ಕರಾವಳಿ ಆರ್ಥಿಕತೆಗೆ ಜೀವ; ಮತ್ತೆ ವಾಣಿಜ್ಯ ಚಟುವಟಿಕೆ ಶುರು


Team Udayavani, May 5, 2020, 6:25 AM IST

ಕರಾವಳಿ ಆರ್ಥಿಕತೆಗೆ ಜೀವ; ಮತ್ತೆ ವಾಣಿಜ್ಯ ಚಟುವಟಿಕೆ ಶುರು

ಮಂಗಳೂರು: ಲಾಕ್‌ಡೌನ್‌ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದೆಲ್ಲೆಡೆ ವಾಹನ ಸಂಚಾರ ಸಾಮಾನ್ಯ ದಿನಗಳಂತಿತ್ತು.

ಉಡುಪಿಯಲ್ಲಿ ಎಸಿ ಮಳಿಗೆಗೂ ಅವಕಾಶ ವ್ಯವಹಾರ ಸಮಯವೂ ವಿಸ್ತರಣೆ
ಉಡುಪಿ: ಉಡುಪಿ ಜಿಲ್ಲೆಯ ವ್ಯವಹಾರ ಚಟುವಟಿಕೆಗಳ ಸಮಯವನ್ನು ಮಂಗಳವಾರದಿಂದ ವಿಸ್ತರಿಸಲಾಗಿದೆ.ಸೋಮವಾರದಿಂದ ಅಂಗಡಿ ವ್ಯವಹಾರ ಮತ್ತು ಮದ್ಯ ಮಾರಾಟವನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಸ್ತರಿಸಲಾಗಿತ್ತು. ಆದರೆ ವಸ್ತುಸ್ಥಿತಿ ಪರಿಶೀಲಿಸಿದಾಗ ಜನದಟ್ಟಣೆ ಹೆಚ್ಚಾಗಿ ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುವುದನ್ನು ಗಮನಿಸಿ ಸಮಯ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಆದ್ದರಿಂದ ಈ ಹಿಂದಿನ ಸಮಯ ವನ್ನು ಪರಿಷ್ಕರಿಸಿ ಬೆಳಗ್ಗೆ 7ರಿಂದ ರಾತ್ರಿ 7 ಗಂಟೆ ವರೆಗೆ ಮತ್ತು ಮದ್ಯ ಮಾರಾಟಕ್ಕೆ ಸರಕಾರದ ಆದೇಶದಂತೆ ಬೆಳಗ್ಗೆ 9ರಿಂದ ರಾತ್ರಿ 7 ಗಂಟೆ ವರೆಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 7ರ ಬಳಿಕ ಬೆಳಗ್ಗೆ 7 ಗಂಟೆ ವರೆಗೆ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ವಿರುವುದಿಲ್ಲ. ಎಲ್ಲ ಸಿಬಂದಿ/ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿ ಯಿಂದ ಎಲ್ಲ ಅಂಗಡಿಗಳ ಮುಂದೆ ಆರು ಅಡಿ ಅಂತರದಲ್ಲಿ ಮಾರ್ಕ್‌ ಹಾಕಿರಬೇಕು ಮತ್ತು ಸರಕಾರದ ಎಲ್ಲ ನಿರ್ದೇಶನಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಎ.ಸಿ. ಮಳಿಗೆಗಳಿಗೆ ಅವಕಾಶ
ಜತೆಗೆ ಎಸಿ, ಸೆಂಟ್ರಲ್‌ ಎಸಿ, ಸಿಂಗಲ್‌ ಬ್ರ್ಯಾಂಡ್‌, ಮಲ್ಟಿ ಬ್ರ್ಯಾಂಡ್‌ ಅಂಗಡಿ ಗಳಿಗೂ ನಿಬಂಧನೆಗಳನ್ನು ವಿಧಿಸಿ (ಎಸಿ ಬಳಸದೆ) ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಈ ಮೊದಲು ಸಿನೆಮಾ ಹಾಲ್‌ಗ‌ಳು, ಮಲ್ಟಿಪ್ಲೆಕ್ಸ್‌ ಶಾಪಿಂಗ್‌ ಮಾಲ್‌, ಎಸಿ, ಸೆಂಟ್ರಲ್‌ ಎಸಿ, ಸಿಂಗಲ್‌ ಬ್ರ್ಯಾಂಡ್‌, ಮಲ್ಟಿ ಬ್ರ್ಯಾಂಡ್‌, ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಮುಂತಾದವು ಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳಿಗೆ ಅನುಮತಿ ನೀಡಲಾಗಿತ್ತು ಎಂದು ಪ್ರಕಟನೆ ತಿಳಿಸಿದೆ.

