ಮಹಾರಾಷ್ಟ್ರದಲ್ಲಿ “ಲಾಕ್’ ಮಾದರಿ ನಿರ್ಬಂಧ
Team Udayavani, Jan 9, 2022, 6:30 AM IST
ಮುಂಬೈ/ನವದೆಹಲಿ: ಮಹಾರಾಷ್ಟ್ರದಲ್ಲಿ ಒಂದೇ ದಿನ 41,434 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ಮತ್ತಷ್ಟು ನಿರ್ಬಂಧಗಳನ್ನು ವಿಧಿಸುವ ಮೂಲಕ ರಾಜ್ಯವನ್ನು ಭಾಗಶಃ ಲಾಕ್‌ಡೌನ್ ಸ್ಥಿತಿಗೆ ತಳ್ಳಿದೆ.
ಫೆ.15ರವರೆಗೂ ರಾಜ್ಯಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೆಲೂನ್, ಕ್ರೀಡಾ ಸಂಕೀರ್ಣ, ಈಜುಕೊಳ, ಜಿಮ್, ಸ್ಪಾಗಳನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಲಾಗಿದೆ. ಕೇವಲ ಲಸಿಕೆ ಪಡೆದಿರುವವರು ಮಾತ್ರವೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು, ಸಿನಿಮಾ ಥಿಯೇಟರ್‌ಗಳು ಶೇ.50ರ ಆಸನ ಭರ್ತಿಯೊಂದಿಗೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಮಾತ್ರ ಕಾರ್ಯನಿರ್ವಹಿಸಬಹುದು ಎಂದು ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಖಾಸಗಿ ಕಚೇರಿಗಳಲ್ಲೂ ಶೇ.50ರ ನಿಯಮ, ಸಾಧ್ಯವಾದರೆ ವರ್ಕ್ ಫ್ರಂ ಹೋಂ ಮಾಡಲು ಸೂಚಿಸಲಾಗಿದೆ. ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ 5 ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪಾಗಿ ಓಡಾಡುವಂತಿಲ್ಲ. ಜ.10ರ ಮಧ್ಯರಾತ್ರಿಯಿಂದಲೇ ಹೊಸ ನಿಯಮ ಅನ್ವಯವಾಗಲಿದ್ದು, ಅಗತ್ಯ ಸೇವೆ ಹೊರತುಪಡಿಸಿ ರಾತ್ರಿ 11ರಿಂದ ಬೆ.5ರವರೆಗೆ ಯಾರೂ ಹೊರಗೆ ಓಡಾಡುವಂತಿಲ್ಲ ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ನಡುವೆ, “ಕೊರೊನಾ ಕೇಸುಗಳ ಮೇಲೆ ಗಮನ ಕೊಡುವುದನ್ನು ನಿಲ್ಲಿಸಿ. ಒಮಿಕ್ರಾನ್ ಹೆಚ್ಚು ಗಂಭೀರ ಸಮಸ್ಯೆ ಉಂಟುಮಾಡುವುದಿಲ್ಲ ಎಂದು ದತ್ತಾಂಶಗಳೇ ಹೇಳಿವೆ’ ಎಂದು ರಾಷ್ಟ್ರೀಯ ಕೋವಿಡ್ ಸೂಪರ್‌ಮಾಡೆಲ್ ಕಮಿಟಿ ಅಧ್ಯಕ್ಷ ಎಂ. ವಿದ್ಯಾಸಾಗರ್ ಹೇಳಿದ್ದಾರೆ.
ಇದನ್ನೂ ಓದಿ:ಹಿಮವರ್ಷ: ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೂ ಅಡ್ಡಿ
ಒಮಿಕ್ರಾನ್: ಭಯ ಅಗತ್ಯವಿಲ್ಲ
ಭಾರತವು ಒಮಿಕ್ರಾನ್ ಅಲೆಗೆ ಪ್ರವೇಶ ಪಡೆದಿದೆಯಾದರೂ, ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್ ಗಂಭೀರತೆ ಕಡಿಮೆಯಿರಲಿದೆ ಎಂದು ಅಮೆರಿಕ ಮೂಲದ ಆರೋಗ್ಯ ತಜ್ಞ ಡಾ. ಕ್ರಿಸ್ಟೋಫರ್ ಹೇಳಿದ್ದಾರೆ.
ಫೆಬ್ರವರಿಯಲ್ಲೇ ಭಾರತದಲ್ಲಿ ಒಮಿಕ್ರಾನ್ ಉತ್ತುಂಗಕ್ಕೇರಲಿದ್ದು, ದಿನಕ್ಕೆ 5 ಲಕ್ಷದಷ್ಟು ಮಂದಿಗೆ ಸೋಂಕು ತಗುಲುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದಲ್ಲೂ ಡೆಲ್ಟಾ, ಬೀಟಾ ಸೋಂಕಿನ ನಡುವೆಯೇ ಒಮಿಕ್ರಾನ್ ಪ್ರವೇಶವಾಗಿತ್ತು. ಆದರೆ, ಸೋಂಕಿತರಿಗೆ ಲಸಿಕೆಯು ಸಾಕಷ್ಟು ಪ್ರಮಾಣದಲ್ಲಿ ಸುರಕ್ಷತೆ ಒದಗಿಸಿದೆ. ಭಾರತದಲ್ಲೂ ಕೇಸುಗಳ ಸಂಖ್ಯೆ ಹೆಚ್ಚಾದರೂ, ಆಸ್ಪತ್ರೆ ಸೇರುವವರ ಪ್ರಮಾಣ ಮತ್ತು ಮರಣ ಪ್ರಮಾಣ ತಗ್ಗಿರಲಿದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ. ಫೆ1ರಿಂದ 15ರೊಳಗೆ ದೇಶದಲ್ಲಿ 3ನೇ ಅಲೆ ಉತ್ತುಂಗಕ್ಕೇರಲಿದೆ ಎಂದು ಐಐಟಿ ಮದ್ರಾಸ್ ಕೂಡ ವಿಶ್ಲೇಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
Scientists: ಕೋಳಿ ಮೊದಲಾ, ಮೊಟ್ಟೆ ಮೊದಲಾ?: ಇಲ್ಲಿದೆ ಉತ್ತರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.