Linganamakki: ಡೆಡ್‌ ಸ್ಟೋರೇಜ್‌ನತ್ತ ಸಾಗುತ್ತಿದೆ ಲಿಂಗನಮಕ್ಕಿ ಡ್ಯಾಂ!

150 ದಿನಕ್ಕೆ ಸಾಕಾಗುವಷ್ಟು ಮಾತ್ರ ಜಲಾಶಯದಲ್ಲಿ ನೀರಿದೆ- ಕೆಲವೇ ದಿನಗಳಲ್ಲಿ  ಬತ್ತಿಹೋಗಲಿದೆ ಒಳಹರಿವು

Team Udayavani, Oct 13, 2023, 11:16 PM IST

dam linganamakki

ಶಿವಮೊಗ್ಗ: ವಿದ್ಯುತ್‌ ಕೊರತೆಯಿಂದ ರಾಜ್ಯಾದ್ಯಂತ ಲೋಡ್‌ ಶೆಡ್ಡಿಂಗ್‌ ಜಾರಿಯಾಗಿರುವ ಈ ಹೊತ್ತಲ್ಲಿ ಮತ್ತೂಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಲಿಂಗನಮಕ್ಕಿ ಜಲಾಶಯದ ನೀರು ಇನ್ನು 150 ದಿನಕ್ಕೆ ಸಾಕಾಗುವಷ್ಟು ಮಾತ್ರವೇ ಇದ್ದು, ಬೇಸಗೆ ಹೊತ್ತಿಗೆ ಡೆಡ್‌ ಸ್ಟೋರೇಜ್‌ ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಶರಾವತಿ ಕೊಳ್ಳದ ಐದು ಜಲ ವಿದ್ಯುದಾಗಾರಗಳಿಂದ ರಾಜ್ಯದ ಬೇಡಿಕೆಯ ಶೇ.25ರಷ್ಟು ವಿದ್ಯುತ್‌ ಅನ್ನು ಪೂರೈಸಬಹುದು. ಉಷ್ಣ ವಿದ್ಯುತ್‌ ಸ್ಥಾವರಗಳು ಕೈಕೊಟ್ಟಾಗಲೆಲ್ಲ ಜಲ ವಿದ್ಯುತ್‌ ಘಟಕಗಳಿಗೆ ಹೆಚ್ಚಿನ ಲೋಡ್‌ ನೀಡಲಾಗಿದೆ. ಎಂಥ ಕಠಿನ ಸಂದರ್ಭಗಳಲ್ಲೂ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಸಿದ ಹೆಗ್ಗಳಿಕೆ ಶರಾವತಿ ಕೊಳ್ಳದ ನಾಲ್ಕು ವಿದ್ಯುದಾಗಾರಗಳಿಗಿವೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯ ಶೇ.50ರಷ್ಟು ಮಾತ್ರ ಭರ್ತಿಯಾಗಿದೆ. ಮುಂಗಾರು ಅವಧಿ ಮುಕ್ತಾಯಗೊಂಡಿರುವುದರಿಂದ ಜಲಾಶಯಕ್ಕೆ ನೀರು ಬರುವುದೇ ಅನುಮಾನ. ಈಗ ಪ್ರತಿದಿನ 2-3 ಸಾವಿರ ಕ್ಯುಸೆಕ್‌ ನೀರು ಬರುತ್ತಿದ್ದು, ಕೆಲವೇ ದಿನಗಳಲ್ಲಿ ಒಳಹರಿವು ಬತ್ತಿಹೋಗಲಿದೆ.

ಕಳೆದ ಹತ್ತು ವರ್ಷಗಳಲ್ಲಿ 2013-14, 2014-15, 2019-20ನೇ ಸಾಲಿನಲ್ಲಿ ಜಲಾಶಯ ತುಂಬಿದ್ದು ಬಿಟ್ಟರೆ 2021 ಹಾಗೂ 2022ರಲ್ಲಿ 1,810 ಅಡಿ ದಾಟಿತ್ತು. ಉಳಿದಂತೆ ಶೇ.50ರಷ್ಟು ಭರ್ತಿಯಾಗಿದೆ. ಈ ವರ್ಷ ಆಗಸ್ಟ್‌, ಸೆಪ್ಟಂಬರ್‌ ತಿಂಗಳುಗಳಲ್ಲೇ ದಟ್ಟ ಮಲೆನಾಡಿನಲ್ಲೂ ಬಿಸಿಲು ಆವರಿಸಿ ಜಲಾಶಯಕ್ಕೆ ಒಳಹರಿವು ನಿಂತೇ ಹೋಗಿತ್ತು. ಇದೇ ಸಮಯದಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳು ಸಹ ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಲೋಡ್‌ ಕೊಡಲಾಗಿತ್ತು. ಇದರಿಂದ ನೀರಿನ ಸಂಗ್ರಹ ಪ್ರಮಾಣ ಗಣನೀಯ ಏರಿಕೆಯಾಗಲಿಲ್ಲ. ಈ ವರ್ಷದ ಗರಿಷ್ಠ ಮಟ್ಟ 1790.70 (ಜಲಾಶಯದ ಪೂರ್ಣ ಮಟ್ಟ 1819 ಅಡಿ). 152 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 68.20 ಟಿಎಂಸಿ ಮಾತ್ರ ನೀರಿದೆ.