ಸಚಿವರ ಜತೆ ಚರ್ಚಿಸಿ ನಿರ್ಧಾರ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಸಚಿವರ ಸಭೆಯಲ್ಲಿ ಪಾಲ್ಗೊಂಡ ಶಾಸಕ ಕೆ. ರಘುಪತಿ ಭಟ್‌ ಅವರು ಸುದ್ದಿಗಾರರ ಜತೆ ಮಾತನಾಡಿ, ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ವ್ಯವಹಾರದ ಸಮಯವನ್ನು ರಾತ್ರಿ 7 ಗಂಟೆ ವರೆಗೆ ವಿಸ್ತರಿಸಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಂತೆ ಉಡುಪಿ ಜಿಲ್ಲೆ  ಯಲ್ಲಿಯೂ ರಾತ್ರಿ 7 ಗಂಟೆ ವರೆಗೆ ಅಂಗಡಿ, ಮಳಿಗೆಗಳನ್ನು ತೆರೆಯಲು ಶಾಸಕರೆಲ್ಲರೂ ಸೇರಿ ನಿರ್ಧರಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಮಾತ್ರ ಮಧ್ಯಾಹ್ನ 1 ಗಂಟೆ ವರೆಗೆ ಚಟು ವಟಿಕೆಗಳನ್ನು ನಡೆಸುವುದು ಅಷ್ಟು ಸಮಂಜಸವಾಗುವುದಿಲ್ಲ. ಸೋಮವಾರ ಇದರ ಅನುಭವವಾಯಿತು. ಆದ್ದರಿಂದ ನಾವೈದೂ ಶಾಸಕರು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡಿದ್ದೇವೆ. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಸಾಮಾಜಿಕ ಅಂತರವನ್ನು ಮಾತ್ರ ಕಾಪಾಡಿ ಕೊಳ್ಳಬೇಕು ಎಂದರು.

ಶೇ. 70ರಷ್ಟು ವ್ಯವಹಾರ ಆರಂಭ
ರಾಜ್ಯ ಸರಕಾರ ಹಸುರು ವಲಯ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದ ರಿಂದಾಗಿ ಉಡುಪಿ ಜಿಲ್ಲೆಯಲ್ಲಿ ವಾಣಿಜ್ಯ ಚಟು ವಟಿಕೆಗಳು ಶೇ. 70ರಷ್ಟು ಆರಂಭಗೊಂಡಿವೆ.ಸೋಮವಾರ ಇದೇ ಮೊದಲ ಬಾರಿ ಮಧ್ಯಾಹ್ನ 1 ಗಂಟೆ ವರೆಗೆ ಅಂಗಡಿಗಳನ್ನು ತೆರೆದ ಕಾರಣ ಒಮ್ಮೆಲೇ ರಸ್ತೆಯಲ್ಲಿ ವಾಹನ ದಟ್ಟಣೆ, ಅಂಗಡಿಗಳ ಮುಂದೆ ಸರತಿ ಸಾಲು ಗಳು ಕಂಡುಬಂದವು. ಮದ್ಯದಂಗಡಿಗಳ ಮುಂದಂತೂ ಭಾರೀ ಉದ್ದದ ಸರತಿ ಸಾಲು ಕಂಡುಬಂದವು.

