ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಆಚರಣೆ
Team Udayavani, Mar 2, 2022, 6:15 AM IST
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಮಹಾಶಿವರಾತ್ರಿಯನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಿವ ಕ್ಷೇತ್ರಗಳಲ್ಲಿ ವಿಶೇಷ ಪೂಜೆ, ಹೋಮ, ಮಹಾರುದ್ರಾಭಿಷೇಕ, ಸೀಯಾಳಾಭಿಷೇಕ, ರಥೋತ್ಸವ, ಜಾಗರಣೆ, ಭಜನೆ, ಶಿವ ಸ್ತ್ರೋತ್ರ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯ ಕ್ರಮಗಳು ಜರಗಿದವು.
ಶಿವ ದೇವಸ್ಥಾನಗಳಿಗೆ ಬೆಳಗ್ಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಹಾರುದ್ರಾಭಿಷೇಕ, ಶತಸೀಯಾಳಾಭಿಷೇಕ, ಮಹಾಪೂಜೆ, ಸೇವಾ ರಥೋತ್ಸವ, ಶಿವಬಲಿ, ಜಾಗರಣೆ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ರಥೋತ್ಸವ ಜರಗಿತು.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಶಿವಪೂಜೆ, ರುದ್ರಾಭಿಷೇಕ, ರಂಗಪೂಜೆ, ಜಾಗರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ಶರವು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಬೆಳಗ್ಗಿನಿಂದಲೇ ಹೆಚ್ಚಿತ್ತು. ಮಧ್ಯಾಹ್ನ ದ ವರೆಗೂ ಈ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮಂಗಳೂರಿನ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಾಲಯ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೊಲೀಸ್ ಲೈನ್ ಮುನೀಶ್ವರ ಮಹಾಗಣಪತಿ ಕ್ಷೇತ್ರ ಸೇರಿದಂತೆ ನಗರದ ವಿವಿಧ ಶಿವ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಇತ್ಯಾದಿ ಜರಗಿತು. ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ಅರ್ಧನಾರೀಶ್ವರ ಅಲಂಕಾರ ಮಾಡಲಾಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶಿವಾರ್ಪಣೆ, ರುದ್ರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯ ಕ್ರಮಗಳು ಜರಗಿದವು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಭವಲಿಂಗಕ್ಕೆ ಸ್ವಯಂ ಲಿಂಗಾಭಿಷೇಕ, ಶಿವಪೂಜೆ ನಡೆಯಿತು.
ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನ ಹಾಗೂ ನರಹರಿ ಪರ್ವತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳ್ತಂಗಡಿ ತಾಲೂಕಿನಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುಳ್ಯದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪಂಜ ಶ್ರೀ ಪಂಜಲಿಂಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆಗಳ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಜರಗಿತು.
ಉಡುಪಿ ಜಿಲ್ಲೆಯಲ್ಲಿ
ಉಡುಪಿಯ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭತೀರ್ಥ ಶ್ರೀಪಾದರು, ಆಡಳಿತೆದಾರ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಅನಂತೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಧ್ವಜಾರೋಹಣ ನಡೆದರೆ, ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜಾದಿಗಳು ನಡೆದವು.
