![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 8, 2020, 1:32 PM IST
ಧಾರವಾಡ: ಯಾವ ನೆಲದಲ್ಲಿ ಇಡೀ ದೇಶದ ಹೆಮ್ಮೆಯಾಗಿ ಹಾರಾಡುವ ಭಾರತದ ರಾಷ್ಟ್ರಧ್ವಜ ಸಜ್ಜಾಗುತ್ತಿವೆಯೋ, ಯಾವ
ನೆಲದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆಯೋ, ಯಾವ ನೆಲದಲ್ಲಿ ನಡೆದಾಡುವ ದೇವರಾಗಿದ್ದ ಶ್ರೀ ಸಿದ್ಧಾರೂಢರು ತಪಸ್ಸು ಮಾಡಿದ್ದರೋ ಅಂತಹ ಕಿತ್ತೂರು ಕರ್ನಾಟಕದ ನೆಲಕ್ಕೆ ಮಹಾತ್ಮಾ ಗಾಂಧೀಜಿ ಅಡಿಯಿಟ್ಟ
ಶತಮಾನೋತ್ಸವ.
ಹೌದು. ಇಡೀ ರಾಜ್ಯ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ,
ಗದಗ, ಹಾವೇರಿ ಜಿಲ್ಲೆಗಳಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಾಲಿಟ್ಟು ನೂರು ವರ್ಷಗಳಾಗಿದ್ದು, ಧಾರವಾಡಿಗರು ಈ
ಸಂಭ್ರಮಾಚರಣೆಯಲ್ಲಿದ್ದಾರೆ. ಇಡೀ ಉತ್ತರ ಕರ್ನಾಟಕವನ್ನೇ ಹೊಸ ಮನ್ವಂತರದತ್ತ ಹೆಜ್ಜೆ ಹಾಕುವಂತೆ ಮಾಡಿದ್ದ ರಾಷ್ಟ್ರಪಿತನ ಈ ಭೇಟಿ ಇತಿಹಾಸದ ಪುಟದಲ್ಲಿ ದಾಖಲಾಗಿ ಧಾರವಾಡಿಗರ ಪಾಲಿಗೆ ಅವಿಸ್ಮರಣೀಯ ದಿನವಾಗಿ ದಾಖಲಾಗಿದೆ.
ಇಲ್ಲಿನ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಎದುರಿನ ಬೈಲಿನಲ್ಲಿ 1920ರ ನ.10ರಂದು ಬೆಳಗ್ಗೆ 9:30ರಿಂದ 11:30ರವರೆಗೂ ನಡೆದ ಕಾರ್ಯಕ್ರಮದಲ್ಲಿ ನೂರಾರು ಯುವಕರನ್ನು ಉದ್ದೇಶಿಸಿ ಮಾತನಾಡಿದ ಬಾಪು, ಸ್ವಾತಂತ್ರÂ ಚಳವಳಿ, ಸ್ವದೇಶಿ ವಿಚಾರಧಾರೆ, ಮಹಿಳಾ ಸಮಾನತೆ, ಸಾಕ್ಷರತೆ, ಸ್ವತ್ಛತೆ ಮತ್ತು ಹಿಂದೂ-ಮುಸ್ಲಿಂ ಐಕ್ಯತೆ ಕುರಿತು ಎಲ್ಲರೂ ನಿಬ್ಬೆರಗಾಗುವಂತೆ ಭಾಷಣ ಮಾಡಿದರು.
