ಲಾಕ್ ಡೌನ್ ಹೋಯ್ತು ಸೀಲ್ ಡೌನ್ ಬಂತು, ಪಾರ್ಸಲ್‌ಗಾದ್ರೂ ಎಣ್ಣೆ ಸಿಗ್ತು
Team Udayavani, May 3, 2020, 12:55 PM IST
ಸಿದ್ರಾಮಣ್ಣೋರು ಆಲ್ ಪಾಲ್ಟಿ ಮೀಟಿಂಗ್ ಕರ್ಧು ಕೋವಿಡ್ ಎಫೆಕ್ಟ್ ಯಿಂದ ಕೂಲಿ ಕಾರ್ಮಿಕ್ರು ಬಡುವ್ರುಗೆ ಶಾನೆ ಪ್ರಾಬ್ಲಿಂ ಅಗೋಬಿಟ್ಟದೆ ಗವರ್ನಮೆಂಟ್ ಏನೂ ಮಾಡ್ತಿಲ್ಲ, ನಾವೇ ಏನಾರಾ ಮಾಡ್ಬೇಕು ಸಜೆಸನ್ ಹೇಳಿ ಅಂತಾ ಕೇಳಿದ್ರು. ಡಿಕೆ ಸಿವ್‌ಕುಮರಣ್ಣೋರು, ರೇವಣ್ಣೋರು, ಬಂಡೆಪ್ಪಣ್ಣೋರು, ಎಲ್ರೂ ಇದ್ರು. ಮೀಟಿಂಗ್ ಮುಗಿದ್‌ಮ್ಯಾಕೆ ರೇವಣ್ಣೋರು, ಎಂಗೆ ಸಿದ್ರಾಮಣ್ಣೋರ್ಗೆ ಆಲ್ ಪಾಲ್ಟಿ ಮೀಟಿಂಗ್ ಕರೀರಿ ಅಂತಾ ಹೇಳಿದ್ದೇ ನಾನು, ರಾವ್ ಕಾಲ ಬರೋಕ್ ಮುಂಚೇನೇ ಕರ್ಧು ಮಾತಾಡ್ಸಿ ಅಂತೇಳಿದ್ದೆ ಅಂದ್ರತೆ. ಆದ್ಕೆ ಸಿವ್‌ಕುಮಾರಣ್ಣೋರು ಹೌದಾ ರೇವಣ್ಣಾ, ಮಹೂರ್ತ ನಿಂದೇನಾ ಅಂದ್ರಂತೆ. ಹೌದು ಮತ್ತೆ ತಕ್ಕಳಿ ಒಂದ್ ನಿಂಬೆ ಹಣ್ ಇಟ್ಕಳಿ ಪಾಲ್ಟಿ ಪ್ರಸಿಡೆಂಟ್ ಅಗಿದ್ದೀರಿ ಒಳ್ಳೆದಾಯ್ತದೆ ಆಂತ ಹಲ್ವಾ ಕೊಟ್ರಂತೆ. ಆದ್ಕೆ
ನಮ್‌ತಾವಾ ಗಜನಿಂಬೆಹಣ್ಣೇ ಐತೆ ಬುಡು ರೇವಣ್ಣಾ ಆಂದ್ರಂತೆ. ಇತ್ಲಾಗೆ ಹುಲಿಯಾ ಸಿದ್ರಾಮಣ್ಣೋರು ಎವರಿಡೇ ಮೀಟಿಂಗ್ ಮಾಡ್ತಿದ್ರೆ ಅತ್ಲಾಗೆ ರಾಹಾಹುಲಿ ಯಡ್ನೂರಪ್ನೊರು ಸಿವನೇ ಅಂತಾ ಟೆನ್‌ಸನ್ ಮಾಡ್ಕಂಡಿದ್ರಂತೆ. ಅದ್ಕೆ ವಠಾರಾªಗೆ ಹಸು ಮೇಯ್ಸಿ ಒಳ್ಳೇದಾಯ್ತದೆ ಅಂತ ಯಲಂಕ ವಿಸ್ವನಾಥಣ್ಣೋರು ಸಜೆಸನ್ ಕೊಟ್ಟು ಎಲ್ದು ಹಸ ಒಂದ್ ಕರ ತಕ್ಕಂಬದ್ ಕೊಟ್ರಂತೆ.
ಆಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಎಂಗೈತ್ಲಾ ಲಾಕ್ಡೌನು
ಆಮಾಸೆ: ಫಾರ್ಟಿ ಡೇಸ್ ಲಾಕ್ಡೌನ್‌ಗೆ ಜಗತ್ತೇ ಅಲ್ಲಾಡೋಗೈತೆ ಸಾ.. ಮಾತಾಡಿದ್ರೆ ಬ್ಕಂ, ಮುಟ್ಟುದ್ರೆ ಕೋವಿಡ್, ಕೆಮ್ಮಿದ್ರೆ ಕೋವಿಡ್, ದಬ್ಕಂಡ್ರೆ ಬ್ಕಂ, ಶೇಕ್ ಹ್ಯಾಂಡ್ ಮಾಡುದ್ರೆ ಬ್ಕಂ ಒಟ್‌ನ್ಯಾಗೆ ಅಮಿಕ್ಕಂಡ್ ಒಂದ್ ಕಡೀಕ್ ಬಿದ್ಕೊಬೇಕಷ್ಟೇ
ಚೇರ್ಮನ್ರು : ಒಳ್ಳೇ ಪೀಕ್ಲಾಟ ಆಯ್ತಲ್ಲಾ, ಇನ್ನು ಏಟ್ ದಿನಾ ಇದ್ದದಂತೆ ಕರೀನಾ
ಆಮಾಸೆ: ಅದು ಕರೀನಾ ಅಲ್ಲಾ ಸಾ… ಕೋವಿಡ್. ಇನ್ಮೆಕೆ ಗಡಿ, ಕೆಮ್ಮು ಜ್ವರ, ಬಿಪಿ ಸುಗರು ಇದ್ದಂಗೆ ಕೋವಿಡ್ ನೂವೆ ಇರ್ತದಂತೆ. ಸಿಎಂ ಯಡ್ನೂರಪ್ನೊರೇ ಇನ್ನೊಂದು ಎಲ್ದು ಮೂರ್ ತಿಂಗ್ಳು ಹುಸಾರಣ್ಣಾ ಅಂತಾ ಹೇಳವ್ರೆ. ಡಾಕುಟ್ರಾಗ್ಳು ಡಿಸೆಂಬರ್ ಗಂಟಾ ಬತ್ತಾನೆ ಇರ್ತದೆ, ಜನಾ ದೂರ್ ದೂರಾ ಇರ್ಬೇಕು ಅಂತಾ ಹೇಳವ್ರೆ
ಚೇರ್ಮನ್ರು: ಅಂಗಾರೆ ಇವತ್ತೆ ಲಾಕ್ಡೌನ್ ಮುಗಿಯಾಕಿಲ್ವಾ
ಆಮಾಸೆ: ಎಲ್ ಮುಗೀತು ಸಾ.. ಲಾಕ್ಡೌನ್ ಮುಗಿದ್ರು
ಬೇಜಾನ್ ಕೋವಿಡ್ ಕೇಸ್ ಇರೋಕಡ್ಕ್ ಸೀಲ್ಡೌನ್ ಇರ್ತದಂತೆ. ಅಲ್ ಯಾರೂ ಕಮಕ್ ಕಿಮಕ್ ಅನ್ನಂಗಿಲ್ಲ
ಚೇರ್ಮನ್ರು: ಹೋಗ್ಲಿ ಎಣ್ಣೆ ಕತೆ ಏನಾತ್ಲಾ
ಅಮಾಸೆ: ಅದೊಂದ್ ರಿಲೀಪ್ ಸಿಕೈತೆ, ಬಿಗ್ ಬಾಸ್ ಮೋದಿಗೆ ಒಂದೇ ದಪಾ ಎಲ್ರೂ ಜೈ ಅಂದ್ ಬುಟ್ರಾ. ಓನ್ಲಿ ಪಾರ್ಸೆಲ್ ಸರ್ವಿಸ್ ಐತಂತೆ. ಹಾಟ್‌ಸ್ಪಾಟ್ ಬುಟ್ಟು ಮಿಕ್ದಂಗೆ ಎಲ್ಲಾ ಕಡ್ಕ್ ಸಿಗ್ತತಂತೆ. ಮಂಡೇ ವತ್ತಾರೆ ಎವಾಗಾಯ್ತದೋ ಅಂತಾ ಎಣ್ಣೆ ಫ್ಯಾನ್ಸ್ ಕಾಯ್ತಾವ್ರೆ. ಇನ್ನೊಂದ್ ಮಂತ್ ಬೇಕಾದ್ರೆ ಲಾಕ್ಡೌನ್ ಮಾಡ್ಕಳಿ ನಾವ್ ತೀರ್ಥ ಬಿಟ್ಕಂಡು ಇಧ್ದೋಯ್ತಿವಿ ಅಂತಾ ಭುಜ ಕುಣ್‌ತ್ಸಾವ್ರೆ
ಚೇರ್ಮನ್ರು: ರಾಜಾಹುಲಿ ಯಡ್ನೂರಪ್ನೊರು ಒಪ್ ಕಂಡ್ರಾ
ಆಮಾಸೆ: ಒಪ್‌ಕಳ್ದೆ ಇನ್ನೇನ್ ಮಾಡ್ತಾರೆ, ಗವರ್ನಮೆಂಟ್ ನ್ಯಾಗೆ ಮನಿ ಖಾಲಿ ಆಗೋಗಿ ಲಾಟ್ರಿ ಹೊಡೀತಾವ್ರೆ. ಏನೇ ಕೇಳಿದ್ರೂ ಅಫಿಸರ್‌ಗು ನೋ ರೆವಿನ್ಯೂ ಅಂತ ರಿಜೆಕ್ಟ್ ಮಾಡ್ತಾವ್ರೆ. ಆದ್ಕೆ ಎಣ್ಣೆ ಮಾರೋದೋ ಬೆಸ್ಟ್. ಎವರಿಡೇ ರೆವಿನ್ಯೂ ಬತ್ತದೆ ಅಂತ ಪರ್ಮಿಸನ್ ಕೊಟ್ಟವ್ರೆ.
ಚೇರ್ಮನ್ರು: ಸಿದ್ರಾಮಣ್ಣೋರು, ವಿಸ್ವನಾಥಣ್ಣೋರು ಎಣ್ಣೆ ಮಾರಿ ಅಂದ್ರಂತೆ
ಅಮಾಸೆ: ಹೌದೇಳಿ, ಇಬ್ರೂ ಎಣ್ಣೆ ಮಾರೋಕೆ ಸ್ಟಾಟ್ ಮಾಡ್ಬುಡಿ ಅತ್ಲಾಗೆ ರೆವಿನ್ಯೂ ಬತ್ತದೆ ಅಂತಾ ಸಜೆಸನ್ ಕೊಟ್ರಂತೆ. ಆದ್ಕೆ ಯಡ್ನೂರಪ್ನೊರು, ಆಯ್ಯೋ ನಾವ್ ಓಕೆ ಅಂದ್ರೆ ಬಿಗ್ ಬಾಸ್ ಮೋದಿ ತಪ್ ತಿಳ್‌ಕಂಡ್ರೆ ಅಂದ್ರಂತೆ. ಸಿದ್ರಾಮಣ್ಣೋರು, ಅವ್ರು ಒಪ್‌ಕೋತರೆ ನೀವ್ ರಿಕ್ವೆಸ್ಟ್ ಮಾಡ್ಕಳಿ ಯಡ್ನೂರಪ್ಪಾ… ಎಲ್ಲಾ ಸಿಎಂಗ್ಳು ಅದೇ ಪಿಲಾನ್ ಮಾಡ್ತಾವ್ರೆ ಅಂತ ಪಸರ್ ಐತೆ ಅಂದ್ರಂತೆ.
ಚೇರ್ಮನ್ರು: ಆದ್ಕೆ ಯಡ್ನೂರಪ್ನೊರು ಏನಂದ್ರಂತೆ
ಆಮಾಸೆ: ಆಯ್ತು ಸಿವನೇ ಅಂತೇಳಿ ಯಡ್ನೂರಪ್ನೊರು ವಿಡಿಯೋ ಕಾನ್ಪರೆನ್ಸ್‌ನಾಗೆ ಎಣ್ಣೆ ವಿಚಾರ ಪ್ರಸ್ತಾಪ ಮಾಡ್‌ತ್ಲೆ ಎಲ್ಲಾ ಸಿಎಂಗ್ಳು ನಂದೂ ಒಂದು ಗೋವಿಂದಾ ಅಂದ್ರಂತೆ.
