![9-ullala](https://www.udayavani.com/wp-content/uploads/2024/12/9-ullala-415x249.jpg)
ಕೆಸರಿನಲ್ಲೇ ಇದ್ದು ಕಮಲವಾಗಿ ಅರಳುವುದು
Team Udayavani, Dec 14, 2020, 6:00 AM IST
![ಕೆಸರಿನಲ್ಲೇ ಇದ್ದು ಕಮಲವಾಗಿ ಅರಳುವುದು](https://www.udayavani.com/wp-content/uploads/2020/12/kesaru-620x415.jpg)
ಹೊಗಳಿ ಹೊನ್ನಶೂಲಕ್ಕೆ ಏರಿಸುವುದು ಎಂಬೊಂದು ಮಾತಿದೆ. ಜೀವನದ ಔನ್ನತ್ಯ, ಆಧ್ಯಾತ್ಮಿಕ ಸಾಧನೆ ಇತ್ಯಾದಿಗಳಿಗೂ ಪ್ರಸಿದ್ಧಿ, ಸಿರಿವಂತಿಕೆ, ಅಧಿಕಾರ ಇತ್ಯಾದಿಗಳಿಗೂ ಹರದಾರಿ ದೂರ. ಬೆಳ್ಳಿ ಬಂಗಾರ, ವಜ್ರ ವೈಢೂರ್ಯಗಳಿಂದ ಮುಚ್ಚಿಸಿಕೊಂಡಷ್ಟು ಆತ್ಮ ಮುರುಟಿಕೊಳ್ಳುತ್ತದೆ.
ಲಾವೊ ತ್ಸೆ ಬದುಕಿದ್ದ ಕಾಲದಲ್ಲಿ ಚೀನದ ದೊರೆ ಅವನ ದೊಡ್ಡ ಅಭಿಮಾನಿಯಾಗಿದ್ದ. ಲಾವೊ ತ್ಸೆ ದೇಶದ ಪ್ರಧಾನಿಯಾಗ ಬೇಕು ಎಂಬುದು ದೊರೆಯ ಬಹುದೊಡ್ಡ ಕನಸಾಗಿತ್ತು. ಬಲುದೊಡ್ಡ ಜ್ಞಾನಿಯಾಗಿದ್ದ ಆತ ಪ್ರಧಾನಿಯಾದರೆ ತನ್ನ ಅಂತಸ್ತು ಇನ್ನಷ್ಟು ಏರುತ್ತದೆ ಎಂಬುದು ದೊರೆಯ ಆಲೋಚನೆ.
ಆದರೆ ಲಾವೊ ತ್ಸೆ ಒಪ್ಪುತ್ತಾನೆಯೇ ಇಲ್ಲವೇ ಎಂಬುದು ಬಹುದೊಡ್ಡ ಪ್ರಶ್ನೆ. ಆತನನ್ನು ಒಪ್ಪಿಸಿ ರಾಜ ಧಾನಿಗೆ ಕರೆತರುವುದೇ ಭಾರೀ ಸವಾಲು.
ಈ ಕಠಿನ ಕೆಲಸಕ್ಕಾಗಿ ದೊರೆ ತನ್ನ ಆಪ್ತರನ್ನು ಛೂ ಬಿಟ್ಟಿದ್ದ. ಅವರು ಹಲವು ತಿಂಗಳುಗಳಿಂದ ಲಾವೊ ತ್ಸೆ ಗಾಗಿ ಹುಡುಕಾಡುತ್ತಿದ್ದರು. ಅದರಲ್ಲೂ ದೊರೆಯ ಆಸೆ ತಿಳಿದ ಬಳಿಕ ಲಾವೊ ತ್ಸೆ ಬಹಳ ಹುಷಾರಾಗಿದ್ದ. ಎಲ್ಲೆಲ್ಲೋ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ದೊರೆಯ ಜನರು ಅವನಿದ್ದ ಹಳ್ಳಿಗೆ ಪ್ರತೀ ಬಾರಿ ಬಂದಾ ಗಲೂ ಖಾಲಿ ಗುಡಿಸಲು ಸ್ವಾಗತಿಸುತ್ತಿತ್ತು.
ಕೊನೆಗೂ ಒಂದು ದಿನ ದೊರೆಯ ಮಂದಿ ಲಾವೊ ತ್ಸೆಯನ್ನು ಕಂಡುಹಿಡಿಯು ವಲ್ಲಿ ಸಫಲರಾದರು. ಆ ಪುಣ್ಯಾತ್ಮ ತನ್ನ ಹಳ್ಳಿಯಿಂದ ಬಲುದೂರ ಒಂದೂರಿನಲ್ಲಿ ಕಾಲ ಕಳೆಯುತ್ತಿದ್ದ. ದೊರೆಯ ಆಳುಗಳು ಬಂದಾಗ ಅವನು ಅಲ್ಲೇ ಹತ್ತಿರದ ಹೊಳೆಯ ಬದಿ ಮೀನಿಗೆ ಗಾಳ ಹಾಕುತ್ತಿದ್ದ.
ದೊರೆಯ ಮಂದಿ ಹತ್ತಿರ ಹೋಗಿ, “ನಾವು ಏಕೆ ಬಂದಿದ್ದೇವೆ ಎಂಬುದು ನಿಮಗೆ ಗೊತ್ತಿದೆಯೇ? ನಮ್ಮ ದೊರೆ ನೀವು ರಾಜಧಾನಿಗೆ ಬರಬೇಕು ಎಂದು ಬಯಸಿ ದ್ದಾರೆ. ನೀವು ಅವರ ಪ್ರಧಾನ ಮಂತ್ರಿ ಆಗ ಬೇಕಂತೆ. ಬನ್ನಿ, ಹೋಗೋಣ’ ಎಂದರು.