ಬನ್ನಂಜೆ, ಪರ್ಕಳ, ಪೆರಂಪಳ್ಳಿ, ಕಲ್ಯಾಣಪುರ ಪುತ್ತೂರು ಕುಮ್ರಪಾಡಿ, ಪಂದುಬೆಟ್ಟು ಕಾನಗುಡ್ಡೆ, ತೆಂಕನಿಡಿಯೂರು ಬೆಳ್ಕಲೆ, ಬ್ರಹ್ಮಾವರ, ಕೂರಾಡಿ, ಬಸ್ರೂರು, ಪಡುಬಿದ್ರಿ, ಕಳತ್ತೂರು, ಸೂರಾಲು, ತೆಕ್ಕಟ್ಟೆ, ಚೊಕ್ಕಾಡಿ, ಮೂಡುಬೆಟ್ಟು, ಪೆರ್ವಾಜೆ, ಹರ್ತಟ್ಟು ಕಲ್ಲಟ್ಟು, ವಡ್ಡರ್ಸೆ, ಮೂಡುಗಿಳಿಯಾರು ಅಲ್ಸೆಬೆಟ್ಟು, ಮಣೂರು, ಹಾರಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಣಿಪಾಲದ ಶಿವಪಾಡಿ, ಸಗ್ರಿ ಚಕ್ರತೀರ್ಥದ ಉಮಾಮಹೇಶ್ವರ ದೇವಸ್ಥಾನ, ಕಟಪಾಡಿಯ ವಿಶ್ವನಾಥ ಕ್ಷೇತ್ರ, ಕೆಳಾರ್ಕಳಬೆಟ್ಟು ಶಿವ ದೇವಸ್ಥಾನ, ಕೋಟದ ಹಿರೇಮಹಾಲಿಂಗೇಶ್ವರ, ರಾಜಶೇಖರ ದೇವಸ್ಥಾನ, ಬಾರಕೂರು ಪಂಚಲಿಂಗೇಶ್ವರ, ಸೋಮೇಶ್ವರ, ಉಪ್ಪೂರು ಚಿತ್ತಾರಿ ಮಹಾಬಲೇಶ್ವರ, ನಯಂಪಳ್ಳಿ ಮಡಿ ಮಲ್ಲಿಕಾರ್ಜುನ ದೇವಸ್ಥಾನ, ಮಣಿಪಾಲ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನ, ಹೆರ್ಗದ ತ್ರ್ಯಂಬಕೇಶ್ವರ, ಉಡುಪಿಯ ನಿತ್ಯಾನಂದ ಮಂದಿರ, ಕುಂದಾಪುರದ ಕುಂದೇಶ್ವರ, ಕೋಟೇಶ್ವರದ ಕೋಟಿಲಿಂಗೇಶ್ವರ, ಬೈಂದೂರು ಸೇನೇಶ್ವರ, ಬಸ್ರೂರು ಉಮಾಮಹೇಶ್ವರ ಮಠ ಮತ್ತು ತುಳುವೇಶ್ವರ ದೇವ ಸ್ಥಾನ, ಹಳ್ನಾಡು, ಹೆಬ್ರಿ ಅರ್ಧನಾರೀಶ್ವರ, ಕೊಲ್ಲೂರು ಉಮಾಮಹೇಶ್ವರ, ಗಂಗನಾಡು ಶಿವ ದೇವಸ್ಥಾನ, ಕ್ರೋಡ ಶಂಕರನಾರಾಯಣ, ಹೊಳೆ ಶಂಕರನಾರಾಯಣ, ಆವರ್ಸೆ, ಮಾಂಡವಿ, ಬೆಳ್ವೆ ಮತ್ತು ಕೊಡವೂರು, ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಂಕರನಾರಾಯಣ ದೇವಸ್ಥಾನ, ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನ, ಹಟ್ಟಿಯಂಗಡಿ ಲೋಕನಾಥೇಶ್ವರ ದೇವಸ್ಥಾನ, ಕುಂಭಾಸಿ ಹರಿಹರ ದೇವಸ್ಥಾನ, ಕಾರ್ಕಳ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನ, ಪಡುಬೈಲೂರು ಇಷ್ಟ ಮಹಾಲಿಂಗೇಶ್ವರ ದೇವಸ್ಥಾನ, ಎಲ್ಲೂರು ವಿಶ್ವನಾಥ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ, ಬೋಳ ಮೃತ್ಯುಂಜಯ ದೇವಸ್ಥಾನ, ಕಾಂತಾವರ ಕಾಂತೇಶ್ವರ, ಬೆಳ್ಮಣ್ಣು ಮಡಕ ಮಹಾದೇವ ದೇವಸ್ಥಾನ, ಕೌಡೂರು ಶಿವ ದೇವಸ್ಥಾನ, ಕಾರ್ತಟ್ಟು-ಚಿತ್ರಪಾಡಿ ಅಘೋರೇಶ್ವರ, ಉದ್ಯಾವರ ಶಂಭುಶೈಲೇಶ್ವರ, ಕೇದಾರ ಬ್ರಹ್ಮೇಶ್ವರ ಮಹಾಲಿಂಗೇಶ್ವರ, ಬೈಕಾಡಿ ಕಾಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಪಾರಾಯಣ, ರಂಗಪೂಜಾದಿ ಗಳು ನಡೆದವು. ವಿವಿಧೆಡೆ ಭಕ್ತರು ಎಳ್ಳೆಣ್ಣೆ ಸಮರ್ಪಿಸಿ, ರುದ್ರಾಭಿಷೇಕ, ಹಣ್ಣುಕಾಯಿಗಳ ಸೇವೆ ನಡೆಸಿದರು. ಹಲವೆಡೆ ಮಂಗಳವಾರ ರಥೋತ್ಸವಗಳು ನಡೆದವು, ಹಲವೆಡೆ ಧ್ವಜಾರೋ ಹಣ ನಡೆಯಿತು. ಕೆಲವು ದೇವಸ್ಥಾನಗಳಲ್ಲಿ ಬುಧವಾರ ಅನ್ನಸಂತರ್ಪಣೆ ನಡೆಯಲಿದೆ.
ಮನೆಗಳಲ್ಲೂ ಆಚರಣೆ
ದೇವಸ್ಥಾನಗಳಲ್ಲಿ ಮಾತ್ರವಲ್ಲದೆ ಕೆಲವು ಮನೆ ಗಳಲ್ಲಿಯೂ ಮಹಾಶಿವರಾತ್ರಿಯನ್ನು ಭಜನೆ, ಶಿವ ನಾಮ ಜಪದೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮನೆಮಂದಿ ದೇವರ ಪೂಜೆ ಯನ್ನು ಭಕ್ತಿಯಿಂದ ನೆರವೇರಿಸಿದರು.
ಒಣಕೊಡ್ಲು ದೇವಸ್ಥಾನ:
ಲಿಂಗ ಸ್ಪರ್ಶಿಸಿ ಪೂಜೆ
ಬೈಂದೂರು ತಾಲೂಕು ಗಂಗನಾಡು ಒಣಕೊಡ್ಲು ಶಿವ ದೇವಸ್ಥಾನದಲ್ಲಿ ಭಕ್ತರು ಶಿವರಾತ್ರಿ ದಿನ ಮಾತ್ರ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಸಂಪ್ರದಾಯದಂತೆ ಶುಕ್ರವಾರ ಅಸಂಖ್ಯ ಭಕ್ತರು ಮುಟ್ಟಿ ಪೂಜಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.