ಖಾಲಿ ಹಾಳೆಯಾಗಿ ಹೊಸ ಸಂಬಂಧವನ್ನು ಬರೆಯೋಣ
Team Udayavani, Dec 7, 2020, 6:30 AM IST
ಯಾವುದೇ ಜೀವಿ – ಎಷ್ಟೇ ಸಣ್ಣದಾಗಿರಲಿ, ಎಷ್ಟೇ ದೊಡ್ಡದಾಗಿರಲಿ; ಸೃಷ್ಟಿಯ ಜತೆಗೆ ಮತ್ತು ಸೃಷ್ಟಿಯ ಮೂಲದ ಜತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತದೆ. ನಾವು, ನೀವು, ಆನೆ, ಹುಲಿ, ಕಡ್ಡಿಹುಳು- ಹೀಗೆ ಎಲ್ಲವುಗಳ ಮಟ್ಟಿಗೂ ಈ ಮಾತು ನಿಜ. ಜೀವ ವಿಕಾಸ ಪ್ರಕ್ರಿಯೆಯಲ್ಲಿ ಅತ್ಯುನ್ನತ ಮಟ್ಟದಲ್ಲಿರುವ ನಮ್ಮ ಮಟ್ಟಿಗೆ ಹೇಳುವುದಾದರೆ, ಈಗಾಗಲೇ ಇರುವ ಈ ಸಂಬಂಧವನ್ನು ಉತ್ತಮಗೊಳಿಸು ವುದು ಈಗ ಆಗಬೇಕಿರುವ ಕೆಲಸ. ಈ ಸೃಷ್ಟಿ ನಮಗೆ ಜನ್ಮ ಕೊಟ್ಟಿದೆ, ಈ ಭೂಮಿ ಇರುವುದ ಕ್ಕೊಂದು ಜಾಗ ಕಲ್ಪಿಸಿದೆ. ಅದರ ಜತೆಗೆ ನಮ್ಮ ಸಂಬಂಧ ಹೇಗಿರಬೇಕು ಎನ್ನುವುದು ಪ್ರಶ್ನೆ.
ಸಂಬಂಧವು ದೈಹಿಕ ಸ್ತರದಲ್ಲಿ ಮಾತ್ರ ಇದ್ದರೆ ನಾವು ಕೆಲವು ಸಂಗತಿಗಳನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತೇವೆ. ಅದು ಮಾನಸಿಕ ಸ್ತರದಲ್ಲಿ ಇದ್ದರೆ ಇನ್ನೊಂದಿಷ್ಟು ಸಂಗತಿ ಗಳನ್ನು ಅರಿಯುವುದು ಸಾಧ್ಯ. ಭಾವನಾತ್ಮಕ ಸ್ತರ ದಲ್ಲಿದ್ದರೆ ಮತ್ತೂಂದಷ್ಟು ಸಂಗತಿಗಳು. ಹೀಗೆ ಪಂಚ ಭೂತಗಳನ್ನು ಆಧರಿಸಿದ ಮೂಲಗಳಿಂದ ಸೃಷ್ಟಿಯ ಜತೆಗಿನ ಸಂಬಂಧವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲಾರೆವು. ನಾವು ಜನಿಸಿ ದಾಗ ಸಣ್ಣವರಿದ್ದೆವು, ಈಗ ದೇಹ ಬೆಳೆದಿದೆ ಅಂದರೆ, ದೇಹದಲ್ಲಿ ಎಷ್ಟೋ ಸಂಗತಿಗಳು ಬದಲಾಗಿವೆ. ಮನಸ್ಸು ಮತ್ತು ಭಾವನೆಗಳೂ ಹಾಗೆಯೇ ಬದಲಾಗುತ್ತಿರುತ್ತವೆ.
ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ಇದು – ಸೃಷ್ಟಿಯ ಜತೆಗಿನ ನಮ್ಮ ಸಂಬಂಧವನ್ನು ದೇಹ, ಮನಸ್ಸು ಮತ್ತು ಭಾವನೆಗಳ ಸ್ತರ ದಿಂದ ಅಸ್ತಿತ್ವದ ಸ್ತರಕ್ಕೆ ಎತ್ತರಿಸುವುದು. ಅದಕ್ಕೆ ಅಡ್ಡಿಯಾಗುತ್ತಿರುವುದು ಪಂಚೇಂದ್ರಿಯ ಗಳು ಅನುಭವಿಸಿ, ಗ್ರಹಿಸಿ ದಾಖಲಿಸಿಕೊಂಡಿ ರುವ ಅನುಭವದ ಮೊತ್ತ. ಆ ಭಾರವನ್ನು ಇಳಿಸಿ “ಖಾಲಿ ಹಾಳೆ’ಯಂತಾದರೆ ಆಗ ಸೃಷ್ಟಿಯ ಜತೆಗೆ ಹೊಸ ಸಂಬಂಧವನ್ನು ಅಲ್ಲಿ ಲೇಖೀಸಬಹುದು.
