ಎಂ.ಬಿ.ಎ. ಪ್ರವೇಶ ಪರೀಕ್ಷೆ ಹೀಗಿರಲಿ ಸಿದ್ಧತೆ
Team Udayavani, Nov 16, 2021, 6:56 AM IST
ಈ ಧಾವಂತದ ಯುಗದಲ್ಲಿ, ನಮ್ಮ ಜೀವನ ಪಥ(Career) ವನ್ನು ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಇತ್ತೀಚೆಗಷ್ಟೇ ಎಂ.ಬಿ.ಎ. – ಪಿಜಿ.ಸಿ.ಇ.ಟಿ. ಗೆ ಸಂಬಂಧಪಟ್ಟ ಅಧಿಸೂಚನೆ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಎಂ.ಬಿ.ಎ ಪ್ರವೇಶ ಪರೀಕ್ಷೆಗೆ ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಕೆಲವು ಸಲಹೆ, ಸೂಚನೆಗಳು ಇಲ್ಲಿವೆ.
1. ತಡ ಮಾಡಬೇಡಿ, ಈಗಲೇ ಆರಂಭಿಸಿ: CAT, MAT ಅಥವಾ PEACU, ಯಾವುದೇ ಪ್ರವೇಶ ಪರೀಕ್ಷೆ ಆಗಿರಬಹುದು. ಪರೀಕ್ಷೆಗಳಿಗಾಗಿ ಸಿದ್ಧತೆಯನ್ನು ಇಂದೇ ಆರಂಭಿಸಿ, ಸಕಾರಣವಿಲ್ಲದೆ, ತಯಾರಿಯನ್ನು ಯಾವ ಕಾರಣಕ್ಕೂ ಮುಂದೂಡಬೇಡಿ. ಉತ್ತಮ ವಿದ್ಯಾಲಯಗಳಲ್ಲಿ ಅಥವಾ ಉತ್ತಮವಾದ ಬಿ-ಸ್ಕೂಲ್‌ಗಳಲ್ಲಿ ಯಾವುದೇ ಡೋನೇಷನ್ ಇಲ್ಲದೆ ಪ್ರವೇಶ ಗಿಟ್ಟಿಸಬೇಕಾದಲ್ಲಿ ಇಂದಿನಿಂದಲೇ ಉತ್ತಮ ತಯಾರಿ ನಡೆಸಿ.
2. ಪಠ್ಯಕ್ರಮವನ್ನು ಡೌನ್‌ಲೋಡ್ ಮಾಡಿಕೊಳ್ಳಿ: ಯಾವ ಪರೀಕ್ಷೆಗೆ ಹಾಜರಾಗಬೇಕು? ಹೇಗೆ ತಯಾರಾಗಬೇಕು? ಎಂಬುದನ್ನು ಮನಸ್ಸಿನಲ್ಲೇ ನಿರ್ಧರಿಸಿಕೊಳ್ಳಿ, ಅದರ ಪ್ರಕಾರ ಯೋಜನೆ(Plan) ಮಾಡಿಕೊಳ್ಳಿ. ಮುಖ್ಯವಾಗಿ ಪಠ್ಯಕ್ರಮವನ್ನು ಸಂಬಂಧಪಟ್ಟ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಿ. ವಿವಿಧ ಪರೀಕ್ಷೆಗಳ ಪಠ್ಯಕ್ರಮಗಳಲ್ಲಿ “ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ’ ನೋಟ್ ಮಾಡಿಕೊಳ್ಳಿ ಹಾಗೂ ಅದರಂತೆ ಅಭ್ಯಾಸ ನಡೆಸಿ.
