ಪ್ರಕೃತಿಯ ಅಗಾಧ ಶಕ್ತಿಯನ್ನರಿತು ನಾವು ಧನ್ಯರಾಗೋಣ
Team Udayavani, Jul 17, 2021, 6:30 AM IST
ಗಾಳಿಯು ಬೆಳೆಯನ್ನು ಬಿತ್ತಿದರೆ, ಸೂರ್ಯನು ನೀರನ್ನು ಆವಿಯನ್ನಾಗಿಸು ತ್ತಾನೆ, ಮತ್ತದೇ ಗಾಳಿಯಿಂದ ಮೋಡಗಳು ವರ್ಷಧಾರೆಯನ್ನೇ ಭೂಮಿಗೆ ಸುರಿಸು ತ್ತವೆ. ಹೀಗೆ ಸುರಿಯುವ ಮಳೆ, ಬೆಳೆಯ ರೂಪ ತಾಳಿ ನಮಗೇ ಆಹಾರವಾಗುತ್ತದೆ. ಇದು ಪ್ರಕೃತಿಯೂ ಮನುಷ್ಯನೂ ಹೊಂದ ಬೇಕಾದ ಅವಿನಾಭಾವ ಅನುಬಂಧ. ಪ್ರಕೃತಿಯ ಶಕ್ತಿ ಅಗಾಧ, ಅದನ್ನರಿತು ನಾವು ಧನ್ಯರಾಗಬೇಕು.
‘The happiest man is he who learns from nature the lesson of worship” ಎಮರ್ಸನ್ ಎಂಬ 19ನೆಯ ಶತಮಾನದ ಕವಿ, ತಣ್ತೀಜ್ಞಾನಿ ನೇಚರ್ ಎಂಬ ಪ್ರಬಂಧದಲ್ಲಿ ಖrಚnscಛಿnಛಛಿnಠಿಚl -ಅಚಿಂತ್ಯ ಭಾವದಿಂದ ಹೀಗೆ ಪ್ರಕೃತಿಯನ್ನು ವರ್ಣಿಸಿದ್ದಾರೆ. ಪ್ರಕೃತಿಗೆ ಜಡತ್ವವಿಲ್ಲ, ತನ್ನದೇ ಆತ್ಮವನ್ನು ಹೊಂದಿ ರುವ ಅದು ಹರಿಯುವ ನೀರಿನಂತೆ ನಿರಂತರ, ಅದರ ಗುಣವೇ ಹಾಗೆ.
ಇಂತಹ ಆತ್ಮಶಕ್ತಿಯುಳ್ಳ ಪ್ರಕೃತಿಯನ್ನು ಅಧ್ಯಾತ್ಮದ ಪ್ರತ್ಯೇಕತೆಯ ನೆಲೆಯಲ್ಲೇ ಕಾಣಬೇಕು. ಧಾರ್ಮಿಕ ನೆಲೆಯಲ್ಲಿಯೂ ಪ್ರಕೃತಿಗೆ ವಿಶೇಷ ಸ್ಥಾನಮಾನ, ಮನ್ನಣೆ, ಗೌರವವಿದೆ. ಈ ಕಾರಣದಿಂದಾಗಿಯೇ ಪ್ರಕೃತಿ ಮಾತೆಯ ವಿವಿಧ ಅಂಗಗಳನ್ನು ಪುರಾತನ ಕಾಲದಿಂದಲೂ ಆಯಾಯ ಋತುಮಾನಗಳಿಗನುಸಾರ ಪೂಜಿಸುತ್ತ ಬರಲಾಗಿದೆ. ಇದೇ ವೇಳೆ ಪ್ರಕೃತಿಯ ಮೇಲಣ ಮಾನವನ ದೌರ್ಜನ್ಯ ಮಿತಿ ಮೀರುತ್ತಲೇ ಸಾಗಿದೆ.
ಜನ್ಮ ತಳೆವ ಮಗು ಮೊದಲ ತೊದಲ ನುಡಿಗಳನ್ನು ತಾಯಿಯಿಂದ ಕಲಿತರೆ ಪ್ರಕೃತಿಯು ಅವನ ಎರಡನೆಯ ಮಾತೆ. ಸೃಷ್ಟಿಯ ಅದ್ಭುತ ಸೌಂದರ್ಯಕ್ಕೆ, ಅದರ ವೈಶಾಲ್ಯಕ್ಕೆ ಮನುಷ್ಯ ಶರಣಾಗಬೇಕು. ಪ್ರಕೃತಿ ಮನುಷ್ಯನಿಗೆ ನೀಡಿರುವ ಕೊಡುಗೆ ಅಪಾರ. ಆದರೆ ಮನುಷ್ಯನ ಸ್ವಾರ್ಥಪರತೆ ಅಸಹನೀಯ. ಪ್ರಕೃತಿ ಮೇಲಣ ಪ್ರೇಮ ಕೇವಲ ತೋರಿಕೆಗೆ, ಮಾತಿಗೆ ಸೀಮಿತ ವಾಗುತ್ತಿದೆಯೇ ವಿನಾ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿಲ್ಲ.
