ಕೋವಿಡ್‌ಗೆ ಮಡಗಾಸ್ಕರ್‌ನವರ ಗಿಡಮೂಲಿಕೆ ಕಷಾಯ!


Team Udayavani, May 17, 2020, 2:30 PM IST

ಕೋವಿಡ್‌ಗೆ ಮಡಗಾಸ್ಕರ್‌ನವರ ಗಿಡಮೂಲಿಕೆ ಕಷಾಯ!

ಅಂಟಾನಾನರಿವೊ: ಆಫ್ರಿಕದ ಪುಟ್ಟ ರಾಷ್ಟ್ರ ಮಡಗಾಸ್ಕರ್‌ ಮಹಾಮಾರಿ ಕೋವಿಡ್‌ ಅನ್ನು ಮಣಿಸಲು ಗಿಡಮೂಲಿಕಾ ಔಷಧವೊಂದರ ಬಳಕೆಯನ್ನು ಉತ್ತೇಜಿಸುತ್ತಿದೆ. ಈ ರಾಷ್ಟ್ರದ ಹೆಚ್ಚಿನ ಜನರು ತಮ್ಮ ಕಾಯಿಲೆಗಳಿಗೆ
ಗಿಡಮೂಲಿಕಾ ಔಷಧಗಳನ್ನೇ ಬಳಸುತ್ತಾರೆ.

ಕೋವಿಡ್‌ ವಿರುದ್ಧ ಚಿಕಿತ್ಸೆಗೆ ಬಳಸಬಹುದಾದ ಸಾಂಪ್ರದಾಯಿಕ ಔಷಧದ ಉತ್ಪಾದನೆಗೆ ಸಂಬಂಧಿಸಿ ಕೆಲಸ ಮಾಡಲು ಮಡಗಾಸ್ಕರ್‌ ಆಫ್ರಿಕ ಒಕ್ಕೂಟ ಹಾಗೂ ರೋಗ ನಿಯಂತ್ರಣ ಕುರಿತ ಆಫ್ರಿಕ ಕೇಂದ್ರದ ಜತೆ ಒಪ್ಪಂದಕ್ಕೆ ಬಂದಿದೆ.

ಪರೀಕ್ಷೆಗೊಳಪಡದ ಔಷಧವೊಂದರ ಸಂಭಾವ್ಯ ಅಪಾಯ ಹಾಗೂ ಅಪಪ್ರಚಾರ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದ್ದರೂ ಮಡಗಾಸ್ಕರ್‌ ಅಧ್ಯಕ್ಷ ಆ್ಯಂಡಿ ರಜೊಲಿನ ಅವರು ಎ. 20ರಂದು ಈ ಕುರಿತ ಸಮ್ಮೇಳನವೊಂದರಲ್ಲಿ ಭಾಗವಹಿದ್ದರು.

ಈ ಔಷಧವನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸಲಾಗಿಲ್ಲ. ಮಲೇರಿಯಕ್ಕೆ ಪರಿಣಾಮಕಾರಿಯೆಂದು ಸಾಬೀತಾಗಿರುವ ಔಷಧವೊಂದರ ಅಂಶಕ್ಕೆ ಪ್ರತಿರೋಧವನ್ನು ಅದು ಹೆಚ್ಚಿಸಬಹುದು. ಇದು ಮಾರಣಾಂತಿಕ ಸೋಂಕಿಗೆ ಸಂಬಂಧಿಸಿದ ಅಪಾಯವನ್ನು ಇನ್ನಷ್ಟು ಅಧಿಕಗೊಳಿಸಬಹುದು ಎಂದು ಪ್ರಾಯೋಗಿಕ ಔಷಧಗಳ ತಜ್ಞ ಡಾ| ಆರ್ಥರ್‌ ಗ್ರೋಲ್‌ವುನ್‌ ಹೇಳುತ್ತಾರೆ. ಯಾವುದೇ ಔಷಧವನ್ನು ಮಾನವರ ಮೇಲೆ ಪ್ರಯೋಗಿಸುವುದಕ್ಕೆ ಮುಂಚೆ ಕಠಿನ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ಅದರ ಪರಿಣಾಮಕಾರತ್ವ ಹಾಗೂ ಸುರಕ್ಷತೆಯನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಹೇಳಿದೆ. ಟಾನಿಕ್‌ ಅನ್ನು ತಯಾರಿಸಲಾಗುವ ಆರ್ಟೆಮೀಸಿಯ ಅನುವಾ ಮುಂತಾದ ಔಷಧೀಯ ಸಸ್ಯಗಳ‌ನ್ನು ಸಂಭಾವ್ಯ ಪರಿಹಾರವೆಂದು ಪರಿಗಣಿಸಲಾಗುತ್ತಿದೆ. ಆದರೆ ಅವುಗಳ ಪರಿಣಾಮಕಾರಿತ್ವ ಮತ್ತು ಅಡ್ಡಪರಿಣಾಮಗಳ ಕುರಿತು ಅಧ್ಯಯನ ನಡೆಯಬೇಕು ಎಂದು ಅದು ಹೇಳಿದೆ.

ಅಲ್ಲದೆ ಕೆಲವೊಂದು ಔಷಧಗಳ ಪರಿಣಾಮಕಾರಿತ್ವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯುವ ಅಪಪ್ರಚಾರ ಕುರಿತು ಎಚ್ಚರ ವಹಿಸಬೇಕು. ಅನೇಕ ಸಸ್ಯಗಳು ಹಾಗೂ ಉತ್ಪನ್ನಗಳನ್ನು ಕೋವಿಡ್‌ಗೆ ಔಷಧವೆಂದು ಕನಿಷ್ಠ ಅಗತ್ಯಗಳನ್ನು ಪೂರೈಸದೆ ಮತ್ತು ಅವುಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಕುರಿತು ಪುರಾವೆಯಿಲ್ಲದೆ ಹೇಳಲಾಗುತ್ತಿದೆ. ಇವುಗಳ ಕುರಿತು ಸರಿಯಾದ ಅಧ್ಯಯನ ನಡೆಯದೆ ಕೋವಿಡ್‌-19 ರೋಗಿಗಳಿಗೆ ಬಳಸಿದಲ್ಲಿ ಆದು ಅವರ ಪಾಲಿಗೆ ಮಾರಣಾಂತಿಕವಾಗಬಲ್ಲುದು.

ಅಲ್ಲದೆ ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅನುಸರಿಸಬೇಕಾದ ಕೈ ತೊಳೆಯುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರು ಅಸಡ್ಡೆ ತೋರಿಸುವ ಅಪಾಯವಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಡಗಾಸ್ಕರ್‌ ಅಧ್ಯಕ್ಷರು ಕಳೆದ ತಿಂಗಳು ಬಾಟಲಿಯೊಂದರಿಂದ ಬಣ್ಣದ ದ್ರವನ್ನು ಹೀರುತ್ತ ಕೋವಿಡ್‌-19 ಚಿಕಿತ್ಸೆಗೆ ದೇಶದ ಸಂಶೋಧನಾ ಸಂಸ್ಥೆ ಕೋವಿಡ್‌ ಆರ್ಗಾನಿಕ್ಸ್‌ ಅಥವಾ ಸಿವಿಒ ಎನ್ನುವ ಔಷಧವನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದರು.

ಟಾಪ್ ನ್ಯೂಸ್

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.