ನೌಕರಶಾಹಿಯ ದಕ್ಷತೆ ಕುಸಿಯದಿರಲಿ


Team Udayavani, Oct 5, 2023, 12:31 AM IST

ration card bundle

ಕಾನೂನನ್ನು ಅನುಷ್ಠಾನಕ್ಕೆ ತರುವುದು ನೌಕರಶಾಹಿಯ ಕರ್ತವ್ಯ. ಶಾಸನಸಭೆಯಲ್ಲಿ ಕಾನೂನು ರೂಪಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆದಿರುತ್ತದೆ. ಎಲ್ಲ ಆಯಾಮಗಳಲ್ಲಿ ಚರ್ಚಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯವೆಂದು ಕಂಡು ಬಂದಾಗ ಕಾನೂನನ್ನು ರೂಪಿಸಲಾಗುವುದು. ಇಂಥ ಕಾನೂನಿನಲ್ಲಿ ಅಡಕವಾದ ಸಾರ್ವಜನಿಕ ಹಿತಾಸಕ್ತಿಯನ್ನು ಕಾರ್ಯಗತಗೊಳಿಸಲು ನಿಯೋಜಿತರಾದ ನೌಕರರಿಗೆ ಕಾರ್ಯಕೌಶಲ ಮತ್ತು ಪ್ರಾಮಾಣಿಕತೆ ಅರ್ಥಾತ್‌ ದಕ್ಷತೆ ಇರಬೇಕಾದುದು ಅಗತ್ಯ. ಭಾರತದಲ್ಲಿ ಈ ದಕ್ಷತೆ ದಿನೇದಿನೆ ಕುಸಿಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ನೌಕರಶಾಹಿಯ ದಕ್ಷತೆ ಕುಸಿದಿರುವುದಕ್ಕೆ ಅನೇಕ ಉದಾಹರಣೆ ನೀಡಬಹುದು. ಪಡಿತರ ನಿರ್ವಹಣೆಯ ಅವಲೋಕನ ಒಂದು ಜ್ವಲಂತ ನಿದರ್ಶನ. ಈ ಯೋಜನೆಯಲ್ಲಿ ದಾಖಲಾದ ಅಂಕಿಅಂಶಗಳು ನೌಕರಶಾಹಿಯ ದಕ್ಷತೆ ಕುಸಿದಿರುವುದನ್ನು ಹೊಡೆದು ತೋರಿಸುತ್ತದೆ.

ಪಡಿತರವನ್ನು ಸಮಾನವಾಗಿ ಎಲ್ಲರಿಗೂ ಹಂಚಲಾಗುತ್ತಿಲ್ಲ. ಪಡಿತರ ಪಡೆಯಬಹುದಾದ ಕುಟುಂಬಗಳನ್ನು ಅವುಗಳ ಆದಾಯದ ಆಧಾರದಲ್ಲಿ ಬಿಪಿಎಲ್‌ (ಬಡತರ ರೇಖೆಗಿಂತ ಕೆಳಗೆ), ಅಂತ್ಯೋದಯ ಅಥವಾ ಆದ್ಯತಾ ವಲಯ ಹಾಗೂ ಎಪಿಎಲ್‌ (ಬಡತರ ರೇಖೆಗಿಂತ ಮೇಲಿನ) ಗಳೆಂದು ವರ್ಗೀಕರಿಸಲಾಗಿದೆ. ಕುಟುಂಬದ ಆದಾಯವನ್ನು ಅಳೆಯಲು ಸರಕಾರ ಮಾನದಂಡಗಳನ್ನು ನಿಗದಿಪಡಿಸಿದೆ. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ 4-5 ಜನಸಂಖ್ಯೆ ಇರಬಹುದಾದರೂ, ಕುಟುಂಬದ ಗಾತ್ರವನ್ನು ಜನಸಂಖ್ಯೆಯ ಆಧಾರದಲ್ಲಿ ನಿಗದಿಪಡಿಸಿರುವುದಿಲ್ಲ. ಜಾಸ್ತಿ ಜನ ಇದ್ದರೂ ಒಂದೇ ಸೂರಿನಲ್ಲಿರುವವರನ್ನು ಒಂದೇ ಕುಟುಂಬ ಎಂದು ಪರಿಗಣಿಸಬಹುದು. ಆದರೆ ಕುಟುಂಬದ ಆದಾಯ ಕೇವಲ ಯಜಮಾನನ ಸಂಪಾದನೆ ಮಾತ್ರವಲ್ಲದೆ, ಕುಟುಂಬದ ಮಿಕ್ಕ ಸದಸ್ಯರ ಆದಾಯವನ್ನು ಕುಟುಂಬದ ಮೂಲ ಆದಾಯವೆಂದು ಪರಿಗಣಿಸಲಾಗಿದೆ. ಅದರಂತೆ ಕುಟುಂಬಗಳನ್ನು ವರ್ಗೀಕರಿಸಲು ಸರಕಾರ ಮಾನದಂಡ ರೂಪಿಸಿದ್ದು, ತನ್ಮೂಲಕ ಬಿಪಿಎಲ್‌, ಎಪಿಎಲ್‌ ಇತ್ಯಾದಿ ವರ್ಗೀಕರಣ ಮಾಡಲಾಗಿದೆ.

