ಅಮೆರಿಕದ ಜನರು ಮನೆಯೊಳಗೆ ಇರಲು ಒಪ್ಪುತ್ತಿಲ್ಲ
Team Udayavani, Apr 29, 2020, 1:52 PM IST
ಮಣಿಪಾಲ: ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಇಡೀ ದೇಶ ಲಾಕ್‌ಡೌನ್‌ನಲ್ಲಿದೆ. ಜನರು ಮನೆಯಲ್ಲಿಯೇ ಇರಬೇಕು. ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳಬಾರದು ಎಂದು ಸರಕಾರಗಳು ಆದೇಶ ನೀಡಿವೆ. ಆದರೆ ಹಲವು ವಿದೇಶಗಳಲ್ಲಿ ಜನರು ಮನೆಯಿಂದ ಹೊರಗೆ ಬರುತ್ತಿರುವ ಕುರಿತು ಸುದ್ದಿಯಾಗುತ್ತಿದೆ.
ವಿದೇಶಗಳಲ್ಲಿ ಹವಾಮಾನವು ಬೆಚ್ಚಗಾಗುತ್ತಿದ್ದಂತೆ ಕೆಲವು ರಾಜ್ಯಗಳು ತನ್ನ ಲಾಕ್‌ಡೌನ್ ಅನ್ನು ತೆರೆಯಲು ಮುಂದಾಗಿವೆ. ನ್ಯೂಯಾರ್ಕ್‌ನ ಕೆಲವು ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಇಲ್ಲಿನ ಬ್ರೂಕ್ಲಿನ್ ಪಾರ್ಕ್ ನಲ್ಲಿ ಜನರು ವಿಹರಿಸ ತೊಡಗಿದ್ದಾರೆ. ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧನೆ ದೇಶದಲ್ಲಿ “ಜನರು ಮನೆಯಲ್ಲಿ ಇರಿ’ ಎಂಬ ಆದೇಶವನ್ನು ಮುರಿಯುತ್ತಿದ್ದಾರೆ ಎಂದಿದೆ. ಹೆಚ್ಚಿನ ಜನರು ಹೊರಗೆ ಹೋಗುತ್ತಿ¨ªಾರೆ. ಮನೆಯನ್ನು ಬಿಟ್ಟು ತಮ್ಮ ಹಳೆಯ ಜೀವನ ಕ್ರಮಕ್ಕೆ ಬರುತ್ತಿದ್ದಾರೆಂದೂ ಹೇಳಿದೆ. ಮೊಬೈಲ್‌ನ ಲೊಕೇಶನ್ ಡೇಟಾವನ್ನು ಬಳಸಿಕೊಂಡು ಜನರನ್ನು ಟ್ರ್ಯಾಕ್ ಮಾಡಲಾಗಿದೆ.
ಮಾರ್ಚ್ ಮೂರನೇ ವಾರದಲ್ಲಿ ಮನೆಯಲ್ಲಿಯೇ ಇರುವಂತೆ ಕಡ್ಡಾಯಗೊಳಿಸಿದಾಗಲೂ ಕೆಲವರು ಹೊರಗೆ ಹೋಗಿದ್ದರು ಎಂದು ಸಂಶೋಧನೆ ಹೇಳಿದೆ. ಕೆಲವು ವಾರಗಳವರೆಗೆ ಕೆಲವರು ಇಂತಹ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಅನಂತರ ಎಪ್ರಿಲ್ 14ರ ಬಳಿಕ ಹೆಚ್ಚಿನ ಜನರು ಹೊರಹೋಗಲು ಪ್ರಾರಂಭಿಸಿದರು ಎಂದು ಹೇಳಿದೆ.
ಉದಾಹರಣೆಗೆ ಟೆಕ್ಸಾಸ್‌ನಲ್ಲಿ ಶೇ. 25ರಷ್ಟು ಜನರು ಮಾತ್ರ ಎಪ್ರಿಲ್ 24ರ ವರೆಗೆ ಮನೆಯಲ್ಲಿಯೇ ಇದ್ದರು. ಲೂಯಿಸಿಯಾನದಲ್ಲಿ, ಜನರು ಸರಾಸರಿ 31.1 ಮೈಲುಗಳಷ್ಟು ಪ್ರಯಾಣ ನಡೆಸಿದ್ದರು. ಇದರಿಂದ ಜನರಿಗೆ ಮನೆಯಲ್ಲಿ ಕುಳಿತು ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಅವರು ಅದಕ್ಕೆ ತಯಾರಿಲ್ಲ ಹಾಗೂ ಹಾಗೆ ಇರುವುದು ಅವರಿಗೆ ಬೇಸರ ತರುವ ಸಂಗತಿ ಎಂದಿದೆ ಸಂಶೋಧನೆ. ಆದರೆ ಜನರ ಈ ನಡವಳಿಕೆಯಿಂದ ಆತಂಕವೇ ಹೆಚ್ಚು. ಜನರು ಪ್ರಯಾಣ ಮಾಡಿ ಇತರರೊಂದಿಗೆ ಸಂವಹನ ಮಾಡಿರುವುದರಿಂದ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದೆ.