3. ಪರೀಕ್ಷೆಯ ಮಾದರಿ: ಎಲ್ಲ ಪ್ರವೇಶ ಪರೀಕ್ಷೆಗಳ ಮಾದರಿಯನ್ನು ತಿಳಿಯಲು ಪ್ರತಿಯೊಂದು ಪರೀಕ್ಷೆಯ (XAT, MAT, SNAP, PG CET) ವೆಬ್‌ಸೈಟ್‌ನ್ನು ನೋಡಿಕೊಂಡು ಸಿದ್ಧರಾಗಿರಿ. ಪಠ್ಯಕ್ರಮ, ಮಾದರಿ ಪ್ರಶ್ನೆ ಪತ್ರಿಕೆ, ಆಯ್ಕೆಯ ಕ್ರಮದ ಬಗ್ಗೆ ಸರಿಯಾದ ಮಾಹಿತಿ ನಿಮ್ಮಲ್ಲಿರಲಿ.
4. ಅಧ್ಯಯನ ವಸ್ತು (Study material):- ಪರೀಕ್ಷೆಗೆ ಅಧ್ಯಯನ ಪ್ರಾರಂಭಿಸುವ ಮೊದಲೇ ಸಂಬಂಧಪಟ್ಟ ಎಲ್ಲ ಅಧ್ಯಯನ ವಸ್ತು ವನ್ನು ಸಿದ್ಧವಾಗಿಟ್ಟುಕೊಳ್ಳಿ. ಸಾಮಾನ್ಯವಾಗಿ ಎಲ್ಲ ಎಂ.ಬಿ.ಎ ಪ್ರವೇಶ ಪರೀಕ್ಷೆಗಳಲ್ಲಿ ಈ ಕೆಳಕಂಡಂತೆ ಕೆಲವೊಂದು ವಿಭಾಗಗಳಿರುತ್ತವೆ.
ಇಂಗ್ಲೀಷ್ ವಿಷಯದ ಬಗೆಗಿನ ಜ್ಞಾನ Profi ciency in English Language):- ಎ)ಸಮಾನಾರ್ಥಕ ಪದ (Synonyms) ಬಿ)ವಿರುದ್ಧಾರ್ಥಕ ಪದ (Antonyms) ವಾಕ್ಯಗಳಿಗೆ ಸಿ)ಒಂದು ಶಬ್ಧದಲ್ಲಿ ಉತ್ತರ ಕೊಡುವ ಸಾಮರ್ಥ್ಯ (One word Substitute); ಡಿ)ಪಡೆ ನುಡಿಗಳು (Idioms & phrase), ಇ)ಸಾಮಾನ್ಯ ವ್ಯಾಕರಣ General Grammar), ಎಫ್) ಇಂಗ್ಲಿಷ್ ಭಾಷೆಯಲ್ಲಿನ ಉತ್ತಮ ಪುಸ್ತಕಗಳು, ಜಿ)ಸರಿಯಾದ ವಾಕ್ಯ ರಚನೆ (Sentence correction),, ಹೆಚ್)ಸಂಬಂಧ ವಾಚಕಗಳು (Pairs expressing relationships) ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ.
ಸಾಮಾನ್ಯ ಜ್ಞಾನ:
1) ಭಾರತದ ವ್ಯಾಪಾರ ವ್ಯವಸ್ಥೆ,
2) ಜಾಗತಿಕ ವ್ಯಾಪಾರ ವಹಿವಾಟುಗಳ ಪರಿಸರ
3) ಪ್ರಚಲಿತ ವಿದ್ಯಮಾನಗಳು,
4) ಸಾಂಸ್ಕೃತಿಕ, ಸಾಮಾಜಿಕ ವಿದ್ಯಮಾನಗಳು, ಅರ್ಥಶಾಸ್ತ್ರ, ಮೂಲ ಮ್ಯಾನೇಟ್‌ಮೆಂಟ್ ಪರಿಕಲ್ಪನೆಗಳು, ರಾಜಕೀಯ ವಿದ್ಯಮಾನಗಳು, ಕ್ರೀಡೆ, ಪ್ರಶಸ್ತಿ ಹಾಗೂ ವ್ಯಕ್ತಿಗಳು ಮತ್ತು ಅವರ ಸಾಧನೆಗಳ ಬಗ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಸ್ಕೃತವಾಗಿ ಅಧ್ಯಯನ ಮಾಡಿ. ಪ್ರತಿನಿತ್ಯ ಯಾವುದಾದರೊಂದು “ದಿನ ಪತ್ರಿಕೆಯನ್ನು’ ಓದಲು ಮರೆಯಬೇಡಿ.
