ತಂತ್ರಜ್ಞಾನ ಬಳಕೆಯಿಂದ ದೇಶ ಪ್ರಗತಿ: ಡಾ| ಈಶ್ವರ ಪ್ರಸಾದ್
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪ್ರದಾನ
Team Udayavani, Sep 27, 2021, 4:55 AM IST
ಕಾರ್ಕಳ: ವಿದ್ಯಾರ್ಥಿ ದೆಸೆಯಲ್ಲಿ ಸರಿ ತಪ್ಪುಗಳ ಬಗ್ಗೆ ಸರಿಯಾದ ನಿರ್ಧಾರ ತೆಗೆದು ಕೊಂಡು ಉತ್ತಮ ದಾರಿಯಲ್ಲಿ ಮುನ್ನಡೆಯಬೇಕು. ತಂತ್ರಜ್ಞಾನ ಬಳಕೆ ದೇಶದ ಪ್ರಗತಿಗೆ ಪೂರಕವಾಗಿರುತ್ತದೆ ಎಂದು ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ| ಜಿ.ಎಲ್. ಈಶ್ವರ ಪ್ರಸಾದ್ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 2020-2021ನೇ ಶೈಕ್ಷಣಿಕ ಸಾಲಿನ ಪದವಿಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಸಾಧನೆಗೈಯ್ಯಲು ಉತ್ತೇಜನ ಅಗತ್ಯ. ಪ್ರಾಧ್ಯಾಪಕ ತನ್ನ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಅರಿತುಕೊಂಡು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ದಾರಿ ಯಾಗಬೇಕು. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನ, ವಿವಿಧ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮನೋಭಾವ ಅಡಕವಾಗಿದೆ ಎಂದರು.
ಪದವಿ ಪ್ರದಾನ
ವಿವಿಧ ಕೋರ್ಸ್‌ಗಳಲ್ಲಿ ಸಾಧನೆ ಗೈದವರನ್ನು ಚಿನ್ನ, ಬೆಳ್ಳಿ ಪದಕ ನೀಡಿ ಸಮ್ಮಾನಿಸಲಾಯಿತು.ಬಿಇ, ಎಂಟೆಕ್ ಹಾಗೂ ಎಂಸಿಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪದವಿ ಪ್ರದಾನ ಮಾಡಲಾಯಿತು.
ಬಿಇ ಬಯೋಟೆಕ್ನಾಲಜಿ ವಿಭಾಗದ ಶಿವಾನಿ, ಸಿವಿಲ್ ವಿಭಾಗದ ಸಿದ್ಧಿವಿನಾಯಕ ದತ್ತಾತ್ರೇಯ ಹೆಗ್ಡೆ, ಕಂಪ್ಯೂಟರ್ ಸೈನ್ಸ್‌ನ ಮೈತ್ರಿ ಸುರೇಶ್, ಎಲೆಕ್ಟ್ರಾನಿಕ್ಸ್‌ನ ಸಂಜನಾ, ಎಲೆಕ್ಟ್ರಿಕಲ್‌ನ ಶ್ರೇಯಸ್ ಪಿ.ಪಿ., ಇನಾ#ರ್ಮೇಶನ್ ಸೈನ್ಸ್‌ನ ಅರ್ಚನಾ ಎಸ್.ಎಚ್., ಮೆಕ್ಯಾನಿಕಲ್‌ನ ಕೆನನ್ ಡಿ’ಸಿಲ್ವಾ, ಎಂಟೆಕ್ ವಿಭಾಗದ ಶ್ರೀಲಕ್ಷ್ಮೀ ಎಂ., ಎಚ್.ಎಂ. ಮೇಘನಾ, ಶಾರದಾ ಜಿ., ಪ್ರಗತಿ ಯು. ರಾವ್, ಲುಬಾ° ಮೊಹಮ್ಮದ್, ಅಖೀಲ್ ಮೊಹಮ್ಮದ್, ಹರಿಪ್ರಸಾದ್, ಎಂಸಿಎ ವಿಭಾಗದ ಬಬಿತಾ ಶೆಟ್ಟಿ ಕೆ. ಚಿನ್ನದ ಪದಕ ಪಡೆದರು.
ಇದನ್ನೂ ಓದಿ:65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್
ಬಿಇ ಬಯೋಟೆಕ್ನಾಲಜಿಯ ಶ್ರೇಯಾ ಹೆಗ್ಡೆ, ಸಿವಿಲ್‌ನ ಸುಜಿತ್ ಶೆಟ್ಟಿ, ಕಂಪ್ಯೂಟರ್ ಸೈನ್ಸ್‌ನ ಶಿವಾನಿ ಶೆಣೈ ಬಿ., ಎಲೆಕ್ಟ್ರಾನಿಕ್ಸ್‌ನ ನಿಶಾ ವಿರಾ ಡಿ’ಕುನ್ನಾ, ಎಲೆಕ್ಟ್ರಿಕಲ್‌ನ ಪೃಥ್ವಿ ಜೆ. ಪಡು³, ಇನಾ#ರ್ಮೇಶನ್ ಸೈನ್ಸ್‌ನ ಮೇದಿನಿ ಐತಾಳ, ಮೆಕ್ಯಾನಿಕಲ್‌ನ ಅಜಯ್ ಕೆ. ಶೆಟ್ಟಿ, ಮತ್ತು ಎಂಟೆಕ್‌ನ ಪ್ರಜ್ವಲ್ ಕೆ.ಎಸ್., ಮೊಹಮ್ಮದ್ ಹಾಶಿಮ್ ಎಂ.ಎಚ್., ದೀಕ್ಷಾ ವಿ. ನಾಯ್ಕ, ವೈಷ್ಣವಿ ಎಸ್. ಶೆಟ್ಟಿ, ವಂದನಾ ಆರ್. ಪಿ., ಅಶ್ವಿನಿ ಯು., ನಿಖೀಲ್ ಕನೋಜಿ, ಎಂಸಿಎ ವಿಭಾಗದ ವಿಘ್ನೇಶ್ ಪೈ ಬೆಳ್ಳಿ ಪದಕ ಗಳಿಸಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣRರ್ ವರದಿ ವಾಚಿಸಿ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ.ಆರ್. ಮೆರವಣಿಗೆಯನ್ನು ಮುನ್ನಡೆಸಿದರು. ಉಪಪ್ರಾಂಶುಪಾಲ ಡಾ| ಐ. ರಮೇಶ್ ಮಿತ್ತಂತಾಯ ಬಹುಮಾನ ಗಳಿಸಿದ ವಿದ್ಯಾರ್ಥಿಗಳ ಹೆಸರು ವಾಚಿಸಿದರು.
ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ| ಶ್ರೀನಿವಾಸ್ ಪೈ ವಂದಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ| ಸುಬ್ರಹ್ಮಣ್ಯ ಭಟ್ ಸಂಯೋಜಿಸಿ ದರು. ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ| ಉಜ್ವಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.