ಲಾವೊ ತ್ಸೆ ಮಾತಿಲ್ಲದೆ ಕುಳಿತಿದ್ದ. ತಾನು ಹೇಳಿದ್ದು ಲಾವೊ ತ್ಸೆಗೆ ಕೇಳಿಸಲಿಲ್ಲವೇ ಎಂಬ ಸಂಶಯ ದೊರೆಯ ನಿಯೋಗದ ಮುಖ್ಯ ಸ್ಥನಿಗೆ ಹುಟ್ಟಿತು. ಆತ ಲಾವೊ ತ್ಸೆಯ ಮೈ ಅಲುಗಿಸಿ ಕೇಳಿದ, “ನಾವು ಹೇಳಿದ್ದು ಕೇಳಿಸಲಿಲ್ಲವೇ?’
ಅಲ್ಲೇ ಹತ್ತಿರ ಒಂದು ಕೆಸರಿನ ಹೊಂಡ ವಿತ್ತು. ಅಲ್ಲೇನೋ ಒಂದು ತುಸು ಮಿಸುಕಾ ಡುತ್ತಿತ್ತು. “ಆ ಕೆಸರಿನ ಹೊಂಡ ಕಾಣಿಸು ತ್ತಿದೆಯಾ? ಅಲ್ಲೇನಿದೆ ಗೊತ್ತಾ?’ ಲಾವೊ ತ್ಸೆ ಕೇಳಿದ. ದೊರೆಯ ನಿಯೋಗದ ಮುಖ್ಯಸ್ಥ ಹೊಂಡದ ಹತ್ತಿರ ಹೋಗಿ ಇಣುಕಿ ನೋಡಿ ವಾಪಸ್ ಬಂದ. ಅಲ್ಲೊಂದು ಆಮೆ ಹೊಡಚಾಡುತ್ತಿತ್ತು.
“ಅಲ್ಲೊಂದು ಆಮೆ ಯಿದೆ’ ಎಂದ ಮುಖ್ಯಸ್ಥ.
“ನಿಮ್ಮ ಅರಸನ ಅರಮನೆ ಯಲ್ಲೂ ಒಂದು ಆಮೆ ಇದೆ, ಅದನ್ನು ಚಿನ್ನದ ಲೇಪದಿಂದ ಮುಚ್ಚಿ, ವಜ್ರ ವೈಢೂರ್ಯಗಳಿಂದ ಅಲಂಕರಿ ಸಲಾಗಿದೆ ಎಂದು ಕೇಳಿಬಲ್ಲೆ’ ಎಂದ ಲಾವೊ ತ್ಸೆ. ಆ ಕಾಲದಲ್ಲಿ ಅರಸನ ಲಾಂಛನ ಆಮೆಯಾಗಿತ್ತು. ಹೌದು ಹೌದೆಂದರು ಎಲ್ಲರೂ.
“ನೀನು ಅರಮನೆಗೆ ಬಂದು ಚಿನ್ನ, ವಜ್ರ ಖಚಿತ ಆಮೆಯ ಸ್ಥಾನವನ್ನು ಅಲಂಕರಿಸು, ವರ್ಷಕ್ಕೊಂದು ಬಾರಿ ಪೂಜೆಯನ್ನು ಕೊಳ್ಳು ವಂಥವನಾಗು ಎಂದು ಆ ಆಮೆಯನ್ನು ಕೇಳಿದರೆ ಅದೇನು ಉತ್ತರ ಕೊಡ ಬಹುದು?’ ಎಂದು ಲಾವೊ ತ್ಸೆ ಪ್ರಶ್ನಿಸಿದ.
“ಆ ಆಮೆ ಅರಮನೆಗೆ ಬಂದು ಚಿನ್ನದಿಂದ ಮುಚ್ಚಿಸಿಕೊಳ್ಳುವುದು ಎಂದರೆ ಏನು! ಆಗ ಅದು ಸಾಯುತ್ತದೆ. ಸತ್ತ ಆಮೆಯನ್ನು ಪೂಜಿಸುವುದು ಎಂದ ರೇನು? ಅದು ಇಲ್ಲೇ ಕೆಸರಿನ ಹೊಂಡದಲ್ಲಿ ಇರುವುದನ್ನೇ ಬಯ ಸೀತು’ ಎಂದರು ನಿಯೋಗದವರು.
ಆಗ ಲಾವೊ ತ್ಸೆ ಹೇಳಿದ, “ನಾನೂ ಈ ಆಮೆಯಂತೆಯೇ. ಅರಮನೆಗೆ ಬಂದು ಆತ್ಮಾರ್ಥದಲ್ಲಿ ಸಾಯುವುದಕ್ಕಿಂತ ಇಲ್ಲೇ ಜೀವಂತವಾಗಿ ಇರಲು ಬಯಸುತ್ತೇನೆ. ಹೋಗಿ ಹೋಗಿ, ನಾನು ಬರುವುದಿಲ್ಲ.’
(ಸಾರ ಸಂಗ್ರಹ)
ಟಾಪ್ ನ್ಯೂಸ್
![9-ullala](https://www.udayavani.com/wp-content/uploads/2024/12/9-ullala-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![9-ullala](https://www.udayavani.com/wp-content/uploads/2024/12/9-ullala-150x90.jpg)
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
![BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ](https://www.udayavani.com/wp-content/uploads/2024/12/virat-150x87.jpg)
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
![6](https://www.udayavani.com/wp-content/uploads/2024/12/6-36-150x80.jpg)
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
![8-belthangady](https://www.udayavani.com/wp-content/uploads/2024/12/8-belthangady-150x90.jpg)
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
![5(1](https://www.udayavani.com/wp-content/uploads/2024/12/51-2-150x80.jpg)
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.