ಅಡೆತಡೆಗಳನ್ನು ಮೀರಿ ಮುನ್ನಡೆಯೋಣ


Team Udayavani, Jun 1, 2021, 6:30 AM IST

ಅಡೆತಡೆಗಳನ್ನು ಮೀರಿ ಮುನ್ನಡೆಯೋಣ

ಮಾನವ ಜೀವನ ಮಾತ್ರವಲ್ಲ ಈ ಸೃಷ್ಟಿಯಲ್ಲಿರುವ ಪ್ರತಿಯೊಂದೂ ಜೀವಿಯ ಜೀವನದಲ್ಲೂ ಅಡೆತಡೆ, ಸಮಸ್ಯೆ, ಸವಾಲುಗಳು ಸಹಜ. ಇವೆಲ್ಲ ವನ್ನು ಮೆಟ್ಟಿ ನಿಂತು ಮುಂದೆ ಸಾಗಿದಲ್ಲಿ ಮಾತ್ರವೇ ನಾವು ಜೀವನದ ಸ್ವಾರಸ್ಯವನ್ನು ಸವಿಯಲು ಸಾಧ್ಯ. ಜೀವನ ಎಂದರೆ ಹಾಗೆಯೇ ಕಡಲಲ್ಲಿ ಈಜಿದಂತೆ. ಹಾಗೆಂದು ಜೀವನ ಎಂಬ ಸಾಗರದಲ್ಲಿ ಈಜಲು ಮುಂದಾಗುವಾಗ ಒಂದಿಷ್ಟು ಯೋಚಿಸಿ, ಸಂದರ್ಭ, ಸಮಯಕ್ಕೆ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಿ ಕಡಲಿಗಿಳಿಯಬೇಕು. ಹಾಗಾದಲ್ಲಿ ಮಾತ್ರವೇ ನಮ್ಮ ಗುರಿ ತಲುಪಲು ಸಾಧ್ಯ.

ನಾವು ಯಾವುದೇ ಕೆಲಸಕ್ಕೆ ಮುಂದಡಿ ಇಡುವಾಗಲೂ ಒಂದಷ್ಟು ಅಡೆತಡೆಗಳು ಎದುರಾಗುತ್ತವೆ. ಸಣ್ಣಪುಟ್ಟ ಅಡೆತಡೆಗಳು ಎದುರಾದಾಗಲೂ ಹಿಂದೇಟು ಹಾಕು ತ್ತೇವೆ. ಆ ರೀತಿಯ ಅಡೆತಡೆಗಳನ್ನು ಸಂದ ಭೋìಚಿತವಾಗಿ ನಿವಾರಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ನಿಜಕ್ಕೂ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ಸಿನ ಜತೆಗೆ ಬದುಕಿನ ಅಡೆತಡೆಗಳನ್ನು ಮೀರಿ ಸಾಗಿದ ಆತ್ಮತೃಪ್ತಿ ಸದಾಕಾಲ ನೆಲೆಯೂರುತ್ತದೆ. ಅಷ್ಟು ಮಾತ್ರವಲ್ಲದೆ ಈ ಯಶಸ್ಸು ನಮ್ಮ ಮುಂದಿನ ಜೀವನಕ್ಕೆ, ನಮ್ಮ ಭವಿಷ್ಯದ ಪೀಳಿಗೆಗೂ ದಾರಿದೀಪವಾಗುತ್ತದೆ.