ಆಮ್ಯಾಕೆ ಬಿಗ್‌ಬಾಸ್ ಓಕೆ ಮಾಡಿದ್ರಂತೆ. ಮಿನಿಸ್ಟ್ರೆಗ್ಳು, ಆಫಿಸರ್‌ಗ್ಳೂನೂವೆ ಓಯ್..ಓಯ್…ನಾಯ್ಕ ಅಂತಾ ಚಪ್ಪಾಳೆ ತಟ್ಟಿದ್ರಂತೆ.
ಚೇರ್ಮನ್ರು: ಹೋಗ್ಲಿ ಬುಡ್ಲಾ , ಎಣ್ಣೆ ಫ್ಯಾನ್ಸ್ ಪೈನ್ ನೋಡಾಕಾಯ್ತಿರ್ಲಿಲ್ಲ. ನೈಂಟಿ ಹಾಕ್ಕಂಡ್ ಹಟ್ಟಿನಾಗೆ ಮನೀಕೋತಾರೆ
ಅಮಾಸೆ: ಹೌದೆನ್ನಿ ನಾನೂ ಕಾಯ್ತಿವ್ನಿ, ಗಂಟ್ಲು ತ್ಯಾಮೇ ಮಾಡ್ಕೂಮಾ ಅಂತಾ. ನಾಲ್ಗೆ ಮ್ಯಾಗೆ ರಮ್ ಡ್ರಾಪ್ ಬಿದ್ದು ತಿಂಗ್ಳು ಮೇಲಾಗೋಯ್ತು, ಅದಿಲ್ದೆ ಬಾಡು ಬಾಡೀಗ್ ಸೇರ್ತಿಲ್ಲ
ಚೇರ್ಮನ್ರು: ಹಿಂಗೇ ಆದ್ರೆ ಮುಂದ್ಕೆ ಎಂಗ್ಲಾ ಜೀವವ್ನ
ಅಮಾಸೆ: ಆಂಗೂ ಇಲ್ಲ , ಇಂಗೂ ಇಲ್ಲ. ನೋ ಹತ್ರ ಹತ್ರ, ಓನ್ಲಿ ದೂರ ದೂರ. ಟಾಕಿಂಗ್ ವಿತ್ ಫೋನ್, ಚಾಟಿಂಗ್ ಆನ್ ವಾಟ್ಸಾಪ್, ಫೇಸ್ ಬುಕ್. ಇದ್ರೆ ಕೇಮು, ಇಲ್‌ದಿದ್ರೆ ಫ್ಯಾಮ್ಲಿ
ಜತ್ಗೆ ಟೈಂಪಾಸ್. ಸಂಡೆ ಸ್ಪೆಸಲ್ ಅಂತಾ ಬಿಗ್‌ಬಾಸ್ ಮೋದಿ ಸಾಹೇಬ್ರು, ಹೆಡ್ ಮಾಸ್ಟ್ರೆ ಅಮಿತ್ ಸಾ ಅಣ್ಣೋರು ಮೇರೆ ದೇಸ್ ವಾಸಿಯೋ ಅಂದ್ರೆ ಹೇಳಿ ಸಿವಾ ಅಂತಾ ಕಿವಿ ನೆಟ್ಗೆ
ಮಾಡ್ಕಂಡು ಕೇಳ್ಕೋಬೇಕು. ಜೀವ ಇದ್ರೆ ಜೀವ್ನ. ನಾವಿದ್ರೆ ಲೋಕ ಆಂತಾ ಹೋಯ್ತಿರ್‌ಬೇಕು .
ಚೇರ್ಮನ್ರು: ಅಂಗಾರೆ ಲೈಫ್ ಪೂರಾ ಕೋವಿಡ್ ಭಯ್ದಾಗೆ ಇರ್ಬೇಕಾ
ಅಮಾಸೆ: ನೋ ವೇ, ಕೊರೊನಾ ಜತೆ ಜೀವ್ನ ಅಡ್ಜೆಸ್ಟ್ ಮಾಡ್ಕೊಬೇಕಷ್ಟೇ ಸಾ… ನೀವ್ ಹುಸಾರು, ಮಂಡೇ ಎಲ್ಡ್ ಡ್ರಾಪ್ ಎಣ್ಣೆ ಕೈಗುಜ್ಕೊಳಿ ಕೋವಿಡ್ ಕುರ್ರೋ ಅಂತಾ ಒಂಟೋಯ್ತದೆ. ನನ್ ಹೆಂಡ್ರು ತಲೆಮಾಂಸಾ ತತ್ತಾ ಅಂದವಳೇ ಬತ್ತೀನಿ ಸಾ…..
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.