ಲಾಕ್ ಡೌನ್: ಹಿರಿಯರಿಗೆ ಹೋಂ ಡೆಲಿವರಿಯ ಆಸರೆ
Team Udayavani, May 9, 2020, 2:06 PM IST
ಮಣಿಪಾಲ: ತನ್ನ ಮನೆಯ ಸುತ್ತ ಇರುವ ಗುಲಾಬಿ ತೋಟಕ್ಕೆ ಹೋಗಿ ನೀರು ಹಾಕಿದ್ದು ಬಿಟ್ಟರೆ ಬಹುತೇಕರು ಮನೆಯಿಂದ ಹೊರಬಂದಿಲ್ಲ. ಇದು ಕ್ಯಾಲಿಫೋರ್ನಿಯಾದ ಹಲವರ ಕಥೆಯಿದು. ಸುಮಾರು 8 ವಾರಗಳಿಂದ ಇವರದ್ದು ಇದೇ ದಿನಚರಿ. ಕೆಲವರು ತಮ್ಮ ಮೆಡಿಕಲ್ ಮತ್ತು ದಿನಸಿ ಅಂಗಡಿಗೆ ತೆರಳಬೇಕಿತ್ತು. ಆದರೆ ಮನೆಯ ಕಂಪೌಡ್‌ನಿಂದ ಹೊರಗೆ ಹೋಗದೇ ಎಲ್ಲವನ್ನೂ ನಿಭಾಯಿಸಿದ್ದರು.
ಕೆಲವರು ಹೃದಯದ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ಯಾರೋ ಒಬ್ಬರು ಉರಿಯೂತದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕೆ ಅವರು ಹೊರಗೆ ಹೋಗಿಲ್ಲ. ಕೋವಿಡ್-19 ಹೃದಯ ಸಂಬಂಧಿ ಕಾಯಿಲೆ ಇರುವ ಜನರಲ್ಲಿ ಹೆಚ್ಚಾಗಿ ಕಂಡು ಬಂದಿರುವ ಕಾರಣ ಆ ಸಮಸ್ಯೆ ಎದುರಿಸುತ್ತಿರುವವರು ಲಕ್ಷಾಂತರ ಮಂದಿ ಇದ್ದಾರೆ. ಬೇರೆ ಊರಿನಲ್ಲಿರುವ ತಮ್ಮ ಮಕ್ಕಳೊಂದಿಗೆ ಮಾತನಾಡಬೇಕೆಂದರೆ ಫೋನ್‌ನಲ್ಲಿ ಮಾತನಾಡಿ ಮುಗಿಸುತ್ತಾರೆ. ಹೊರಗೆ ಕಾಲಿಡದಿದ್ದರೂ ಯಾರೂ ಒಂದು ಹೊತ್ತೂ ಉಪವಾಸ ಮಲಗಿಲ್ಲ. ಮನೆಗೆ ದಿನಸಿ ಸಾಮಗ್ರಿಗಳು ಪೂರೈಕೆಯಾಗುತ್ತಿತ್ತು.
ಸೋಂಕು ಹೆಚ್ಚಾಗುತ್ತಿದ್ದ ಸಂದರ್ಭ ಮನೆಯಿಂದ ಹೊರ ಹೋಗಲು ಅಸಾಧ್ಯ. ಹಾಗಾಗಿ ತಮ್ಮ ರಸ್ತೆಯಲ್ಲೇ ಇರುವ ಸ್ವಯಂ ಸೇವಕಿಯೊಬ್ಬರೊಂದಿಗೆ ಸ್ನೇಹವಿತ್ತು. ಸ್ಥಳೀಯ ಸೇವಾ ಸಂಸ್ಥೆಯೊಂದರ ಕಾರ್ಯಕರ್ತೆ. ಈ ಇಳಿವಯಸ್ಸಿನವರ ಅಗತ್ಯವನ್ನು ಈ ಕಾರ್ಯಕರ್ತೆ ಪೂರೈಸುತ್ತಾರೆ.
ದಿನಸಿ ವಸ್ತುಗಳನ್ನು ಖರೀದಿಸಲು ಹೊರಬರಲು ಅಸಾಧ್ಯವಾದವರಿಗೆ ನೆರವಾಗುತ್ತಾರೆ. ಹಿರಿಯರಿರುವ ಮನೆಗಳಿಗೇ ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ. ಅದು ಸೇವೆ. ಮನೆಯವರು ಪಾವತಿಸುವುದು ದಿನಸಿಯ ಹಣ ಮಾತ್ರ. ಈ ಕಾರ್ಯಕರ್ತೆಯರು ಟಿಪ್ಸ್ ಅಥವಾ ಸಾಗಣೆ ವೆಚ್ಚವನ್ನು ತೆಗೆದುಕೊಳ್ಳುವುದಿಲ್ಲ.
“ನಾನು ಏನು ಮಾಡಬೇಕು ಎಂದು ನನಗೆ ತಿಳಿದಿರಲಿಲ್ಲ. ಸಾಕಷ್ಟು ಖನ್ನತೆಗೆ ಒಳಗಾಗಿದ್ದೆ. ನಾನು ಆನ್‌ಲೈನ್‌ನಲ್ಲಿ ಬರ್ಕ್ಲಿ ಸೇವಾ ಸಂಸ್ಥೆಯ ಹೆಸರು ನೋಡಿದ ಬಳಿಕ ನಿರಾಳವಾದೆ. ಇಂದು ನನ್ನ ಅಗತ್ಯವನ್ನು ಇದು ಪೂರೈಸುತ್ತಿದೆ ಎನ್ನುತ್ತಾರೆ ಹಾಗೆ ಸಹಾಯ ಪಡೆದವರಲ್ಲಿ ಒಬ್ಬರು. ಕ್ಯಾಲಿಫೋರ್ನಿಯಾದ ಗವರ್ನರ್ ರಾಜ್ಯವ್ಯಾಪಿ ಲಾಕ್‌ಡೌನ್‌ಗೆ ಆದೇಶಿಸಿದಾಗ “ಬರ್ಕ್ಲಿ ಮ್ಯೂಚುವಲ್ ಏಡ್ ನೆಟ್ವರ್ಕ್’ ಪ್ರಾರಂಭಗೊಂಡಿತ್ತು.
ಕೋವಿಡ್-19ನಿಂದ ನಾವು ಜನರನ್ನು ಸುರಕ್ಷಿತವಾಗಿಡಲು ಹೇಗೆ ಸಹಾಯ ಮಾಡಬಹುದು? ಎಂಬುದನ್ನು ಈ ಯೋಚಿಸಿದಾಗ ಈ ಐಡಿಯಾ ಬಂತು ಎಂದು ಇದರ ಸ್ಥಾಪಕರಲ್ಲಿ ಒಬ್ಬರಾದ ಮಾರ್ಕ್ಸ್ ಅವರ ಅಭಿಪ್ರಾಯ. ತಮ್ಮ ನೆರೆಹೊರೆಯಲ್ಲಿ ವಾಸಿಸುತ್ತಿರುವ ಹಿರಿಯರಿಗೆ ದಿನಸಿ ವಸ್ತುಗಳನ್ನು ನೀಡಲು ಪ್ರಾರಂಭಿಸಿದರು. ಈಗ ಈ ಸಂಸ್ಥೆ 750ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಈ ಸ್ವಯಂಸೇವಕರು ತಮ್ಮ ಗ್ರಾಹಕರಿಂದ ಕನಿಷ್ಠ ಆರು ಅಡಿಯ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಸೇವೆ ಸಲ್ಲಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.