Loan: ಲೋನ್ಆ್ಯಪ್ನಲ್ಲಿ ಸಾಲ: ನಗ್ನ ಚಿತ್ರ ವೈರಲ್ ಬೆದರಿಕೆ
Team Udayavani, Aug 24, 2023, 8:28 PM IST
ಮಂಗಳೂರು: ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಗೆ ಆಕೆಯ ನಗ್ನ ಚಿತ್ರ ವೈರಲ್ ಮಾಡುವ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯೋರ್ವಳು ಎ.15ರಂದು ಗೂಗಲ್ ಪ್ಲೇ ಸ್ಟೋರ್ನಿಂದ “ಕ್ವಿಕ್ ಮನಿ” ಎಂಬ ಲೋನ್ ಆ್ಯಪ್ ಡೌನ್ಲೋಡ್ ಮಾಡಿದ್ದಳು. ಅದರಲ್ಲಿ 10,000 ರೂ. ಸಾಲಕ್ಕೆ ಅಪ್ಲೆ„ ಮಾಡಿದ್ದಳು. ಆಕೆಯ ಖಾತೆಗೆ ಕೂಡಲೇ 7,500 ರೂ. ಜಮೆ ಆಗಿತ್ತು. ಕೆಲವು ದಿನಗಳ ಬಳಿಕ ಅದನ್ನು ಮರುಪಾವತಿ ಮಾಡಿದ್ದಳು. ಆ ಬಳಿಕ ಹಲವು ವಾಟ್ಸ್ಆ್ಯಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಕಡ್ಡಾಯವಾಗಿ ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರು.
ಆಕೆಯ ಖಾತೆಗೆ 14,000 ರೂ. ಜಮೆ ಮಾಡಿದರು. ಅದನ್ನು ಕೂಡ ಯುವತಿ ಮರುಪಾವತಿಸಿದ್ದಳು. ಆದರೂ ಆಕೆಗೆ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸಿದರು. ಆಕೆಯ ಖಾತೆಯಿಂದ 51,000 ರೂ.ಗಳನ್ನು ವರ್ಗಾಯಿಸಿಕೊಂಡರು. ಆ ಬಳಿಕವೂ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಹಣ ನೀಡದಿದ್ದರೆ ಆಕೆಯ ಫೋಟೋವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಲಾಗುವುದು ಮತ್ತು ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.