಬೇಡುತ್ತದೆ. ಸಮಾಜಮುಖಿ ಕೆಲಸ ಗಳಲ್ಲಿಯೇ ಮನುಷ್ಯತ್ವದ ನೆಲೆ ಗಟ್ಟಿಗೊಳ್ಳಬೇಕು. ನಮಗೆಲ್ಲ ಅನ್ನ, ಅರಿವು, ನೆರಳನ್ನು ನೀಡಿ ಪೊರೆವ ಸಮಾಜದ ಋಣಸಂದಾಯವು ನಮ್ಮೊಟ್ಟಿಗೇ ಸಾಗಬೇಕು. ನಿಸ್ವಾರ್ಥ ಸೇವೆಯಲ್ಲಿಯೇ ದೈವತ್ವವನ್ನೂ, ಮೋಕ್ಷವನ್ನೂ ಹುಡುಕಿ ಕೊಳ್ಳಬೇಕು. ಸೇವೆಯು ತನ್ನನ್ನು ತಾನು ಋಣಮುಕ್ತ ಗೊಳಿಸಿಕೊಳ್ಳಲು ಸಾಗಬೇಕಾದ ದಾರಿಯೇ ಹೊರತು ಉಪ ಕಾರವೆಂದು ಅದನ್ನು ಭ್ರಮಿಸಬಾರದು. ಆಧುನಿಕತೆಯ ಭರಾಟೆಯಲ್ಲಿ ದಿನೇದಿನೆ ಯಾಂತ್ರೀಕೃತಗೊಳ್ಳುತ್ತಿರುವ ಜಗತ್ತು ಆಶಕ್ತರು, ಅವಕಾಶವಂಚಿತರನ್ನು ತನಗರಿವಿಲ್ಲದಂತೆ ತುಳಿದುಕೊಂಡೇ ನಡೆಯುತ್ತಿರುತ್ತದೆ. ಕಾಣದ ಗಮ್ಯದೆಡೆಗೆ ಧಾವಂತದ ಹಾದಿಯಲ್ಲಿ ಪರಸೇವೆಯೆಂಬ ಸಾವಧಾನದ ತಂಗುದಾಣಗಳ ಅಗತ್ಯವಿರುತ್ತದೆ. ಒಳಗಿನ ಪ್ರೀತಿ-ಅಂತಃಕರಣಗಳ ಪಸೆಯಾರದಂತೆ ಬದುಕುವ ಸಲುವಾಗಿ, ಮತ್ತಷ್ಟು ಮನುಷ್ಯರಾಗಿ ಉಳಿಯುವ ಸಲುವಾಗಿ.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ.. ಎಂಬಂತೆ, ದುಡಿಮೆಯ ಒಂದಂಶವನ್ನು ಸಮಾಜದ ಒಳಿತಿಗೆ, ಸಹವರ್ತಿಗಳ ಏಳ್ಗೆಗೆ ಮೀಸಲಿಡುವ ಮೂಲಕ ನಮಗೆಲ್ಲ ಬದುಕಿನ ಮೌಲ್ಯವನ್ನು ಉನ್ನತೀಕರಿಸಲು ಸಾಧ್ಯ. ಹಾಗೆ ನೋಡಿದರೆ ನಿರುಪದ್ರವಿಗಳಾಗಿ ನಿರಾಡಂಬರದ ಬದುಕು ಸಾಗಿಸುವ ಇತರ ಪರಿಸರಸ್ನೇಹಿ ಜೀವಜಂತುಗಳಿಗಿಂತ ಮನುಷ್ಯನಿಗೇ ಹೆಚ್ಚು ಋಣಭಾರವಿದೆ. ಪ್ರೀತಿ, ತ್ಯಾಗ ಮತ್ತು ಋಣಸಂದಾಯದ ಮಾದರಿಯಿಂದಷ್ಟೇ ಮನುಷ್ಯ ಭೂಗ್ರಹದಲ್ಲಿ ವಿಭಿನ್ನನೂ ಅನನ್ಯನೂ ಆಗಿದ್ದಾನೆ. ಅದೇ ಕಾರಣಕ್ಕೆ ಮನುಷ್ಯನಿಗೆ ಸುಮಾರು ಎಂಟು ಮಿಲಿಯನ್‌ಗಳಷ್ಟಿರುವ ಜೀವಿಪ್ರಭೇದಗಳಲ್ಲಿ ಉನ್ನತ ಸ್ಥಾನವಿದೆಯೇ ಹೊರತು ಕೇವಲ ಮೆದುಳು ಬಲದಿಂದಲ್ಲ. ಗಾಂಧೀಜಿಯವರು ಹೇಳಿದಂತೆ “ಇತರರ ಸೇವೆಯಲ್ಲಿ ಕಳೆದುಹೋಗುವುದೇ ನಮ್ಮನ್ನು ನಾವು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗ’. ಈವಂಗೆ ದೇವಂಗೆ ಆವುದಂತರವಯ್ಯ.. ಎಂಬುದನ್ನರಿತು ನೀಡುವ ನಿಸ್ಪೃಹ ಹೃದಯದಲ್ಲಿ ದೇವರು ನೆಲೆಸಿರುತ್ತಾನೆ ಅಂತ ಭಾವಿಸುವುದೇ ಹೆಚ್ಚು ಸರಿ.