ನಮ್ಮ ಬದುಕಿನ ಹಾಳೆಯಲ್ಲಿ ಬಹಳಷ್ಟನ್ನು ಈಗಾಗಲೇ ಬರೆಯಲಾಗಿರುವುದು ನಮ್ಮ ದೊಡ್ಡ ಸಮಸ್ಯೆ. ಪುಟದಲ್ಲಿ ಸಾಕಷ್ಟು ಗೀಚಿ ಹಾಕಿದ್ದರೆ ಅಲ್ಲ ಹೊಸತು ಬರೆಯುವುದಕ್ಕೆ ಸ್ಥಳ ಇರುವುದಿಲ್ಲ ಅಥವಾ ಬರೆದದ್ದು ಕಾಣಿಸುವುದಿಲ್ಲ. ಸಿನೆಮಾ ಥಿಯೇಟರಿನಲ್ಲಿ ಪರದೆಯ ಮೇಲೆ ಒಂದು ಸಿನೆಮಾ ಪ್ರದರ್ಶನವಾಗಿ ಮುಗಿದ ಬಳಿಕ ಅದರ ಲವಲೇಶವೂ ಇರುವುದಿಲ್ಲ. ಬೆಳಕಿನ ಕಿರಣಗಳ ಬದಲು ಪೈಂಟ್ ಉಪಯೋಗಿ ಸುತ್ತಿದ್ದರೆ ಇನ್ನೊಂದು ಸಿನೆಮಾ ತೋರಿಸಲು ಅವಕಾಶವೇ ಇರುತ್ತಿರಲಿಲ್ಲ.
ಅಧ್ಯಾತ್ಮಿಕ ಹಾದಿ ಎಂದರೆ ಇದು – ಸೃಷ್ಟಿಯ ಜತೆಗೆ ಅಸ್ತಿತ್ವದ ಸ್ತರದ ಸಂಬಂಧವನ್ನು ಸಾಧಿಸಲು ಅಡ್ಡಿಯಾಗಿರುವ ಎಲ್ಲವನ್ನೂ ಕರಗಿಸಿಕೊಂಡು ಖಾಲಿ ಹಾಳೆಯಾಗುವುದು. ಅಧ್ಯಾತ್ಮಿಕ ಹಾದಿ ಎಂದರೆ ಜ್ಞಾನ ಸಂಪಾದನೆಯಲ್ಲ, ಖಾಲಿ ಹಾಳೆಯಾಗುವುದು.
ನಾವು ಅರ್ಥ ಮಾಡಿ ಕೊಳ್ಳಬೇಕಿರುವುದು, ಸೃಷ್ಟಿಯ ಜತೆಗೆ ಸಂಬಂಧ ಒಂದು ಆಯ್ಕೆಯಲ್ಲ. ಅದಕ್ಕಾಗಿ ನಾವು ಪ್ರಯತ್ನ ಪಡಬೇಕಾಗಿಲ್ಲ. ಅನಾಯಾಸ ವಾಗಿ ಒದಗಿರುವ ಅದನ್ನು ಸುಧಾರಿಸಿ ಕೊಳ್ಳುವುದಷ್ಟೇ ಆಗಬೇಕಿರುವ ಕೆಲಸ.
ಒಂದು ಮರವನ್ನು ನೋಡಿ, ನಾವೆಷ್ಟು ಸಣ್ಣವರು ಎಂಬುದು ಅರಿವಾಗುತ್ತದೆ. ವಿಶಾಲವಾದ ಆಕಾಶವನ್ನು ವೀಕ್ಷಿಸಿ, ನಾವೆಷ್ಟು ಕುಬjರು ಎಂಬುದು ತಿಳಿಯುತ್ತದೆ. ಆಕಾಶದ ಆಳದೊಳಕ್ಕೆ ದೃಷ್ಟಿ ಹಾಯಿಸಿ, ನಮ್ಮ ದೃಷ್ಟಿ ಎಷ್ಟು ಸೀಮಿತ ಎಂಬುದು ಅರ್ಥವಾಗುತ್ತದೆ. ಇವೆಲ್ಲವೂ ಪ್ರತೀ ಕ್ಷಣ ನಮ್ಮ ಅರಿವಿನಲ್ಲಿದ್ದರೆ ನಾವು ನಮ್ಮ ಸ್ವಸ್ವರೂಪ, ಸ್ವಸ್ಥಾನದಲ್ಲಿ ಇರುವುದು ಸಾಧ್ಯವಾಗುತ್ತದೆ. ಇದರರ್ಥ ನಮ್ಮನ್ನು ನಾವು ಕೀಳುಗಳೆಯಬೇಕು ಎಂದಲ್ಲ. ಇದು ಸೃಷ್ಟಿಯ ಎದುರು ವಿನಮ್ರರಾಗುವುದು. ಇದು ಸಾಧ್ಯವಾದರೆ ಅರ್ಥವತ್ತಾದ ಬದುಕನ್ನು ಮುನ್ನಡೆಸುವುದು ಸಾಧ್ಯವಾಗುತ್ತದೆ.
(ಸಾರ ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.