ಆದರೆ ನಗರದ ಬಹುತೇಕ ಹೊಟೇಲುಗಳು ಮಾತ್ರ ತೆರೆದಿರಲಿಲ್ಲ. ಮಂಗಳವಾರದಿಂದ ರಾತ್ರಿ 7 ಗಂಟೆವರೆಗೆ ಹೊಟೇಲುಗಳನ್ನು ತೆರೆದಿರಿಸಲು ಅವಕಾಶ ಸಿಕ್ಕಿದ ಕಾರಣ ಹೊಟೇಲುಗಳು ವ್ಯವಹಾರ ನಡೆಸುವ ಸಾಧ್ಯತೆ ಇದೆ.ಚಿನ್ನದ ಅಂಗಡಿ, ಬಟ್ಟೆಬರೆಗಳು, ಚಪ್ಪಲಿ ಅಂಗಡಿಗಳು ತೆರೆದುಕೊಂಡಿತ್ತಾದರೂ ವ್ಯಾಪಾರ ಕಡಿಮೆಯಿತ್ತು. ನಿಗದಿತ ಅವಧಿಯ ವ್ಯಾಪಾರವಾದ್ದರಿಂದ ಜನರು ಅಗತ್ಯ ವಸ್ತುಗಳತ್ತಲೇ ಧಾವಿಸುತ್ತಿದ್ದರು. ಕಾರುಗಳು, ರಿಕ್ಷಾ, ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಬಸ್‌ಗಳ ಸಂಚಾರ, ಮಾಲ್‌ಗ‌ಳು, ಸೆಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು, ಹೊಟೇಲ್‌ಗ‌ಳು ಬಂದ್‌ ಆಗಿದ್ದವು.

ಪಾಲಿಸಬೇಕಾದ ನಿಯಮಗಳು
-ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು, ಸಿಂಗಲ್‌ ಬ್ರ್ಯಾಂಡ್‌, ಮಲ್ಟಿ ಬ್ರ್ಯಾಂಡ್‌ ಸೇರಿದಂತೆ ಇಂತಹ ಮಳಿಗೆಗಳಲ್ಲಿ ಎಲ್ಲ ಮಹಡಿಗಳಲ್ಲಿ ಸೇರಿ ಒಟ್ಟು 25 ಜನ ಸಿಬಂದಿಗಳು ಹಾಗೂ 25 ಜನ ಗ್ರಾಹಕರು ಹಾಗೂ ಮಲ್ಟಿ ಬ್ರ್ಯಾಂಡ್ ಎಲೆಕ್ಟ್ರಾನಿಕ್ಸ್‌ ಮಳಿಗೆಗಳಲ್ಲಿ
(ಹರ್ಷ, ಪೈ ಸೇಲ್ಸ್‌ ಮೊದಲಾದ) ಒಟ್ಟು 10 ಜನ ಸಿಬಂದಿ ಹಾಗೂ 10 ಜನ ಗ್ರಾಹಕರಿಗೆ ಅವಕಾಶ ನೀಡಲಾಗಿದೆ.
-ಮಳಿಗೆಗಳಲ್ಲಿ ಕಡ್ಡಾಯವಾಗಿ ಹವಾನಿಯಂತ್ರಕಗಳನ್ನು (ಎ.ಸಿ.) ಬಳಸುವಂತಿಲ್ಲ.
– ಮಾಸ್ಕ್, ಗ್ಲೌಸ್‌ ಮತ್ತು ಸ್ಯಾನಿಟೈಸರ್‌ಗಳನ್ನು ಸಿಬಂದಿ ಕಡ್ಡಾಯವಾಗಿ ಬಳಸಬೇಕು. ಗ್ರಾಹಕರಿಗೆ ಮಾಸ್ಕ್ ಕಡ್ಡಾಯ.
– ಪ್ರತಿ ದಿನ ವ್ಯವಹಾರ ಪ್ರಾರಂಭಿಸುವ ಮೊದಲು ಮತ್ತು ಮುಕ್ತಾಯದ ಅನಂತರ ಶಾಪ್ ‌ಗಳನ್ನು ಸ್ಯಾನಿಟೈಸ್‌ ಮಾಡಬೇಕು.
– 60 ವರ್ಷಕ್ಕಿಂತ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು ಮಳಿಗೆಗಳಿಗೆ ಬರುವುದನ್ನು ನಿರ್ಬಂಧಿಸಲಾಗಿದೆ.
– ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲಕರು/ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳಬೇಕು.
– ಸರದಿಯಲ್ಲಿರುವ ಇತರ ಗ್ರಾಹಕರಿಗೆ ಮಳಿಗೆಯ ಹೊರಗಡೆ ಸಾಮಾಜಿಕ ಅಂತರ ಕಾಪಾಡಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು.