ತಾರ್ಕಿಕ ಪರೀಕ್ಷೆ ಮತ್ತು ಮಾನಸಿಕ ಸಾಮರ್ಥ್ಯ Test of Reaso ning and General Intelligence) :- ಸರಿಯಾದ ವಿಚಾರ ಮಾಡಿ ಉತ್ತರ ನೀಡಬೇಕಾಗಿರುವುದರಿಂದ, Puzzles(ಒಗಟ್ಟಿನ ರೂಪದಲ್ಲಿರುವ ಪ್ರಶ್ನೆಗಳು), ರೇಖಾ ಚಿತ್ರಗಳು, ಸಾದೃಶ್ಯಗಳು (Analogies)ತರ್ಕ, ಮೌಖಿಕ ಸಾಮರ್ಥ್ಯ, ವಿಶ್ಲೇಷಣ ಸಾಮರ್ಥ್ಯಗಳ ಬಗ್ಗೆ ಪ್ರಶ್ನೆಗಳು ಬರುವುದರಿಂದ ಸಾಕಷ್ಟು ಅಧ್ಯಯನ ನಡೆಸಿ. ಈ ವಿಭಾಗದಲ್ಲಿ ಒಬ್ಬರೇ ಕುಳಿತುಕೊಂಡು ಅಧ್ಯಯನ ಮಾಡುವುದಕ್ಕೆ ಕಷ್ಟವಾದಲ್ಲಿ ನಿಪುಣರ ಹಾಗೂ ಸ್ನೇಹಿತರ ಸಹಾಯ ಪಡೆದುಕೊಳಕ್ಷೆು ಹಿಂಜರಿಯಬೇಡಿ.
ಪರಿಣಾಮಾತ್ಮಕ ವಿಶ್ಲೇಷಣೆ (Quantitative Analysis) :- ಅಂಕಗಣಿತ, ದತ್ತಾಂಶ ವಿಶ್ಲೇಷಣೆ, ವಿವರಣೆ ಹಾಗೂ ವ್ಯಾಖ್ಯಾನ, ಸಂಖ್ಯಾ ಶಾಸ್ತ್ರದ ಮೇಲೆ ಕೆಲವೊಂದು ಸಾರಿ ಪ್ರಶ್ನೆಗಳು ಬರುವ ಸಾಧ್ಯವಿದೆ.
5. ಈ ಪುಸ್ತಕಗಳನ್ನು ಅಧ್ಯಯನ ಮಾಡಿ:
6. ಹಳೆಯ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ: ಅಧ್ಯಯನ ಮಾಡುತ್ತಲೇ ಹಳೆಯ ಪ್ರಶ್ನೆ ಪ್ರತಿಕೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನೀವೇನಾದರೂ ಹತ್ತಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದೇ ಆದಲ್ಲಿ ನಿಮ್ಮ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಾಧ್ಯವಾಗುತ್ತದೆ. ಅದಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ನಿಮಗೆ ವಿಶ್ವಾಸ ಹೆಚ್ಚಾಗುತ್ತದೆ. (Confidence level)
7. ಅವಶ್ಯವಿದ್ದಲ್ಲಿ ಕೋಚಿಂಗ್ ಸೆಂಟರ್‌ಗೆ ಸೇರಿಕೊಳ್ಳಿ : ನೀವು ಅಧ್ಯಯನ ಮಾಡುತ್ತಿರುವಾಗ ಕೆಲವು ವಿಷಯಗಳು ಕ್ಲಿಷ್ಟ ಅನಿಸಿದ್ದಲ್ಲಿ ಉತ್ತಮವಾದ ಕೋಚಿಂಗ್ ಸೆಂಟರ್‌ಗೆ ಸೇರಿಕೊಳ್ಳಿ, ಹಾಗೆಯೇ ನಿಮ್ಮ ಪಠ್ಯಕ್ರಮದಲ್ಲಿನ ಎಲ್ಲ ವಿಷಯಗಳ ಮೇಲೂ ಕೋಚಿಂಗ್ ಸೆಂಟರ್‌ನವರು ಹೆಚ್ಚಿನ ತರಬೇತಿಯನ್ನು ನೀಡುತ್ತಾರೆಯೇ ಎಂದು ತಿಳಿದುಕೊಳ್ಳಿ.
