ಮಧುಗಿರಿ:ಗೃಹಿಣಿ ನೇಣಿಗೆ ಶರಣು; ಕೊಲೆಯೆಂದು ಹೆತ್ತವರ ದೂರು
Team Udayavani, Feb 12, 2023, 8:06 PM IST
ಮಧುಗಿರಿ: ಪಟ್ಟಣದ ಮನೆಯೊಂದರಲ್ಲಿ ಶನಿವಾರ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಪೋಷಕರು ಕೊಲೆ ಆರೋಪ ಮಾಡಿಸಿದ್ದಾರೆ.
ಪಟ್ಟಣದ ಟಿವಿವಿ ಕಾಲೇಜು ಸಮೀಪದ ವೇ ಬ್ರಿಡ್ಜ್ ಬಳಿಯ ಮನೆಯೊಂದರಲ್ಲಿ ಗೃಹಿಣಿ ಸೌಮ್ಯ(33) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತಳ ತಾಯಿ ಮಂಜುಳಾ ನನ್ನ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದು ದೂರು ನೀಡಿದ್ದಾರೆ.
ನನ್ನ ಮಗಳಿಗೆ ಗಂಡನ ಮನೆಯವರು ಪ್ರತೀ ನಿತ್ಯ ಮಾನಸಿಕ ತೊಂದರೆ, ಕಿರುಕುಳ ನೀಡುತ್ತಿದ್ದಾರೆ ಎಂದು ನನ್ನ ಮಗಳು ಈ ಹಿಂದೆ ನಮಗೆ ತಿಳಿಸಿದ್ದಳು. ಇದರ ಬಗ್ಗೆ ಮಧುಗಿರಿ ಪೋಲೀಸ್ ಠಾಣೆಯಲ್ಲಿ 3 ವರ್ಷದ ಹಿಂದೆ ದೂರು ನೀಡಿದ್ದೆವು. ನಂತರ ಸಂಸಾರ ಹಾಳಾಗದಂತೆ ಎಚ್ಚರ ವಹಿಸಿ ಸುಮ್ಮನಾಗಿದ್ದೇವು. ಆದರೆ ಕಳೆದ ಶನಿವಾರ ಮಗಳ ಗಂಡನ ಮಾವ ರಾಮಣ್ಣ, ಹಾಗೂ ಮನೆಯವರು ಮಗಳ ಮೇಲೆ ಹಲ್ಲೆ ಮಾಡಿದ್ದು ಸತ್ತ ನಂತರ ನೇಣಿಗೆ ಹಾಕಿ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದ್ದು, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪೋಲೀಸರಿಗೆ ಮನವಿ ಮಾಡಿದ್ದಾರೆ.
ಮಧುಗಿರಿ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಪ್ರಕಾಶ್ ನನ್ನು ವಶಕ್ಕೆ ಪಡೆದಿದ್ದು ತನಿಖೆಯಲ್ಲಿ ಇದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಪತ್ತೆಯಾಗಬೇಕಿದೆ.
ಗಂಡನ ಮನೆ ಮುಂದೆಯೇ ಮಣ್ಣು
ದೂರು ದಾಖಲಾಗುತ್ತಿದ್ದಂತೆ ಮೃತ ಶರೀರವನ್ನು ಅಸ್ಪತ್ರೆಗೆ ಹಾಕಿ ಅಳಿಯನ ಮನೆಯವರು ಪರಾರಿಯಾಗಿದ್ದರೆ. ಮದುವೆಯಾಗಿ 13 ವರ್ಷವಾಗಿದ್ದು ಈಗ ಇಬ್ಬರು ಎಳೆಯ ಮೊಮ್ಮಕ್ಕಳ ಗತಿಯೇನು. ನಮಗೆ ನ್ಯಾಯ ಕೊಡಬೇಕೆಂದು ಗೋಳಾಡುತ್ತಿದ್ದರು. ಈ ನಡುವೆ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಶವವನ್ನು ತಂದ ಹೆತ್ತವರು ಗಂಡನ ಮನೆಯ ಮುಂಭಾಗವೇ ಮಣ್ಣು ಮಾಡಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಗಂಡನ ಮನೆಯವರು ಅಲ್ಲಿ ಯಾರೂ ಕಾಣಿಸುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.