ಬಡತನ ರೇಖೆಗಿಂತ ಕೆಳಗಿನ ಅಂದರೆ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಯಾರು ಅರ್ಹರಲ್ಲ ಎಂಬುದನ್ನು ತಿಳಿದರೆ ಉಳಿದ ವರ್ಗೀಕರಣವೂ ವಿಷದವಾಗಿ ತಿಳಿಯುತ್ತದೆ. ಸರಕಾರ ನಿಗದಿ ಪಡಿಸಿದಂತೆ (1.) ನಾಲ್ಕು ಚಕ್ರದ ಬಿಳಿ ಬೋರ್ಡ್‌ನ ವಾಹನ ಹೊಂದಿದವರು. (2.) ಕುಟುಂಬದಲ್ಲಿ ಸರಕಾರಿ ನೌಕರರಿದ್ದರೆ (3.) ಮನೆಯಲ್ಲಿ ಈಗಾಗಲೇ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಇದ್ದರೆ (4.) 7.5 ಎಕ್ರೆ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಇದ್ದರೆ (5.) ವಾರ್ಷಿಕ 1.20ಲಕ್ಷ ರೂ. ಗೂ ಹೆಚ್ಚು ಆದಾಯವಿದ್ದರೆ (6.) ನಗರ ಪ್ರದೇಶದಲ್ಲಿ 1,000 ಚ.ಅ. ಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿದ್ದರೆ, ಈ ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿ ಹೊಂದಲು ಅರ್ಹವಲ್ಲ. ಈ ಮಾನದಂಡದ ಆಧಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ-ನೌಕರರು ಸರ್ವೇಕ್ಷಣೆ ಮಾಡಿ ದಾಖಲಿಸಿದ ಆಧಾರದಲ್ಲಿ ನೀಡಿದ ಪಡಿತರ ಚೀಟಿಗಳ ಅಂಕೆ ಸಂಖ್ಯೆಯನ್ನು ಗಮನಿಸುವ.