ಜೀವನದಲ್ಲಿ ಅಡೆತಡೆಗಳು ಇಲ್ಲವೆಂದಾದಲ್ಲಿ ಅದು ಮರುಭೂಮಿಯಂತೆ ಕೇವಲ ಬರಡು. ನಾವು ನಮ್ಮ ಜೀವನವನ್ನು ಬರಡಾಗಿಸದೆ ಹಸನಾಗಿಸಬೇಕು. ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾದಾಗ ಅಡೆತಡೆ, ಸವಾಲುಗಳೆಲ್ಲವೂ ಸಾಮಾನ್ಯ. ಇವನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯ ಬೇಕು. ಹಾಗೊಂದು ವೇಳೆ ಇಂಥ ಸಂದರ್ಭದಲ್ಲಿ ನೀವು ಸಂಕಷ್ಟದಲ್ಲಿ ಸಿಲುಕಿದಿರಿ ಎಂದಾದರೆ ಯಾರಾದರೂ ನಿಮಗೆ ಸಹಾಯಹಸ್ತವನ್ನು ಚಾಚಿಯಾರು. ಆ ಸಹಾಯವನ್ನು ಪಡೆದು ಕೊಳ್ಳಲು ಯಾವುದೇ ಹಿಂಜರಿಕೆ, ಕೀಳರಿಮೆ ಬೇಡ. ಪ್ರಕೃತಿ ಕೂಡ ಅಷ್ಟೆ. ಅಡೆತಡೆಗಳನ್ನು ನಿವಾರಿಸಿಕೊಂಡು ಸಾಗುವ ಪಾಠವನ್ನು ಸದಾ ನಮಗೆ ಕಲಿಸುತ್ತಿರುತ್ತದೆ. ಮರದ ಕೊಂಬೆಯನ್ನು ಸ್ವಾರ್ಥಕ್ಕಾಗಿ ಮನುಜ ಅನೇಕ ಬಾರಿ ಕಡಿದರೂ ಆ ಮರ ಅಂಜದೆ ಮತ್ತೆ ಮತ್ತೆ ಚಿಗುರೊಡೆದು ತನ್ನ ಸ್ವಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುತ್ತದೆಯಲ್ಲವೆ? ಒಂದು ಬೀಜ ಮಣ್ಣಿಗೆ ಬಿದ್ದರೆ ಆರೈಕೆ ಮಾಡದಿದ್ದರೂ ತಾನಾಗಿ ಸ್ವಸಾಮರ್ಥ್ಯದಿಂದ, ಆತ್ಮನಿರ್ಭರತೆಯಿಂದ ಮೇಲೆದ್ದು ಬರುತ್ತದೆ. ಬಾಳ ಹಾದಿಯಲ್ಲಿ ಅನಿವಾರ್ಯವಾಗಿ ತೊಂದರೆ ಎದುರಾದರೆ ಎದೆಗುಂದದೆ ಪುಟಿ ದೇಳಬೇಕು. ಹೊಸ ಭರವಸೆಯೊಂದಿಗೆ ಮೇಲೇರಬೇಕು.
ವಿದ್ಯಾರ್ಥಿ ಜೀವನದಲ್ಲಂತೂ “ಆಗದು ಎಂದು ಕೈ ಕಟ್ಟಿ ಕುಳಿತರೆ’ ಯಾವ ಸಾಧ ನೆಯೂ ಸಾಧ್ಯವಾಗದು. ಯಾವುದೇ ಕಲಿಕೆಯಲ್ಲಿ ತೊಡಗುವಾಗ ಮೊದಲು ಕ್ಲಿಷ್ಟವೆನಿಸಬಹುದು. ಪರೀಕ್ಷೆಗಳನ್ನು ಎದುರಿಸುವಾಗ ಕಷ್ಟವೆನಿಸಬಹುದು. ಸೋಲು ಕಾಡ ಬಹುದು. ಆದರೆ “ನನ್ನಿಂದಾಗದು’ ಎಂದು ಹಿಂದೇಟು ಹಾಕಬಾರದು. ಸತತ ಪ್ರಯತ್ನ, ಪೂರ್ವಯೋಜಿತ ಮತ್ತು ಯೋಚಿತ ಕಲಿಕೆಯಿಂದ ಯಶದ ಗರಿಯನ್ನು ಮುಡಿಗೇರಿಸಿಕೊಳ್ಳಲು ಸಾಧ್ಯ. ಪರೀಕ್ಷೆಯ ಅಂಕಗಳಲ್ಲಿ ಹಿನ್ನೆಡೆ ಅನುಭವಿಸಿದರೂ ಪರೀಕ್ಷಾ ಅಂಕಗಳಾಚೆಗೆ ಜೀವನದಲ್ಲಿ ಯಶಸ್ವಿಯಾದವರ ಕಥೆಗಳನ್ನು ತಿಳಿದು ಆ ನಿಟ್ಟಿನಲ್ಲಿ ಜೀವನದ ಯಾವುದಾದರೂ ರಂಗದಲ್ಲಿ ಯಶಸ್ವಿಯಾಗುವತ್ತ ಛಲದಂಕ ಮಲ್ಲನಂತೆ ಮುಂದಡಿ ಇಟ್ಟು ಗುರಿ ತಲುಪಬೇಕು. ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯುವತ್ತ ಚಿತ್ತ ಬೆಳೆಸಬೇಕಾಗಿದೆ. “ತಮಸೋಮಾ ಜ್ಯೋತಿರ್ಗಮಯ’ ಎಂಬಂತೆ ಬದುಕಿನ ಕತ್ತಲೆಯ ದಿನಗಳನ್ನು ಬೆಳಕಿನ ದಿನಗಳತ್ತ ಕೊಂಡೊಯ್ಯುವಂತಾಗಬೇಕಿದೆ.

ಹೊಸತನವೆ ಬಾಳು;
ಹಳಸಿಕೆಯಲ್ಲ ಸಾವು ಬಿಡು
ರಸವು ನವನವತೆಯಿಂದನು
ದಿನವು ಹೊಮ್ಮಿ|
ಹಸನೊಂದು ನುಡಿಯಲ್ಲಿ
ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್‌ ಚೆಲುವು – ಮಂಕುತಿಮ್ಮ ಎಂಬ ಡಿ.ವಿ.ಜಿ.ಯವರ ಕಗ್ಗದ ಸೊಲ್ಲುಗಳಂತೆ ನಮ್ಮ ಬದುಕಿನಲ್ಲಿ ನಿರಂತರ ಹೊಸತನವನ್ನು ಕಾಣುತ್ತಿರಬೇಕು. ಹಳತನ್ನು ಸಾವೆಂದು ತಿಳಿದು ದೂರ ತಳ್ಳಬೇಕು. ಅನುದಿನವೂ ಹೊಸತನದಿಂದ ರಸ ಹೊಮ್ಮುತ್ತಿರಬೇಕು. ನಾವಾಡುವ ನುಡಿಯಲ್ಲಿ ಹೊಸತನವಿರಬೇಕು. ನಡೆಯಲ್ಲಿ, ನೋಟದಲ್ಲಿ ಶ್ರೇಷ್ಠತೆ ಹೊಮ್ಮುತ್ತಿರಬೇಕು.ಆಗಲೇ ನಮ್ಮ ಬಾಳು ಸುಂದರವಾಗುತ್ತದೆ ಎಂಬ ಕಗ್ಗದ ತಾತ್ಪರ್ಯ ನಮಗೆ ಸ್ಫೂರ್ತಿಯಾಗಲಿ, ಬದುಕು ಅಡೆತಡೆಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು ಎಂಬ ಸಂಕಲ್ಪ ನಮ್ಮದಾಗಲಿ.
- ಭಾರತಿ ಎ., ಕೊಪ್ಪ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.