ನಷ್ಟ: ವಿಶ್ವ ಸರಣಿಯ ಆತಿಥ್ಯಕ್ಕೆ ಪಾಕ್ ಮನವಿ
Team Udayavani, Apr 6, 2020, 5:00 AM IST
ಕರಾಚಿ: ಗಡಿಯಾಚೆಯಿಂದ ಪಾಕಿಸ್ಥಾನ ಭಾರತಕ್ಕೆ ಭಯೋತ್ಪಾದನೆ ರಫ್ತು ಮಾಡುತ್ತಿದೆ. ಅದರ ಪರಿಣಾಮ ಭಾರತ ಆ ದೇಶದೊಂದಿಗೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದೆ. ಇದರ ಬೆನ್ನಲ್ಲೇ ಅಲ್ಲಿಗೆ ಅಂತಾರಾಷ್ಟ್ರೀಯ ತಂಡಗಳು ಹೋಗುವುದನ್ನು ಬೇರೆ ನಿಲ್ಲಿಸಿದ್ದವು. ಒಟ್ಟಾರೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಆರ್ಥಿಕವಾಗಿ ಕುಸಿದಿತ್ತು. ಈಗ ಪಿಸಿಬಿ, ಐಸಿಸಿಗೆ ಬಲವಾದ ಮನವಿ ಸಲ್ಲಿಸಿ, ನಾವು ವಿಪರೀತ ನಷ್ಟದಲ್ಲಿದ್ದೇವೆ. ಇದನ್ನು ತುಂಬಿಕೊಳ್ಳಲು ನಮಗೆ ವಿಶ್ವಸರಣಿಯ ಆತಿಥ್ಯ ವಹಿಸಿಕೊಳ್ಳಲು ಅವಕಾಶ ನೀಡಿ ಎಂದು ಕೇಳಿಕೊಂಡಿದೆ.
ಭಾರತ ಆಡದಿರುವುದರಿಂದ ನಾವುಆರ್ಥಿಕವಾಗಿ ಕುಸಿದಿದ್ದೇವೆ. ಭವಿಷ್ಯದಲ್ಲಿ ಕ್ರಿಕೆಟ್ ನಡೆಯುವುದು ಅನು ಮಾನವಾಗಿದ್ದರಿಂದ 2023ರ ಹೊತ್ತಿಗೆ ನಾವು ವಿಶ್ವಸರಣಿ ಆಯೋಜಿಸಲು ಅವಕಾಶ ಕೇಳಿದ್ದೇವೆ. ನಾವೀಗ ವಿಶ್ವಕೂಟ ನಡೆಸುವ ಎಲ್ಲ ಸಾಮರ್ಥ್ಯ ಹೊಂದಿದ್ದೇವೆ ಎಂದು ಪಿಸಿಬಿ ಸಿಇಒ ವಾಸಿಂ ಖಾನ್ ಹೇಳಿದ್ದಾರೆ.ಒಂದು ವೇಳೆ ಐಸಿಸಿ ಅವಕಾಶ ನೀಡಿದ ಬಳಿಕ ಪಾಕ್‌ನಲ್ಲಿ ವಿಶ್ವಕೂಟ ನಡೆದರೆ, ಭಾರತೀಯ ಕ್ರಿಕೆಟ್ ಮಂಡಳಿ ಇಕ್ಕಟ್ಟಿಗೆ ಸಿಲುಕಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.