Cauvery: ಕೊಡು-ಕೊಳ್ಳುವ ನೀತಿಗೆ ತಮಿಳುನಾಡು ಮುಂದಾಗಲಿ


Team Udayavani, Aug 17, 2023, 6:30 AM IST

dam

ಪ್ರತಿ ವರ್ಷ ಕರ್ನಾಟಕಕ್ಕೆ ತಮಿಳುನಾಡಿನಿಂದ ಕಾವೇರಿ ನೀರಿನ ತಕರಾರು ತಪ್ಪಿದ್ದಲ್ಲ. ರಾಜ್ಯದಲ್ಲಿ ಭರ್ಜರಿ ಮಳೆಯಾಗಲಿ ಇಲ್ಲವೇ ತೀವ್ರ ಬರಗಾಲವಿರಲಿ, ಕೆಆರ್‌ಎಸ್‌, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿರಲಿ, ಖಾಲಿಯಾಗಿರಲಿ, ಅರ್ದಂಬರ್ಧ ತುಂಬಿರಲಿ ನೆರೆ ರಾಜ್ಯಕ್ಕೆ ಮಾತ್ರ ಸದಾ ನೀರಿನ ದಾಹ ಇದ್ದೇ ಇರುತ್ತದೆ. ಮೆಟ್ಟೂರು ಜಲಾಶಯ ತನ್ನ ನೀರಾವರಿ ಅಗತ್ಯತೆಗಳು (ಕುರುವೈ ಬೆಳೆಗೆ) ಹಾಗೂ ಕುಡಿಯುವ ನೀರು ಪೂರೈಸಿಕೊಳ್ಳುವಷ್ಟು ನೀರನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದರೂ ಅಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ತನ್ನ ಪಾಲಿನ ನೀರನ್ನು (ಮಾಸಿಕ ಕೋಟಾ) ಬಿಡುಗಡೆ ಮಾಡಲೇಬೇಕೆಂದು ಹಠ ಸಾಧಿಸುವುದು ನೆರೆ ರಾಜ್ಯದ ಸರ್ಕಾರಗಳ ಧೋರಣೆಯಾಗಿದೆ. ಇದು ಕರ್ನಾಟಕ ಸರ್ಕಾರಕ್ಕೆ ಪ್ರತಿ ವರ್ಷ ಒಂದು ರೀತಿ ತಮಿಳುನಾಡಿನಿಂದ “ವಾರ್ಷಿಕ ಕಾವೇರಿ ಕಿರುಕುಳ’ ಇದ್ದಂತೆ ಆಗಿದೆ.

ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಮುಂಗಾರು ಕೈಕೊಟ್ಟು ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದರೂ ತಮಿಳುನಾಡು ಸರ್ಕಾರ ಮಾತ್ರ ತನ್ನ ಕೋಟಾದ ನೀರು ಬಿಡುಗಡೆಗೆ ಪಟ್ಟು ಹಿಡಿದು ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ರಾಜ್ಯದಲ್ಲಿ ಸಮೃದ್ಧಿ ಮಳೆಗಾಲ ಅನ್ನುವಂತೆಯೂ ಇಲ್ಲ ಅಥವಾ ಬರಗಾಲವೆಂದು ಹೇಳುವಂತೆಯೂ ಇಲ್ಲ. ಹೀಗೆ ಈ ವರ್ಷ ಮಳೆರಾಯ ನಾಡಿನ ರೈತರನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ್ದಾನೆ, ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲೇ ಕುಡಿಯುವ ನೀರಿಗೂ ಹಾಹಾಕಾರವಿದೆ.

ಬೆಳೆಗಳು ನೀರಿನ ಕೊರತೆ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರವು ಕರ್ನಾಟಕದ ಮಳೆ-ಬೆಳೆ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳದೇ ಕೇವಲ ಡ್ಯಾಂಗಳು ತುಂಬಿವೆ, ನೀರಿದೆ ಎಂಬ ಕಾರಣಕ್ಕೆ ನೀರು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿರುವುದು ಸರಿಯಲ್ಲ. ಜಲಾನಯನ ಪ್ರದೇಶದಲ್ಲಿ ರೈತರು ಬತ್ತ ನಾಟಿ ಸೇರಿದಂತೆ ಹಲವು ಬೆಳೆಗಳಿಗೆ ನೀರು ಪೂರೈಸಲು ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಆದರೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಾದ ಕಾನೂನಾತ್ಮಕ ಅನಿವಾರ್ಯತೆ ಸೃಷ್ಟಿಯಾಗಿದೆ.