ವ್ಯಾಪಾರ ಕುಂಠಿತ
ಅಗತ್ಯ ವಸ್ತು ಸಹಿತ ಇನ್ನಿತರ ಉದ್ದಿಮೆಗಳಿಗೆ ಅವಕಾಶ ನೀಡಿದ ಅನಂತರ ಜುವೆಲರಿ ಶಾಪ್‌ಗಳನ್ನು ತೆರೆಯಲು ಅನುಮತಿ ಕಲ್ಪಿಸಲಾಗಿದೆ. ಜನರ ಬಳಿ ಹಣ ಇಲ್ಲದ ಈ ಸಂದರ್ಭ ಆಭರಣ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹಣಕಾಸಿನ ಅಡಚಣೆಯಿಂದಾಗಿ ಆಭರಣಗಳನ್ನು ಮಾರಾಟ ಮಾಡಿಕೊಳ್ಳಲಷ್ಟೇ ಜನರು ಬರುತ್ತಿದ್ದಾರೆ. ಜನರ ಬಳಿ ಹಣ ಇಲ್ಲದ ಕಾರಣ ವ್ಯಾಪಾರವೂ ಕುಂಠಿತವಾಗಿದೆ.
-ಅಲೆವೂರು ನಾಗರಾಜ ಆಚಾರ್ಯ,
ಅಧ್ಯಕ್ಷರು, ಜುವೆಲರಿ ಅಸೋಸಿಯೇಶನ್‌ ಉಡುಪಿ

ವಹಿವಾಟು ಹೆಚ್ಚಳ
ಉಡುಪಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸಮಯಾವಕಾಶವನ್ನು ವಿಸ್ತರಿಸಿರುವುದರಿಂದ ವ್ಯಾಪಾರ-ವಹಿವಾಟು ಶೇ. 20ರಷ್ಟು ಹೆಚ್ಚಾಗಿದೆ. ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವುದು ವ್ಯಾಪಾರ ವೃದ್ಧಿಗೆ ಪೂರಕ. ಆದರೆ ಜನರೂ ಕೂಡ ಸಾಮಾಜಿಕ ಅಂತರ ಸಹಿತ ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಉತ್ತಮ.
-ಆನಂದ ಕಾರ್ನಾಡ್‌, ಕಾರ್ಯದರ್ಶಿ, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ

ಉತ್ತಮ ಬೆಳವಣಿಗೆ
ಕೆಲವು ಹೊಟೇಲುಗಳಲ್ಲಿ ಈಗ ಪಾರ್ಸೆಲ್‌ ಸೌಲಭ್ಯ ನೀಡ ಲಾಗುತ್ತಿದೆ. ಹೊಟೇಲುಗಳೂ ಕಾರ್ಯಾರಂಭ ಮಾಡಲು ಅನುಮತಿ ಕಲ್ಪಿಸಬೇಕು. ಸಾಮಾ ಜಿಕ ಅಂತರ ಸಹಿತ ಜಿಲ್ಲಾಡ ಳಿತದ ಸೂಚನೆಗಳನ್ನು ಪಾಲಿಸಿ ಜನರಿಗೆ ಸೇವೆ ಒದಗಿಸಲು ಆದ್ಯತೆ ನೀಡಬೇಕು. ಮುಖ್ಯವಾಗಿ ಮದ್ಯದಂಗಡಿಗಳಿಗೆ ಎಲ್ಲ ವರ್ಗದ ಜನರೂ ಬರುವುದರಿಂದ ಈ ಕಾಲಾವಕಾಶದಲ್ಲಿ ಕೆಲಸಕ್ಕೆ ತೆರಳು ವವರಿಗೆ ತೊಂದರೆ ಉಂಟಾಗುತ್ತಿತ್ತು. ಸಮಯಾವಕಾಶ ವಿಸ್ತರಿಸಿರುವುದು ಉತ್ತಮ ಬೆಳವಣಿಗೆ.
-ತಲ್ಲೂರು ಶಿವರಾಮ ಶೆಟ್ಟಿ ,
ಅಧ್ಯಕ್ಷರು, ಹೊಟೇಲು ಮಾಲಕರ ಸಂಘ ಉಡುಪಿ

ಮಂಗಳೂರಿನಲ್ಲಿ ಇನ್ನಷ್ಟು ಉದ್ಯಮಕ್ಕೆ ವಿನಾಯಿತಿಗಳ ನಿರೀಕ್ಷೆ
ಮಂಗಳೂರು: ಸುಮಾರು 40 ದಿನಗಳಿಂದ ಬಹುತೇಕ ಸ್ತಬ್ಧವಾಗಿದ್ದ ಬಂದರು ನಗರಿ ಮಂಗಳೂರಿನ ಆರ್ಥಿಕ ಚಟುವಟಿಕೆ ಲಾಕ್‌ಡೌನ್‌ ಸಡಿಲಿಕೆ ಆದ ಬಳಿಕ ಸೋಮವಾರದಿಂದ ನಿಧಾನವಾಗಿ ಆರಂಭಗೊಂಡಿದೆ. ಈ ಮೂಲಕ ಕರಾವಳಿಯ ಆರ್ಥಿಕ ಚಟುವಟಿಕೆಗೆ ಹೊಸ ಹುರುಪು ದೊರಕಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿ ಯಾಗಿದ್ದ ಪರಿಣಾಮ ಒಂದೂವರೆ ತಿಂಗಳಿನಿಂದ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ದಿನಸಿ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ, ಕಚೇರಿ, ಕೈಗಾರಿಕೆಗಳು ಬಂದ್‌ ಆಗಿದ್ದವು. ಕಾರ್ಮಿಕರು, ಉದ್ಯೋಗಿಗಳು ಕೆಲಸ ವಿಲ್ಲದೆ ಮನೆಯಲ್ಲೇ ಬಾಕಿಯಾಗಿದ್ದರು.

