ಪಠ್ಯಪುಸ್ತಕದಾಚೆಗೂ ಕಲಿಕೆಗೆ ಮನ ಅಣಿಗೊಳ್ಳಲಿ


Team Udayavani, Feb 1, 2022, 6:05 AM IST

ಪಠ್ಯಪುಸ್ತಕದಾಚೆಗೂ ಕಲಿಕೆಗೆ ಮನ ಅಣಿಗೊಳ್ಳಲಿ

ಒಂದು ಆದರ್ಶ ಶಿಕ್ಷಣ ಪದ್ಧತಿಯ ಗುರಿ ಕೇವಲ ಪುಸ್ತಕ ಜ್ಞಾನದ ಹೆಚ್ಚಳ ಮಾತ್ರವಲ್ಲದೆ ಜೀವನದ ಉತ್ಕರ್ಷ, ಉನ್ನತ ಶಕ್ತಿಗಳ ಮತ್ತು ಸಾಮರ್ಥ್ಯಗಳ ವಿಸ್ತಾರ, ವಿದ್ಯಾರ್ಥಿಗಳ ಉದಾತ್ತ ಕ್ಷಮತೆಯ ವಿಕಾಸ ಎಲ್ಲವೂ ಆಗಬೇಕು. ಅದೇ ವೇಳೆ ತಾನು ಕಲಿತ, ಕಲೆತ ವಿಚಾರಗಳನ್ನೆಲ್ಲ ತನ್ನ ಜೀವನದಲ್ಲಿ ಅಳವಡಿಸಿಕೊಂಡು ತನ್ನ ದೈಹಿಕ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ವರ್ಧಿಸಿಕೊಳ್ಳಲು ವಿದ್ಯಾರ್ಥಿಯನ್ನು ಸಮ ರ್ಥನನ್ನಾಗಿ ಮಾಡಬೇಕು ಎಂದು ಸ್ವಾಮಿ ವಿವೇಕಾನಂದರು ಶಿಕ್ಷಣದ ಗುರಿಯ ಬಗ್ಗೆ ಹೇಳಿದ ಮಾತು, ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ಚಿಂತನೆ ಮಾಡುವಂತಿದೆ.

ನಾವಿಂದು ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪುಸ್ತಕ ಜ್ಞಾನದ ವರ್ಗಾವಣೆ ಮಾಡಿದರೆ ವಿದ್ಯಾರ್ಥಿಯು ಬದುಕು ಕಟ್ಟಿಕೊಳ್ಳುವ ಎಲ್ಲ ಕಲೆಗಳನ್ನು ಕಲಿಯಲು ಸಾಧ್ಯವಿಲ್ಲ. ಕೇವಲ ಪದವಿ ಪ್ರಮಾಣಪತ್ರದಲ್ಲಿ ಇರುವ ಶಿಕ್ಷಣದ ಮಟ್ಟ ನೈಜ ಜೀವನದ ಸಮ ಸ್ಯೆಗಳನ್ನು ಎದುರಿಸುವ ಅಂತಃಶಕ್ತಿ ಯನ್ನು ಕೊಡಲಾರದು. ಅದರಲ್ಲೂ ಸತತವಾಗಿ 2 ವರ್ಷಗಳಿಂದ ಕೊರೊನಾ ತಂದಿಟ್ಟ ಲಾಕ್‌ಡೌನ್‌ ಎಲ್ಲ ಕ್ಷೇತ್ರಗಳಿಗೂ ಗದಾಪ್ರಹಾರ ಮಾಡಿದಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಕೊಡಲಿ ಏಟು ಹಾಕಿರುವುದಂತೂ ದಿಟ. ಈ ಹೊತ್ತಲ್ಲಿ ಶಾಲಾ ಶಿಕ್ಷಣದ ಭವಿಷ್ಯದ ಬಗೆಗೆ ಹತ್ತು ಹಲವು ಯೋಚನೆ ಮತ್ತು ಯೋಜನೆಗಳನ್ನು ನಾವು ಮಾಡಿಕೊಳ್ಳಬೇಕಿದೆ.