8. ಅಣಕು ಪರೀಕ್ಷೆಗೆ ಹಾಜರಾಗಿ: ಕೆಲವು ಸಂಸ್ಥೆಗಳು ಎಂ.ಬಿ.ಎ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದೇ ಪರೀಕ್ಷೆ ಹತ್ತಿರ ಇರುವಾಗ ಅಣುಕು ಪರೀಕ್ಷೆ ಗಳನ್ನು ನಡೆಸುತ್ತಾರೆ. ಅಂತಹ ಅಣುಕು ಪರೀಕ್ಷೆಗಳಿಗೆ ಹೆಚ್ಚು ಯೋಚಿಸದೆ ಹೆಸರು ನೋಂದಾಯಿಸಿ.
9. ನಿತ್ಯ ವೇಳಾ ಪಟ್ಟಿ ಹಾಗೂ ಸಮಯ ನಿರ್ವಹಣೆ: ಎಲ್ಲ ವಿಷಯಗಳಿಗೂ ಪ್ರತಿ ನಿತ್ಯ 1 ಗಂಟೆ ಮೀಸಲಿಡಿ ಕಷ್ಟವಾದ ವಿಷಯಗಳ ಮೇಲೆ ನಿಮ್ಮ ಅನುಕೂಲದ ಪ್ರಕಾರ ಹೆಚ್ಚು ಸಮಯ ಕಳೆಯಬಹುದು. ಯಾವುದೇ ಶಾರ್ಟ್-ಕಟ್ ವಿಧಾನಗಳಿಗೆ ಪ್ರಯತ್ನ ಪಡಬೇಡಿ. ಸಮಯವನ್ನು ಕೇವಲ ಅಧ್ಯಯನ ವಸ್ತುವನ್ನು ಹುಡುಕುವುದರಲ್ಲಿಯೇ ಸಮಯ ಕಳೆಯಬೇಡಿ. ಸಮಯವನ್ನು ಅತ್ಯುತ್ತಮವಾಗಿ ನೀವು ನಿರ್ವಹಿಸಿದಲ್ಲಿ ನೀವು ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆಯವುದರಲ್ಲಿ ಸಂಶಯವಿಲ್ಲ.
10. ಈ ಅಧ್ಯಯನದ ವೇಳೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳಿ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಲ್ಲಿ ನೀವು ಪಟ್ಟ ಶ್ರಮ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಸರಿಯಾದ ಸಮಯದಲ್ಲಿ ಊಟ ಹಾಗೂ ನಿದ್ದೆ ಮಾಡಿ. ಮೊಬೈಲ್, ವಾಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪರೀಕ್ಷೆ ಮುಗಿಯುವವರಿಗೆ ಮಿತಗೊಳಿಸಿ.
-ಪ್ರೊ| ಪಿ. ಪರಮಶಿವಯ್ಯ/ ಡಾ| ಗಿರೀಶ ವೈ.ಎಂ. ತುಮಕೂರು ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.