ಇಲಾಖೆಯ ಅಧಿಕೃತ ಮಾಹಿತಿಯಂತೆ ರಾಜ್ಯದಲ್ಲಿ 1,52,23,128 ಪಡಿತರ ಚೀಟಿದಾರರಿದ್ದಾರೆ. ಇದರಲ್ಲಿ 1,17,23,307 ಬಿಪಿಎಲ್‌ ಕಾರ್ಡ್‌, 10,89,886 ಅಂತ್ಯೋದಯ ಕಾರ್ಡ್‌ ಮತ್ತು 24,09,935 ಎಪಿಎಲ್‌ ಕಾರ್ಡ್‌ಗಳಿವೆ. ಅಂತ್ಯೋದಯ ವರ್ಗ ಅಥವಾ ಆದ್ಯತೆಯ ವರ್ಗವೆಂದರೆ ಕಡು ಬಡವರು. ನಮ್ಮ ರಾಜ್ಯದ ಜನಸಂಖ್ಯೆ ಅಂದಾಜು (2022) 6.72ಕೋಟಿ. ಸಾಮಾನ್ಯ ಒಂದು ಕುಟುಂಬದಲ್ಲಿ 4-5 ಜನರಿದ್ದಾರೆ ಎಂದು ಅಂದಾಜಿಸಿದರೆ 1.5ಕೋಟಿಗಿಂತ ಕಡಿಮೆ ಮನೆಗಳಿದ್ದಾವೆ ಎಂಬ ತೀರ್ಮಾನಕ್ಕೆ ಬರಬಹುದು. ನೀಡಿದ ಒಟ್ಟು ಪಡಿತರ ಚೀಟಿಗಳನ್ನು ಗಮನಿಸುವಾಗ ಹೆಚ್ಚಿನೆಲ್ಲ ಮನೆಗಳಿಗೂ ಪಡಿತರ ಚೀಟಿ ವಿತರಣೆಯಾಗಿದೆ. ಆದರೆ ನೀಡಿದ ಬಿಪಿಎಲ್‌ ಚೀಟಿಗಳನ್ನು ಗಮನಿಸುವಾಗ ಹಾಗೂ ಬಿಪಿಎಲ್‌ ವರ್ಗಕ್ಕೆ ನಿಗದಿಪಡಿಸಿದ ಮಾನದಂಡದೊಡನೆ ತಾಳೆ ಹಾಕುವುದಾದರೆ ಅದು ಪ್ರಮಾಣಬದ್ಧವಾಗಿಲ್ಲ ಎಂಬ ಸಂಶಯ ಉಂಟಾಗದಿರದು. ಪ್ರಕೃತ ಎಪಿಎಲ್‌ಗಿಂತ ಐದು ಪಟ್ಟು ಅಧಿಕ ಸಂಖ್ಯೆಯ ಬಿಪಿಎಲ್‌ ಇದೆ. ನಿಗದಿ ಪಡಿಸಿದ ಮಾನದಂಡಗಳನ್ನು ಪರಿಗಣಿಸಿದರೆ ಆ ಪ್ರಮಾಣದ ಬಿಪಿಎಲ್‌ ಕುಟುಂಬ ಇರಲು ಸಾಧ್ಯವೇ? ಸರ್ವೇಕ್ಷಣೆ ಮಾಡಿದ ಸರಕಾರಿ ಅಧಿಕಾರಿ-ನೌಕರರು ಮಾನದಂಡದ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಹಾಗೆ ಕಾಣುತ್ತದೆ.

ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಅಧಿಕಾರಿ-ನೌಕರರು ಸರಕಾರ ನಿಗದಿಪಡಿಸಿದ ಮಾನದಂಡದಂತೆ ಕುಟುಂಬದ ಆದಾಯ ಪರಿಗಣಿಸಿ ವರ್ಗೀಕರಣ ಮಾಡಿಲ್ಲವಾದರೆ ಅವರಲ್ಲಿ ದಕ್ಷತೆ ಇಲ್ಲವೆಂದು ಭಾವಿಸಬೇಕಾಗುತ್ತದೆ. ಹಾಗೆ ಭಾವಿಸುವುದು ತಪ್ಪು. ಯಾಕೆಂದರೆ ಅವರಲ್ಲಿ ಯುಕ್ತ ಶಿಕ್ಷಣಾರ್ಹತೆ, ವಿಶೇಷ ತರಬೇತಿ ಎಲ್ಲ ಇದೆ. ದಕ್ಷತೆ ಎಂದರೆ ಕಾರ್ಯಕೌಶಲ ಹಾಗೂ ಪ್ರಾಮಾಣಿಕತೆಯ ಸಂಯೋಗ. ಅವರು ಪ್ರಾಮಾಣಿಕರಲ್ಲವೇ? ಅವರ ಭಾವ ಶುದ್ಧಿಯನ್ನು ಏಕಾಏಕಿ ಪ್ರಶ್ನಿಸಲಾಗದು. ಬೇರೆ ಕಾರಣಗಳಿರುವ ಸಾಧ್ಯತೆಯನ್ನು ಕಂಡುಕೊಳ್ಳಬೇಕಾಗಿದೆ. ಸರಕಾರಿ ನೌಕರರ ಹುದ್ದೆಗೆ ಅಗತ್ಯವುಳ್ಳ ಶಿಕ್ಷಣ, ವಿಶೇಷ ತರಬೇತಿ ಇದ್ದರೆ ಸಾಲದು, ದಕ್ಷತೆ ಕಾಪಾಡಲು ಉತ್ತಮ ಮೇಲ್ವಿಚಾರಣೆ ಮತ್ತು ಅನ್ಯಥಾ ಒತ್ತಡವಿಲ್ಲದ ವಾತಾವರಣ ಅಗತ್ಯ. ಇದು ನೌಕರರ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಮೇಲ್ವಿಚಾರಣೆ ಇತ್ತೀಚೆಗಿನ ದಿನಗಳಲ್ಲಿ ತೀರಾ ಶಿಥಿಲಗೊಂಡಿದೆ ಎಂಬುದು ಕೆಲಸದ ವೈಖರಿಯಲ್ಲಿ ಕಂಡು ಬರುತ್ತಿದೆ. ಜತೆಗೆ ಅನುಚಿತ ರಾಜಕೀಯ ಒತ್ತಡವೂ ಹೆಚ್ಚಾಗುತ್ತಿದೆ.

