ಪತಿ ಸತ್ತರೆ, ಪತ್ನಿ ತಾಳಿ ತೆಗೆಯುವಂತಿಲ್ಲ, ಕುಂಕುಮ ಅಳಿಸುವಂತಿಲ್ಲ
ಮಹಾರಾಷ್ಟ್ರದ ಹರ್ವಾರ್ಡ್‌ನಲ್ಲಿ ದಿಟ್ಟ ಹೆಜ್ಜೆ; ವಿಧವಾ ಆಚರಣೆ ನಿಷೇಧಿಸಿ ನಿರ್ಣಯ ಅಂಗೀಕರಿಸಿದ ಗ್ರಾಮ
Team Udayavani, May 9, 2022, 6:45 AM IST
ಮುಂಬೈ: ಪತಿ ಅಸುನೀಗಿದ ತಕ್ಷಣ ಪತ್ನಿ ಕುಂಕುಮ ಅಳಿಸಬೇಕು, ಬಳೆ ಒಡೆಯಬೇಕು, ತಾಳಿ ತೆಗೆದುಹಾಕಬೇಕು ಎನ್ನುವ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಆದರೆ ಅದೆಲ್ಲದ್ದಕ್ಕೂ ಸೆಡ್ಡು ಹೊಡೆದಿರುವ ಮಹಾರಾಷ್ಟ್ರದ ಒಂದು ಗ್ರಾಮ, ಈ ವಿಧವಾ ಆಚರಣೆಯನ್ನು ನಿಷೇಧಿಸಿ ನಿರ್ಣಯ ಅಂಗೀಕರಿಸಿದೆ.
ಕೊಲ್ಹಾಪುರ ಜಿಲ್ಲೆಯ ಹರ್ವಾರ್ಡ್ ಗ್ರಾಮದಲ್ಲಿ ಸಮಾಜ ಸುಧಾರಕ, ರಾಜ ರಾಜಶ್ರೀ ಛತ್ರಪತಿ ಶಾಹು ಮಹಾರಾಜ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಈ ವಿಶೇಷ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಮುಂದೆ ಗ್ರಾಮದಲ್ಲಿ ಯಾವುದೇ ಪುರುಷ ಸಾವನ್ನಪ್ಪಿದ್ದರೆ, ಆಕೆಯ ಪತ್ನಿಗೆ ಈ ರೀತಿಯ ಸಂಪ್ರದಾಯಗಳನ್ನು ಮಾಡಲಾಗುವುದಿಲ್ಲ. ಅಲ್ಲಿನ ಪ್ರತಿ ಪುರುಷರು, “ನಾ ಸಾವನ್ನಪ್ಪಿದ್ದರೆ, ನನ್ನ ಪತ್ನಿಗೆ ಹೀಗೆ ಮಾಡಬಾರದು’ ಎಂದು ಬಾಂಡ್ ಪೇಪರ್ ಮೇಲೆ ಬರೆದುಕೊಟ್ಟಿದ್ದಾರೆ ಕೂಡ.
ಇದನ್ನೂ ಓದಿ:ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ತಲೆ ಕೆಟ್ಟಿದೆ, ಅವರೊಬ್ಬ ಮೆಂಟಲ್ : ಕಿಮ್ಮನೆ ವಾಗ್ದಾಳಿ
ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಸುರ್ಗೊಂಡ ಪಾಟೀಲ್ ಅವರು ಇಂಥದ್ದೊಂದು ನಿರ್ಣಯಕ್ಕೆ ನಾಂದಿ ಹಾಡಿದ್ದಾರೆ. ಕೊರೊನಾ ಸಮಯದಲ್ಲಿ ಈ ರೀತಿಯ ಸಂಪ್ರದಾಯವನ್ನು ಗಮನಿಸಿದ್ದ ಅವರು, ಅದಕ್ಕೆ ಅಂತ್ಯಹಾಡಬೇಕೆಂದು ಗ್ರಾಮಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದಾರೆ. ಅವರ ಈ ನಿರ್ಣಯಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.