ಜೀವ-ಜೀವನವೆಲ್ಲವೂ ತನಗೊಲಿದ ಪ್ರಸಾದವೆಂದು ಬಗೆದ ವಚನಕಾರ ಜೇಡರ ದಾಸಿಮಯ್ಯ ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ನಿಮ್ಮ ದಾನ.. ಎಂದಿದ್ದ. ಈ ಭೂಮಿ ಎಲ್ಲರದ್ದು. ಇಲ್ಲಿ ನಮ್ಮದೆಂದುಕೊಳ್ಳುವ ಸ್ವತ್ತು-ಸಂಪತ್ತುಗಳೆಲ್ಲವೂ ಮಿಕ್ಕೆಲ್ಲ ಜೀವರಾಶಿಗಳಿಗೂ ಸೇರಿದ್ದು. ನಮ್ಮಷ್ಟೇ ಭೂಹಕ್ಕು ಅವಕ್ಕೂ ಇದೆ. ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ. ಅವು ಜಗಕ್ಕಿಕ್ಕಿದ ವಿಧಿ.. ಎಂದ ಅಲ್ಲಮನೂ ಲೌಕಿಕವನ್ನು ಧ್ಯಾನಿಸಿದ್ದ.

ಕೊರೊನಾ ಸಾಂಕ್ರಾಮಿಕದ ಈ ದಿನಗಳಲ್ಲಂತೂ ಜನಜೀವನ ಕಡುಕಷ್ಟಕ್ಕೆ ತಳ್ಳಲ್ಪಟ್ಟಿದೆ. ಕಸುವು- ಕಸುಬುಗಳನ್ನು ಕಳೆದುಕೊಂಡು ಬೀದಿಗೆ ಬಿದ್ದವರನ್ನಿಲ್ಲಿ ಲೆಕ್ಕವಿಟ್ಟವರಿಲ್ಲ. ಇನ್ನು ನಾಡನ್ನು ನಿರಂತರವಾಗಿ ಕಾಡುತ್ತಲೇ ಇರುವ ನೆರೆ, ಬರದ ಹಾವಳಿಯಲ್ಲಿ ನೆಲೆ ಕಳೆದು ಕೊಂಡವರ ಪಟ್ಟಿ ದೊಡ್ಡದಿದೆ. ಸಾಲಬಾಧೆಯಿಂಧ ಬೇಯುತ್ತಿರುವ ಅನ್ನದಾತನ ಗೋಳು ಹಾಗೇ ಉಳಿದಿದೆ. ಸಂಕಷ್ಟದ ಕಾಲದಲ್ಲಿ ಬಲಿಷ್ಠರ ಆದಾಯವು ಗಣನೀಯವಾಗಿ ವೃದ್ಧಿಯಾಗಿದೆ!. ಇಲ್ಲದವರ ಆವಶ್ಯಕತೆಗಳಿಗೆ ಆಸರೆ ಯಾಗಿ ಉಳ್ಳವರು ಒದಗಬೇಕಾದ್ದು ಮಾನವೀಯ ಧರ್ಮ. ಅದಕ್ಕೆ ಸೇವೆ ಎನ್ನುವ ಹೆಸರಿದೆ. ಹಾಗಾಗಿ “ಸಂತೋಷಂ ಜನಯೇತ್‌ ಪ್ರಾಜ್ಞಃ ತದೇವ ಈಶ್ವರ ಪೂಜನಂ’.. ಜನ್ಮವೆತ್ತಿದ ಪ್ರತಿಜೀವಗಳೂ ದೇವರ ರೂಪವಾಗಿರುವುದರಿಂದ ಜೀವರಾಶಿ ಗಳನ್ನು ಸಂತೋಷಪಡಿಸುವುದೇ ಭಗವಂತನ ಪೂಜೆ.

