Loretto: ಲಾರಿ-ಕಾರು ಢಿಕ್ಕಿ; ಕಾರು ಚಾಲಕನಿಗೆ ಗಾಯ
Team Udayavani, Nov 10, 2023, 2:05 AM IST
ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ರಸ್ತೆಯ ಲೊರೆಟ್ಟೋ ಬಳಿ ಲಾರಿ ಹಾಗೂ ಕಾರು ಢಿಕ್ಕಿಯಾಗಿ ಮೈಸೂರು ಮೂಲದ ಕಾರು ಚಾಲಕ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಕಾರು ಚಾಲಕ ಮೈಸೂರಿನ ಕೃಷ್ಣ ಅರಸ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಮೂಡಬಿದಿರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ದೀಪಾವಳಿಯ ಹಿನ್ನೆಲೆಯಲ್ಲಿ ಊರಿಗೆ ಕರೆದುಕೊಂಡು ಹೋಗುವುದಕ್ಕಾಗಿ ಮೈಸೂರಿಗೆ ತೆರಳುತ್ತಿದ್ದು, ಈ ವೇಳೆ ಹೆದ್ದಾರಿಯ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆಯ ಜಲ್ಲಿ ಸಾಗಾಟದ ಲಾರಿ ಢಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದೆ.
ಘಟನೆ ನಡೆಯುತ್ತಲೇ ಸುಮಾರು 50ಕ್ಕೂ ಅಧಿಕ ಮಂದಿ ಸ್ಥಳೀಯರು ಸೇರಿ ಲಾರಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರತಿಭಟನೆ ನಡೆಸಿದ್ದು, ಈ ಹಿಂದೆಯೂ ಹೆದ್ದಾರಿಯ ಕಾಮಗಾರಿಯ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಗೆ ಸೇರಿದ ಲಾರಿಯ ಮಿತಿ ಮೀರಿದ ವೇಗದಿಂದ ಸಾಕಷ್ಟು ಅಪಘಾತಗಳು ನಡೆದಿದೆ ಎಂದು ಆರೋಪಿಸಿದ್ದಾರೆ.
ಲಾರಿ ಚಾಲಕರು ಎಸಿ ಹಾಕಿ ಕಿವಿಗೆ ಇಯರ್ ಪೋನ್ ಇಟ್ಟುಕೊಂಡು ಜಲ್ಲಿ ಸಾಗಿಸುತ್ತಿದ್ದು, ಇದರಿಂದ ಈ ಭಾಗದಲ್ಲಿ ಸಣ್ಣ ವಾಹನದವರು ಜೀವ ಕೈಯಲ್ಲೇ ಹಿಡಿದು ಸಾಗಬೇಕಿದೆ. ಲಾರಿಯ ಮಿತಿ ಮೀರಿದ ವೇಗದಿಂದ ರಸ್ತೆಯೂ ಹದಗೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸುತೇಶ್, ಸಂಜೀವ, ಎಎಸ್‌ಐ ಸುರೇಶ್ ಪಡಾರು, ಸಿಬಂದಿ ವಿವೇಕ್, ಸಂತೋಷ್ ಅವರು ಸಾರ್ವಜನಿಕರನ್ನು ಸಮಾಧಾನಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.