ವಿಪಕ್ಷ, ಪತ್ರಕರ್ತರ ಫೋನ್‌ ಹ್ಯಾಕ್‌, ಅನುಮಾನಗಳು ಬಗೆಹರಿಯಲಿ

Team Udayavani, Nov 1, 2023, 11:48 PM IST

HACK

ಕಾಂಗ್ರೆಸ್‌ನ ಶಶಿತರೂರ್‌, ಪವನ್‌ ಖೇರಾ, ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಹಾಗೂ ಕೆಲವು ಪತ್ರಕರ್ತರು ಮಂಗಳವಾರ ತಮ್ಮ ಫೋನ್‌ ಅನ್ನು ಸರಕಾರ ಪ್ರಾಯೋಜಿತವಾಗಿ ಹ್ಯಾಕ್‌ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪೂರಕವಾಗಿ ಆ್ಯಪಲ್‌ ಸಂಸ್ಥೆ ಈ ನಾಯಕರಿಗೆ ಕಳುಹಿಸಿದ್ದ ಇಮೇಲ್‌ನ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡು, ಸರಕಾರವೇ ಹ್ಯಾಕ್‌ ಮಾಡುತ್ತಿದೆ ಎಂಬ ಆಪಾ ದನೆ ಮಾಡಿದ್ದರು. ಈ ಸಂಬಂಧ ಆ್ಯಪಲ್‌ ಸಂಸ್ಥೆ ಸುದೀರ್ಘ‌ವಾಗಿ ಪತ್ರಮು ಖೇನ ಯಾವ ರೀತಿಯಲ್ಲಿ ಫೋನ್‌ ಹ್ಯಾಕ್‌ ಆಗಬಹುದು, ಇದಕ್ಕೆ ವ್ಯವಸ್ಥಿತವಾಗಿ ಹಣಕಾ ಸಿನ ನೆರವು ನೀಡಲಾಗುತ್ತಿದೆ. ಹೀಗಾಗಿ ನೀವು ನಿಮ್ಮ ಫೋನ್‌ನಲ್ಲಿನ ಭದ್ರತಾ ಫೀಚರ್‌ ಅನ್ನು ಸರಿಪಡಿಸಿಕೊಳ್ಳಿ ಮತ್ತು ಐಓಎಸ್‌ ಅಪ್‌ಡೇಟ್‌ ಮಾಡಿ ಕೊಳ್ಳಿ ಎಂಬ ಸಲಹೆಯನ್ನೂ ನೀಡಿತ್ತು. ಹೊಸ ಅಪ್‌ಡೇಟ್‌ನಲ್ಲಿ ಹ್ಯಾಕರ್‌ಗಳು ಸುಲಭ ವಾಗಿ ಫೋನ್‌ನೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದೂ ಹೇಳಿತ್ತು.

ಆ್ಯಪಲ್‌ ಸಂಸ್ಥೆಯ ಈ ಎಚ್ಚರಿಕೆ ಮತ್ತು ವಿಪಕ್ಷಗಳ ಆರೋಪವು ದೇಶಾದ್ಯಂತ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಕೇಂದ್ರ ಸರಕಾರವೇ ವಿಪಕ್ಷ ನಾಯಕರ ಫೋನ್‌ಗಳಗೆ ಇಣುಕಿ ನೋಡುತ್ತಿದೆ ಎಂದು ಆರೋಪಿ ಸಲಾಗಿತ್ತು. ಇದಾದ ಬಳಿಕ ಕೇಂದ್ರ ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌, ಸ್ಪಷ್ಟನೆಯನ್ನು ನೀಡಿ, ಆ್ಯಪಲ್‌ ಸಂಸ್ಥೆಯು 150 ದೇಶಗಳಲ್ಲಿ ಈ ರೀತಿಯ ಸಂದೇಶ ಕಳುಹಿಸಿದೆ. ಇದು ಮುಂಜಾಗ್ರತೆಯ ಸಂದೇಶವೇ ಹೊರತು, ನಾವು ಹ್ಯಾಕ್‌ ಮಾಡುತ್ತಿದ್ದೇವೆ ಎಂದಲ್ಲ. ಈ ಸಂಬಂಧ ಆ್ಯಪಲ್‌ನಿಂದ ಸ್ಪಷ್ಟನೆ ಕೇಳಿದ್ದೇವೆ, ತನಿಖೆ ನಡೆಸಲೂ ಮುಂದಾಗಿದ್ದೇವೆ ಎಂದು ಹೇಳಿದ್ದರು.

