Malpe: ಕಡಲ ತೀರದಲ್ಲಿ ಹರಡಿದ ರಾಶಿ ರಾಶಿ ತ್ಯಾಜ್ಯ
ಸೀ ವಾಕ್‌ನಿಂದ ಬೀಚ್‌ವರೆಗೂ ಭಾರೀ ಪ್ರಮಾಣದ ಕಸ ಕಡ್ಡಿ; ತ್ವರಿತವಾಗಿ ತೆರವು ಮಾಡಲು ಪರಿಸರ ಪ್ರಿಯರ ಮನವಿ
Team Udayavani, Aug 3, 2024, 3:37 PM IST
ಮಲ್ಪೆ: ಮಳೆಗಾಲದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಅಲೆಗಳು ಸಮುದ್ರದೊಳಗಿನ ಕಸಕಡ್ಡಿ ತ್ಯಾಜ್ಯಗಳನ್ನು ತೀರಕ್ಕೆ ತಂದು ಎಸೆಯುವುದು ಸಾಮಾನ್ಯ ಸಂಗತಿ.
ಇದೀಗ ಮಲ್ಪೆ ಬೀಚ್‌ನಲ್ಲಿ ಹೇರಳ ಪ್ರಮಾಣದಲ್ಲಿ ಕಸ ಬಿದ್ದಿದೆ. ಮಲ್ಪೆ ಸೀವಾಕ್‌ನಿಂದ ಬೀಚ್‌ವರೆಗೂ ಹರಡಿಕೊಂಡಿದೆ. ಕೆಲವಡೆ ದಪ್ಪ ದಪ್ಪ ಪದರಾಗಿ ಬಿದ್ದಿದೆ. ಇದರಲ್ಲಿ ಕೊಳೆತ ಗಿಡ, ಮರಗಳ ಎಲೆಗಳು ಮಾತ್ರವಲ್ಲದೆ ನಾನಾ ರೀತಿಯ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಬಿದ್ದಿರುವ ಭಾರೀ ಮಳೆಗಾಳಿಯಿಂದಾಗಿ ಈ ತಾಜ್ಯಗಳು ನದಿ ನೀರಿನೊಂದಿಗೆ ಸಮುದ್ರ ಸೇರಿತ್ತು. ಈಗ ಸಮುದ್ರ ಉಬ್ಬರದ ಸಮಯದಲ್ಲಿ ಸಾಗರ ಗರ್ಭ ಸೇರಿದ್ದ ಈ ಎಲ್ಲ ಕಸಕಡ್ಡಿಗಳು ಮಲ್ಪೆ ಬೀಚ್ ಕಡಲತೀರದಲ್ಲಿ ರಾಶಿಯಾಗಿ ಬಿದ್ದಿದೆ.
ಇಂದ್ರಾಣಿ, ಉದ್ಯಾವರ ಹೊಳೆಯ ಮೂಲಕ ಪ್ಲಾಸ್ಟಿಕ್ ಇಂದ್ರಾಣಿ
ನದಿ, ಉದ್ಯಾವರ ಹೊಳೆಗಳು ಹರಿದು ಇಲ್ಲಿನ ಸಮುದ್ರ ಸೇರುತ್ತವೆ. ಇದಕ್ಕೆ ಹೊಂದಿಕೊಂಡಿರುವ ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಯಲ್ಲಿ ಎಸೆಯುತ್ತಿದ್ದು ಇವು ಹರಿದು ಬಂದು ಕೊನೆಯಲ್ಲಿ ಕಡಲು ಸೇರುತ್ತಿವೆ. ಹತ್ತಾರು ವರ್ಷ ಕರಗದ ಪ್ಲಾಸ್ಟಿಕ್‌ತ್ಯಾಜ್ಯಗಳು ಕಡಲಿನಲ್ಲಿಹಲವಾರು ವರ್ಷಗಳಿಂದ ಸಂಗ್ರಹವಾಗಿ ಕಡಲ ಪರಿಸರವನ್ನು ಸಂಪೂರ್ಣ ಹಾಳು ಮಾಡುತ್ತಿವೆ ಎಂಬುದು ಪರಿಸರ ಪ್ರಿಯರ ಆರೋಪವಾಗಿದೆ.
