ಬದುಕೆಂಬ ಕುಲುಮೆಯಲ್ಲಿ..!


Team Udayavani, Feb 14, 2021, 5:50 AM IST

ಬದುಕೆಂಬ ಕುಲುಮೆಯಲ್ಲಿ..!

ಫೋಟೋ ಸ್ಟೋರಿ- ನಮ್ಮ ಛಾಯಾಚಿತ್ರಗ್ರಾಹಕರ ಚಿತ್ರಕಾವ್ಯ. ಒಂದು ವಿಷಯ ವಸ್ತುವನ್ನು ಆಧರಿಸಿ ಅದನ್ನು ತಮ್ಮ ಛಾಯಾಚಿತ್ರಗಳ ಮೂಲಕವೇ ವಿಸ್ತರಿಸುತ್ತಾ ಮತ್ತೂಂದು ತುದಿಗೆ ಮುಟ್ಟಿಸಿ ಒಂದು ಬೆರಗನ್ನು ಸೃಷ್ಟಿಸುವುದು ಈ ಪರಿಕಲ್ಪನೆಯ ಉದ್ದೇಶ. ಇಂದಿನ ಸ್ಟೋರಿ ಮೊದಲನೆಯದು. ನಮ್ಮ ಹಿರಿಯ ಸುದ್ದಿ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್‌ ಕಮ್ಮಾರನ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಬದುಕೇ ದೊಡ್ಡದು ಎನ್ನುತ್ತದೆ ನೂರಾರು ಕಿ.ಮೀ. ದೂರದಿಂದ ಬಂದು ಆದಿ ಉಡುಪಿಯಲ್ಲಿ ಬೀಡು ಬಿಟ್ಟು ಶ್ರಮಪಡುತ್ತಿರುವ ಪಂಜಾಬ್‌ನ ಸಿಂಗ್‌ ಕುಟುಂಬ. ಗುಡಿ ಕೈಗಾರಿಕೆಗಳೆಲ್ಲ ಬದಿಗೆ ಸರಿದು ಯಂತ್ರಗಳಿಂದ ಸಾಮೂಹಿಕ ಉತ್ಪಾದನೆಯ ಕಾಲವಿದು. ಕಮ್ಮಾರ ಎಂಬ ಕುಲಕಸುಬೇ ಕಾಣೆಯಾಗಿರುವ ಸಂದರ್ಭದಲ್ಲಿ ಅದನ್ನು ನೆನಪಿಸುತ್ತಿದೆ ಈ ಸಿಂಗ್‌ ಕುಟುಂಬ. ವಾಹನದ ಕಬ್ಬಿಣದ ಬಿಡಿಭಾಗಗಳನ್ನು ಕೆಂಪಗೆ ಕಾಯಿಸಿ, ಹೊಡೆದು, ಬಡಿದು ಕತ್ತಿ, ಕೊಡಲಿಗಳನ್ನು ರೂಪಿಸುವುದು ಇವರ ಕಾಯಕ. ಅದೇ ಅವರ ಬದುಕಿನ ನಿರ್ವಾಹಕ. ಹೆಲಿಪ್ಯಾಡ್‌ ಬಳಿ ಎರಡು ಕುಟುಂಬಗಳಿವೆ. ಕಾಯಕವೇ ಕೈಲಾಸ ಎಂಬುದು ಇವರ ಧರ್ಮ. ಸ್ಪ್ರಿಂಗ್‌ಪ್ಲೇಟ್‌ಗಳನ್ನು ಬಳಸಿ ಕತ್ತಿ, ಕೊಡಲಿ ಮತ್ತು ಮಚ್ಚುಗಳನ್ನು ತಯಾರಿಸಿದರೆ ಅವು ಸುದೀರ್ಘ‌ಕಾಲ ಹರಿತವಾಗಿಯೇ ಉಳಿಯುತ್ತವೆ, ತುಕ್ಕು ಹಿಡಿಯುವುದಿಲ್ಲ ಎಂಬ ಮಾತಿದೆ. ಪತ್ನಿ, ಮಕ್ಕಳು ಹೆಚ್ಚು ತೂಕದ ಸುತ್ತಿಗೆಯನ್ನು ಎತ್ತಿ ಕಬ್ಬಿಣವನ್ನು ತಮ್ಮಿಷ್ಟದ ಆಕಾರಕ್ಕೆ ತರುವ ಸನ್ನಿವೇಶ ಬೆರಗುಗೊಳಿಸುವಂಥದ್ದು. ಸುಮಾರು ಎರಡು ನೂರರಿಂದ ಒಂದು ಸಾವಿರ ರೂ. ವರೆಗೂ ಈ ಆಯುಧಗಳಿಗೆ ಬೆಲೆ. ಈ ಊರಿಗೆ ಬಂದು ಎರಡು ತಿಂಗಳಾದವು. ಅತ್ಯಧಿಕ ಲಾಭವಿಲ್ಲ. ಆದರೆ ಬದುಕಲು ಅಡ್ಡಿಯಿಲ್ಲ ಎನ್ನುತ್ತಾರೆ ಹರ್‌ಪ್ರೀತ್‌ ಸಿಂಗ್‌.

