ಲಾಕ್‌ಡೌನ್‌ಗೆ ಲುಂಗಿ ಫ್ಯಾಶನ್ ಟ್ರೆಂಡ್
Team Udayavani, May 11, 2020, 8:51 PM IST
ಸಾಂದರ್ಭಿಕ ಚಿತ್ರ.
ನಮ್ಮ ಸಂಸ್ಕೃತಿಯ ದಿರಿಸೊಂದು ವಿಶ್ವ ಮಟ್ಟದಲ್ಲಿ ಫ್ಯಾಶನ್ ಟ್ರೆಂಡ್ ಆಗಿದ್ದು, ಎಲ್ಲ ಭಾರತೀಯರಿಗೂ ಹೆಮ್ಮೆಯ ವಿಚಾರ. ಲಾಕ್‌ಡೌನ್ ವೇಳೆಯಲ್ಲೂ “ಉಂದು ರಗಾಳೆ ಇಜ್ಜಿ’ ಎಂಬಂತೆ ಹೆಚ್ಚಿನವರು ಲುಂಗಿ ಉಟ್ಟು ಮಾಸ್ಕ್ ಹಾಕಿ ತಿರುಗುವವರನ್ನು ಕಾಣಬಹುದು. ಹೆಚ್ಚಿನ ಎಲ್ಲ ಭಾರತೀಯ ಪುರುಷನ ವಾರ್ಡ್‌ರೋಬ್‌ನಲ್ಲಿ ಸಾಮಾನ್ಯವಾಗಿ ಇದೊಂದು ದಿರಿಸು ಇದ್ದೇ ಇರುತ್ತದೆ. ಈ ಉರಿಸೆಕೆಗೆ ಲುಂಗಿ ಉಟ್ಟರೆ ಸಿಗುವ ಹಿತ ದಪ್ಪಗಿನ ಜೀನ್ಸ್‌ನಲ್ಲಿ ಇಲ್ಲ ಎಂಬುದು ಪಾಶ್ಚಿಮಾತ್ಯರಿಗೂ ಅರಿವಾಗಿರಬೇಕು.
ವಿದೇಶಿಗರೂ ಮೆಚ್ಚಿದ ಲುಂಗಿ
ಭಾರತೀಯ ಕುಟುಂಬಗಳಿಗೆ ಹೆಚ್ಚು ಪರಿಚಿತವಾಗಿರುವ ಸಾಮಾನ್ಯ ಲುಂಗಿಯು ಪಾಶ್ಚಿಮಾತ್ಯರ ಗಮನ ಸೆಳೆದಿದ್ದೇ ಒಂದು ವಿಶೇಷ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಲುಂಗಿ ಉಟ್ಟು ಬೋರಲು ಮಲಗಿದರೆ ಯಾವ ಸೆಕೆಯೂ ಬಾಧಿಸದು ಎನ್ನುವುದು ಹಲವು ಲುಂಗಿ ಪ್ರಿಯರ ವಾದವಾದರೂ ಎಲ್ಲರೂ ಇದಕ್ಕೆ ಅಸ್ತು ಅಂದಿಲ್ಲ. ಕೆಲವು ಕಂಪೆನಿಗಳು ಲುಂಗಿಗೆ ಸಂಪೂರ್ಣ ಹೊಸ ವಿನ್ಯಾಸದೊಂದಿಗೆ ಸುಲಭವಾಗಿ ಕಳಚಿ ಬೀಳದಂತೆ, ಕಿಸೆಗಳು ಇರುವಂತ ಮಾರ್ಪಡುಗಳನ್ನು ಮಾಡಿಕೊಟ್ಟು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಷ್ಟ ಪಡುವಂತೆ ಮಾಡುತ್ತಿದೆ.
ಜಾಗತಿಕ ಮನ್ನಣೆ, ಸಿಕ್ಕಿದ್ದು ಹೇಗೆ?
ತೀರಾ ಇತ್ತೀಚೆಗೆ, ಲಾಂಗಿ ಬ್ರದರ್ಸ್ ಎಂಬ ವೆಬ್‌ಸೈಟ್ ಲಾಂಗಿಯನ್ನು ಜಗತ್ತಿಗೆ ಪರಿಚಯಿಸಿತು, ವೀಡಿಯೊದಲ್ಲಿ, ಅವರು ಅದರ ಬಹುಮುಖತೆಯನ್ನು ಉತ್ತೇಜಿಸಲು ಪ್ರಯತ್ನಿಸಿದ್ದಾರೆ. ಇದನ್ನು ಸ್ಕಾರ್ಪ್, ಬೀಚ್ ಟವೆಲ್, ತ್ವರಿತ ಬದಲಾಯಿಸುವ ಕೋಣೆ ಮತ್ತು ಚೀಲವಾಗಿ ಬಳಸಬಹುದು ಎಂದು ವೀಡಿಯೋಯಲ್ಲಿ ತೋರಿಸಿದ್ದರು. ಇದು ವಿದೇಶಿಗರ ಗಮನ ಸೆಳೆಯುವಳ್ಳಿ ಸಹಕಾರಿಯಾಯಿತು ಎಂಬುದು ಒಂದು ವಾದವಿದೆ.
