Lithium: ಅರ್ಜಿಂಟೀನಾದಲ್ಲಿ ಭಾರತದಿಂದ ಲೀಥಿಯಂ ಗಣಿಗಾರಿಕೆ
ದೇಶೀ ಲೀಥಿಯಂ ಉತ್ಪಾದನೆಗೆ ಬಲ: ಚೀನಾಗೆ ಭಾರತ ಸೆಡ್ಡು
Team Udayavani, Jan 16, 2024, 8:41 PM IST
ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಜತೆಗೆ ಮಿತ್ರತ್ವ ಮಾಡಿಕೊಂಡು ಅಲ್ಲಿನ ಲೀಥಿಯಂ ಗಣಿಗಳನ್ನು ದೋಚುವ ಸಂಚು ಮಾಡಿದ ಚೀನಾಕ್ಕೆ ಭಾರತ ಸರಿಯಾಗಿ ಸಡ್ಡು ಹೊಡೆದಿದೆ. ಅರ್ಜೆಂಟೀನಾ ಸರ್ಕಾರದ ಜತೆಗೆ ಸರ್ಕಾರಿ ಸ್ವಾಮ್ಯದ ಖನಿಜ ವಿದೇಶ ಇಂಡಿಯಾ ಲಿಮಿಟೆಡ್ (ಕೆಎಬಿಐಎಲ್) ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕುರಿತು ಕೇಂದ್ರ ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದರಿಂದ ವಿದ್ಯುತ್‌ಚಾಲಿತ ಕಾರುಗಳಿಗೆ ಅಗತ್ಯವಾಗಿರುವ ಬ್ಯಾಟರಿಗಳನ್ನು ಸಿದ್ಧಪಡಿಸುವ ಕೇಂದ್ರ ಸರ್ಕಾರದ ಯೋಜನೆಗೆ ಹೆಚ್ಚು ಬಲ ಬರಲಿದೆ. ಇದೊಂದು ಐತಿಹಾಸಿಕ ದಿನ. ಇಂಧನ ಕ್ಷೇತ್ರದಲ್ಲಿ 2 ದೇಶಗಳ ನಡುವೆ ಸಹಭಾಗಿತ್ವಕ್ಕೆ ಇದು ನೆರವಾಗಲಿದೆ ಎಂದು ಜೋಷಿ ಬರೆದುಕೊಂಡಿದ್ದಾರೆ.
ಲೀಥಿಯಂಗೆ ಸಂಬಂಧಿಸಿ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯ ಮೊದಲ ಒಪ್ಪಂದ ಇದಾಗಿದೆ. ಒಟ್ಟು 15,703 ಹೆಕ್ಟೇರ್ ಪ್ರದೇಶಗಳನ್ನು ಒಳಗೊಂಡ 5 ಬ್ಲಾಕ್‌ಗಳನ್ನು ಖನಿಜ ವಿದೇಶ ಇಂಡಿಯಾ ಲಿ. ಅಭಿವೃದ್ಧಿಪಡಿಸಲಿದೆ. 200 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
ಚೀನಾಕ್ಕೆ ಹಿನ್ನಡೆ ಹೇಗೆ?
ಜಗತ್ತಿನ ಶೇ.80 ಲೀಥಿಯಂ ಗಣಿಗಳ ಮೇಲೆ ಚೀನಾ ನಿಯಂತ್ರಣ ಹೊಂದಿದೆ. ಅರ್ಜೆಂಟೀನಾ ಜತೆಗಿನ ಒಪ್ಪಂದದ ಮೂಲಕ ಲೀಥಿಯಂ ಬ್ಯಾಟರಿ ತಯಾರಿಕೆಯಲ್ಲಿ ಚೀನಾ ಮೇಲಿನ ಭಾರತದ ಅವಲಂಬನೆ ಪ್ರಮಾಣ ತಗ್ಗಲಿದೆ.
15,703 ಹೆಕ್ಟೇರ್- ಗಣಿಗಾರಿಕೆ ನಡೆಯುವ ಪ್ರದೇಶ
05 – ಸಿಕ್ಕಿರುವ ಒಟ್ಟು ಬ್ಲಾಕ್‌ಗಳು
200 ಕೋಟಿ ರೂ. – ಒಪ್ಪಂದದ ಒಟ್ಟು ಮೌಲ್ಯ
ಅನುಕೂಲ ಏನು?
– ಲೀಥಿಯಂ ಬ್ಯಾಟರಿ ಉತ್ಪಾದನೆಯಲ್ಲಿ ಚೀನಾ ಅವಲಂಬನೆ ಪ್ರಮಾಣ ಕಡಿಮೆ
– ಚೀನಾ ಉತ್ಪನ್ನಗಳ ಬಹಿಷ್ಕಾರ ನಡುವೆ ದೇಶೀಯ ಉತ್ಪಾದನೆಗೆ ಬೆಂಬಲ
– ಅರ್ಜೆಂಟೀನಾ-ಭಾರತದ ನಡುವೆ ಬಾಂಧವ್ಯ ವೃದ್ಧಿಗೆ ಅನುಕೂಲ
ಏನಿದು ಲೀಥಿಯಂ?
ಲೀಥಿಯಂ ಎನ್ನುವುದು ಅತ್ಯಂತ ಹಗುರವಾದ ಲೋಹ. ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್, ಡಿಜಿಟಲ್ ಕ್ಯಾಮೆರಾ ಮುಂತಾದ ಸಾಧನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ಪ್ರಧಾನ ಖನಿಜ. ಸೆಮಿ ಕಂಡಕ್ಟರ್‌ಗಳ ತಯಾರಿಕೆಗೂ, ಸೆರಾಮಿಕ್, ಗಾಜು, ಗ್ರೀಸ್, ಔಷಧ, ಎಸಿ, ಅಲ್ಯೂಮಿನಿಯಂ ಉತ್ಪಾದನೆಯಲ್ಲೂ ಇದರ ಬಳಕೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.