ಯಾವುದು ನಮಗೆ ಸಮಸ್ಯೆಯಾಗಿ ಕಾಡುತ್ತದೋ ಅದನ್ನು ಅವಕಾಶವಾಗಿ ಬಳಸಿಕೊಳ್ಳುವ ಮನೋವೃತ್ತಿ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಇರಬೇಕು. ಕೊರೊನಾ ಸಂದಿಗ್ಧತೆಯ ಕಾಲಘಟ್ಟದಲ್ಲಿ ಒಂದಿಷ್ಟು ಹೊಸ ಕಲಿಕಾ ಪೂರಕ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಅವಕಾಶ ಕಲ್ಪಿಸಬೇಕಿದೆ. ಆನ್‌ಲೈನ್‌ ಅಂಗಳದಲ್ಲಿ ಕಲಿಕೆ ಸಾಗುತ್ತಿರುವಾಗ ಕೇವಲ ಪಠ್ಯ ಪುಸ್ತಕದ ಅಂಶಗಳಿಗೆ ಅಂಟಿಕೊಳ್ಳಬಾರದು. ಪಠ್ಯ ಪುಸ್ತಕದ ನಿರ್ದಿಷ್ಟ ಪಾಠಾಂಶದ ಪರಿಧಿಯ ಆಚೆಗೆ ವಿದ್ಯಾರ್ಥಿಗಳನ್ನು ಸ್ವಕಲಿಕೆಗೆ ಪ್ರೇರೇ ಪಿಸಬಹುದಾಗಿದೆ. ಓದುವುದು ಎಂದಾಗ ಶಾಲೆಯ ಪಠ್ಯಪುಸ್ತಕದ ಓದು ಮಾತ್ರ ಸೀಮಿತವಲ್ಲ. ಮನೆಯಲ್ಲಿ ತಮ್ಮ ಸಂಗ್ರಹದ ಇತರ ಪುಸ್ತಕಗಳ ಓದು, ಅದರ ಅಂಶಗಳನ್ನು ಹೇಳುವುದು, ದಿನಪತ್ರಿಕೆಯ ಓದು… ಇಂತಹ ವಿಭಿನ್ನ ಆಯಾಮದ ಓದಿನ ಚಟುವಟಿಕೆಗೆ ಮಕ್ಕಳು ತೆರೆದುಕೊಳ್ಳುವಂತಾಗಬೇಕಿದೆ.

ಆರೋಗ್ಯದ ಕಾಳಜಿಯಿಂದಾಗಿ ಮಕ್ಕಳು ಮನೆಯಲ್ಲಿಯೇ ಇದ್ದರೂ ಅವರಲ್ಲಿ ಧನಾತ್ಮಕ ಚಿಂತನೆ ಬೆಳೆಸಬೇಕಿದೆ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿಗೆ ಇಂಬು ತುಂಬಲು ಹೆತ್ತವರೆಲ್ಲರೂ ಸನ್ನದ್ಧರಾಗ
ಬೇಕಿದೆ. ಕಳೆದ ಎರಡು ಲಾಕ್‌ಡೌನ್‌ಗಳ ಅವಧಿ ಯಲ್ಲಿ ಕೆಲವು ಮಕ್ಕಳು ಮೊಬೈಲ್‌ ಗೀಳು, ಖನ್ನತೆಯಂತಹ ಸಮಸ್ಯೆಗಳಿಗೆ ಒಳಗಾಗಿರುವುದನ್ನು ಗಮನದಲ್ಲಿಟ್ಟು ಕೊಂಡು ಮನೆಯಲ್ಲಿಯೇ ಹೆತ್ತವರು ಯಾ ಪೋಷಕರ ಮಾರ್ಗದರ್ಶನದಲ್ಲಿ ಹಲವು ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುವಂತಾಗಬೇಕಿದೆ.

ಮೌಲ್ಯಾಧಾರಿತ ವಿದ್ಯೆಯು ಶಿಕ್ಷಣದ ಅವಿಭಾಜ್ಯ ಅಂಗ. ಶಾಲೆಯ ಭೌತಿಕ ತರಗತಿಯ ಅವಧಿಯಲ್ಲಿ ನಿಗದಿತ ಪಠ್ಯಕ್ರಮ ಪೂರ್ಣಗೊಳಿಸುವ ಧಾವಂತದಲ್ಲಿ ಮೌಲ್ಯ ಶಿಕ್ಷಣದ ಅವಧಿಗಳು ಕಡಿಮೆಯಾಗುತ್ತಿವೆ. ಈಗ ಲಾಕ್‌ಡೌನ್‌ ಹಾಗೂ ವಾರಾಂತ್ಯದ ಕರ್ಫ್ಯೂ ಕಾರಣದಿಂದ ಮನೆಯಲ್ಲಿರುವ ಮಕ್ಕಳಿಗೆ ದಿನಕ್ಕೊಂದು ಕಥೆ, ಅಜ್ಜೀ ಅಜ್ಜೀ ಕಥೆ ಹೇಳು, ನಾನೂ ಕಥೆ ಹೇಳುವೆ, ಇಂತಹ ಚಟುವಟಿಕೆಗಳನ್ನು ಮಾಡು ವಂತೆ ಶಿಕ್ಷಕರು ಆಗಾಗ್ಗೆ ಆನ್‌ಲೈನ್‌ ಮೂಲಕ ತಿಳಿಸುವುದರಿಂದ ಮಕ್ಕಳಿಗೆ ಮನೆಯ ಪರಿಸರದಲ್ಲಿ ಒಂದಿಷ್ಟು ಉತ್ತಮ ಮೌಲ್ಯಯುತ ಕಥೆಯ ಸಾರ ತಿಳಿಯುವ ಅವಕಾಶ ಸಿಗುತ್ತದೆ.