ಕರ್ನಾಟಕ ಸರ್ಕಾರವು ಆಗಸ್ಟ್‌ 14ರವರೆಗೆ 37.971 ಟಿಎಂಸಿ ಅಡಿ ಕಡಿಮೆ ನೀರು ಬಿಟ್ಟಿದೆ. ಬಾಕಿ ನೀರು ಬಿಡುಗಡೆ ಮಾಡುವುದರ ಜತೆಗೆ ಆಗಸ್ಟ್‌ನಲ್ಲಿ ನಿತ್ಯ ಹೆಚ್ಚುವರಿಯಾಗಿ 24 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದೆ. ಜೂನ್‌ 1 ರಿಂದ ಜುಲೈ 31ರವರೆಗಿನ ನೀರಾವರಿ ವರ್ಷದಲ್ಲಿ 28.849 ಟಿಎಂಸಿ ಅಡಿ ಕಡಿಮೆ ನೀರು ಬಿಟ್ಟಿದೆ ಎಂಬುದು ತಮಿಳುನಾಡಿನ ಆರೋಪ. 2018 ರಲ್ಲಿ ಸುಪ್ರೀಂಕೋರ್ಟ್‌ ಮಾರ್ಪಾಡಿಸಿದ ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ಸೆಪ್ಟೆಂಬರ್‌ನಲ್ಲಿ 36.76 ಟಿಎಂಸಿ ನೀರು ಬಿಡಬೇಕಿದೆ. ಆದರೆ ಜುಲೈನ ಮಧ್ಯಭಾಗದಲ್ಲಿ ಸುರಿದ ಮಳೆರಾಯ ದಿಢೀರನೆ ಕಣ್ಮರೆಯಾಗಿದ್ದಾನೆ. ಕರ್ನಾಟಕದಲ್ಲಿ ಈಗ ಎಲ್ಲೆಲ್ಲೂ ಮಳೆ ಬೀಳುತ್ತಿಲ್ಲ, ಮಳೆಗಾಲದಲ್ಲೂ ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ಬರದ ಛಾಯೆ ಆವರಿಸಿದೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ತನ್ನ ನಾಡಿನ ರೈತರ ಹಿತ ಹಾಗೂ ಕುಡಿಯುವ ನೀರು ಪೂರೈಕೆಗೆ ನೀರು ಕಾಪಾಡಿಕೊಳ್ಳುವ ಇಕ್ಕಟ್ಟಿನಲ್ಲಿ ಸಿಲುಕಿದೆ.

