ಲಕ್ನೋ ಸೂಪರ್ ಜೈಂಟ್ಸ್; ಐಪಿಎಲ್ ಹೊಸ ತಾರೆ; ಆಯುಷ್ ಬದೋನಿ
Team Udayavani, Mar 30, 2022, 8:15 AM IST
ಮುಂಬಯಿ: ದಿಲ್ಲಿಯ ಯುವ ತಾರೆ ಆಯುಷ್ ಬದೋನಿ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹೊಸ ತಾರೆಯಾಗಿ ಮೂಡಿಬಂದಿದ್ದಾರೆ.
ಗುಜರಾತ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಬದೋನಿ 41 ಎಸೆತ ಎದುರಿಇ 54 ರನ್ ಸಿಡಿಸಿ ಗಮನ ಸೆಳೆದಿದ್ದಾರೆ.
ಅಂಡರ್-19 ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದರೂ ದಿಲ್ಲಿ ತಂಡವು ಅವರನ್ನು ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗಾಗಿ ತನ್ನ ತಂಡದಲ್ಲಿ ಸೇರಿಸಿಕೊಳ್ಳಲು ಕಡೆಗಣಿಸಿತ್ತು. ಇದರಿಂದ ಬಹಳಷ್ಟು ಆಘಾತಕ್ಕೆ ಒಳಗಾಗಿದ್ದ ಬದೋನಿ ಈ ಹಿಂದಿನ ಐಪಿಎಲ್ ಹರಾಜಿ ನಲ್ಲೂ ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಆದರೆ ಈ ವರ್ಷ ಗೌತಮ್ ಗಂಭೀರ್ ಅವರ ಸೂಚನೆಯಂತೆ ನನ್ನನ್ನು ಆಯ್ಕೆ ಮಾಡಲಾಗಿತ್ತು.
ಅತ್ಯುತ್ತಮ ಪ್ರಯತ್ನ ಮಾಡುವೆ
ಕಳೆದ ಮೂರು ವರ್ಷಗಳಲ್ಲಿ ಹರಾಜಿಯಲ್ಲಿ ನನ್ನ ಹೆಸರು ಬಂದಿತ್ತು ಆದರೆ ಖರೀದಿಯಾಗದೇ ಬಾಕಿ ಉಳಿದಿದ್ದೆ. ಹಾಗಾಗಿ ಈ ಸಲ ನನ್ನ ಹೆಸರು ಹರಾಜಿನಲ್ಲಿ ಬಂದಾಗ ಹೃದಯದ ಬಡಿತ ಜೋರಾಗಿತ್ತು. ಅದೃಷ್ಟವೆಂಬಂತೆ ನೂತನ ತಂಡ ಲಕ್ನೋ ನನ್ನನ್ನು ಆಯ್ಕೆ ಮಾಡಿದೆ. ನಾನು ಆ ತಂಡಕ್ಕೆ ಕೃತಜ್ಞನಾಗಿದ್ದೇನೆ. ಚೆನ್ನಾಗಿ ನಿರ್ವಹಣೆ ನೀಡಿ ನನ್ನ ತಂಡ ಗೆಲ್ಲಲು ಅತ್ಯುತ್ತಮ ಪ್ರಯತ್ನ ಮಾಡುವೆ ಎಂದು ಬದೋನಿ ಹೇಳಿದ್ದಾರೆ.
ಕಳೆದ ವರ್ಷದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬದೋನಿ ಕೇವಲ ಐದು ಟಿ20 ಪಂದ್ಯಗಳಲ್ಲಿ ಆಡಿದ್ದರೂ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ 8 ರನ್ ಗಳಿಸಿದ್ದರು. ಅವರಿನ್ನೂ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಆಡಬೇಕಾಗಿದೆ.
ಲಕ್ನೋ ತಂಡಕ್ಕೆ ಆಯ್ಕೆಯಾದ ಬಳಿಕ ನಾನು ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲಿ ಅರ್ಧಶತಕ ಹೊಡೆದಿದ್ದೇನೆ. ಈ ನಿರ್ವಹಣೆ ಗೌತಮ್ ಭಯ್ಯ, ಕೋಚ್‌ಗಳಾದ ವಿಜಯ್ ಸರ್ ಮತ್ತು ಆ್ಯಂಡಿ ಫ್ಲವರ್ ಅವರಿಗೆ ತೃಪ್ತಿ ನೀಡಿದೆ. ಈ ಕಾರಣಕ್ಕಾಗಿ ಕೃಣಾಲ್ ಪಾಂಡ್ಯ ಅವರಿಗಿಂತ ಮೊದಲು ನನ್ನನ್ನು ಬ್ಯಾಟಿಂಗಿಗೆ ಕಳುಹಿಸಿದ್ದರು ಎಂದು ಬದೋನಿ ವಿವರಿಸಿದರು.
ಅಂಡರ್ 19 ಸಾಧನೆ
ಕ್ರಿಕೆಟ್ ಕೋಚ್ ತಾರಕ್ ಸಿನ್ಹ ಅವರ ಗರಡಿಯಲ್ಲಿ ಪಳಗಿದ್ದ ಬದೋನಿ ಅಂಡರ್-19 ಹಂತದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು. 2018ರಲ್ಲಿ ಶ್ರೀಲಂಕಾ ವಿರುದ್ಧದ ಯೂತ್ ಟೆಸ್ಟ್‌ನಲ್ಲಿ ಅವರು 185 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆಬಳಿಕ ನಡೆದ ಏಶ್ಯ ಕಪ್‌ನ ಫೈನಲ್‌ನಲ್ಲಿ ಕೇವಲ 28 ಎಸೆತಗಳಿಂದ 52 ರನ್ ಸಿಡಿಸಿದ ಸಾಧನೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.