ಲಾಕ್‌ಡೌನ್ ಮಧ್ಯೆ ಮಟ್ಟುಗುಳ್ಳ ಭರ್ಜರಿ ಮಾರಾಟ
Team Udayavani, May 6, 2020, 6:18 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಕೋವಿಡ್-19 ಕಾರ್ಮೋಡದ ಲಾಕ್‌ಡೌನ್ ನಡುವೆಯೂ ಉಡುಪಿ ಜಿಲ್ಲೆಯ ಮಟ್ಟು ಗುಳ್ಳ ಭರ್ಜರಿ ಮಾರಾಟವಾಗಿದೆ.ಲಾಕ್‌ಡೌನ್ ಜಾರಿಗೆ ಬಂದ ಮಾ.25ರಿಂದ ಇಂದಿನ ತನಕದ ಅವಧಿಯ ನಡುವೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ 48.89 ಮೆಟ್ರಿಕ್ ಟನ್ ಮಟ್ಟುಗುಳ್ಳ ಮಾರಾಟವಾಗಿದೆ. ಹೀಗಾಗಿ ಮಟ್ಟುಗುಳ್ಳ ಬೆಳೆಗಾರರು ನಷ್ಟಕ್ಕೆ ಒಳಗಾಗಿಲ್ಲ.
ಕಾಪು ತಾಲೂಕಿನ ಮಟ್ಟು, ಉಳಿಯಾರಗೋಳಿ ಹಾಗೂ ಕೋಟೆಗ್ರಾಮಗಳಲ್ಲಿ ಮಟ್ಟುಗುಳ್ಳ ಬೆಳೆಯಲಾಗುತ್ತಿದೆ. ಭೌಗೋಳಿಕ ಮಾನ್ಯತೆ ಪಡೆದ ಮಟ್ಟುಗುಳ್ಳಕ್ಕೆ ದೇಶ- ವಿದೇಶಗಳಲ್ಲಿ ಬಹಳಷ್ಟು ಬೇಡಿಕೆಯಿದೆ. ಉಡುಪಿ, ದ.ಕ. ಜಿಲ್ಲೆಗಳ ಮಾರುಕಟ್ಟೆಯಲ್ಲಿಯೂ ಮಟ್ಟುಗುಳ್ಳಕ್ಕೆ ಹೆಚ್ಚಿನ ಬೇಡಿಕೆ ಇದೆ. ಪ್ರಸಕ್ತ ಸಾಲಿನಲ್ಲಿ 128 ಎಕರೆ ಭೂಮಿಯಲ್ಲಿ 89 ಮಂದಿ ಬೆಳೆಗಾರರು ಮಟ್ಟುಗುಳ್ಳ ಬೆಳೆ ಬೆಳೆದಿದ್ದರು.
ಆರಂಭದಲ್ಲಿ ತೊಡಕು ಎದುರಾಗಿತ್ತು
ಲಾಕ್‌ಡೌನ್ ಇದ್ದುದರಿಂದ ಮಟ್ಟುಗುಳ್ಳಕ್ಕೆ ಮಾರುಕಟ್ಟೆ ವ್ಯವಸ್ಥೆಗೆ ಆರಂಭದಲ್ಲಿ ತೊಂದರೆಯಾಗಿ ಸಾಗಾಟಕ್ಕೆ ಸಮಸ್ಯೆಯಾಗಿತ್ತು. ಅನಂತರದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ವಾದಿರಾಜ ಮಟ್ಟುಗುಳ್ಳ ಬೆಳೆಗಾರರ ಸಂಘದ ನಡುವೆ ಮಾತುಕತೆ ನಡೆದಿತ್ತು. ಉಡುಪಿ ಮತ್ತು ದ.ಕ. ಜಿಲ್ಲೆ ತೋಟಗಾರಿಕೆ ಇಲಾಖೆಯ ಹಾಪ್‌ಕಾಮ್ಸ್ ವತಿಯಿಂದ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ವ್ಯವಸ್ಥೆಯನ್ನು ಮಾಡಲಾಯಿತು. ಸರಕು ಸರಬರಾಜು ಮಾಡಲು ಇಲಾಖೆಯಿಂದ ಪಾಸ್ ಪಡೆದು ಮಾರಾಟದಲ್ಲಿ ತೊಡಗಿಕೊಳ್ಳಲಾಗಿತ್ತು.
ಎಲ್ಲೆಲ್ಲಿ ಮಾರಾಟ?
ದ.ಕ. ಮತ್ತು ಉಡುಪಿ ಜಿಲ್ಲೆಗಳ ಹಾಪ್‌ಕಾಮ್ಸ್ ಪ್ರಧಾನ ಕೇಂದ್ರಕ್ಕೆ ಒಳಪಟ್ಟ ಕಡೆಗಳಲ್ಲಿ, ಕಾರ್ಕಳ, ಉಡುಪಿ ಬಸ್‌ಸ್ಟಾಂಡ್ ಬಳಿ, ಕುಂಜಿಬೆಟ್ಟು ಹೀಗೆ ಒಟ್ಟು 19 ಸ್ಟಾಲ್ ಹಾಗೂ ಕೆಲವು ಖಾಸಗಿ ಮಾರುಕಟ್ಟೆಗಳಲ್ಲಿ ಮಟ್ಟುಗುಳ್ಳವನ್ನು ಮಾರಾಟಕ್ಕೆ ಇರಿಸಲಾಗಿತ್ತು.
ಮಾರುಕಟ್ಟೆ ವ್ಯವಸ್ಥೆ
ಕೋವಿಡ್ -19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ತೋಟಗಾರಿಕೆ ಇಲಾಖೆಯಿಂದ ಕಾಪು ತಾಲೂಕಿನ ಮಟ್ಟುಗುಳ್ಳ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದರ ಪ್ರಯೋಜನವನ್ನು ಬೆಳೆಗಾರರು ಪಡಕೊಂಡಿದ್ದಾರೆ.
-ಭುವನೇಶ್ವರಿ,
ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಉಡುಪಿ
ಹೆಚ್ಚಿನ ಪ್ರಮಾಣದಲ್ಲಿ ಖರೀದಿ
ಪ್ರಸಕ್ತ ಸಾಲಿನಲ್ಲಿ ಇಳುವರಿ ಕಡಿಮೆ. ಈ ಹಿಂದಿನ ವರ್ಷ 80 ಸಾವಿರ ಮೆಟ್ರಿಕ್ ಟನ್ ಮಟ್ಟುಗುಳ್ಳ ಬೆಳೆಯಲಾಗಿತ್ತು. ಈ ಬಾರಿ ಲಾಕ್‌ಡೌನ್‌ನಿಂದ ಕಾರ್ಯಕ್ರಮ ಕಡಿಮೆಯಿತ್ತು. ಮಾರುಕಟ್ಟೆಗಳಲ್ಲಿ ಜನವಿರಳವಿತ್ತು. ಇಷ್ಟರ ನಡುವೆಯೂ ಮಟ್ಟುಗುಳ್ಳವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಬೆಳೆ ನಷ್ಟ ನಮಗೆ ಆಗಿಲ್ಲ.
-ಲಕ್ಷ್ಮಣ ಮಟ್ಟು,
ಮ್ಯಾನೇಜರ್, ಮಟ್ಟುಗುಳ್ಳ ಬೆಳೆಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.