ರಾಮಾಯಣದ ಸೀತಾಪಹರಣದ ಸಮಯದಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟುವ ಕಾರ್ಯವು ಭರದಿಂದ ಸಾಗಿರುವ ಸಂದರ್ಭವದು. ಬಲಾಡ್ಯ ವಾನರ ಸೇನೆಯು ಅನಾಮತ್ತಾಗಿ ಕಲ್ಲುಬಂಡೆ, ಬೆಟ್ಟಗುಡ್ಡಗಳನ್ನು ತಂದೊಡ್ಡುತ್ತಿದ್ದರೆ ಪುಟ್ಟ ಅಳಿಲೊಂದು ಕೈಲಾದಷ್ಟು ಮರಳನ್ನು ತಂದುತಂದು ಸುರಿಯುತ್ತಿತ್ತು. “ಶ್ರೀ ರಾಮಾಯಣ ದರ್ಶನಂ’ನಲ್ಲಿ ಕುವೆಂಪುಗೆ ಕಾಣುವಂತೆ, ಪ್ರಭು ಶ್ರೀರಾಮನ ದೃಷ್ಟಿಯಲ್ಲಿ ಅವೆರಡಕ್ಕೂ ಒಂದೇ ಮಹತ್ವ. ಏಕೆಂದರೆ ರಾಮ ನೋಡಿದ್ದು ತೋಳ್ಬಲವನ್ನಲ್ಲ, ಎದೆಯಾಳವನ್ನು!.

ಗೀತೆಯಲ್ಲಿ ಕರ್ಮಣ್ಯೇ ವಾದಿಕಾರಸ್ತೇ ಮಾ ಫ‌ಲೇಷು ಕದಾಚನ.. ಎಂದಿದೆ. ಲಾಭದಾಸೆ, ಪ್ರತಿಫ‌ಲಾಪೇಕ್ಷೆ, ಕೀರ್ತಿಯಾ ಸೆಗಳನ್ನು ಮರೆತು ಕೆಮರಾಗಳನ್ನು ಮನೆಯಲ್ಲೇ ಬಿಟ್ಟು ಮಾಡುವ ಸೇವೆಯು ಹೆಚ್ಚು ಮೌಲ್ಯಯುತ. ಲಾಭದಾಸೆ ಮುಗಿಯುವಲ್ಲಿಂದಲೇ ಮನುಷತ್ವದ ಆರಂಭ. ಕರ್ಮಕ್ಕಾಗಿ ಕರ್ಮ ಮಾಡುವ ಮಹನೀಯನನ್ನು ಕಾಣಲು, ನಾನು ಬೇಕಾದರೆ ನಾನು ನನ್ನ ಮೊಣಕೈ, ಮೊಣಕಾಲುಗಳ ಮೇಲೆ ಇಪ್ಪತ್ತು ಮೈಲಿ ನಡೆಯಲು ಸಿದ್ಧನಿದ್ದೇನೆ ಎಂಬ ಸ್ವಾಮಿ ವಿವೇಕಾನಂದರ ಮಾತೇ ನಿಸ್ವಾರ್ಥ ಕರ್ಮದ ಅಭಾವವನ್ನು ಸೂಚಿಸುತ್ತದೆ!. ಸಮಾಜಸೇವೆಯೂ ಹೂಡಿಕೆಯಂತೆ ಒಂದು ದಂಧೆಯಂತಾಗಿರುವ ಹೊತ್ತಿನಲ್ಲಿ ಕೊಡುಗೆಗಳನ್ನು ಪ್ರಚಾರತಂತ್ರ ಗಳಾಗಿ ಬಳಸಿಕೊಳ್ಳುವ ಸ್ವಾರ್ಥಸಾಧಕರಿಗಿಲ್ಲಿ ಬರವಿಲ್ಲ.

ನೆನಪಿಡಬೇಕಾದ್ದು, ಜಗವ ಬೆಳಗುವ ನೇಸರ, ಇಳೆಗೆ ಜೀವಕಳೆ ತರುವ ಮಳೆ, ತನ್ನ ಪಾತ್ರದುದ್ದಕ್ಕೂ ಹಸುರುಕ್ಕಿಸಿ ಹರಿಯುವ ನದಿ, ಸುತ್ತ ಸುಳಿದಾಡಿ ಜೀವಾನಿಲ ಸೂಸುವ ಗಾಳಿ, ಹಣ್ಣು-ನೆರಳು ನೀಡಿ ಜೀವ ಪೊರೆವ ಮರಗಿಡಗಳೆಂದಿಗೂ ಸ್ವಾರ್ಥಕ್ಕಾಗಿ ಅಸ್ತಿತ್ವದಲ್ಲಿರಲ್ಲ, ಪರಹಿತಕ್ಕಷ್ಟೇ.

ಸತೀಶ್‌ ಜಿ.ಕೆ.,ತೀರ್ಥಹಳ್ಳಿ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.