ಲುಂಗಿ ಬ್ಯಾಗ್; ಹಾಸ್ಯಾಸ್ಪದ
ಲುಂಗಿ ಬ್ರದರ್ಸ್ ವಿಡಿಯೋ ವೈರಲ್ ಆದ ಬಳಿಕ ಲುಂಗಿಗೆ ಜಾಗತಿಕ ಮನ್ನಣೆ ಸಿಕ್ಕಿರಬಹುದು. ಲುಂಗಿಯ ಪರಿಚಯವಿಲ್ಲದ ವ್ಯಕ್ತಿಗೆ ಅದೊಂದು ಫ್ಯಾಶನ್ ಆಗಿ ಕಾಣುತ್ತದೆ; ಆದರೆ ಇದನ್ನು ಸ್ಕಾರ್ಪ್, ಬ್ಯಾಗ್ ಇತ್ಯಾದಿಗಳಾಗಿ ಬಳಸಬಹುದು ಎಂದು ಲಾಂಗಿ ಬ್ರದರ್ಸ್ ಹೇಳುವುದು ಹಾಸ್ಯಾಸ್ಪದವಾಗಿದೆ. ಅವರು ವೈರಲ್ ಆಗಬಹುದೆಂದು ಯಾರೂ ಭಾವಿಸಿರಲಿಲ್ಲ. ಎಂದು ಕೇರಳದ ಎಂಜಿನಿಯರ್ ಭರತ್‌ಕೃಷ್ಣ ಹೇಳುತ್ತಾರೆ.
ಈ ವಿಷಯದ ಬಗ್ಗೆ ಮಾರ್ಕೆಟಿಂಗ್ ದೃಷ್ಟಿಕೋನಕ್ಕಾಗಿ, ಲುಂಗಿಗಳು ಮತ್ತು ಧೋತಿಗಳ ದೊಡ್ಡ ಅಭಿಮಾನಿ ಪ್ರಹ್ಲಾದ್ ಹೇಳುತ್ತಾರೆ, ಇದು ಭಾರತದಲ್ಲಿ ಲುಂಗಿ ಎಂದಿಗೂ ಫ್ಯಾಶನ್ ಆಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಅದು ಇಲ್ಲಿನವರ ದೈನಂದಿನ ಉಡುಗೆ! ಇದು ಮಧ್ಯ-ಪಶ್ಚಿಮ ಅಮೆರಿಕಕ್ಕೆ ಜೀನ್ಸ್ ಅಥವಾ ಕೋಟ್ ಮೇಲುಡುಪುಗಳ ಬದಲಿಗೆ ಬಳಕೆಯಾದರೆ ಲುಂಗಿ ಜಾಗತಿಕ ಫ್ಯಾಶನ್‌ಲೋಕ ಅಪ್ಪಿಕೊಳ್ಳುತ್ತಿದೆ ಎಂದು ಹೇಳಬಹುದು. ಇದರಿಂದ ಅನೇಕ ಭಾರತೀಯರಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶವೂ ಸಿಗಬಹುದು.
ಫ್ಯಾಶನ್ ಉದ್ಯಮದಲ್ಲಿರುವವರು ಯಾವಾಗಲೂ ಹೆಚ್ಚು ಸಕಾರಾತ್ಮಕವಾಗಿ ಯೋಚಿಸುತ್ತಿರುತ್ತಾರೆ. ಲುಂಗಿಯು ಜಾಗತಿಕವಾಗಿ ಹಲವರಿಗೆ ಇಷ್ಟವಾಗಬಹುದು ಹಾಗೂ ತನ್ನ ಸ್ವರೂಪಗಳನ್ನು ಬದಲಿಸುತ್ತಾ ಸಾಗಬಹುದು. ಅದು ಅವರರವರ ದೃಷ್ಟಿಕೋನದಲ್ಲಿರುತ್ತದೆ. ನೀವು ಲುಂಗಿಯನ್ನು ಬ್ಲೇಜರ್‌ನೊಂದಿಗೆ ಉಡುವಿರೋ? ಅದೇ ಮುಂದೆ ಫ್ಯಾಶನ್ ಟ್ರೆಂಡ್ ಆಗುತ್ತದೆ ಎಂಬುದು ವಸ್ತ್ರ ವಿನ್ಯಾಸಕಿಯಾಗಿರುವ ಇಂದ್ರಾಕ್ಷಿ ಪಟ್ನಾಯಕ್ ಅವರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.