ಪ್ರವಾಸಿಗರು ತಂಪು ಪಾನೀಯ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ತರುವುದು ಸಾಮಾನ್ಯ. ಪಾನೀಯ ಕುಡಿದು ಮೋಜು ಅನುಭವಿಸುವ ಕೆಲ ಪ್ರವಾಸಿಗರು ವಾಪಸು ತೆರಳುವಾಗ ನಿರುಪಯುಕ್ತ ಬಾಟಲಿಗಳನ್ನು ಕಡಲ ತೀರದಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಕಡಲ ತೀರದಲ್ಲಿ ಸಂಗ್ರಹವಾಗುತ್ತಿದೆ. ಪ್ರವಾಸಿಗರಲ್ಲಿ ಕಡಲ ಪರಿಸರದ ಬಗ್ಗೆ ಕಾಳಜಿ ಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಪ್ಲಾಸ್ಟಿಕ್‌ತ್ಯಾಜ್ಯದಿಂದ ಪರಿಸರ ಅತೀ ಹೆಚ್ಚು ಹಾನಿಗೀಡಾಗುತ್ತಿವೆ. ವಿವಿಧ ಸಂಘ, ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಗಾಗ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಆದರೆ ಪ್ರತಿ ಬಾರಿಯೂ ರಾಶಿಗಟ್ಟಲೆ ಪ್ಲಾಸ್ಟಿಕ್‌ತ್ಯಾಜ್ಯ ದೊರೆಯುತ್ತಿರುವುದು ಜನರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.
ಮೀನುಗಾರರಿಗೂ ತಲೆನೋವಾದ ಪ್ಲಾಸ್ಟಿಕ್ ತ್ಯಾಜ್ಯ
ಸಮುದ್ರದಲ್ಲಿ ಮೀನಿನ ಬಲೆಗೆ ಪ್ಲಾಸ್ಟಿಕ್ ತ್ಯಾಜ್ಯಗಳು ಸಿಲುಕುತ್ತಿದೆ ಎನ್ನಲಾಗುತ್ತಿದೆ. ಕೆಲವೊಂದು ಸಲ ಮೀನುಗಾರಿಕೆ ನಡೆಸುವಾಗ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ತ್ಯಾಜ್ಯಗಳೇ ಬಲೆಗೆ ಬೀಳುತ್ತದೆ ಎನ್ನುತ್ತಾರೆ ಮೀನುಗಾರರು. ಇದರಿಂದ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಇಷ್ಟೊಂದು ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಜನರ ನಿರ್ಲಕ್ಷ್ಯದಿಂದಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್ ಸಿಗುತ್ತಿರುವುದು ಆತಂಕಕಾರಿ ವಿಷಯವೇ ಸರಿ.
ತತ್‌ಕ್ಷಣ ತೆರವು ಮಾಡಬೇಕು
ಹೊಳೆಯ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ತಾಜ್ಯಗಳಲ್ಲದೆ ಸಮುದ್ರದಲ್ಲಿಯೂ ಬಲೆ ಇನ್ನಿತರ ತಾಜ್ಯಗಳು ಕಡಲತೀರವನ್ನು ಸೇರುತ್ತಿವೆ. ಆದರೆ ಅದು ಮತ್ತೆ ಕಡಲನ್ನು ಸೇರುವ ಮೊದಲು ತ್ಯಾಜ್ಯವನ್ನು ತೆರವು ಮಾಡಬೇಕಾಗಿದೆ. ಜಿಲ್ಲಾಡಳಿತ ಈಮಳೆಗಾಲದಲ್ಲಿ ಆಗಾಗ ಇಲ್ಲಿ ಬೀಳುವ ಕಸವನ್ನು ಸ್ವಚ್ಛ ಮಾಡುವ ಮೂಲಕ ಅದರ ಸೌಂದರ್ಯವನ್ನು ಉಳಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.