ಒಂದು ತಿಂಗಳ ಅಂಕವನ್ನು ದಾಟಿದ ನಂತರ ಜನರು ಒಟ್ಟಾಗಿ ಮನೆಯಲ್ಲಿ ಉಳಿಯಲು ಯಾಕೋ ಮನಸ್ಸು ಮಾಡುತ್ತಿಲ್ಲ. ಅವರು ಸ್ವಲ್ಪ ದಣಿದಿ¨ªಾರೆ ಎಂದು ತೋರುತ್ತದೆ ಎಂದಿದೆ ಸಂಶೋಧನೆ. ದಕ್ಷಿಣ ಕ್ಯಾಲಿಫೋರ್ನಿಯಾದ ಬಿಸಿಲಿನ ಹವಾಮಾನ ಈಗಿನದ್ದಾಗಿದ್ದು, ವೀಕೆಂಡ್‌ಗಳಲ್ಲಿ ಜನರು ಕಡಲತೀರಗಳು ಮತ್ತು ಪಾರ್ಕ್‌ಗಳಲ್ಲಿ ಸೇರುತ್ತಿದ್ದಾರೆ. ನ್ಯೂಯಾರ್ಕ್‌ನಲ್ಲಿಯೂ ಬೆಚ್ಚಗಿನ ವಾತಾವರಣವಿದ್ದು ಉದ್ಯಾನವನಗಳಿಗೆ ಜನರು ಹರಿದು ಬರುತ್ತಿದ್ದಾರೆ. ಇದರಿಂದ ಹೊಸ ಸಮಸ್ಯೆ ಸೃಷ್ಟಿಯಾಗುತ್ತಿದೆ.
ನಿಯಮಗಳು ಲೆಕ್ಕಕ್ಕಿಲ್ಲ
ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕೋವಿಡ್ ವೈರಸ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಅಲ್ಲಿನ ಜನರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಜನರು ಇದೇ ರೀತಿ ಹೊರ ಹೋಗಲು ಪ್ರಾರಂಭಿಸಿದರೆ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯ ಇದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ಗಳನ್ನು ಧರಿಸಬೇಕು, ಮನೆಯಲ್ಲಿಯೇ ಇರಬೇಕು ಎಂಬ ಸರಕಾರ ಆದೇಶವನ್ನು ಅಲ್ಲಗೆಳೆದು ಸಮುದ್ರ ತೀರದಲ್ಲಿ ಉದ್ಯಾನವನಗಳಲ್ಲಿ ಸೇರುತ್ತಿರುವುದು ಸರ್ವಥಾ ಸರಿಯಲ್ಲ. ಜನರು ಹೊರಗೆ ಹೋದಾಗ ಗೆಳೆಯರನ್ನು ಭೇಟಿಯಾದಾಗ ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಅನುಸರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಮನೆಯೊಳಗೆ ಇರುವುದೇ ಸೂಕ್ತ. ಸಾಮಾಜಿಕ ಅಂತರವನ್ನು ಅನುಸರಿಸದೇ ಇದ್ದರೆ ವೈರಸ್ ಉಲ್ಬಣಗೊಳ್ಳಬಹುದು ಎಂದು ತಜ್ಞರು ಎಚ್ಚರಿಸಿ¨ªಾರೆ. ಕೆಲವು ರಾಜ್ಯಗಳು ತಮ್ಮ ಆರ್ಥಿಕತೆಯ ಕಾರಣಕ್ಕೆ ಕೆಲವು ಭಾಗಗಳನ್ನು ಕ್ರಮೇಣ ತೆರೆಯಲು ಮುಂದಾಗಿವೆ. ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮೇರಿಲ್ಯಾಂಡ್ ಸಂಸ್ಥೆಯ ಸಂಶೋಧನೆಯು ಸೆಲ್ ಫೋನ್ ಸ್ಥಳ ಡೇಟಾವನ್ನು ಆಧರಿಸಿದೆ. ವ್ಯಕ್ತಿಯ ಮನೆಯಿಂದ ಒಂದು ಮೈಲಿಗಿಂತ ಹೆಚ್ಚಿನ ಪ್ರಯಾಣ ಅದಾಗಿದ್ದರೆ ಮತ್ತು ಅವರು 10 ನಿಮಿಷಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇದ್ದರೆ ಅದನ್ನು ಪ್ರವಾಸವನ್ನು ಎಂದು ಪರಿಗಣಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.