Desi Swara: “ಸರ್ವತೋಮುಖ ಬೆಳವಣಿಗೆಗೆ ನಾಟ್ಯಶಾಸ್ತ್ರ ಪೂರಕ’
ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸೆಲೆನ್ಸ್
Team Udayavani, Aug 5, 2023, 10:20 AM IST
ಲಂಡನ್: ಇಲ್ಲಿನ ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸೆಲೆನ್ಸ್ ವತಿಯಿಂದ ಜು.31ರಂದು “ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ’ ಕಾರ್ಯಕ್ರಮವು ನೆಹರು ಸೆಂಟರ್ ಹೈ ಕಮಿಶನ್ಸ್ ಆಫ್ ಇಂಡಿಯಾದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟ್ಯಶಾಸ್ತ್ರ ಕೃತಿಯನ್ನು ಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಾಂಸರಾದ ಪ್ರೊ| ರಾಧಾವಲ್ಲಭ ತ್ರಿಪಾಠಿ “ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ ‘ ಎಂಬ ವಿಷಯದ ಕುರಿತು ಮಾತನಾಡುತ್ತಾ, “ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭರತಮುನಿಯ “ನಾಟ್ಯಶಾಸ್ತ್ರದ’ ಪ್ರಸ್ತಾವವೂ ಖಂಡಿತ ಬರುತ್ತದೆ.
ನಾಟ್ಯಶಾಸ್ತ್ರದಂತಹ ಬೃಹತ್ ಗ್ರಂಥದ ಪರಿಚಯವೇ ಅನೇಕರಿಗಿಲ್ಲ. ಅದಲ್ಲದೇ ನಾಟಕ, ನೃತ್ಯ ಹಾಗೂ ಸಂಗೀತದ ಬಗ್ಗೆ ತಿಳಿದವರು ಕೂಡ ಇದರ ಬಗ್ಗೆ ಪ್ರಚಾರ ಕೊಡುವುದಿಲ್ಲ. ಬ್ರಿಟನ್‌ನಲ್ಲಿ ಶೇಕ್ಸ್ ಪೀಯರ್ ವಿವರಣೆ ಮಾದರಿಯ ರಂಗವೇದಿಕೆಯಿದೆ. ಹಾಗೇ ಬಹಳಷ್ಟು ದೇಶಗಳಲ್ಲಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಸಂಗ್ರಹಾಲಯಗಳನ್ನು ನಿರ್ಮಿಸಲಾಗಿದೆ. ಅದೇ ಭಾರತದಲ್ಲಿ ಭರತಮುನಿ ಉಲ್ಲೇಖಿಸಿದಂತಹ ರಂಗಮಂಚವು ಸೃಷ್ಟಿಯಾಗಬೇಕಿದೆ. ನಾಟ್ಯಶಾಸ್ತ್ರ ಕೇವಲ ನೃತ್ಯಕ್ಕೆ ಸಂಬಂಧಿ ಸಿದ್ದಲ್ಲ, ಅದರಲ್ಲಿ ವೇದಗಳ ಉಲ್ಲೇಖವು ಇದೆ. ಒಬ್ಬ ವ್ಯಕ್ತಿಯ ಸರ್ವತೋ ಮುಖ ಬೆಳವಣಿಗೆಗೆ ಅದು ಪೂರಕವಾಗಿದೆ ‘ ಎಂದರು.
ನೆಹರು ಸೆಂಟರ್‌ನ ನಿರ್ದೇಶಕರು ಹಾಗೂ ಪ್ರಸಿದ್ಧ ಲೇಖಕಾಗಿರುವ ಅಮಿಶ್ ತ್ರಿಪಾಠಿಯವರು ಮಾತ ನಾಡುತ್ತಾ, ಇದು ಒಂದು ಶೈಕ್ಷಣಿಕ ಹಾಗೂ ಸ್ಫೂರ್ತಿದಾಯಕ ಕಾರ್ಯ ಕ್ರಮ. ಇಂತಹ ವಿದ್ವಾಂಸರು ಇಲ್ಲಿ ಬಂದು ಮಾತನಾಡುವುದೇ ನಮ್ಮ ಸೌಭಾಗ್ಯದ ವಿಷಯ’ ಎಂದರು.
ಭವನದ ನಿರ್ದೇಕರಾದ ನಂದ ಕುಮಾರ ಮಾತನಾಡಿ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಿದ್ಧ ಲೇಖಕ ಜಾನ್ ಫ್ಯಾರ್ಡೊನ್ ಪರಂಪರೆಯನ್ನು ಉಳಿಸುವ ಕುರಿತು ಮಾತನಾಡಿದರು.
ಇದೇ ವೇಳೆ 13ನೇ ಶತಮಾನದ “ಸಂಗೀತಚಂದ್ರ’ ಗ್ರಂಥವನ್ನು ಪ್ರಥಮ ಬಾರಿಗೆ ಇಂಗ್ಲಿಷ್‌ಗೆ ಅನುವಾದ ಮಾಡುವ ಪ್ರಯತ್ನವು ಸಂಸ್ಕೃತ ವಿದ್ವಾಂಸರಾದ ಡಾ| ರಾಘವೇಂದ್ರ ಹಾಗೂ ಸಂಸ್ಕೃತಿ ಸೆಂಟರ್‌ನ ನೇತೃತ್ವ ದಲ್ಲಿ ನಡೆದಿದ್ದು ಅದರ ಸುಮಾರು ನೂರಕ್ಕೂ ಹೆಚ್ಚು ಶ್ಲೋಕಗಳ ಅನುವಾದವನ್ನು ಲೋಕಾಪರ್ಣೆ ಮಾಡಲಾಯಿತು.
ಮಂಜು ಸುನಿಲ್ ಭರತನಾಟ್ಯ ಶೈಲಿಯಲ್ಲಿ ಪುಷ್ಪಾಂಜಲಿ, ಪ್ರಿಯಾ ಕುಶ್ವಾಹ ಕಥಕ್ ಶೈಲಿಯಲ್ಲಿ ಶಿವಸ್ತುತಿ ಹಾಗೂ ಡಾ| ಅಂಜಲಿ ಶರ್ಮಾ ತಿವಾರಿ ಅವರು ಜಾನಪದ ವಾದ್ಯಗಳನ್ನು ನುಡಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಆತ್ಮದೀಪ್ ಭಟ್ಟಾಚಾರ್ಜಿ ಅವರು ಪ್ರಾರ್ಥಿ ಸಿ ದರು. ರಾಧಿಕಾ ಜೋಶಿ ನಿರೂಪಿಸಿ, ಸುಶೀಲ್ ರಾಪಾತ್ವಾರ್ ವಂದಿಸಿ ದರು. ಸಂಸ್ಕೃತಿ ಸೆಂಟರ್‌ನ ಕಲ್ಚರಲ್ ಎಕ್ಸೆಲೆನ್ಸ್‌ನ ಸಂಸ್ಥಾಪಕಿ ರಾಗ ಸುಧಾ ವಿನಿಜಮೂರಿ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.