ಯುವ ದಸರಾದಲ್ಲಿ ಪ್ರೇಮ ನಿವೇದನೆ
Team Udayavani, Oct 6, 2019, 3:07 AM IST
ಮೈಸೂರು: ಶುಕ್ರವಾರ ಸಂಜೆ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಚಂದನ್ ಶೆಟ್ಟಿಯವರು ತಮ್ಮ ಗೆಳತಿ ನಿವೇದಿತಾ ಮುಂದೆ ಮಂಡಿಯೂರಿ, “ನನ್ನನ್ನು ಮದುವೆಯಾಗುವೆಯಾ’ ಎಂದು ಪ್ರೇಮ ನಿವೇದನೆ ಮಾಡುವುದರ ಜತೆಗೆ, ಆಕೆಗೆ ಉಂಗುರ ತೊಡಿಸಿ, ಆಕೆಯನ್ನು ಆಲಂಗಿಸಿದರು. ಯುವ ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಚಂದನ್ ಶೆಟ್ಟಿ ಅವರನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಪೋಷಕರು ಹಾಗೂ ಯುವ ದಸರಾ ಉಪಸಮಿತಿಯ ಪದಾಧಿಕಾರಿಗಳು ಇದ್ದರು.
ಸರ್ಕಾರಿ ಕಾರ್ಯಕ್ರಮದ ವೇದಿಕೆಯನ್ನು ಈ ರೀತಿ ದುರ್ಬಳಕೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಾಮಾ ಜಿಕ ಜಾಲತಾಣಗಳಲ್ಲಿ ಪ್ರೇಮ ನಿವೇದನೆಯ ಫೋಟೋ, ವೀಡಿಯೋ ವೈರಲ್ ಆಗಿದ್ದು, ಅಲ್ಲಿಯೂ ಟೀಕೆಗಳ ಸುರಿ ಮಳೆಯಾಗುತ್ತಿದೆ. ಅಲ್ಲದೆ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು. ಜತೆಗೆ, ಪ್ರಜ್ಞಾವಂತ ನಾಗರಿಕ ವೇದಿಕೆ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದನ್‌ಶೆಟ್ಟಿ ಹಾಗೂ ನಿವೇದಿತಾ ವಿರುದ್ಧ ದೂರು ದಾಖಲಾಗಿದ್ದು, ಚಂದನ್ ಶೆಟ್ಟಿ, ಕ್ಷಮೆ ಯಾಚಿಸಿದ್ದಾರೆ.
“ಚಾಮುಂಡಿಯೇ ಶಿಕ್ಷೆ ನೀಡುತ್ತಾಳೆ’: ನಾನು ಸುಮಾರು 10 ಗಂಟೆವರೆಗೆ ಯುವ ದಸರಾ ಕಾರ್ಯಕ್ರಮದಲ್ಲಿದ್ದೆ. ಆಗ ಏನೂ ಆಗಿರಲಿಲ್ಲ. ನಂತರ ಮನೆಯ ಕಾರ್ಯಕ್ರಮ ನೋಡಲು ಹೋದೆ. ಬಳಿಕ ಈ ಘಟನೆ ನಡೆದಿದೆ ಎಂದು ಸಚಿವ ಸೋಮಣ್ಣ ಹೇಳಿದರು. ಅವರು ಮಾಡಿರುವ ಅಕ್ಷಮ್ಯ ಅಪರಾಧಕ್ಕೆ ಚಾಮುಂಡೇಶ್ವರಿ ತಾಯಿ 6 ತಿಂಗಳಲ್ಲಿ ಅವರಿಗೆ ಏನು ತೀರ್ಮಾನ ಕೊಡಬೇಕು ಅದನ್ನು ಕೊಡುತ್ತಾಳೆ. ನೆಮ್ಮದಿ ಇಲ್ಲದ ಹಾಗೇ ಆಗುತ್ತದೆ.
ಆ ವೇದಿಕೆ ಆ ತಾಯಿ ಕೊಟ್ಟಿರುವ ಸ್ಥಾನ. ಅವನು ನನ್ನ ಕ್ಷೇತ್ರದವನು. ತುಂಬಾ ಒಳ್ಳೆಯವನು. ಯಾಕೆ ಎಡವಟ್ಟು ಮಾಡಿದನೋ ಗೊತ್ತಿಲ್ಲ. ಯುವ ದಸರಾ ಸಮಿತಿಯ ಉಪ ವಿಶೇಷಾಧಿಕಾರಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರಿಗೆ, ಈ ಬಗ್ಗೆ ಉತ್ತರ ಕೇಳಿ ನೋಟಿಸ್ ನೀಡಲು ಹೇಳಿದ್ದೇನೆ. ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸುತ್ತೇನೆ. ಇಲ್ಲಿ ಯಾರೂ ತಪ್ಪಿತಸ್ಥರಲ್ಲ. ಇದಕ್ಕೆ ಉಪ ಸಮಿತಿಯೂ ಕಾರಣವಲ್ಲ. ಉಪಸಮಿತಿಯವರಿಗೂ ಸಹ ಅವರು ಹೇಳಿರಲಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.