ಪ್ರಕೃತಿಯ ಮಡಿಲಲ್ಲಿ ಬೆಳೆದ ಮಾನವ ಪ್ರಕೃತಿಯ ವಿನಾಶವನ್ನು ತಡೆಯದಾಗಿರುವುದು ವಿಷಾದ. ಮನುಷ್ಯ ಮಾತುಗಳ ಮೂಲಕ ಸಂವಹನ ಮಾಡಿದರೆ ಪ್ರಕೃತಿ ಯದು ಭೂಮಿಗೀತೆ. ಅದೆಲ್ಲೋ ಕಾಡಿ ನಲ್ಲಿ ಕಲ್ಲುಗಳ ನಡುವೆ ಹರಿಯುವ ನೀರು ನೀರವ ಮೌನ ಕಲಕಿ ನಾನಿಲ್ಲಿರುವೆ! ಎಂದು ಆಲಾಪಿಸುತ್ತದೆ.
ಪ್ರಕೃತಿಯ ಒಂದೇ ಒಂದು ಸ್ಪರ್ಶ ಈ ಪ್ರಪಂಚವನ್ನೇ ಬಂಧಿಸುತ್ತದೆ ಎಂದು ಶೇಕ್ಸ್‌ಪಿಯರ್ ಹೇಳಿದ್ದಾನೆ. ಸಾಗುವ ಹಾದಿ ದೂರವಾದರೂ ಇರುವೆಗಳು ಸಾಲಿನಲ್ಲಿಯೇ ಸಂಚರಿಸುವ ಶಿಸ್ತನ್ನು ಅವುಗಳಿಗೆ ಕಲಿಸಿದವರ್ಯಾರು?
ಮನುಷ್ಯನಿಗೂ ಪ್ರಕೃತಿಯ ಪ್ರಾಣಿಪಕ್ಷಿ ಗಳಿಗೂ ಇರುವ ಒಂದೇ ವ್ಯತ್ಯಾಸವೆಂದರೆ ಮನುಷ್ಯ ಸ್ವಾರ್ಥಿ, ಪ್ರಾಣಿಪಕ್ಷಿಗಳು ನಿಸ್ವಾರ್ಥಿಗಳು. ಪ್ರಕೃತಿಯಿಂದ ನಾವು ಕಲಿತದ್ದೇನು? ಪ್ರಕೃತಿಗೆ ನಾವು ಕೊಟ್ಟ ದ್ದೇನು? ಭೋಗ ಜೀವನದಿಂದ ಪ್ರಕೃತಿಯ ವಿನಾಶಕ್ಕೆ ಕಾರಣನಾದ ಮನುಷ್ಯ ನೆಲ,
ಜಲ ಮತ್ತು ಗಾಳಿಯಲ್ಲಿ ವಿಷ ತುಂಬಿದ.
ಇದರ ಫಲವನ್ನು ನಾವಿಂದು ಉಣ್ಣುತ್ತಿ ದ್ದೇವೆ. ಜಾಗತಿಕ ತಾಪಮಾನ ಹೆಚ್ಚುತ್ತಿದೆ.
ವರ್ಷಗಳುರುಳಿದಂತೆಯೇ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಲೇ ಸಾಗಿವೆ. ಪ್ರತಿ ಯೊಂದೂ ದುರಂತ ಸಂಭವಿಸಿದಾಗಲೂ ಕೆಲವು ದಿನ, ವಾರಗಳ ಕಾಲ ಈ ಬಗ್ಗೆ ತಲೆಕೆಡಿಸಿಕೊಳ್ಳುವ ನಾವು ಮತ್ತದೇ ಹಳೇ ಚಾಳಿಯನ್ನು ಪುನರಾವರ್ತಿಸುತ್ತೇವೆ. ನಮಗೆ ಇದು ಖಯಾಲಿಯಂತಾಗಿದೆ. “ನಿಸ್ವಾರ್ಥನಾಗಿ ಬದುಕಿ ಸಕಲ ಪ್ರಾಣಿಗಳಿಗೆ ದಯೆ ತೋರಿ ಸಂಯಮದಿಂದಿರು’ ಎನ್ನುವ ಸಂದೇಶವನ್ನು ಸಾರುವ ಪ್ರಕೃತಿಯ ಕರೆಗೆ ನಾವು ಓಗೊಡಬೇಕು.
ಇನ್ನೂ ಅಪಾರವಾಗಿರುವ ವನಸಿರಿಗಳ ಸಂರಕ್ಷಿಸಿ, ಪಕ್ಷಿಸಂಕುಲವನ್ನು ಪೋಷಿಸ ಬೇಕು. ಬದುಕೆಂದರೆ ಮನುಷ್ಯರು ಒಟ್ಟಾಗಿ ಒಗ್ಗಟ್ಟಿನಿಂದ ಮಾತ್ರ ಜೀವಿಸು ವುದಲ್ಲ, ಪ್ರಕೃತಿಯೊಡನೆ ಬೆರೆತು ಯೋಗಿ ಯಂತೆ ಜೀವಿಸುವುದು. ಅನ್ಯರಿಗೆ ಕರುಣೆ ತೋರುವುದು, ಕೈಲಾದಷ್ಟು ನೆರವಾಗು ವುದು ನಮ್ಮೆಲ್ಲರ ಕರ್ತವ್ಯ.
- ಮಯೂರಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.