ರಾಜಕಾರಣಿಗಳು ನೌಕರಶಾಹಿಯ ಕರ್ತವ್ಯದಲ್ಲಿ ಮೂಗು ತೂರಿಸಿ ತಮ್ಮ ಇಚ್ಛೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕೆಂಬ ಇರಾದೆಯುಳ್ಳವರಾಗಿರುತ್ತಾರೆ. ಈ ಮಾತಿಗೆ ಪುಷ್ಟಿ ನೀಡಲು ಒಂದು ಉದಾಹರಣೆ ನೀಡುವುದಾದರೆ, ಇತ್ತೀಚೆಗೆ ರಾಜ್ಯದ ಶಾಸಕರು ತಾವು ಅಪೇಕ್ಷಿಸುವ ಅಧಿಕಾರಿ, ನೌಕರರನ್ನು ತಮ್ಮ ತಮ್ಮ ಕ್ಷೇತ್ರಕ್ಕೆ ವರ್ಗ ಮಾಡಬೇಕೆಂಬ ಅಪೇಕ್ಷೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟಿರುವುದೇ ಸಾಕ್ಷಿ. ಇವರು ಅಪೇಕ್ಷಿಸುವ ತಹಶೀಲ್ದಾರ್‌, ಪೋಲಿಸ್‌ ಅಧಿಕಾರಿಗಳೇ ಏಕೆ ಬೇಕು? ಕಾರ್ಯದಕ್ಷತೆಯಲ್ಲಿ ಒಂದು ವೃಂದದ ಒಬ್ಬ ಅಧಿಕಾರಿ, ಅದೇ ವೃಂದದ ಇನ್ನೊಬ್ಬ ಅಧಿಕಾರಿಗೆ ಸಮನಾಗಿರುತ್ತಾನೆ, ಇರತಕ್ಕದ್ದು. ಯಾಕೆಂದರೆ ಅವರ ನೇಮಕಾತಿಯನ್ನು ಒಂದು ನಿಶ್ಚಿತ ಮಾನದಂಡದ ಆಧಾರದಲ್ಲಿ ಮಾಡಲಾಗಿದೆ. ಹಾಗಾಗಿ ಕಾರ್ಯದಕ್ಷತೆಯೂ ಹೆಚ್ಚು ಕಡಿಮೆ ಏಕಪ್ರಕಾರವಾಗಿರುತ್ತದೆ. ಮೇಲಾಗಿ ಅಧಿಕಾರಿಗಳು ಈ ಶಾಸಕರ ಒಕ್ಕೂಟದ ಶಾಸನ ಸಭೆ ರೂಪಿಸಿದ ಕಾನೂನಿನಂತೆ ಕಾರ್ಯನಿರ್ವಹಿಸತಕ್ಕವರು. ವಸ್ತುಸ್ಥಿತಿ ಹೀಗಿರುವಾಗ ಚುನಾಯಿತ ಪ್ರತಿನಿಧಿಗಳಿಗೆ ಅವರ ಅಪೇಕ್ಷಿತ ಅಧಿಕಾರಿ ಏಕೆ? ಇದು ಆಡಳಿತದಲ್ಲಿ ರಾಜಕೀಯ ಬೆರೆಸುವ ಒಂದು ವಿಧಾನ. ಇಂಥ ವಿದ್ಯಮಾನಗಳೇ ನೌಕರರ ಅದಕ್ಷತೆಗೆ ಹೇತು.

