Literature: ಧರ್ಮಕ್ಕೆ ಸಾಹಿತ್ಯದ ಸಾಹಚರ್ಯ- ಕೆ. ಜಿ.ರಾಘವನ್ ಅವರ ಜತೆ ಮಾತುಕತೆ
Team Udayavani, Dec 17, 2023, 1:05 AM IST
ಹಿರಿಯ ನ್ಯಾಯವಾದಿಗಳೂ, ಲೇಖಕರೂ, ಸಂಸ್ಕೃತಿ ಚಿಂತಕರೂ ಹಾಗೂ ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಕೆ.ಜಿ. ರಾಘವನ್ ಅವರ “ಸುಭಾಷಿತ’ಗಳು ಪುಸ್ತಕ ಬಿಡುಗಡೆಯಾಗಿದೆ. ಸುಭಾಷಿತಗಳ ಮಹತ್ವ, ಸಮಕಾಲೀನ ಸಂದರ್ಭದಲ್ಲಿ ಅವುಗಳು ಪ್ರಸ್ತುತತೆಯ ಬಗೆಗೆ ರಾಘವನ್ ಅವರ ಆಲೋಚನೆಗಳು ಗಮನ ಸೆಳೆಯುವಂತಿವೆ.
ಸಂದರ್ಶನ: ನ.ರವಿಕುಮಾರ
ಆಧುನಿಕ ಬದುಕಿನಲ್ಲಿ ಸುಭಾಷಿತಗಳ ಮಹತ್ವ ಏನು?
ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ನೀತಿ- ನಿಯಮಾವಳಿಗಳ ಮೇಲೆ ನಿಂತಿರುತ್ತದೆ. ಅದನ್ನೇ “ಧರ್ಮ’ ಎಂದು ವಿಶಾಲಾ ರ್ಥ ದಲ್ಲಿ ಕರೆಯಲಾಗುತ್ತದೆ. “ಧರ್ಮ”ಕ್ಕೆ ಸಾಹಿತ್ಯದ ಸಾಹಚರ್ಯವೂ ಇರುತ್ತದೆ. ಅದು ಚಿಕ್ಕದೊ ಅಥವಾ ದೊಡ್ಡ ದೊ ರೂಪದಲ್ಲಿರಬಹುದು. ಇಂಥ ಒಂದು ಸಾಹಿತ್ಯ ಪ್ರಕಾರ ಸುಭಾಷಿತ. ಒಂದು ರೀತಿಯಲ್ಲಿ ಇದು ಜಗತ್ತಿನ ಸಾರ್ವಕಾಲಿಕ ಸಂಸ್ಕೃತಿಯ ಬುನಾದಿ. ಮಾತ್ರವಲ್ಲ; ಸುಭಾಷಿತಗಳು ಸಾರ್ವ ಕಾಲಿಕವಾದ ಮೌಲ್ಯಗಳನ್ನು ಪ್ರತಿಪಾ ದಿಸುವ ಕಾರಣಕ್ಕೆ ಅವು ದೇಶ-ಕಾಲಗಳ ಗಡಿಗಳನ್ನು ಮೀರಿ ನಿಲ್ಲುತ್ತವೆ.
ಸಂಸ್ಕೃತದ ಸುಭಾಷಿತಗಳ ವೈಶಿಷ್ಟ್ಯಗಳೇನು?
ಪ್ರಪಂಚದ ಇತರ ಭಾಷೆಯುಲ್ಲಿರುವ ನುಡಿಗಟ್ಟುಗಳು, ಹೇಳಿಕೆಗಳಿಗಿಂತ ಸಂಸ್ಕೃ ತದ ಸುಭಾಷಿತಗಳು ಭಿನ್ನವಾ ಗಿವೆ. ಆಕರ್ಷಕವಾಗಿವೆ. ಮಾತ್ರ ವಲ್ಲ; ಅವು ಬೆರಗಿನ ವಚನ ಗಳೂ ಹೌದು, ಬೆಡಗಿನ ಅಭಿ ವ್ಯಕ್ತಿಗಳೂ ಹೌದು. ಇತರ ಸುಭಾಷಿತಗಳಿಗಿಂತ ಸಂಸ್ಕೃ ತದ ಸುಭಾಷಿತಗಳು ಮೂರ್ತ, ವಾಸ್ತವಿಕ ನೆಲೆಯ ಅರ್ಥವಂತಿಕೆಯ ಕಾರಣಕ್ಕಾಗಿ ವೈಶಿಷ್ಟ್ಯ ಪೂರ್ಣವಾಗಿವೆ. ಪಾಶ್ಚಾತ್ಯ ಸಮಾಜಗಳಿಗೆ ಹೋಲಿಸಿದರೆ ಭಾರತೀಯ ಸಮಾಜವು ರೂಪುಗೊಂಡಿರುವುದೇ ಮೌ ಲ್ಯ ವ್ಯವಸ್ಥೆಯ ಮೇಲೆ. ಈ ಮೌಲ್ಯ ವ್ಯವಸ್ಥೆ ಯು ಪ್ರತಿಯೊಬ್ಬ ವ್ಯಕ್ತಿಯ ಬೌದ್ಧಿಕ ಔನತ್ಯ ವನ್ನು ಎತ್ತಿ ಹಿಡಿಯುತ್ತದೆ. ಸಂಸ್ಕೃತ ಭಾಷೆಯು ಇವತ್ತು ಆಡು ಮಾತಾಗಿ ಲ್ಲದಿರಬಹುದು- ಆದರೆ ಎಲ್ಲರಿಗೂ ಸುಭಾಷಿತಗಳಲ್ಲಿ ಅಡಗಿರುವ ಜ್ಞಾನ ಮತ್ತು ಮೌಲ್ಯಗಳ ಬಗೆಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅದರ ಅರಿವಿರುತ್ತದೆ. ಸಂಪೂರ್ಣ ಸಂದರ್ಶನ ಓದಲು ಕೆಳಗಿನ ಕ್ಯುಆರ್‌ಕೋಡ್ ಸ್ಕ್ಯಾನ್ ಮಾಡಿ ಹಾಗೂ ರವಿವಾರದ ಸಾಪ್ತಾಹಿಕ ಸಂಪದ ನೋಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.