ಬದುಕೆಂಬ ಕುಲುಮೆಯಲ್ಲಿ ಅರಳುವ ಕಲಾಕೃತಿಗಳಿಗೆ ಲೆಕ್ಕವೂ ಇಲ್ಲ , ಸಾಧ್ಯವೂ ಇಲ್ಲ!

1.ಕಬ್ಬಿಣ ಹದ ಮಾಡುವ ಬಗೆ. ಹೀಗೇ ತಾನೇ ಸಂದರ್ಭ- ಸನ್ನಿವೇಶಗಳೂ ಬದುಕನ್ನು ಹದ ಮಾಡುವ ಬಗೆಯೂ ಇದೇ.

2.ಇದು ಬೆರಗಲ್ಲ ; ಹಾಗೆಂದು ಆತಂಕವೂ ಅಲ್ಲ. ಕೌತುಕದ ಒಂದು ನೋಟ ಎನ್ನಬಹುದು. ಆರ್ಥಿಕವಾಗಿ ಸಬಲರಲ್ಲದ ಎಲ್ಲ ಸಮುದಾಯಗಳಿಗೂ ಅಭಿವೃದ್ಧಿ ಎಂಬುದು ಇಂಥದ್ದೇ ಒಂದು ಕೌತುಕ.

3.ಈ ಹೊತ್ತಿನ ಕಾವಿನಲ್ಲಿ ಬದುಕನ್ನು ಆರಳಿಸಿಕೊಳ್ಳುವ ತವಕ. ಅದೇ ಆಧುನಿಕ ಭಾಷೆಯ ಟ್ರೆಂಡಿಂಗ್‌ !

4. ಒಂದು ಹದಕ್ಕೆ ಒಂದು ರೂಪ, ಎರಡನೇ ಹದಕ್ಕೆ ಬೇರೊಂದು ರೂಪ, ಬದುಕು ಸಹಸ್ರ ರೂಪ !

5. ನಾವು ನಿಮ್ಮ ಆಳುಗಳು, ನೀವು ಹೇಳಿದ್ದನ್ನು ಮಾಡು ತ್ತೇವೆ ಎನ್ನುತ್ತಿವೆ ಬಿಕರಿಗೆ ಮುನ್ನ ಅಯುಧಗಳು !

6. ಎಲ್ಲ ತಯಾರಿ, ಕೊಳ್ಳೋಕೆ ಬನ್ರೀ ಎಂದು ಕರೆಯುವ ಮಧ್ಯೆ ಚಿಕ್ಕದೊಂದು ಕಮರ್ಶಿಯಲ್‌ ಬ್ರೇಕ್‌ !

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.