“ಉತ್ತಮ ಮೇಲ್ವಿಚಾರಣೆ ಹಾಗೂ ಅನ್ಯಥಾ ಒತ್ತಡ ರಹಿತವಾದ ಕೆಲಸದ ವಾತಾವರಣ, ದಕ್ಷತೆ ಕಾಪಾಡಲು ಸಹಕಾರಿ. ಆಡಳಿತಕ್ಕೆ ದಕ್ಷತೆ ಅಗತ್ಯ. ಇದನ್ನು ಒದಗಿಸಬೇಕಾದ ಕರ್ತವ್ಯ ಸರಕಾರದ್ದು. ಚುನಾಯಿತ ಪ್ರತಿನಿಧಿಗಳೇ ಪಡಿತರ ನಿರ್ವಹಣ ನಿರತ ನೌಕರರಲ್ಲಿ ಕಾನೂನು ಉಲ್ಲಂ ಸಲು ಒತ್ತಡ ತಂದರೆ ಏನಾದೀತು, ಆತ ಏನು ಮಾಡಬಹುದು. ಅವರು ಸೂಚಿಸಿದಂತೆ ಮಾಡಿಯಾನು ಎಂದು ಬೇರೆ ಹೇಳಬೇಕಾಗಿಲ್ಲ? ಒತ್ತಡಕ್ಕೆ ಮಣಿಯದೆ ಇದ್ದರೆ ಅವರ ಮುನಿಸು ಕಟ್ಟಿಕೊಳ್ಳಬೇಕಾಗುತ್ತದೆ. ಆಗ ಆತನ ಸಹಾಯಕ್ಕೆ ಸರಕಾರವಾಗಲಿ, ಮೇಲಾಧಿಕಾರಿಗಳಾಗಲಿ ಬರಲಾರರು. ಈ ವಿದ್ಯಮಾನ ಇಲಾಖಾ ಮಟ್ಟದಲ್ಲಿ ಸೂಕ್ತ ಮೇಲ್ವಿಚಾರಣೆ ಶಿಥಿಲಗೊಳ್ಳಲು ಹಾಗೂ ದಕ್ಷತೆ ಕುಸಿಯಲು ಕಾರಣ. ಕಳೆದ ಐವತ್ತು ವರ್ಷದ ಬದಲಾವಣೆ ಗಮನಿಸುವಾಗ ಆಡಳಿತದಲ್ಲಿ ದಕ್ಷತೆ ಕುಸಿಯಲು ನೌಕರಶಾಹಿಯ ಮೇಲೆ ಅನುಚಿತ ರಾಜಕೀಯ ಒತ್ತಡವೇ ಕಾರಣ ಎಂದು ಹೇಳದೆ ವಿಧಿ ಇಲ್ಲ. ಚುನಾಯಿತ ಪ್ರತಿನಿಧಿಗಳು ಕಾನೂನನ್ನು ಪಾಲಿಸುವ ಸಂಕಲ್ಪ ಮಾಡುತ್ತಾ, ನೌಕರಶಾಹಿಯ ಕಾರ್ಯನಿರ್ವಹಣೆಗೆ ಪ್ರೇರಕರಾಗಿದ್ದರೆ ಆಡಳಿತದಲ್ಲಿ ದಕ್ಷತೆ ಕುಸಿಯುವುದನ್ನು ನಿಲ್ಲಿಸಬಹುದು.

 ಬೇಳೂರು ರಾಘವ ಶೆಟ್ಟಿ

 

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.