ಮೆಟ್ಟೂರು ಡ್ಯಾಂನಲ್ಲಿ ಜೂನ್‌ 1 ರಂದು 69.77 ಟಿಎಂಸಿ, ಭವಾನಿ ಸಾಗರ ಡ್ಯಾಂನಲ್ಲಿ 16.653 ಟಿಎಂಸಿ ನೀರು ಲಭ್ಯವಿತ್ತು. ಬಿಳಿಗುಂಡ್ಲು ಮಾಪನ ಕೇಂದ್ರದಿಂದ ಈ ತಿಂಗಳ 6ಕ್ಕೆ 14.054 ಟಿಎಂಸಿ ನೀರು ಹರಿದು ಹೋಗಿದೆ ಎಂಬ ವರದಿಗಳಿವೆ. ಸದ್ಯ ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಈ ವರ್ಷ 83.831ಟಿಎಂಸಿ ನೀರು ಲಭ್ಯವಿದೆ. ಸಿಡಬ್ಲೂಡಿಟಿ ಪ್ರಕಾರ ತಮಿಳುನಾಡು ರಾಜ್ಯ ಕುರುವೈ ಬೆಳೆಗೆ 1.80 ಲಕ್ಷ ಎಕರೆ ಹಾಗೂ 32 ಟಿಎಂಸಿ ನೀರು ಬಳಸಬೇಕು. ಆದರೆ, ತಮಿಳುನಾಡು ಕುರುಬೈ ಬೆಳೆಗೆ ನಿಗದಿತಕ್ಕಿಂತ ದುಪ್ಪಟ್ಟು ನೀರು ಬಳಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಲೆಕ್ಕಿಸದೇ ಸಿಡಬ್ಲೂಡಿಟಿ ಆದೇಶ ಉಲ್ಲಂ ಸಿ ನಾಲ್ಕು ಪಟುx ನೀರು ಬಳಸಿದೆ. ಈಗ ನೀರು ಇಲ್ಲ, ನೀರು ಬಿಡುಗಡೆ ಮಾಡಿ ಎಂಬ ಕ್ಯಾತೆ ತೆಗೆದಿದೆ. ಅಲ್ಲಿನ ಯಾವುದೇ ಸರ್ಕಾರಗಳಿಗೂ ಮಾನವೀಯತೆ ಎಂಬುದೇ ಇಲ್ಲ. ನೀರಿನ ದಾಹ ಹಾಗೂ ದುರಾಸೆ ಸದಾ ಎದ್ದುಕಾಣುತ್ತಿದೆ. ರಾಜ್ಯದ ಮಳೆ ಸ್ಥಿತಿಯನ್ನು ಅರಿತುಕೊಂಡು ಸಂಕಷ್ಟದ ಸೂತ್ರ ಪಾಲಿಸಲು ಮುಂದಾಗಬಹುದಿತ್ತು. ಆದರೆ ಅಲ್ಲಿನ ಪ್ರತಿಪಕ್ಷಗಳು ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳಬಹುದೆಂದು ತನ್ನ ಹಕ್ಕು ಪ್ರತಿಪಾದಿಸಲು ಸುಪ್ರೀಂಮೊರೆ ಹೋಗಿರುವುದು ಸರಿಯಲ್ಲ.

ಉಭಯ ರಾಜ್ಯಗಳು ನೀರಿನ ಕೊರತೆ ನೀಗಿಸಿಕೊಳ್ಳುವ ಸಲುವಾಗಿಯೇ ಕರ್ನಾಟಕ ಸರ್ಕಾರ ಮೇಕೆದಾಟು ನೀರಿನ ಯೋಜನೆ ರೂಪಿಸಿದ್ದು ಅದಕ್ಕೂ ತಮಿಳುನಾಡು ತಕರಾರು ತೆಗೆದಿದೆ. ಡ್ಯಾಂಗಳು ಭರ್ತಿಯಾದ ಬಳಿಕ ಹೆಚ್ಚುವರಿ ನೀರು ಸಮುದ್ರ ಪಾಲಾಗುವುದನ್ನು ತಪ್ಪಿಸಲು ಮೇಕೆದಾಟು ಬಳಿ ಡ್ಯಾಂ ನಿರ್ಮಿಸಿ ಉಭಯ ರಾಜ್ಯಗಳು ಅದನ್ನು ಬಳಸಿಕೊಳ್ಳಬಹುದಾಗಿದೆ. ಇದನ್ನು ದೀರ್ಘ‌ಕಾಲಿಕ ಪರಿಹಾರವೆಂದು ಪರಿಗಣಿಸಿ ತಮಿಳುನಾಡು ಸರ್ಕಾರ “ಕೊಡು-ತೆಗೆದುಕೊಳ್ಳುವ ನೀತಿ’ ಗೆ ಮುಂದೆ ಬರಬೇಕೇ ಹೊರತು ಕೇವಲ ತಾತ್ಕಾಲಿಕ ಪರಿಹಾರಗಳಿಗೆ ಯೋಚಿಸುವುದು ಸರಿಯಲ್ಲ.

ಟಾಪ್ ನ್ಯೂಸ್

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

Moodbidri: ಸರ ಕಳ್ಳತನ; ಇಬ್ಬರು ಆರೋಪಿಗಳ ಸೆರೆ

Moodbidri: ಸರ ಕಳ್ಳತನ; ಇಬ್ಬರು ಆರೋಪಿಗಳ ಸೆರೆ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.