ಗ್ರಂಥಾಲಯದ ಕನಸು ಸಾಕಾರ : ಕುತ್ಯಾರು ಸಮೀಪ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ವಾಚನಾಲಯ
Team Udayavani, Feb 22, 2022, 3:39 PM IST
ಬೆಳ್ತಂಗಡಿ : ಗ್ರಂಥಾಲಯವು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಉನ್ನತ ಕಾರ್ಯ ಮಾಡುತ್ತದೆ. ಹಲವು ದಶಕಗಳಿಂದ ಓದುಗರನ್ನು ಸೆಳೆಯುತ್ತಿದ್ದ ತಾಲೂಕು ಸಾರ್ವಜನಿಕ ಗ್ರಂಥಾಲಯ ಕಟ್ಟಡ ಅಪಾಯಕಾರಿ ಹಂತ ತಲುಪಿದ್ದರಿಂದ ಇದೀಗ ಬೆಳ್ತಂಗಡಿ ಜೂನಿಯರ್ ಕಾಲೇಜು ಸಮೀಪ 9,000 ಚದರಡಿಯಲ್ಲಿ 1 ಕೋ.ರೂ. ವೆಚ್ಚದಲ್ಲಿ ಆಧುನಿಕ ಶೈಲಿಯಲ್ಲಿ ನವೀನ ವಿನ್ಯಾಸವುಳ್ಳ ಗ್ರಂಥಾಲಯವೊಂದು ತಲೆ ಯೆತ್ತಲಿದೆ.
ಪ್ರಸಕ್ತ ಬೆಳ್ತಂಗಡಿ ನಗರದಲ್ಲಿರುವ ಸುಮಾರು 50 ವರ್ಷ ಹಳೆಯ ಕಟ್ಟಡ ದಲ್ಲಿ ಬಿರುಕುಬಿಟ್ಟ ಛಾವಣಿಯಲ್ಲೇ ಗ್ರಂಥಾಲಯ ಕಾರ್ಯಾಚರಿಸುತ್ತಿದೆ. ಸುಮಾರು 40 ಸಾವಿರಕ್ಕೂ ಅಧಿಕ ಪುಸ್ತಗಳ ಸಂರಕ್ಷಣೆ ಸವಾಲಾಗಿದೆ. ಇದೆಲ್ಲವನ್ನು ಮನಗಂಡು ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ 1 ಕೋ.ರೂ. ವಿಶೇಷ ಅನುದಾನದಡಿ ಕುತ್ಯಾರು ಸಮೀಪ ಸರಕಾರಿ ಪ.ಪೂ. ಕಾಲೇಜು ಸಮೀಪ 17 ಸೆಂಟ್ಸ್ ಸ್ಥಳವಕಾಶದಲ್ಲಿ ಎರಡು ಅಂತಸ್ತಿನ ಆಧುನಿಕ ಶೈಲಿಯ ಗ್ರಂಥಾಲಯ ರಚನೆಗೆ ನೀಲನಕಾಶೆ ಸಿದ್ಧಗೊಂಡಿದೆ.
9,000 ಚದರಡಿ ವಿಸ್ತೀರ್ಣ
ಒಟ್ಟು 9,000 ಚದರಡಿ ಸ್ಥಳದಲ್ಲಿ 3,988 ಚದರಡಿ ಕಟ್ಟಡದ ವಿನ್ಯಾಸವಿರಲಿದೆ. 2,025 ಚದರಡಿ ಕೆಳ ಅಂತಸ್ತು, 1,963 ಚದರಡಿ ಮೊದಲ ಅಂತಸ್ತು ಇರಲಿದೆ. ಕೆಳ ಅಂತಸ್ತಿನಲ್ಲಿ ಪುರುಷ, ಮಹಿಳೆ ಸಹಿತ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಗಾರ್ಡನಿಂಗ್, ಮಧ್ಯ ಓದಲು ಅನುಕೂಲವುಳ್ಳ ತ್ರಿಕೋನ ಆಕೃತಿಯ ಮಧ್ಯ ವೃತ್ತಾಕಾರದ ರಚನೆಯಲ್ಲಿ ಗಾಳಿಬೆಳಕು ಸದಾಕಾಲ ಇರುವಂತೆ ವಿನ್ಯಾಸ ರಚಿಸಲಾಗಿದೆ. ಗ್ರಂಥಾಲಯದಲ್ಲಿ ಗಾಳಿ-ಬೆಳಕು ಸಮ ರ್ಪಕವಾಗಿರಬೇಕು, ಪ್ರಶಾಂತ ವಾತಾ ವರಣದಿಂದ ಕೂಡಿರಬೇಕು. ಇದಕ್ಕಾಗಿ ಪೇಟೆಯ ಸಮೀಪ, ಓದುಗರಿಗೆ ಅನು ಕೂಲಕರ ವಾತಾವರಣದಲ್ಲಿ ಗ್ರಂಥಾ ಲಯ ನಿರ್ಮಿ ಸುವ ಉದ್ದೇಶವಿದೆ. ಹೀಗಾಗಿ ವಾಕಿಂಗ್ ಪ್ರಿಯರಿಗೆ ಅನು ಕೂಲ ವಾಗುವಂತೆ ಗ್ರಂಥಾಲಯ ಸುತ್ತ ವಾಕಿಂಗ್ ಟ್ರಾÂಕ್, 8ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಸಣ್ಣ ಪ್ಲೇ ಗ್ರೌಂಡ್ ಹೊಂದಲಿದೆ.