ಒಂದೆಡೆ ಖಾಸಗಿ ಕಚೇರಿ, ವ್ಯವಹಾರಗಳು ನಡೆಯದೆ ಆರ್ಥಿಕ ಚಟುವಟಕೆಗಳು ಬಂದ್‌ ಆಗಿದ್ದರೆ, ಇನ್ನೊಂದೆಡೆ ಸರಕಾರಿ ಕಾಮಗಾರಿ, ಚಟುವಟಿಕೆಗಳು ನಡೆಯದೆ ಎಲ್ಲವೂ ಸ್ತಬ್ಧ ವಾಗಿದ್ದವು. ಇದರ ಜತೆಗೆ ಸಂಕಷ್ಟದಲ್ಲಿದ್ದವರ ಸಂಖ್ಯೆಯೂ ಅಧಿಕವಾಗಿತ್ತು. ವಲಸೆ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದರು. ಇದೆಲ್ಲದರ ಮಧ್ಯೆ ಇದೀಗ ವ್ಯಾಪಾರ-ವಹಿವಾಟು ಆರಂಭ ವಾಗಿದೆ. ಅನುಮತಿ ನೀಡಲಾದ ಅಂಗಡಿ, ಮಳಿಗೆ, ಮದ್ಯದಂಗಡಿ ಸಹಿತ ಕೈಗಾರಿಕೆಗಳು ಕಾರ್ಯಾರಂಭಿಸಿದ್ದು, ಹೊಸ ನಿರೀಕ್ಷೆಯತ್ತ ಹೆಜ್ಜೆ ಇಟ್ಟಂತಾಗಿದೆ.

ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಈಗಾಗಲೇ ಹುಟ್ಟೂರಿಗೆ ತೆರಳಿರುವ ಹಿನ್ನೆಲೆಯಲ್ಲಿ ಮಂಗಳೂರು ವ್ಯಾಪ್ತಿಯ ಬಹುತೇಕ ಕೈಗಾರಿಕೆಗಳು ಪೂರ್ಣ ಮಟ್ಟದಲ್ಲಿ ಆರಂಭವಾಗಲು ಇನ್ನೂ ಕೆಲವು ದಿನ ಅಗತ್ಯವಿದೆ ಎಂದು ಕೈಗಾರಿಕಾ ಪ್ರಮುಖರು ತಿಳಿಸಿದ್ದಾರೆ.

ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಈ ಹಿಂದೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆದರೆ ಸೋಮವಾರದಿಂದ ಈ ಸಮಯದ ಮಿತಿಯನ್ನು ಸಂಜೆ 7ರ ವರೆಗೂ ಹೆಚ್ಚಿಸಿದ ಪರಿಣಾಮ ಜನ ದಿನವಿಡೀ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಆಗಮಿಸಿದ್ದರು. ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿಯೇ ಖರೀದಿ ನಡೆಯುತ್ತಿತ್ತು.

ತೆರೆದ ಒಪಿಡಿ
ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಆಸ್ಪತ್ರೆಗಳ ಹೊರರೋಗಿ ವಿಭಾಗವೂ ಸೋಮವಾರದಿಂದ ಕಾರ್ಯಾರಂಭ ಮಾಡಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಬೆಳಗ್ಗೆ 8.30ರಿಂದ ಸಂಜೆ 5 ಗಂಟೆಯವರೆಗೂ ವಿಭಾಗ ತೆರೆದಿತ್ತು. ಆದರೆ, ಸಂಚಾರ ವ್ಯವಸ್ಥೆ ಇಲ್ಲದಿರುವ ಮತ್ತು ಲಾಕ್‌ಡೌನ್‌ ಮುಂದುವರಿದಿರುವ ಪರಿಣಾಮ ರೋಗಿಗಳ ಸಂಖ್ಯೆ ಕಡಿಮೆ ಇತ್ತು ಎಂದು ಆಸ್ಪತ್ರೆಗಳ ಸಿಬಂದಿ ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ಸ್‌ , ಚಿನ್ನ ಮಳಿಗೆಗೆ ಅವಕಾಶ ನೀಡಲು ಆಗ್ರಹ
ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಬಹುತೇಕ ಎಲ್ಲ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿರುವುದರಿಂದ ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ಸ್‌ ಮಳಿಗೆಗಳಿಗೂ ವ್ಯವಹಾರ ನಡೆಸಲು ಅನುವು ಮಾಡಿಕೊಡಬೇಕೆಂದು ಸಾರ್ವಜನಿಕ ವಲಯದಿಂದ ಮತ್ತು ಮಾಲಕ ವರ್ಗದವರಿಂದ ಬೇಡಿಕೆ ಬಂದಿದೆ.