ಗ್ರಾಮೀಣ ಭಾಗಗಳಲ್ಲಿ ಸುಮಾರು 90ರ ದಶಕಕ್ಕಿಂತ ಮೊದಲು ಅರ್ಥಾತ್‌ ದೂರ ದರ್ಶನವು ಮನೆಮನೆಗೂ ಲಗ್ಗೆ ಇಡುವ ಮೊದಲು ಮುಸ್ಸಂಜೆ ವೇಳೆಯಲ್ಲಿ ತಾಯಿ ತನ್ನ ದೈನಂದಿನ ಕೆಲಸಗಳನ್ನು ಮಾಡುತ್ತಲೇ ಪುಟಾಣಿಗಳಿಗೆ ಶಿಕ್ಷಣದ ಅಡಿಪಾಯ ಹಾಕಲೆಂಬಂತೆ ಕೆಲವು ಕಂಠ ಪಾಠಗಳನ್ನು ಮಾಡಿಸುತ್ತಿದ್ದರು. ತಿಥಿ, ವಾರ, ನಕ್ಷತ್ರ, ಅಂಕಿಗಳು, ಮಗ್ಗಿಗಳು ಇತ್ಯಾದಿ ದೈನಂದಿನ ಕಂಠಪಾಠದಿಂದ ಮಕ್ಕಳಲ್ಲಿ ದೃಢಗೊಳ್ಳುತ್ತಿದ್ದವು. ಜತೆಯಲ್ಲಿ ಶಿಶು ಗೀತೆ, ಭಜನೆಗಳು ಕೂಡ ಮಕ್ಕಳಿಗೆ ಮೌಖೀಕ ಸಾಮರ್ಥ್ಯವನ್ನು ಬಲಗೊಳಿಸುತ್ತಿದ್ದವು. ಈ ಎಲ್ಲ ಚಟುವಟಿಕೆಗಳ ಮೂಲಕ ಕಲಿಕೆಗೆ ಪ್ರೇರಣೆ ದೊರೆಯುತ್ತಿತ್ತು. “ಇತಿಹಾಸ ಮರುಕಳಿಸುತ್ತದೆ’ ಎಂಬಂತೆ ಕೊರೊನಾ ಸಂದಿಗ್ಧತೆಯಲ್ಲಿ ಪುಟಾಣಿ ಮಕ್ಕಳು ಮನೆಯಲ್ಲಿಯೇ ಇರುವ ಅನಿವಾರ್ಯತೆ ಉಂಟಾದಲ್ಲಿ ಇಂತಹ ಮೌಖೀಕ ಅಭ್ಯಾಸಗಳಿಗೆ ಇಂಬು ತುಂಬುವಂತಾಗಬೇಕಿದೆ.

ಪ್ರಕೃತಿಗಿಂತ ದೊಡ್ಡ ಪಾಠಶಾಲೆ ಬೇರೊಂದಿಲ್ಲ. ಮನೆಯ ಸುತ್ತಲಿನ ಗಿಡ ಮರಗಳ ಕುರಿತು ತಿಳಿದು, ಅವುಗಳ ಆರೈಕೆಯ ಅವಕಾಶ ನೀಡುವ ಪ್ರಾಯೋಗಿಕ ಕಲಿಕೆಯ ಸದವಕಾಶ ಮಕ್ಕಳಿಗೆ ಈ ಸಮಯದಲ್ಲಿ ದೊರೆಯುವಂತಾಗಬೇಕಿದೆ.

ಶೈಕ್ಷಣಿಕ ಚಟುವಟಿಕೆಯ ಕಲಿಕಾ ನಿರಂತರತೆಗೆ ಕೊರೊನಾ ತೊಡಕು ಮಾಡಿ ದರೂ ಅದನ್ನು ಮಕ್ಕಳ ಮೇಲೆ ನಕಾರಾತ್ಮಕ ವಾಗಿ ಹೇರದೆ, ಒಂದಿಷ್ಟು ಧನಾತ್ಮಕ ಚಿಂತನೆಗಳ ಮೂಲಕ ಪಠ್ಯಪುಸ್ತಕದಿಂದಾಚೆಗೂ ಕಲಿಕೆ ಇದೆ ಎಂಬ ಸಾಧ್ಯತೆಗಳನ್ನು ಒದಗಿಸುವ ಮೂಲಕ ಆತ್ಮವಿಶ್ವಾಸ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಮಕ್ಕಳ ಶಿಕ್ಷಣದ ಬೆನ್ನೆಲುಬಾಗಿ ನಿಲ್ಲಲು ಅಣಿಗೊಳ್ಳಬೇಕು.

-ಭಾರತಿ ಎ., ಕೊಪ್ಪ

ಟಾಪ್ ನ್ಯೂಸ್

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.