ಇದನ್ನೂ ಓದಿ : ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರಂತೆ ಬಿಎಸ್ ಯಡಿಯೂರಪ್ಪ!
350 ಆಸನ, ಡಿಜಿಟಲ್ ಗ್ರಂಥಾಲಯ
ನೂತನ ಗ್ರಂಥಾಲಯದಲ್ಲಿ 1 ಲಕ್ಷ ಪುಸ್ತಕ ಹೊಂದಿಸುವಂತಹ ವಿನ್ಯಾಸ ಮಾಡ ಲಾಗು ತ್ತದೆ. ಒಂದು ವೇಳೆ ಪುಸ್ತಕಗಳು ಇಲ್ಲದಿದ್ದಲ್ಲಿ ಆನ್‌ಲೈನ್‌ನಲ್ಲಿ ಪಡೆಯುವಂತೆ 25 ಕಂಪ್ಯೂಟರ್‌ಗಳಿರುವ ಡಿಜಿಟಲ್ ಗ್ರಂಥಾ ಲಯ ಸ್ಥಾಪನೆಗಾಗಿಯೂ ಯೋಜನೆ ರೂಪಿಸಲಾಗಿದೆ. ದಿನಪತ್ರಿಕೆ, ವಾರಪತ್ರಿಕೆ ಓದುಗರಿಗಾಗಿ ಕೆಳ ಅಂತಸ್ತಿನಲ್ಲಿ 100 ಆಸನ ವ್ಯವಸ್ಥೆ ಸೇರಿ 2 ಅಂತಸ್ತಿನಲ್ಲಿ 350 ಮಂದಿ ಕುಳಿತುಕೊಳ್ಳುವ, 25 ವರ್ಷಗಳ ದೂರದೃಷ್ಟಿಯುಳ್ಳ ನವೀನ ವಿನ್ಯಾಸದಡಿ ಗ್ರಂಥಾಲಯ ಬಳಕೆಗೆ ಯೋಗ್ಯವಾಗಲಿದೆ.
ಏಕರೂಪದ ಬೆಳಕಿನ ವ್ಯವಸ್ಥೆ
ವಿದ್ಯುತ್ ಇಲ್ಲದಿದ್ದರೂ ಒಂದೇ ರೀತಿ ಎಲ್ಲೆಡೆ ಬೆಳಕು ಬೀಳುವಂತೆ ಮಣ್ಣಿನ ಇಟ್ಟಿಗೆಗಳಿಂದ ಎರಡನೇ ಅಂತಸ್ತಿನ ಗೋಡೆ ರಚನೆಯಾಗಲಿದೆ. ಮೇಲ್ಭಾಗದಲ್ಲಿ ಗ್ಲಾಸ್ ಮಾದರಿ ಮುಚ್ಚಳಿಕೆ ಇರಲಿದ್ದು (uniform intensity of light) ಎಲ್ಲೆಡೆ ಏಕರೂಪದ ಬೆಳಕು ಹರಡುವಂತೆ ವಿನ್ಯಾಸವಿರಲಿದೆ. ಹೊರಬದಿ ತ್ರಿಕೋನ ಆಕೃತಿಯುಳ್ಳ ಮೂರು ಪಾರ್ಶ್ವದಲ್ಲಿ ಗಾರ್ಡನ್ ವ್ಯವಸ್ಥೆ ಇರಲಿದೆ. ತಲಾ 4 ಆಸನದಂತೆ ಹೊರಭಾಗದಲ್ಲೂ ಕುಳಿತು ಓದುವ ವಾತಾವರಣ ಗ್ರಂಥಾಲಯದಲ್ಲಿದೆ. ಜಿಲ್ಲೆಯಲ್ಲೇ ವಿಶೇಷ ಗ್ರಂಥಾಲಯವೊಂದು ಪುಸ್ತಕ ಪ್ರಿಯರಿಗೆ ಲೋಕಾರ್ಪಣೆಗೊಳ್ಳಲಿದೆ.
ಉತ್ತಮ ವಾತಾವರಣ
ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಅತ್ಯುತ್ತಮ ವಿನ್ಯಾಸವುಳ್ಳ ಗ್ರಂಥಾಲಯ ರಚನೆಯಾಗಲಿದೆ. 9,000 ಚದರಡಿಯಲ್ಲಿ 300 ಚದರಡಿ ಪ್ರಕೃತಿ ಮಡಿಲಲ್ಲಿ ಓದುವಂಥ ವಾತಾವರಣ ನಿರ್ಮಿಸಲಾಗುವುದು. 2 ವಾರಗಳ ಒಳಗಾಗಿ ಶಿಲಾನ್ಯಾಸ ಕಾಮಗಾರಿ ಹಮ್ಮಿಕೊಳ್ಳಲಾಗುವುದು.
-ಹರೀಶ್ ಪೂಂಜ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.