ಸಿಂಗಲ್‌ ವ್ಯಾಪಾರ ಮಳಿಗೆಗಳನ್ನು ಎಸಿ ರಹಿತವಾಗಿ ನಡೆಸಲು ಅನುಮತಿ ಇರುವ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಸ್ವರ್ಣಾಭರಣ ಮಳಿಗೆಗಳನ್ನು ಕೂಡ ಎಸಿ ರಹಿತವಾಗಿ ನಡೆಸಲು ಅವಕಾಶ ಕೊಡ ಬಾರದೇಕೆ ಎಂಬುದು ವ್ಯಾಪಾರ ಮಳಿಗೆಗಳ ಮಾಲಕರ ಪ್ರಶ್ನೆ. ಈಗಾಗಲೇ ಸುಮಾರು ಒಂದೂವರೆ ತಿಂಗಳಿಂದ ವ್ಯಾಪಾರಿಗಳು ವ್ಯವಹಾರ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಹಕರಿಗೂ ಅನನುಕೂಲ ಆಗಿದೆ. ಚಿನ್ನ ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಳಿಗೆಗಳಿಗೆ ವ್ಯವಹಾರಕ್ಕೆ ಅವಕಾಶ ನೀಡದಿರುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಅಭಿಪ್ರಾಯ.

ಉದ್ಯಮ ವಲಯದಲ್ಲಿ ಆಶಾಭಾವನೆ
ಲಾಕ್‌ಡೌನ್‌ ಸಡಿಲಿಕೆ ಮೂಲಕ ದಕ್ಷಿಣ ಕನ್ನಡದ ಆರ್ಥಿಕ ಚಟುವಟಿಕೆಯ ಚಕ್ರ ನಿಧಾನವಾಗಿ ಚಲಿಸಲು ಆರಂಭಿಸಿರುವುದು ಉತ್ತಮ ಬೆಳವಣಿಗೆ. ಗ್ರಾಹಕರಿಂದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉದ್ಯಮ ಕ್ಷೇತ್ರ ಮತ್ತೆ ಹಳಿಗೆ ಬರುತ್ತದೆ. ಹೀಗಾಗಿ ಹೊಸ ಆಶಾಭಾವ ಇದೀಗ ಮೂಡಲಾರಂಭಿಸಿದೆ.
ಐಸಾಕ್‌ ವಾಜ್‌, ಅಧ್ಯಕ್ಷರು,
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಆರ್ಥಿಕ ಸುಧಾರಣೆಯ ಮೊದಲ ಹೆಜ್ಜೆ
ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದು ದ.ಕ.ಜಿಲ್ಲೆಯ ಆರ್ಥಿಕ ಸುಧಾ ರಣೆಯ ಮೊದಲ ಹೆಜ್ಜೆ ಎಂದೇ ಭಾವಿಸಲಾಗುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ ಮೂಡಿದಂತಾಗಿದೆ. ಆದರೆ, ವಲಸೆ ಕಾರ್ಮಿಕರು ಹೋದ ಬಳಿಕ ಕೈಗಾರಿಕೆ ಆರಂಭವಾದ ಹಿನ್ನೆಲೆಯಲ್ಲಿ ಕೊಂಚ ಸಮಸ್ಯೆ ಆಗಿದ್ದೂ ಇದೆ. ಆದರೂ ಆರ್ಥಿಕ ಚೈತನ್ಯ ಸಿಗುವ ನಿಟ್ಟಿನಲ್ಲಿ ಇದೊಂದು ಆಶಾಭಾವನೆಯ ನಿರ್ಧಾರ.
– ಅಜಿತ್‌ ಕಾಮತ್‌,
ಅಧ್ಯಕ್ಷರು, ಸಣ್ಣ ಕೈಗಾರಿಕಾ ಸಂಘ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.