ಇದನ್ನೂ ಓದಿ:ಕಡಬ: ಇನ್ನೂ ತೆರೆದಿಲ್ಲ ತಾಲೂಕು ಮಟ್ಟದ ಸರಕಾರಿ ಕಚೇರಿಗಳು
ಸಜ್ಜಾಯಿತು ಯುವ ಪಡೆ: ಬಾಪು ಅವರ ಈ ಭಾಷಣದ ಪ್ರಭಾವ ಧಾರವಾಡ ಸೇರಿದಂತೆ ಸುತ್ತಲಿನ ಭಾಗಗಳ ಮೇಲೆ ಎಷ್ಟಾಯಿತೆಂದರೆ ಮುಂದೆ ಎರಡೇ ತಿಂಗಳಲ್ಲಿ ಈ ಭಾಗದ ಯುವ ಉತ್ಸಾಹಿ ತರುಣ ಮುಖಂಡರೆಲ್ಲರೂ ಸ್ವಾತಂತ್ರÂ ಚಳವಳಿಯ ಭಾಗವಾದರು. ಹೊಸಮನಿ ಸಿದ್ದಪ್ಪ, ಗುದೆÉಪ್ಪ ಹಳ್ಳಿಕೇರಿ, ಸರದಾರ ವೀರನಗೌಡ ಪಾಟೀಲ, ಸರ್ ಸಿದ್ದಪ್ಪ ಕಂಬಳಿ ಅವರಂತಹ ಘಟಾನುಗಟಿಗಳೆಲ್ಲರೂ ಸ್ವಾತಂತ್ರÂ ಚಳವಳಿಯಲ್ಲಿ ಧುಮುಕಿದರು. ಅಷ್ಟೇಯಲ್ಲ ಗಾಂಧೀಜಿ ಭೇಟಿಯ ನಂತರ ನಡೆದ ಕಲಕತ್ತಾ ಕಾಂಗ್ರೆಸ್ ಅಧಿವೇಶನಕ್ಕೆ ಇಲ್ಲಿಂದ 800ಕ್ಕೂ ಅಧಿಕ ಯುವಕರು ಭಾಗಿಯಾದರು. ಕೆಲವಷ್ಟು ಜನ ಖಾದಿ ಗ್ರಾಮೋದ್ಯೋಗಕ್ಕೆ ಒತ್ತು ನೀಡಿದರೆ ಸರದಾರ ವೀರನಗೌಡರು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು.
ತಲೆ ಎತ್ತಿದ ರಾಷ್ಟ್ರಧ್ವಜ ಕೇಂದ್ರ: ಮಹಾತ್ಮಾ ಗಾಂಧೀಜಿ ಅವರು ಧಾರವಾಡದಲ್ಲಿ ಖಾದಿ ಗ್ರಾಮೋದ್ಯೋಗ ಪರಿಕಲ್ಪನೆ ಅಡಿಯಲ್ಲಿ ಮಾಡಿದ ಭಾಷಣ, ನೀಡಿದ ಮಾರ್ಗದರ್ಶನದಿಂದಲೇ ಗರಗ, ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ ಗ್ರಾಮಗಳಲ್ಲಿನ ಖಾದಿ ಗ್ರಾಮೋದ್ಯೋಗ ಉಚ್ಛಾಯ ಸ್ಥಿತಿಗೆ ತಲುಪಿತು. ಅತ್ಯಂತ ಹಿಂದುಳಿದ ಹಳ್ಳಿಗಳಾಗಿದ್ದ ಈ ಗ್ರಾಮಗಳು ಇಡೀ ದೇಶಕ್ಕೆ ಬೇಕಾಗುವ ರಾಷ್ಟ್ರಧ್ವಜಗಳನ್ನು ಉತ್ಪಾದಿಸುವ ಕೇಂದ್ರಗಳಾಗಿ ಹೊರಹೊಮ್ಮಲು 1920ರಲ್ಲಿ ಮಹಾತ್ಮಾ ಗಾಂಧೀಜಿ ಅವರು ಇಲ್ಲಿಗೆ ಭೇಟಿ ಕೊಟ್ಟು ಸ್ಫೂರ್ತಿಯ ಮಾತುಗಳನ್ನಾಡಿದ್ಧೇ ಪ್ರಮುಖ ಕಾರಣವಾಗಿತ್ತು. ಇಡೀ ದೇಶಕ್ಕೆ ಇಂದಿಗೂ ರಾಷ್ಟ್ರಧ್ವಜ ಪೂರೈಕೆಯಾಗುವುದು ಇಲ್ಲಿಂದಲೇ ಎಂಬುದು ಜಿಲ್ಲೆಯ ಹೆಮ್ಮೆ.
