ಮಡಾಮಕ್ಕಿ – ಎಡ್ಮಲೆ ರಸ್ತೆ : ಮಳೆಗಾಲದಲ್ಲಿ ಸಂಚಾರ ದುಸ್ತರ
35 ವರ್ಷಗಳಿಂದ ಸಮಸ್ಯೆ ಜೀವಂತ ; 7 ಕಿ.ಮೀ. ಉದ್ದದ ಮಣ್ಣಿನ ರಸ್ತೆಗೆ ಬೇಕಿದೆ ಕಾಯಕಲ್ಪ
Team Udayavani, Jun 26, 2020, 5:45 AM IST
ಕುಂದಾಪುರ: ಪಶ್ಚಿಮ ಘಟ್ಟದ ತಪ್ಪಲಿನಲ್ಲೇ ಇರುವ ಗ್ರಾಮ ಮಡಾಮಕ್ಕಿ. ಈ ಗ್ರಾಮದ ಎಡ್ಮಲೆ, ಹಂಜ, ಕಾರಿಮನೆಗೆ ಮಳೆಗಾಲದಲ್ಲಿ ಸಂಚರಿಸುವುದು ದೊಡ್ಡ ಸಾಹಸ. ಮಡಾಮಕ್ಕಿಯಿಂದ ಎಡ್ಮಲೆಗೆ ಸಂಚರಿ ಸುವ 7 ಕಿ.ಮೀ. ಉದ್ದದ ಮಣ್ಣಿನ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಸಮಸ್ಯೆ 35 ವರ್ಷಗಳಿಗೂ ಹೆಚ್ಚು ಕಾಲದಿಂದ ಹಾಗೆಯೇ ಮುಂದುವರಿದಿದೆ.
ಹತ್ತಾರು ಸಮಸ್ಯೆ
ಇಲ್ಲಿನ ಮಣ್ಣಿನ ರಸ್ತೆಯು ಪ್ರತಿ ಮಳೆಗಾಲದಲ್ಲೂ ಕೆಸರಿನಿಂದ ಕೂಡಿರುತ್ತಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಯಾಗಿದೆ. ಶಾಲೆಯ ಮಕ್ಕಳಿಗೂ ಸಮಸ್ಯೆ ಯಾಗಿದೆ. ಶಾಲೆಗೆ ಬರಲು ಎಡ್ಮಲೆ, ಹಂಜ, ಕಾರಿಮನೆಯಿಂದ 6 – 7ಕಿ.ಮೀ. ನಡೆದೇ ಸಾಗಬೇಕು. ಊರಿನಲ್ಲಿ ಅನಾರೋಗ್ಯಕ್ಕೀಡಾದವರನ್ನು ಎತ್ತಿಕೊಂಡೇ ಹೋಗಬೇಕು. ಈ ಊರಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯೂ ಇದ್ದು, ಒಂದು ಫೋನ್‌ಗಾಗಿ 6-7 ಕಿ.ಮೀ. ದೂರದ ಮಡಾಮಕ್ಕಿಗೆ ಬರಬೇಕು.
ಈ ಊರಿಗೆ ಜನಪ್ರತಿನಿಧಿಗಳು ಬರು ವುದು ಕೇವಲ ಓಟು ಕೇಳಲು ಮಾತ್ರ. ಮತ್ತೆ ಅವರು ಇಲ್ಲಿಗೆ ಭೇಟಿ ನೀಡುವುದು ಇನ್ನೊಂದು ಚುನಾವಣೆಗೆ ಮಾತ್ರ. ರಸ್ತೆಗೆ
ಡಾಮರು ಮಾಡಿಕೊಡಿ ಎಂದು ಜನಪ್ರತಿ ನಿಧಿಗಳ ಬಳಿ ತೆರಳಿದರೆ ಈ ರಸ್ತೆ ಅರಣ್ಯ ಪ್ರದೇಶದಲ್ಲಿದೆ, ಅಸಾಧ್ಯ ಎನ್ನುತ್ತಾರೆ. ಆದರೆ ಪಕ್ಕದ ಕೆಲವು ಊರುಗಳಲ್ಲಿ ರಸ್ತೆಗಳಾಗಿರು ವುದು ಅರಣ್ಯ ಪ್ರದೇಶಗಳಲ್ಲಿ ಅಲ್ಲವೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಅನೇಕ ಬಾರಿ ಮನವಿ
ಈ ರಸ್ತೆಯನ್ನು ಪಂಚಾಯತ್ ಅನುದಾನದಿಂದ ಅಭಿವೃದ್ಧಿಪಡಿಸುವುದು ಕಷ್ಟ. ಹಾಗಾಗಿ ಊರವರು, ಪಂಚಾಯತ್‌ನಿಂದ ಅನೇಕ ಬಾರಿ ಶಾಸಕರು, ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಆದರೆ ಈ ವರೆಗೆ ಯಾವುದೇ ಅನುದಾನ ಬಂದಿಲ್ಲ. ಇದು ಅರಣ್ಯ ಪ್ರದೇಶವಾದರೆ ಇಲ್ಲಿಯೇ ಅಕ್ಕಪಕ್ಕದ ಅನೇಕ ಊರುಗಳಲ್ಲಿ ಅರಣ್ಯದಲ್ಲಿಯೇ ರಸ್ತೆ ನಿರ್ಮಿಸಿ ಡಾಮರು ಕಾಮಗಾರಿ ನಡೆಸಲಾಗಿದೆ ಅದು ಕಾನೂನು ಉಲ್ಲಂಘನೆಯಲ್ಲವೇ?
-ದಯಾನಂದ ಪೂಜಾರಿ,
ಗ್ರಾ.ಪಂ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.