ವಿದ್ಯುತ್‌ ಲಭ್ಯತೆ

ಶರಾವತಿ ಕೊಳ್ಳದ ಎಲ್‌ಪಿಎಚ್‌, ಎಸ್‌ಜಿಎಸ್‌, ಬಿಜಿಎಸ್‌, ಜಿಪಿಎಚ್‌, ಎಂಜಿಎಚ್‌ಇ ವಿದ್ಯುದಾಗಾರಗಳಿಂದ 2018-19ರಲ್ಲಿ 5,800, 2019-20ರಲ್ಲಿ 6,358, 2020-21ರಲ್ಲಿ 5,735, 2021-22ರಲ್ಲಿ 6,453 ಹಾಗೂ 2022-23ರಲ್ಲಿ 6,677 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗಿದೆ. ಈಗ ಲಭ್ಯವಿರುವ ನೀರಿನ ಆಧಾರದ ಮೇಲೆ 150 ದಿನಗಳವರೆಗೆ ಗರಿಷ್ಠ 2,098 ಮಿಲಿಯನ್‌ ಯುನಿಟ್‌ ಮಾತ್ರ ವಿದ್ಯುತ್‌ ಮಾತ್ರ ಉತ್ಪಾದನೆ ಮಾಡಬಹುದು. ಒಂದು ವೇಳೆ ಹೆಚ್ಚಿನ ಲೋಡ್‌ ಬಿದ್ದರೆ 150 ದಿನಕ್ಕಿಂತ ಮೊದಲೇ ಜಲಾಶಯ ಖಾಲಿಯಾಗಬಹುದು.

ಒತ್ತಡ ಕಡಿಮೆಯಾಗಲಿ

ಲಿಂಗನಮಕ್ಕಿ ಜಲಾಶಯದ ಮಟ್ಟ ಕುಸಿಯುತ್ತಿದ್ದಂತೆ ದ್ವೀಪದ ಜನರಿಗೆ, ಸಿಗಂದೂರು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ  ಲಾಂಚ್‌ಗಳು ಸೇವೆ ನಿಲ್ಲಿಸಲಿವೆ. ಈ ವರ್ಷ ಜೂನ್‌ ತಿಂಗಳಲ್ಲಿ ಕೆಲವು ದಿನಗಳ ಕಾಲ ಲಾಂಚ್‌ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹಿನ್ನೀರಿನ ಸಾವಿರಾರು ಜನರ ಬದುಕಿಗೆ ತೊಂದರೆಯಾಗಿತ್ತು. ಲಿಂಗನಮಕ್ಕಿ ಮೇಲೆ ಹೆಚ್ಚಿನ ಒತ್ತಡ ಹಾಕದೆ ಲಭ್ಯವಿರುವ ನೀರನ್ನು ಮುಂದಿನ ಮಳೆಗಾಲದ ಅವಧಿಯವರೆಗೂ ಬಳಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ.

ಸಂಜೆ ವೇಳೆಗೆ ನಮಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬೇಡಿಕೆ ಬಂದಷ್ಟು ನಾವು ಉತ್ಪಾದನೆ ಮಾಡಬೇಕಾಗುತ್ತದೆ. ಇಲ್ಲ ಎನ್ನಲೂ ಆಗುವುದಿಲ್ಲ. ಈಗಿರುವ ನೀರನ್ನು ಅಂದಾಜು 150 ದಿನ ಬಳಸಬಹುದು. ಹೆಚ್ಚು ಬಳಸಿದರೆ ಬೇಗ ಖಾಲಿ ಆಗಬಹುದು. ಪ್ರತಿ ದಿನ 25 ಮಿಲಿಯನ್‌ ಯುನಿಟ್‌ ವಿದ್ಯುತ್‌ ಪೂರೈಸುವ ಶಕ್ತಿ ಇದೆ.– ಉದಯ್‌ ನಾಯ್ಕ,  ಮುಖ್ಯ ಎಂಜಿನಿಯರ್‌, ಕೆಪಿಸಿ, ಜೋಗ್‌ಫಾಲ್ಸ್‌

 ಶರತ್‌ ಭದ್ರಾವತಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

11-highcourt

High Court: ಕ್ರಿಮಿನಲ್‌ ಕೇಸ್‌ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

10-

Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.