ಈ ಬೆಳವಣಿಗೆಗಳ ಆ್ಯಪಲ್‌ ಸಂಸ್ಥೆಯೂ ಸ್ಪಷ್ಟನೆ ನೀಡಿ, ಇಂಥ ಸಂದೇಶಗಳನ್ನು ನಾವು ಆಗಾಗ ಕಳುಹಿಸುತ್ತಿರುತ್ತೇವೆ, ಇಂಥವರಿಗೇ ಸಂದೇಶ ಕಳುಹಿಸಬೇಕು ಎಂದು ಆಯ್ಕೆ ಮಾಡುವುದಿಲ್ಲ. ಇದು ರ್‍ಯಾಂಡಮ್‌ ಆಗಿ ಹೋಗುತ್ತದೆ ಎಂದಿತ್ತು. ಆದರೆ ಯಾರು ಎಷ್ಟೇ ಸ್ಪಷ್ಟನೆ ನೀಡಿದರೂ, ಇಂಥ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಲು ಯಾರೊಬ್ಬರು ಸಿದ್ಧರಿರುವುದಿಲ್ಲ. ಇದಕ್ಕೆ ಕಾರಣ ಗಳೂ ಇದ್ದು, ಇತಿಹಾಸವೂ ಇವುಗಳಿಗೆ ಪುಷ್ಠಿ ನೀಡುತ್ತದೆ. ಮೊದಲಿ ನಿಂದಲೂ ಆಳುವ ಸರಕಾರಗಳು ವಿಪಕ್ಷಗಳ ಮತ್ತು ಪತ್ರಕರ್ತರ ಬಗ್ಗೆ ಒಂದು ನಿಗಾ ಇಟ್ಟಿರುತ್ತದೆ ಎಂಬ ಆರೋಪಗಳು ಇದ್ದೇ ಇವೆ. ಇದು ಇಂಥದ್ದೇ ಸರಕಾರ ವಾಗ ಬೇಕು ಎಂದೇನಿಲ್ಲ. ಬಹುತೇಕ ಎಲ್ಲ ಪಕ್ಷಗಳ ಸರಕಾರಗಳಲ್ಲೂ ಇಂಥ ಆರೋಪ ಗಳನ್ನು ಕೇಳುತ್ತಲೇ ಇರುತ್ತೇವೆ. ಹೀಗಾಗಿ ಆ್ಯಪಲ್‌ ಸಂಸ್ಥೆ ನೀಡಿದ ಎಚ್ಚರಿಕೆ ಸಂದೇಶವು ವಿಪಕ್ಷ ನಾಯಕರಲ್ಲಿ ಸಂದೇಹ ಮೂಡಿಸಿರುವುದಂತೂ ನಿಜ.

ಹೀಗಾಗಿ ಕೇಂದ್ರ ಸರಕಾರವು ತಡ ಮಾಡದೇ ಈ ಬಗ್ಗೆ ಉನ್ನತ ಮಟ್ಟದಲ್ಲೇ ತನಿಖೆ ನಡೆಸಬೇಕು. ಈಗ ತನ್ನ ಮೇಲೆ ಬಂದಿರುವ ಹ್ಯಾಕ್‌ ಆರೋಪವನ್ನು ಹೊಗಲಾಡಿಸಿಕೊಳ್ಳುವಲ್ಲಿ ಶ್ರಮಿಸಬೇಕು. ಆ್ಯಪಲ್‌ ಸಂಸ್ಥೆಯಿಂದಲೂ ಪೂರಕವಾದ ಸ್ಪಷ್ಟನೆ ಕೇಳಬೇಕು. ಇಲ್ಲದಿದ್ದರೆ ಸರಕಾರಗಳು ವಿರೋಧಿಗಳ ಫೋನ್‌ ಹ್ಯಾಕ್‌ ಮಾಡುತ್ತವೆ ಎಂಬ ಆರೋಪ ಸತ್ಯವಾಗುವ ಸಂಭವ ಹೆಚ್ಚಾಗಿಯೇ ಇರುತ್ತದೆ. ಇದು ಒಂದು ರೀತಿಯಲ್ಲಿ ಹಗ್ಗದ ಮೇಲಿನ ನಡಿಗೆ ರೀತಿಯಲ್ಲಿದ್ದು, ಬಹುಬೇಗನೆ ಸತ್ಯ ಗೊತ್ತಾಗುವಂತೆ ಮಾಡುವ ಕರ್ತವ್ಯ ಸರಕಾರದ್ದಾಗಿದೆ.

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.