ಇದನ್ನೂ ಓದಿ:ಕಡಬ: ಇನ್ನೂ ತೆರೆದಿಲ್ಲ ತಾಲೂಕು ಮಟ್ಟದ ಸರಕಾರಿ ಕಚೇರಿಗಳು
ಕಲ್ಲು ಬಿದ್ದವು: ಇಂದಿನ ಎಮ್ಮಿಕೇರಿ ಪ್ರದೇಶದಲ್ಲಿರುವ ಗಾಯಕವಾಡ ಬಂಗಲೆಯಲ್ಲಿ ಮಹಾತ್ಮಾ ಗಾಂಧೀಜಿ ಅವರು ತಂಗಿದ್ದರು. ಕೆಲವಷ್ಟು ಜನ ಯುವಕರನ್ನು ಕರೆದುಕೊಂಡು ಸಭೆ ಮಾಡುತ್ತಿದ್ದಾಗ ಅವರ ಮೇಲೆ ಕಲ್ಲುಗಳು ತೂರಿ ಬಂದವು. ಅಸ್ಪ್ರಶ್ಯತೆ ನಿವಾರಣೆ ಕುರಿತ ಈ ಸಭೆಯನ್ನು ಅಂದು ಹಲವಾರು ಜನ ವಿರೋಧಿಸಿದ್ದರು.
ಶ್ರೀ ಸಿದ್ಧಾರೂಢರಿಗೆ ಬಾಪುರಿಂದ ಖಾದಿ ಅರ್ಪಣೆ
ನ.1ರಂದು ಮಹಾತ್ಮಾ ಗಾಂಧೀಜಿ ಮೊದಲು ಬೆಳಗಾವಿ ಜಿಲ್ಲೆ ನಿಪ್ಪಾಣಿ, ಚಿಕ್ಕೋಡಿಗೆ ಭೇಟಿ ಕೊಟ್ಟು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾರೆ. ನ.9ರಂದು ಬೆಳಗಾವಿಗೆ ಭೇಟಿ ಕೊಟ್ಟು ಅಲ್ಲಿನ ಯುವ ಮುಖಂಡರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಚಳವಳಿ ಕುರಿತು ಸ್ಫೂರ್ತಿಯ ಮಾತುಗಳನ್ನಾಡುತ್ತಾರೆ. ಅಲ್ಲಿಂದ ಬೀಡಿ, ಅಳ್ನಾವರ ಮೂಲಕ ಧಾರವಾಡ ತಲುಪಿದ ಗಾಂಧೀಜಿ ಇಲ್ಲಿನ ಕರಿಗುದರಿ ಹಾಗೂ ಗಾಯಕವಾಡರ ಬಂಗಲೆಯಲ್ಲಿ ತಂಗುತ್ತಾರೆ. ನಂತರ ನ.10ರಂದು ಬೆಳಗ್ಗೆ ಉಳವಿ ಚೆನ್ನಬಸವೇಶ್ವರ
ದೇವಸ್ಥಾನ ಬಯಲಿನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಾರೆ. ನ.11ರಂದು ಹುಬ್ಬಳ್ಳಿಗೆ ಭೇಟಿ ಕೊಟ್ಟು ಅಲ್ಲಿನ ಕೊಪ್ಪೀಕರ ರಸ್ತೆ ಬಯಲಿನಲ್ಲಿ ಗಾಂಧೀಜಿ ಸಾರ್ವಜನಿಕ ಸಭೆ ನಡೆಸುತ್ತಾರೆ. ನಂತರ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಿ ಅವರ ಕೊರಳಿಗೆ ಖಾದಿಯ ಹಾರ ಹಾಕಿ ಅಭಿನಂದಿಸಿ, ಧಾರ್ಮಿಕ ಸಮಾನತೆ, ಸೌಹಾರ್ದತೆಗಾಗಿ ಸಿದ್ಧಾರೂಢರು ಮಾಡಿದ್ದ ಕೆಲಸವನ್ನು ಬಾಪೂಜಿ ಕೊಂಡಾಡಿದ್ದರೆಂಬ ವಿಚಾರ ಗಾಂಧಿ ಸಾಹಿತ್ಯದಲ್ಲಿ ದಾಖಲಾಗಿದೆ ಎನ್ನುತ್ತಾರೆ ಧಾರವಾಡದ ಹಿರಿಯ ಗಾಂಧಿವಾದಿಗಳು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.