ಸಂವಿಧಾನ ಭಗವದ್ಗೀತೆ ಇದ್ದಂತೆ: ಕಾಗೇರಿ
Team Udayavani, Aug 1, 2019, 3:07 AM IST
ವಿಧಾನಸಭೆ: “ನಾನು ಎಬಿವಿಪಿ, ಆರ್‌ಎಸ್‌ಎಸ್, ಬಿಜೆಪಿಯಿಂದ ಬಂದವನು. ಅದಕ್ಕೆ ಹೆಮ್ಮೆಯಿದೆ. ಆದರೆ, ಸಂವಿಧಾನವೇ ಭಗವದ್ಗೀತೆ ಇದ್ದಂತೆ. ಸಂವಿಧಾನದಡಿ ರಾಜ್ಯ ವಿಧಾನಮಂಡಲದ ನಿಯಮಾವಳಿ ಪ್ರಕಾರವೇ ನಾನು ಕೆಲಸ ಮಾಡಲಿದ್ದೇನೆ’ ಎಂದು ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಿಧಾನಸಭೆಯಲ್ಲಿ ಬುಧವಾರ ಸ್ಪೀಕರ್ ಆಗಿ ಆಯ್ಕೆಯಾದ ನಂತರ ಸದಸ್ಯರ ಶುಭ ಹಾರೈಕೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನವೇ ಶ್ರೇಷ್ಠ. ಅದುವೇ ಭಗವದ್ಗೀತೆ ಇದ್ದಂತೆ. ಸಂವಿಧಾನದ ಚೌಕಟ್ಟಿನಲ್ಲಿ ರೂಪಿತವಾದ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ಹೊಸ ಸದಸ್ಯರಿಗೆ ಹೆಚ್ಚು ಮಾತನಾಡಲು ಅವಕಾಶ ಕೊಡುತ್ತೇನೆ.
ಆದರೆ, ಸದಸ್ಯರು ಪೂರ್ಣ ಪ್ರಮಾಣದಲ್ಲಿ ಸದನದಲ್ಲಿ ಹಾಜರಿರಬೇಕು. ಚರ್ಚೆ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು. “ನಾನು 1994ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಬಂದಾಗ ರಮೇಶ್‌ಕುಮಾರ್ ಅವರು ಸ್ಪೀಕರ್ ಆಗಿದ್ದರು. ಹೊಸಬರಿಗೆ ಅವರು ಅವಕಾಶ ನೀಡುತ್ತಿದ್ದರು. ರಮೇಶ್‌ಕುಮಾರ್ ಅವರಿಂದ ರಮೇಶ್‌ಕುಮಾರ್ ಅವರವರೆಗೆ ಸ್ಪೀಕರ್ ಪೀಠ ಅಲಂಕರಿಸಿದ ನಂತರ ನಾನು ಇದೀಗ ಅಲಂಕರಿಸುತ್ತಿದ್ದೇನೆ’ ಎಂದು ಸ್ಮರಿಸಿದರು.
ಸಭಾಧ್ಯಕ್ಷ ಪೀಠದಲ್ಲಿ ಆಸೀನರಾದ ನಂತರ ಮಾತನಾಡಿದ ಅವರು, “ನನಗೆ ಈ ಸ್ಥಾನಕ್ಕೇರಲು ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ತಂದೆ-ತಾಯಿ, ಕ್ಷೇತ್ರದ ಜನತೆ, ರಾಜ್ಯದ ಜನತೆಯನ್ನೂ ಸ್ಮರಿಸಿಕೊಳ್ಳುತ್ತೇನೆ. ಇಂತಹ ಸ್ಥಾನದಲ್ಲಿ ಅಲಂಕರಿಸಿರುವುದು ನನ್ನ ಸುದೈವ’ ಎಂದು ಹೇಳಿದರು. ಈ ಹಂತಕ್ಕೆ ಬರಲು ಪಿ.ವಿ.ಕೃಷ್ಣಭಟ್, ದತ್ತಾತ್ರೇಯ ಹೊಸಬಾಳೆ, ಯಡಿಯೂರಪ್ಪ, ಅನಂತಕುಮಾರ್ ಅವರೂ ಕಾರಣ ಎಂದು ಹೇಳಿದರು.
ಕಣ್ತುಂಬಿಕೊಂಡ ಕುಟುಂಬ ವರ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತಾಯಿ, ಪತ್ನಿ, ಪುತ್ರಿಯರು ಸೇರಿ ಕುಟುಂಬ ವರ್ಗ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಸಭಾಧ್ಯಕ್ಷರಾಗಿ ಆಯ್ಕೆಯಾದ ಕ್ಷಣಗಳನ್ನು ಕಣ್ತುಂಬಿಕೊಂಡರು. ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಲು ಸ್ವ ಕ್ಷೇತ್ರದಿಂದ ಕಾರ್ಯಕರ್ತರು, ಗಣ್ಯರು ಆಗಮಿಸಿ ಸ್ಪೀಕರ್ ಕಚೇರಿಯಲ್ಲಿ ಶುಭ ಕೋರಿದರು.
ನಮ್ಮ ಮನೆತನದಲ್ಲಿ ಇವನು ದೊಡ್ಡವ. ಈಗ ಸಿಕ್ಕಿರುವ ಸ್ಥಾನವನ್ನು ನಡೆಸಿಕೊಂಡು ಹೋಗುತ್ತಾನೆ. ಜನರನ್ನು ನಿಭಾಯಿಸಿಕೊಂಡು ಹೋಗಿದ್ದಾನೆ. ಮುಂದೆಯೂ ಚೆನ್ನಾಗಿ ನಿಭಾಯಿಸುತ್ತಾನೆ. ದೇವರು ಒಳ್ಳೆಯದು ಮಾಡಲಿ.
-ಸರ್ವೇಶ್ವರಿ, ತಾಯಿ
ನನಗೆ ಹೆಚ್ಚು ಖುಷಿ ಆಗ್ತಿದೆ. ಇನ್ನೂ ಹೆಚ್ಚು ಹುದ್ದೆಗಳು ಸಿಗಲಿ, ಹೀಗೇ ಮುಂದುವರಿಯಲಿ. ದೇವರು ಒಳ್ಳೆಯದು ಮಾಡಲಿ.
-ಭಾರತಿ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪತ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.